ಮಂಗಳೂರು – ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ಚಾಲನೆ

Tuesday, December 26th, 2023
ಮಂಗಳೂರು - ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ಚಾಲನೆ

ಮಂಗಳೂರು : ಮಂಗಳೂರು – ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಓಡಾಟಕ್ಕೆ ಮಂಗಳವಾರ ಬೆಳಿಗ್ಗೆ ಪ್ರಾಯೋಗಿಕ ಓಡಾಟಕ್ಕೆ ಚಾಲನೆ ನೀಡಲಾಯಿತು. ಮಂಗಳೂರು ಸೆಂಟ್ರಲ್ ನಿಂದ ಬೆಳಿಗ್ಗೆ 8.30 ಕ್ಕೆ ಹೊರಟ ಈ ರೈಲು ಮಧ್ಯಾಹ್ನ 1:05 ಕ್ಕೆ ಮಡಗಾಂವ್ ತಲುಪಲಿದೆ. ಉಡುಪಿ ಮತ್ತು ಕಾರವಾರದಲ್ಲಿ ಈ ರೈಲಿಗೆ ನಿಲುಗಡೆ ಇರುತ್ತದೆ. ಸಂಜೆ 6:10 ಕ್ಕೆ ಮಡಗಾಂವ್ ನಿಂದ ಹೊರಟು ರಾತ್ರಿ‌ 10.45 ಕ್ಕೆ ರೈಲು ಮಂಗಳೂರು‌ ಸೆಂಟ್ರಲ್ ತಲುಪಲಿದೆ. ಮಂಗಳವಾರ ಬೆಳಗ್ಗೆ 8:30 […]

ಬೆಂಗಳೂರು-ಮಂಗಳೂರು ರೈಲು ಮಾರ್ಗದ ಕಾಮಗಾರಿ ಪುನರಾರಂಭ

Tuesday, August 20th, 2019
Railu-haligalu

ಸುಬ್ರಹ್ಮಣ್ಯ : ಬೆಂಗಳೂರು-ಮಂಗಳೂರು ರೈಲು ಮಾರ್ಗದ ಎಡಕುಮೇರಿ ಬಳಿ ಪ್ರಾಕೃತಿಕ ವಿಕೋಪ ಸಂಭವಿಸಿ ಹಳಿಗಳಿಗೆ ಹಾನಿಯುಂಟಾಗಿದ್ದು, ಅದರ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. 20 ಕ್ರೇನ್‌ ಮತ್ತು 500ಕ್ಕೂ ಅಧಿಕ ರೈಲ್ವೇ ಹಾಗೂ ಖಾಸಗಿ ಕಾರ್ಮಿಕರನ್ನು ಬಳಸಿಕೊಂಡು ದುರಸ್ತಿ ನಡೆಸಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡು ರೈಲು ಯಾನ ಈ ಮಾರ್ಗದಲ್ಲಿ ಸಂಚರಿಸಲು ಇನ್ನು ಹತ್ತು ದಿನಗಳು ಹಿಡಿಯಬಹುದು ಎಂದು ರೈಲ್ವೇ ಮೂಲಗಳು ತಿಳಿಸಿವೆ.  

ರೈಲು ಡಿಕ್ಕಿ ಹೊಡೆದು ಪರಿಣಾಮ ಎರಡು ಆನೆಗಳು ಸಾವು..!

Tuesday, June 5th, 2018
elephant

ಮಂಗಳೂರು: ರೈಲು ಡಿಕ್ಕಿ ಹೊಡೆದು ಎರಡು ಆನೆಗಳು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ ಘಾಟ್‌‌‌ನಲ್ಲಿ ನಡೆದಿದೆ. ಶಿರಾಡಿ ಘಾಟ್‌‌‌ನ ಎಡಕುಮೇರಿ ಬಳಿ ಆನೆ ಹಿಂಡು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿದೆ. ಇದರಲ್ಲಿ ಮರಿ ಆನೆ ಮತ್ತು ತಾಯಿ ಆನೆ‌ ಸಾವನ್ನಪ್ಪಿವೆ.

ರೈಲು ಮಿಸ್ ಆಗಿ ಬಸ್ಸಿನಲ್ಲಿ ಪ್ರಯಾಣಿಸಿ ಕೌತುಕ ಮೂಡಿಸಿದ ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ

Saturday, July 30th, 2016
Oommen-Chandy

ಕುಂಬಳೆ: ಪ್ರತಿ ಬಾರಿಯೂ ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿರುವ ಅತ್ಯಂತ ಸರಳ ವ್ಯಕ್ವಿತ್ವದ ಇದೀಗ ಮುಖ್ಯಮಂತ್ರಿ ಪಟ್ಟದಿಂದ ಇಳಿದು ನಿರ್ಲಿಪ್ತರಾಗಿರುವ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ರೈಲು ಮಿಸ್ ಆಗಿ ಜನ ಸಾಮಾನ್ಯನಂತೆ ಬಸ್ಸನ್ನೇರಿ ಪ್ರಯಾಣಿಸಿದ ಘಟನೆ ಮಂಗಳವಾರ ಕೊಲ್ಲಂನಲ್ಲಿ ನಡೆದಿದೆ. ಇವರು ಮಂಗಳವಾರ ಬೆಳಗ್ಗೆ ತಿರುವಂತನಪುರದಿಂದ ಚೆನ್ನೈ ಮೈಲು ರೈಲುಗಾಡಿಯಲ್ಲಿ ಕೊಲ್ಲಂ ತಲುಪಿದ್ದು ಬಳಿಕ ಅನೇಕ ಸಾರ್ವಜನಿಕರ ಸಭೆಗಳಲ್ಲಿ ಭಾಗವಹಿಸಿದ್ದರು. ಕೊಲ್ಲಂನಲ್ಲಿ ನಡೆದ ಮಾಜಿ ಕಾಂಗ್ರೆಸ್ ನೇತಾರ ಕರುಮಾವಿಲ್ ಸುಕುಮಾರನ್ ಅವರ ಸಂಸ್ಮರಣಾ ದಿನಾಚರಣೆ, ಬಳಿಕ […]

ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಿರ್ಸಿ ಮೂಲದ ಯುವಕ ನಾಪತ್ತೆ

Sunday, July 21st, 2013
Vinay Vaz

ಮಂಗಳೂರು:  ಶುಕ್ರವಾರ ರಾತ್ರಿ ಕೇರಳದ ಎರ್ನಾಕುಳಂನಿಂದ ಮಂಗಳೂರು ಕಡೆಗೆ ಬರುತ್ತಿದ್ದ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಸಿರ್ಸಿ ಮೂಲದ ವಿನಯ್‌ ವಾಜ್‌ (24) ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಕಾಣೆಯಾಗಿದ್ದಾರೆ. ನೇತ್ರಾವತಿ ಸೇತುವೆ ಬಳಿ ತಲುಪಿದಾಗ ರೈಲು ನಿಧಾನವಾಗಿ ಚಲಿಸಲಾರಂಭಿಸಿದ್ದು, ಇದು ನಿಲ್ದಾಣವಾಗಿರಬೇಕು ಎಂದು ಭಾವಿಸಿ ಕತ್ತಲೆಯಲ್ಲಿ ವಿನಯ್‌ರಾಜ್‌ ಇಳಿದು ನೇತ್ರಾವತಿ ನದಿಗೆ ಬಿದ್ದಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ವಿನಯರಾಜ್‌ ಸಹಿತ 47 ಮಂದಿಯ ತಂಡ  ಕೇರಳದಿಂದ ಕುಮಟಾಕ್ಕೆ ಪ್ರಯಾಣಿಸುತ್ತಿತ್ತು.  173 ಸೆ.ಮೀ. […]