ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Monday, August 16th, 2021
Kannada Books

ಬೆಂಗಳೂರು  : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2021ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಕಡ 50%ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ […]

ಫಲಿತಾಂಶ ಮತ್ತು ಕಾರ್ಯಾನುಷ್ಠಾನ ಕೇಂದ್ರಿತ ಸರ್ಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Sunday, August 15th, 2021
Manik Sha

ಬೆಂಗಳೂರು : ನನ್ನ ಸರ್ಕಾರ ಫಲಿತಾಂಶ ಮತ್ತು ಕಾರ್ಯಾನುಷ್ಠಾನ ಕೇಂದ್ರಿತವಾಗಿರಲಿದೆ. ಸಮಾಜದ ಕೊನೆಯ ಹಂತದವರೆಗೆ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸಲು ಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹೇಳಿದರು. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದಿನಾಂಕ 15-8-2021ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಮಾಡಿ ನಾಡಿನ ಜನತೆಗೆ ನೀಡಿದ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. “ಅಭಿವೃದ್ಧಿ ಅಂದರೆ ಅಂಕಿ-ಅಂಶಗಳಲ್ಲ. ನಾಡಿನ ಪ್ರತಿಯೊಂದು ಕುಟುಂಬ, ಪ್ರತಿಯೊಬ್ಬ ವ್ಯಕ್ತಿಯ ಬದುಕು ಹಸನಾಗಬೇಕು. ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಯೊಂದಿಗೆ ಆರೋಗ್ಯ, […]

ಕ್ಯಾನ್ಸರ್ ಚಿಕಿತ್ಸೆಗೆ ಲಯನ್ ಪ್ರಶಾಂತ್ ಭಟ್ ಕಡಬ ಅವರಿಂದ ಸಹಾಯ

Thursday, August 20th, 2020
Lion prashanth Bhat

ಮಂಗಳೂರು : ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅಡ್ಯಾರ್ ನಿವಾಸಿ ಸುಗಂಧಿ ಅವರ ಚಿಕಿತ್ಸೆಗೆ ತನ್ನ ವಯ್ಯಕ್ತಿಕ ನೆಲೆಯಲ್ಲಿ ಲಯನ್ ಪ್ರಶಾಂತ್ ಭಟ್ ಕಡಬ ಅವರು ಹತ್ತು ಸಾವಿರ ರೂಪಾಯಿಗಳ ಚೆಕ್ ಹಸ್ತಾಂತರಿಸಿದ್ದಾರೆ. ಮಂಗಳೂರಿನ ಲಯನ್ಸ್ ಕ್ಲಬ್ 317ಡಿ ಮಲ್ಲಿಕಟ್ಟೆ ಯಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಿವೃತ್ತ ಸೈನಿಕ ಲಯನ್ ರಾಘವೇಂದ್ರ ಭಟ್ ಅವರು ಸುಗಂಧಿಯವರ ಪುತ್ರ ಅಜಿತ್ ಪೂಜಾರಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಸತೀಶ್ ರೈ, ಮಾಜಿ ಅಧ್ಯಕ್ಷ ಶೇಖರ್ […]

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 2020

Saturday, August 15th, 2020
independenceAds

ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ, ಆಗಸ್ಟ್ 5ರಿಂದ ರಾತ್ರಿ ಕರ್ಫ್ಯೂ ತೆರವು

Wednesday, July 29th, 2020
modi

ನವದೆಹಲಿ: ಕಂಟೈನ್ಮೆಂಟ್ ಝೋನ್ ಗಳನ್ನು ಹೊರತುಪಡಿಸಿ, ಉಳಿದ ಪ್ರದೇಶಗಳಲ್ಲಿ ಆಗಸ್ಟ್ 5ರಿಂದ ಜಿಮ್, ಯೋಗ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಅಲ್ಲದೆ ರಾತ್ರಿ ಕರ್ಫ್ಯೂ ಅನ್ನು ಸಹ ತೆರವುಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಅನ್ ಲಾಕ್-3 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಹೇಳಿಕೆ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಮೆಟ್ರೋ, ಶಾಲಾ, ಕಾಲೇಜ್ ಗಳು, ಕೋಚಿಂಗ್ ಸೆಂಟರ್ ಗಳು ಮತ್ತು ಚಿತ್ರ ಮಂದಿರಗಳ ಮೇಲಿನ ನಿರ್ಬಂಧವನ್ನು ಆಗಸ್ಟ್ 31ರ ವರೆಗೆ ಮುಂದುವರೆಸಿದೆ. […]

ಜಿಲ್ಲಾ ಮಟ್ಟದ 73ನೇ ಸ್ವಾತಂತ್ರ್ಯ ದಿನಾಚರಣೆ ರಂದು ನೆರೆ ಸಂತ್ರಸ್ತರಿಗೆ ಮಂಗಳೂರು ಡಿಸಿ ಶಶಿಕಾಂತ್‌ ಸೆಂಥಿಲ್‌ ಭರವಸೆ

Friday, August 16th, 2019
DC-sasikanth

ಮಂಗಳೂರು : “ದಕ್ಷಿಣ ಕನ್ನಡ ಜಿಲ್ಲೆ ಭಾರೀ ಪ್ರವಾಹವನ್ನು ಎದುರಿಸಿದೆ. ತಮ್ಮೆಲ್ಲವನ್ನೂ ಕಳೆದುಕೊಂಡು ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಂಯಮದಿಂದ ಸಹಕರಿಸಿರುವ ನಿಮ್ಮ ಜತೆ ಇಡೀ ಜಿಲ್ಲಾಡಳಿತವೇ ಇದೆ ಎಂಬ ಭರವಸೆಯನ್ನು ಜಿಲ್ಲೆಯ ನೆರೆ ಸಂತ್ರಸ್ತರಿಗೆ ನಾನು ನೀಡುತ್ತಿದ್ದೇನೆ’ ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು. ನಗರದ ನೆಹರೂ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 73ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. “ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ನೂರು ವರ್ಷಗಳಲ್ಲಿ ಕಂಡರಿಯದ ಪ್ರವಾಹ ಉಂಟಾಗಿದೆ. ಸಾರ್ವಜನಿಕ ಆಸ್ತಿ […]

ಭಾರತದ ತೇಜೋಮಯ ಇತಿಹಾಸವನ್ನು ನೆನೆಯುವ ದಿನವೇ ಸ್ವಾತಂತ್ರ್ಯ ದಿನಾಚರಣೆ

Tuesday, August 14th, 2018
shivaji

  ಮಂಗಳೂರು: 15 ಆಗಸ್ಟ್ 1947 ರಂದು ಭಾರತವು ಸ್ವತಂತ್ರವಾಯಿತು. ನಮ್ಮ ಸ್ವಾತಂತ್ರ್ಯ ಸೈನಿಕರು ಆಂಗ್ಲರ 150 ವರ್ಷಗಳ ದಾಸ್ಯತ್ವದಿಂದ ನಮ್ಮ ದೇಶವನ್ನು ಬಿಡಿಸಿದರು. ಆ ನೆನಪಿಗಾಗಿ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ. ಭಾರತವು ಸ್ವತಂತ್ರವಾಗುವ ಮೊದಲು ಮೊಗಲರು, ಪೋರ್ಚುಗೀಸರು, ಆದಿಲಶಾಹ, ಕುತುಬಶಾಹ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳಿದರು. ಇವರೆಲ್ಲರೂ ಭಾರತದಲ್ಲಿದ್ದ ಸ್ವಾರ್ಥಿ ಮತ್ತು ಭ್ರಷ್ಟ ಜನರನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸೈನಿಕರ ಮೇಲೆ ದೌರ್ಜನ್ಯ ನಡೆಸಿ ರಾಜ್ಯವಾಳಿದರು. ವ್ಯಾಪಾರ ಮಾಡುವ ನಿಮಿತ್ತ ಆಂಗ್ಲರು ಭಾರತಕ್ಕೆ ಬಂದರು. […]

ಬೆಳ್ತಂಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಸಂದರ್ಭ ಕಪ್ಪು ಬಾವುಟ ಪ್ರದರ್ಶನ

Tuesday, August 16th, 2016
Belthangadi

ಬೆಳ್ತಂಗಡಿ: ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಗೋವಿನ ರಕ್ಷಣೆ ಹೆಸರಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ದಲಿತ ವಿರೋಧ ನೀತಿ ಖಂಡಿಸಿ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಕಪ್ಪುಪಟ್ಟಿ ಪ್ರದರ್ಶಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಸಂದರ್ಭ ಮೆರವಣಿಗೆಗೆ ತಡೆ ಮಾಡಿ ಕಪ್ಪು ಬಾವುಟವನ್ನು ಬೆಳ್ತಂಗಡಿ ಸಂತೆಕಟ್ಟೆ ಬಳಿ ಪ್ರದರ್ಶಿಸಿದರು. ಧ್ವಜಾರೋಹಣಕ್ಕೆ ಅಡ್ಡಿಪಡಿಸುವ ಬಗ್ಗೆ ಈ ಮೊದಲೇ ದ.ಸಂ.ಸ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ […]

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ

Friday, August 12th, 2016
Bomb nishkriya dala

ಬಂಟ್ವಾಳ: ಮಂಗಳೂರು ಪೋಲೀಸ್ ವರಿಷ್ಟಾಧಿಕಾರಿ ಭೂಷಣ್ ಜಿ.ಬೋರಾಸೆ ಅವರ ನೇತೃತ್ವದ ಪಶ್ಚಿಮವಲಯದ ಬಾಂಬ್ ನಿಷ್ಕ್ರೀಯ ದಳ ಇವರ ತಂಡದಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲೇಯಾದ್ಯಂತ ಪ್ರಮುಖ ಸ್ಥಳಗಳಾದ ಬಸ್ ನಿಲ್ದಾಣ, ಕೋರ್ಟು, ರೈಲ್ವೆ ನಿಲ್ದಾಣ ಮತ್ತು ಪ್ರವಾಸಿ ತಾಣಗಳಲ್ಲಿ ವಿಶೇಷ ತಪಾಸಣೆ ನಡೆಸಿದರು. ಬಂಟ್ವಾಳದಲ್ಲೂ ಖಾಸಗಿ ಬಸ್ ನಿಲ್ದಾಣ, ಕೋರ್ಟು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸಂಚರಿಸಿ ತಪಾಸಣೆ ನಡೆಸಿದರು. ಮೈಸೂರು ನಲ್ಲಿ ನಡೆದ ಘಟನೆಯ ಹಿನ್ನಲೆಯಲ್ಲಿ ಮುಂಜಾಗ್ರತೆಯ ಕ್ರಮವಾಗಿ […]

ಮೂಡುಬಿದಿರೆ ವಿದ್ಯಾಗಿರಿಯಲ್ಲಿ 67ನೇ ಸ್ವಾತಂತ್ರ್ಯೋತ್ಸವ

Friday, August 16th, 2013
i-day-moodbidire

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ವೇಳೆ ವಿದ್ಯಾಗಿರಿಯ ಕೆ.ವಿ ಸುಬ್ಬಣ್ಣ ಬಯಲು ಮಂದಿರದಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ  ಹೂಗಳಿಂದ ಅಲಂಕೃತವಾದ ಧ್ವಜಸ್ತಂಭ ಮತ್ತೊಂದೆಡೆ ವೇದಿಕೆಯಲ್ಲಿ ಅದೇ ಬಣ್ಣದ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಸಾಲು ಹಾಗೂ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಧ್ವಜಸ್ತಂಭದ ಬಳ್ಳಿಯನ್ನು ಎಳೆದು ತ್ರಿವರ್ಣ ಬಾವುಟ ಅರಳಿಸುತ್ತಿದ್ದಂತೆ ಆಳ್ವಾಸ್ ವಿದ್ಯಾರ್ಥಿಗಳಿಂದ ಕೋಟಿ ಕಂಠೋಂಸೆ […]