ವಿದ್ವತ್ ಮೇಲೆ ಹಲ್ಲೆ ಪ್ರಕರಣ: 3ನೇ‌ ಆರೋಪಿ ಶ್ರೀಕೃಷ್ಣನಿಂದ ವಿದ್ವತ್​ಗೆ ನಿರಂತರ ಕರೆ?

Thursday, November 22nd, 2018
nalapad

ಬೆಂಗಳೂರು: ವಿದ್ವತ್ ಮೇಲೆ ನಲಪಾಡ್ ಗ್ಯಾಂಗ್ ಯುಬಿ ಸಿಟಿಯಲ್ಲಿ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮೂರನೇ ಆರೋಪಿ ಶ್ರೀಕೃಷ್ಣ ಪ್ರಕರಣದಲ್ಲಿ ರಾಜಿ ಮಾಡಿಕೋ ಎಂದು ಪದೇ ಪದೆ ವಿದ್ವತ್ಗೆ ಕರೆ ಮಾಡುತ್ತಿದ್ದಾನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಇದರಿಂದ ವಿದ್ವತ್ ತನಗೆ ಜೀವ ಬೆದರಿಕೆ ಇದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಿದ್ದಾನೆ. ಈ ಹಿನ್ನೆಲೆ ವಿದ್ವತ್ಗೆ ಭದ್ರತೆ ನೀಡುವಂತೆ ಸಂಜಯ್ ನಗರ ಪೊಲೀಸರಿಗೆ ಸಿಸಿಬಿ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಜೊತೆಗೆ ಆರೋಪಿ […]

ನಲಪಾಡ್‌ಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಮಂಜೂರು

Thursday, June 14th, 2018
nalapad

ಬೆಂಗಳೂರು: ವಿದ್ವತ್‌ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ನಲಪಾಡ್‌ ಹ್ಯಾರಿಸ್‌ಗೆ ಕೊನೆಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ನಲಪಾಡ್ ಹ್ಯಾರಿಸ್‌‌ಗೆ ಜಾಮೀನು ಮಂಜೂರಾಗಿದೆ. ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಈ ಆದೇಶ ನೀಡಿದ್ದಾರೆ. 2 ಲಕ್ಷ ಬಾಂಡ್‌ ಮತ್ತು ಇಬ್ಬರ ಶೂರಿಟಿ ಜೊತೆಗೆ ಸಾಕ್ಷ್ಯ ನಾಶ ಮಾಡದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ನಲಪಾಡ್ 116 ದಿನಗಳ ಜೈಲು ವಾಸ ಅಂತ್ಯಗೊಂಡಂತಾಗಿದೆ. ನಲಪಾಡ್ ಪರ ಹಿರಿಯ […]

ನಲಪಾಡ್‌‌ಗೆ ಸುಪ್ರೀಂಕೋರ್ಟ್‌ನಲ್ಲೂ ಜಾಮೀನು ಸಿಗುವುದು ಡೌಟ್‌‌!

Wednesday, March 21st, 2018
nalapad-harris

ಬೆಂಗಳೂರು: ವಿದ್ವತ್ ಕೊಲೆ ಯತ್ನದ ಕೇಸ್‌‌ನಲ್ಲಿ ಜೈಲು ಸೇರಿರುವ ನಲಪಾಡ್ ಹ್ಯಾರಿಸ್‌‌ಗೆ ಸುಪ್ರೀಂಕೋರ್ಟ್‌ನಲ್ಲೂ ಜಾಮೀನು ಸಿಗದಂತೆ ಮಾಡುವ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ಇಂದು ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಕೋರ್ಟ್‌ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ನಲಪಾಡ್ ಪರ ವಕೀಲರು ಸುಪ್ರೀಂಕೋರ್ಟ್ ಮೊರೆ ಹೋಗುವ ಮುನ್ನವೇ ಸಿಸಿಬಿ ಅಧಿಕಾರಿಗಳು ಕೇವಿಯೆಟ್ ಅರ್ಜಿ ಸಲ್ಲಿಸಿದ್ದಾರೆ. ನಲಪಾಡ್ ಹ್ಯಾರಿಸ್ ಜಾಮೀನು ಅರ್ಜಿ ಸಲ್ಲಿಸಿದರೆ ಆದೇಶ ನೀಡುವ ಮುನ್ನ ನಮ್ಮ ಅಭಿಪ್ರಾಯ ಪಡೆಯುವಂತೆ ಕೋರಿ […]