ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಅಹ್ವಾನ

Friday, October 6th, 2023
Rajyotsava 2023

ಮಂಗಳೂರು : 2023-24ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಹಿತ್ಯ, ಶಿಕ್ಷಣ, ಸಂಗೀತ, ನೃತ್ಯ, ಕ್ರೀಡೆ, ಕೃಷಿ, ಲಲಿತ ಕಲೆಗಳು ಸಮಾಜ ಸೇವೆ, ಜನಪದ, ಪರಿಸರ-ವಿಜ್ಞಾನ, ವೈದ್ಯಕೀಯ ಸಂಶೋಧನೆ, ಪತ್ರಿಕೋದ್ಯಮ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ತಮ್ಮ ಸೇವೆ ಅಥವಾ ಸಾಧನೆಯ ಕ್ಷೇತ್ರ ಹಾಗೂ ಸಂಕ್ಷಿಪ್ತ ದಾಖಲೆ ವಿವರಣೆಗಳೊಂದಿಗೆ ಇದೇ ಅ.25ರಂದು ಸಂಜೆ 5 ಗಂಟೆಯೊಳಗೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜು.31ರಂದು  ಕನ್ನಡ -ತಮಿಳು ದ್ವಿಭಾಷೆಯಲ್ಲಿ ವಿನೂತನ ಚಿತ್ರ `ಹವಾಲ’ ಒಟಿಟಿಯಲ್ಲಿ ಬಿಡುಗಡೆ

Sunday, July 19th, 2020
hawala

ಮಂಗಳೂರು: ಕೊರೋನಾ ಲಾಕ್‌ಡೌನ್ ಸಿನಿಮಾ ರಂಗಕ್ಕೂ ಬಲವಾದ ಪೆಟ್ಟು ನೀಡಿದೆ. ಆದರೆ ಚಿತ್ರತಂಡದ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ಚಿತ್ರ ಪ್ರೇಮಿಗಳಿಗಾಗಿ ವಿನೂತನವಾದ ಕಥಾ ಹಂದರ ಹೊಂದಿದ `ಹವಾಲ’ ಚಿತ್ರ ನಿರ್ಮಾಣಗೊಂಡಿದ್ದು, ಇದೇ ಜು.31 ರಂದು ವರ್ಲ್ಡ್ ಪ್ರೀಮಿಯರ್ (ಒಟಿಟಿ)ನಲ್ಲಿ ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಶಶಿ ಕುಮಾರ್ ಪಂಡಿತ್ ಅರ್ಪಿಸುವ ಈ ಚಿತ್ರದ ನಿರ್ಮಾಣವನ್ನು ನಿರ್ಮಾಪಕ ಪುತ್ತೂರಿನ ಪ್ರವೀಣ್ ಶೆಟ್ಟಿ ಮಾಡಿದ್ದು, ಚಿತ್ರ ಭೂಗತ ಲೋಕದ ಅತ್ಯದ್ಭುತವಾದ ರೋಚಕ ಕಥೆಯನ್ನೊಳಗೊಂಡಿದೆ. ಸೋಚ್ ಸಿನಿಮಾಸ್ ಇವರ […]

ಹದಿ ಹರೆಯದ ವಿದ್ಯಾರ್ಥಿಗಳ ವಯೋಸಹಜ ಭಾವನೆಗಳಿಗೆ ಉತ್ತಮ ಹವ್ಯಾಸಗಳು ಪೂರಕವಾಗಿರಬೇಕು

Sunday, December 8th, 2019
shakthi

ಮಂಗಳೂರು : ಉತ್ತಮ ಹವ್ಯಾಸಗಳು, ಒಳ್ಳೆಯ ಸ್ನೇಹಿತರು ಹಾಗೂ ಪರಿಸರ ಹದಿ ಹರೆಯದ ವಿದ್ಯಾರ್ಥಿಗಳ ವಯೋಸಹಜ ಭಾವನೆ. ಭಾವಾದೇಶಗಳಿಗೆ ಸೂಕ್ತ ಪರಿಹಾರ ಎಂದು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ವಯಸ್ಸಿನ ಬದಲಾವಣೆ ಮತ್ತು ಪರಿಣಾಮ ಎಂಬ ಕಾರ್ಯಗಾರದಲ್ಲಿ ಭಾಗವಹಿಸಿದ ಅಕ್ಷತಕಾಮತ್, ಆಪ್ತ ಸಮಾಲೋಚಕಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಹದಿಹರೆಯದ ವಯಸ್ಸಿನ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬದಲಾವಣೆಗಳು ಹಾರ್ಮೋನ್‌ಗಳ ಕಾರಣದಿಂದ ಉಂಟಾಗುವವು. ಉತ್ತಮ ಆಹಾರ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆಯ ಮೂಲಕ ನಮ್ಮ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡು […]

ಯುವ ಜನಾಂಗ ಶಾಸ್ತ್ರೀಯ ಸಂಗೀತವನ್ನು ಕಲಿಯುವ ಅಗತ್ಯವಿದೆ : ಡಾ.ಹರಿಕೃಷ್ಣ ಭರಣ್ಯ

Friday, December 25th, 2015
Nirchal Aradhana Sangeetha school

ಬದಿಯಡ್ಕ: ಸಂಸ್ಕೃತಿ ಮತ್ತು ನಾಗರಿಕತೆಗಳು ಮಾನವನು ಬೆಳೆದು ಬಂದ ಹಿರಿಮೆಯನ್ನು ತೋರಿಸುವ ಕೈಗನ್ನಡಿಗಳಾಗಿವೆ.ಸಂಗೀತವು ಕಲೆಯ ನೆಲೆಯಾಗಿದೆ.ಸಂಗೀತ ಕಲಿಕೆಯಿಂದ ಮನಸ್ಸು ಮತ್ತು ದೈಹಿಕ ಆರೋಗ್ಯ ಹೆಚ್ಚುವುದು.ಈ ನಿಟ್ಟಿನಲ್ಲಿ ಯುವ ಜನಾಂಗ ಶಾಸ್ತ್ರೀಯ ಸಂಗೀತವನ್ನು ಕಲಿಯುವ ಅಗತ್ಯವಿದೆಯೆಂದು ಮಧುರೈ ಕಾಮರಾಜ ವಿ.ವಿ.ಯ ವಿಶ್ರಾಂತ ಪ್ರಾಂಶುಪಾಲ ಡಾ.ಹರಿಕೃಷ್ಣ ಭರಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು. ನೀರ್ಚಾಲಿನ ಆರಾಧನಾ ಸಂಗೀತ ಶಾಲೆಯ ವಾರ್ಷಿಕೋತ್ಸವವನ್ನು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಶಿಕ್ಷಣ ತಜ್ಞ,ಸಾಹಿತಿ ವಿ.ಬಿ.ಕುಳಮರ್ವ,ನಿವೃತ್ತ […]

ಸಮತಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಮತ್ತು ಶಿಕ್ಷಕ ದಿನಾಚರಣೆ.

Tuesday, September 21st, 2010
 ಸಮತಾದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಮತ್ತು ಶಿಕ್ಷಕ ದಿನಾಚರಣೆ.

ಮಂಗಳೂರು: ವಿಂಶತಿ ವರ್ಷಾಚರಣೆಯಲ್ಲಿರುವ ಸಮತಾ ಮಹಿಳಾ ಬಳಗದ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮವು ಶನಿವಾರ ಶ್ರೀ ಸುಬ್ರಹ್ಮಣ್ಯ ಸಭಾ ಸದನದಲ್ಲಿ ನೆರವೇರಿತು. ಕಲಾನಿಕೇತನದ ಸಂಗೀತ ಮತ್ತು ವೀಣಾ ಶಿಕ್ಷಕಿ ಶ್ರೀಮತಿ ಸಾವಿತ್ರಿ ರಾಮ್ ರಾವ್ ಮುಖ್ಯ ಅತಿಥಿಯಾಗಿದ್ದರು. ಸಮತಾದ ಸದಸ್ಯೆಯರ 12 ವರ್ಷದೊಳಗಿನ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಧಾರ್ಮಿಕ  ಚೌಕ್ಕಟ್ಟಿನೊಳಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಭಾಗವಹಿಸಿದ ಪುಟಾಣಿಗಳಿಗೆ ನಗದು ಬಹುಮಾನ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು. ಆರ್ಥಿಕವಾಗಿ ತೊಂದರೆಗೀಡಾಗಿರುವ ರವೀಂದ್ರ ಎಂಬ ವಿದ್ಯಾರ್ಥಿಗೆ ಧನಸಹಾಯ ನೀಡಲಾಯಿತು. ಬಳಿಕ ಶಿಕ್ಷಕಿ ಸಾವಿತ್ರಿ […]