ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಕುಸಿದು ಬಿದ್ದು ಸಾವು

Monday, February 12th, 2018
joyel

ಮಂಜೇಶ್ವರ : ಮಂಗಳೂರು ಶ್ರೀ ದೇವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸೋಮವಾರ ಬೆಳಿಗ್ಗೆ ಹಾಸ್ಟೆಲ್ ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಂಜೇಶ್ವರ ಕೋಳ್ಯೂರು ನಿವಾಸಿ ಜೋಯೆಲ್ (18) ಸೋಮವಾರ ಬೆಳಿಗ್ಗೆ ಹಾಸ್ಟೆಲ್ ನಲ್ಲಿ ಬ್ರಶ್ ಮಾಡಿ ಮುಖ ತೊಳೆಯುತ್ತಿದ್ದ ವೇಳೆ ಕೊಠಡಿಯಲ್ಲೇ ಕುಸಿದು ಬಿದ್ದರು. ಜೋಯೆಲನ್ನು ತಕ್ಷಣ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದರೂ ಹಾದಿ ಮಧ್ಯೆ ಮೃತಪಟ್ಟನೆಂದು ತಿಳಿದು ಬಂದಿದೆ. ಕೋಳ್ಯೂರು ಸಮೀಪದ ಸರ್ಕುಡೆಲಿನ ರೋಯ್ ಮ್ಯಾಥ್ಯು ರವರ ಪುತ್ರನಾಗಿರುವ ಜೋಯೆಲ್ ಇಂಜಿನಿಯರಿಂಗ್ ಪ್ರಥಮ ವರ್ಷದ ವಿದ್ಯಾರ್ಥಿ. […]