ಆಡಿಟರ್‌ ಜೊತೆ ಚರ್ಚಿಸಿ ಇಡಿ ನೋಟಿಸ್‌ಗೆ ಉತ್ತರ: ರೋಷನ್‌ ಬೇಗ್‌

Tuesday, January 16th, 2018
Roshan-baig

ಬೆಂಗಳೂರು: ವಿದೇಶಿ ವಿನಿಯಮ ಕಾಯ್ದೆ ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯ ತಮ್ಮ ಕುಟುಂಬಕ್ಕೆ ನೀಡಿರುವ ನೋಟಿಸ್‌ಗೆ ಆಡಿಟರ್ ಜೊತೆ ಚರ್ಚಿಸಿ ಸೂಕ್ತ ಉತ್ತರ ನೀಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ ನೀಡಿರುವ ನೋಟಿಸ್ ನನ್ನ ಕೈಗೆ ಇನ್ನು ಸಿಕ್ಕಿಲ್ಲ. ಅದಾಗಲೇ ಇಡಿ ನೋಟಿಸ್ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದೆ. ಇದನ್ನ ಜನರೇ ಅರ್ಥ ಮಾಡಿಕೊಳ್ಳಬೇಕು ಎಂದು ಮಾಧ್ಯಮಗಳ ವರದಿಗೆ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ನೋಟಿಸ್ […]

ರೋಷನ್ ಬೇಗ್ ವಿರುದ್ಧ ಬಿಜೆಪಿ ನಾಯಕರ ಕಾನೂನು ಸಮರ

Saturday, October 14th, 2017
arun kumar

ಮಂಗಳೂರು :  ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ರಹೀಂ ಉಚ್ಚಿಲ್ ಸಚಿವ ರೋಷನ್ ಬೇಗ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು, ನ್ಯಾಯಾಲಯದಲ್ಲಿ ಸಚಿವ ರೋಷನ್ ಬೇಗ್ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದ ಬಳಸಿ ಅವಹೇಳನಕಾರಿ ಹೇಳಿಕೆ ನೀಡಿದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ವಿರುದ್ಧ ಬಿಜೆಪಿ ನಾಯಕರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಪುಲಕೇಶಿನಗರದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ರೋಷನ್ ಬೇಗ್, ಪ್ರಧಾನಿ ಮೋದಿಯವರನ್ನು ಸೂ…. ಮಗ, […]

`ಐ ಆ್ಯಮ್ ಮೋದಿ’ ಅಭಿಯಾನ :ಸೂಲಿಬೆಲೆ

Saturday, October 14th, 2017
Chakravarthi sulibele

ಮಂಗಳೂರು: ನಗರಾಭಿವೃದ್ಧಿ ಮತ್ತು ಹಜ್ ಸಚಿವ ರೋಷನ್ ಬೇಗ್ ತೀರ ಕೆಳಮಟ್ಟದ ಭಾಷೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾತನಾಡಿರುವುದು ಸಹಿಸಲಸಾಧ್ಯ. ಇದರ ವಿರುದ್ಧ ಸಾಮೂಹಿಕವಾಗಿ ಜನಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯಾದ್ಯಂತ `ಐ ಆ್ಯಮ್ ಮೋದಿ’ ಎಂಬ ಅಭಿಯಾನ ನಡೆಸಲಾಗುವುದು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಟೀಕಿಸಲು ಹಕ್ಕಿದೆ. ಹಾಗಂತ ಕೀಳು ಭಾಷೆ ಬಳಸುವುದಲ್ಲ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕೂಡ ನನ್ನ […]

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ಧ ಬಳಸಿದ ಸಚಿವ ರೋಷನ್‌ ಬೇಗ್‌

Friday, October 13th, 2017
roshan baig

ಬೆಂಗಳೂರು : ಬಹಿರಂಗ ಸಭೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ಧ ಬಳಸಿ ಸಚಿವ ರೋಷನ್‌ ಬೇಗ್‌ ಅವರು ಹೊಸದೊಂದು ವಿವಾದ ಹುಟ್ಟು ಹಾಕಿದ್ದಾರೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಬೇಗ್‌ ಅವರನ್ನು ಸಂಪುಟದಿಂದ ವಜಾ ಮಾಡಬೇಕು,.ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇವೆ ಎಂದು ಬಿಜೆಪಿ ಗುಡುಗಿದೆ. ಪುಲಕೇಶಿ ನಗರದಲ್ಲಿ ಅಕ್ಟೋಬರ್‌ 10 ರಂದು ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ತಮಿಳು ಭಾಷೆಯಲ್ಲಿ ಮಾತನಾಡಿದ ಸಚಿವ ಬೇಗ್‌ ನೋಟು ಅಪನಗದೀಕರಣ ವಿಚಾರದ ಕುರಿತು ವಾಗ್ದಾಳಿ ನಡೆಸುವ […]

ಸಮುದ್ರದ ನೀರನ್ನು ಶುದ್ಧೀಕರಿಸಿ ವಿವಿಧ ಕಡೆಗಳಿಗೆ ಪೂರೈಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ: ಬೇಗ್

Saturday, February 4th, 2017
Roshan-Baig

ಮಂಗಳೂರು: ಸಮುದ್ರದ ನೀರನ್ನು ಶುದ್ಧೀಕರಿಸಿ ರಾಜ್ಯದ ವಿವಿಧ ಕಡೆಗಳಿಗೆ ಪೂರೈಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ತಿಳಿಸಿದರು. ನಗರದಲ್ಲಿ ಸ್ಮಾರ್ಟ್‌ ಸಿಟಿ ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಈ ಪ್ರಕ್ರಿಯೆಯನ್ನು ಅಧ್ಯಯನ ಮಾಡಲು ಕೊರಿಯಾದ ತಜ್ಞರು ಆಗಮಿಸಿದ್ದಾರೆ. ವಿಶೇಷ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಎತ್ತಿನಹೊಳೆ ಯೋಜನೆ ಕಾಮಗಾರಿ ಜಾರಿಯಲ್ಲಿದೆ. ಇದರ ಪೈಪ್‌ಲೈನ್‌ಗಳನ್ನು ಬಳಸಿ ಸಮುದ್ರದ ನೀರನ್ನು ಪೂರೈಸಲಾಗುವುದು ಎಂದು ತಿಳಿಸಿದರು.

ಹಜ್‌ ಭವನ ಉತ್ತಮ ಕಾರ್ಯಕ್ರಮಗಳಿಗೆ ಸದ್ಬಳಕೆಯಾಗಬೇಕು: ರೋಷನ್‌ ಬೇಗ್‌

Thursday, August 4th, 2016
Roshan-Beg

ಮಂಗಳೂರು: ಮಂಗಳೂರಿನಲ್ಲಿ ಬಹೂಪಯೋಗಿ ಕೇಂದ್ರವಾಗಿ ಹಜ್‌ ಭವನ ನಿರ್ಮಾಣ ಮಾಡಲು ರೂಪುರೇಖೆ ಸಿದ್ಧಪಡಿಸಿ ಅದಕ್ಕೆ ಬೇಕಾದ ಎಲ್ಲ ನೆರವನ್ನು ಸರಕಾರದಿಂದ ನೀಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ಹಜ್‌ ಸಚಿವ ಆರ್‌. ರೋಷನ್‌ ಬೇಗ್‌ ಹೇಳಿದರು. ಬಜಪೆ ಹಳೆ ವಿಮಾನ ನಿಲ್ದಾಣದಲ್ಲಿ 2016-17ನೇ ಸಾಲಿನ ಹಜ್‌ ಯಾತ್ರೆಯ ವಿಮಾನ ಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಬುಧವಾರ ಮಾತನಾಡಿದರು. ಹಜ್‌ ಭವನ ಕೇವಲ ನೆಪ ಮಾತ್ರಕ್ಕೆ ನಿರ್ಮಾಣವಾಗುವಂತಾಗಬಾರದು. ಇತರ ಉತ್ತಮ ಕಾರ್ಯಕ್ರಮಗಳಿಗೂ ಅದು ಸದ್ಬಳಕೆಯಾಗುವಂತಿರಬೇಕು. ಈ ನಿಟ್ಟಿನಲ್ಲಿ ಬಹೂಪಯೋಗಿ ಹಜ್‌ […]

ಕುವೈತ್ ಗೆ ವಿಮಾನ ಪುನಾರಂಭಿಸಲು ಐವನ್ ಡಿಸೋಜಾ ಒತ್ತಾಯ

Friday, July 25th, 2014
Ivan D souza

ಮಂಗಳೂರು : ಮಂಗಳೂರಿನಿಂದ ಕುವೈತ್ ಗೆ ನೇರ ವಿಮಾನ ರದ್ದು ಪಡಿಸಿದ್ದರ ಹಿಂದೆ ಲಾಭಿ ಕೆಲಸ ಮಾಡಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಖಾಸಗಿ ವಿಮಾನ ಸಂಸ್ಥೆಯ ಸಹಯೋಗ ಪಡೆದು ಕುವೈತ್ ವಿಮಾನ ಪುನಾರಂಭಿಸುವಂತೆ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಇಂದು ಮೂಲಬೂತ ಸೌಲಭ್ಯ ಅಭಿವೃದ್ದಿ ಸಚಿವ ರೋಷನ್ ಬೇಗ್ ರಿಗೆ ಕುವೈತ್ ಗೆ ವಿಮಾನ ಆರಂಭಿಸಲು ಇರುವ ತೊಡಕುಗಳ ಬಗ್ಗೆ ಪ್ರಶ್ನಿಸಿದ್ದು, ಪ್ರಯಾಣಿಕರ ಕೊರತೆಯಿಂದ ವಿಮಾನ ರದ್ದು ಪಡಿಸಲಾಗಿದೆ ಎಂಬ ಉತ್ತರಕ್ಕೆ […]