ಮಕ್ಕಳ ಸಂತೆ : ಬಿಜಿಎಸ್ ಆಂಗ್ಲ ಶಾಲೆಯಲ್ಲಿ ವಿಶಿಷ್ಟ ಕಾರ್ಯಕ್ರಮ

Tuesday, July 31st, 2018
bgs

ಚಿಕ್ಕಬಳ್ಳಾಪುರ : ಇಲ್ಲಿಗೆ ಸಮೀಪದ ಅಗಲಗುರ್ಕಿಯ ಬಿಜಿಎಸ್ ಶಾಲೆಯಲ್ಲಿ ಮಕ್ಕಳ ಸಂತೆ ವಿಶಿಷ್ಟ ಕಾರ್ಯಕ್ರಮ ಭಾನುವಾರ ಶಾಲಾ ಮೈದಾನದಲ್ಲಿ ಜರುಗಿತು. ಸಂತೆಯಲ್ಲಿ 1 ರಿಂದ 4ನೇ ತರಗತಿಯ ಪುಟಾಣಿ ಮಕ್ಕಳು ತಮ್ಮ ತಮ್ಮ ಮನೆಗಳಿಂದ ಬಗೆಬಗೆಯ ತರಕಾರಿ, ಹಣ್ಣುಗಳು, ಸೊಪ್ಪು, ಮಜ್ಜಿಗೆ, ಬಿಸ್ಕೆಟ್, ಬಾಳೆಹಣ್ಣು, ದ್ರಾಕ್ಷಿ, ಬಜ್ಜಿ, ಬೊಂಡ, ಕಡಲೆಕಾಯಿ, ಹೂವು ಇತ್ಯಾದಿ ಆಹಾರ ಪದಾರ್ಥಗಳನ್ನು ತಂದು ಸಂತೆಯಲ್ಲಿ ಜೋಡಿಸಿದಂತೆ ಜೋಡಿಸಿಕೊಂಡು ಮಾರುಕಟ್ಟೆಯನ್ನು ನಾಚಿಸುವಂತೆ ಮಕ್ಕಳು ಪೈಪೋಟಿಯಿಂದ ಪೋಷಕ ಗ್ರಾಹಕರನ್ನು ತಮ್ಮತ್ತ ಸೆಳೆದರು. ಮಕ್ಕಳು ಖುಷಿ ಖುಷಿಯಿಂದ […]

ಬಂಟರ ಸಂಘದ ಅಧ್ಯಕ್ಷರಾಗಿ ಆರ್. ಉಪೇಂದ್ರ ಶೆಟ್ಟಿ ಅವರು ಆಯ್ಕೆ

Tuesday, July 31st, 2018
upendra

ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆರ್. ಉಪೇಂದ್ರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ 5323 ಪಡೆದು ಭಾರಿ ಮತಗಳಿಂದ ಜಯಗಳಿಸಿದ್ದಾರೆ. ಉಪೇಂದ್ರ ಶೆಟ್ಟಿ ಅವರು ಬೆಂಗಳೂರಿನ ಯೂನಿರ್ವಸೆಲ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ನಿರ್ದೇಶರಾಗಿದ್ದಾರೆ. ಉಪಾಧ್ಯಕ್ಷರುಗಳಾಗಿ ಭೋಜರಾಜ ಶೆಟ್ಟಿ, ಅಮೃತಕ್ಕ ಎಸ್. ಶೆಟ್ಟಿ ಕಾರ್ಯದರ್ಶಿಯಾಗಿ ಮಧುಕರ್ ಎಂ. ಶೆಟ್ಟಿ, ಜಂಟಿ ಕಾರ್ಯದರ್ಶಿ ಸೌಮ್ಯ ಪ್ರಿಯ, ಖಜಾಂಚಿಯಾಗಿ ದೀಪಕ್ ಶೆಟ್ಟಿ ಅವರುಗಳು ಆಯ್ಕೆಯಾಗಿದ್ದಾರೆ ಕಾರ್ಯಕಾರಿ ಸಮಿತಿಗೆ ಅಶೋಕ್ ಶೆಟ್ಟಿ, ಗುರುಪ್ರಸಾದ್ ಹೆಗ್ಡೆ, […]

ಸೋಮೇಶ್ವರ ಬೀಚ್​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರ ರಕ್ಷಣೆ..!

Tuesday, July 31st, 2018
someshwra-beach

ಮಂಗಳೂರು: ಇಲ್ಲಿನ ಸೋಮೇಶ್ವರ ಬೀಚ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆಯೊಬ್ಬರನ್ನು ಜೀವರಕ್ಷಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಸೋಮೇಶ್ವರ ಬೀಚಿಗೆ ಬಂದ 70 ವರ್ಷದ ವೃದ್ಧೆ ನೇರ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆ ಯತ್ನವನ್ನು ಗಮನಿಸಿದ ಸಮುದ್ರ ತೀರದಲ್ಲಿದ್ದ ಜೀವರಕ್ಷಕ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿದ್ದಾರೆ. ವೃದ್ಧೆಯನ್ನು ಕೌನ್ಸೆಲಿಂಗ್ ಮಾಡಿದ ಬಳಿಕ ಆಕೆಯನ್ನು ಕುಟುಂಬಿಕರಿಗೆ ಜೀವರಕ್ಷಕ ದಳದ ಸಿಬ್ಬಂದಿ ಹಸ್ತಾಂತರಿಸಿದ್ದಾರೆ.

ಪ್ರೀತಿ ನಿರಾಕರಿಸದಕ್ಕೆ ಯುವತಿಯ ಸಹೋದರಿಯ ಮೇಲೆ ಅತ್ಯಾಚಾರಕ್ಕೆ ಯತ್ನ..!

Tuesday, July 31st, 2018
attempt

ಮಂಗಳೂರು: ಯುವತಿಯು ತನ್ನನ್ನು ಪ್ರೀತಿಸುತ್ತಿಲ್ಲ ಎಂದು ಯುವಕನೊಬ್ಬ ಆಕೆ ಸಂಚರಿಸುತ್ತಿದ್ದ ರಿಕ್ಷಾಕ್ಕೆ ತನ್ನ ಪಿಕಪ್ ವಾಹನ ಡಿಕ್ಕಿ ಹೊಡೆಸಿ, ಯುವತಿ ಮತ್ತು ಆಕೆಯ ಸಹೋದರಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲುವಿನಲ್ಲಿ‌ ನಡೆದಿದೆ. ಆರೋಪಿ ಥಾಮಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯರು ಆಟೋ ರಿಕ್ಷಾದಲ್ಲಿ ಅಣೆಯೂರುನಿಂದ ಗಂಡಿಬಾಗಿಲುವರೆಗೆ ತೆರಳುವಾಗ ಈ ಘಟನೆ ನಡೆದಿದೆ. ಆರೋಪಿ ಥಾಮಸ್ ತನ್ನ ಪಿಕಪ್ ವಾಹನದಲ್ಲಿ ರಿಕ್ಷಾವನ್ನು ಹಿಂಬಾಲಿಸಿಕೊಂಡು ಬಂದು ಡಿಕ್ಕಿ ಹೊಡೆಸಿದ್ದ. ರಿಕ್ಷಾ ಮಗುಚಿ ಬಿದ್ದಾಗ […]

ಪರಂಗಿಪೇಟೆಯಲ್ಲಿ ನೈತಿಕ ಪೊಲೀಸ್ ಗಿರಿ..ನಾಲ್ವರು ಆರೋಪಿಗಳು ಸೆರೆ!

Tuesday, July 31st, 2018
arrested

ಮಂಗಳೂರು: ಮಂಗಳೂರು ಹೊರವಲಯದ ಪರಂಗಿಪೇಟೆಯ ಬಳಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರಂಗಿಪೇಟೆ ಮಸೀದಿ ಬಳಿಯ ನಿವಾಸಿ, ಆಟೋಚಾಲಕ ಉಮರ್ ಫಾರುಕ್ (36), ಅಮ್ಮೆಮಾರ್ ನಿವಾಸಿಗಳಾದ ಅರ್ಫಾತ್ (28), ಮೊಹಮ್ಮದ್ ಅಫ್ರಿದ್ (21), ಆಟೊ ಚಾಲಕ ಮೊಹಮ್ಮದ್ ಇಕ್ಬಾಲ್ (32) ಬಂಧಿತ ಆರೋಪಿಗಳು. ಆರೋಪಿಗಳು ಜುಲೈ 29ರಂದು ಫರಂಗಿಪೇಟೆಯಲ್ಲಿ ಉಡುಪಿ ಕೋಟ ಮೂಲದ ಸುರೇಶ್ ಎಂಬವರ ಮೇಲೆ ಹಲ್ಲೆನಡೆಸಿದ್ದರು. ಪ್ರಕರಣದ ಕುರಿತಂತೆ ಬಂಟ್ವಾಳ […]

ತನ್ನ ಕಾಯಿಲೆಯನ್ನು ಮನೆಯವರಿಗೆ ತಿಳಿಸದೆ ಜೀವ ಕಳಕೊಂಡ ವಿದ್ಯಾರ್ಥಿನಿ

Monday, July 30th, 2018
Yakshitha

ಮೂಡಬಿದಿರೆ : ವಿದ್ಯಾರ್ಥಿನಿಯೊಬ್ಬಳು ತನಗೆ ಖಾಯಿಲೆ ಇದ್ದರೂ ಮನೆಯವರಿಗೆ ತಿಳಿಸದೆ ಮುಚ್ಚಿಟ್ಟ ಪರಿಣಾಮ ಆಕೆ ತನ್ನ ಜೀವವನ್ನೇ ತೆರಬೇಕಾಯಿತು. ಆಕೆಗಿನ್ನೂ ಹತ್ತೊಂಬತ್ತು ವರ್ಷಪ್ರಾಯ ಮೂಡಬಿದ್ರೆಯ ಸಿದ್ದಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವತೀಯ ಬಿಕಾಂ ವಿದ್ಯಾರ್ಥಿನಿ. ಮೂಡಬಿದ್ರೆಯ ನೀರ್ಕರೆಯ ಅಶ್ವತ್ಥಪುರ ನಿವಾಸಿ ಕೃಷ್ಣ ಪುಜಾರಿ ಎಂಬವಳ ಮಗಳು ಯಕ್ಷಿತಾ ಎಂಬವಳು ಮೃತ ಪಟ್ಟ ದುರ್ದೈವಿ. ಆಕೆಯ ಅಶ್ವಸ್ಥತೆಯ ಬಗ್ಗೆ ಸ್ವತಃ ಆಕೆಗೆ ಮಾತ್ರ ತಿಳಿದಿತ್ತು. ಸಕ್ಕರೆಕಾಯಿಲೆ ಮತ್ತು ರಕ್ತದೊತ್ತಡ ಆಕೆಯನ್ನು ಕಾಡುತ್ತಿತ್ತು. ಆಕೆಗೆ ಸುಸ್ತಾಗುತ್ತಿತ್ತು, ಸರಿಯಾದ ಸಮಯಕ್ಕೆ […]

ತುಳು ಓದಲು ಬೆರೆಯಲು ಕಲಿಯುವವರಿಗೆ ಇಲ್ಲಿದೆ ಸುವರ್ಣಾವಕಾಶ

Monday, July 30th, 2018
Tulu

ಮಂಗಳೂರು :  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು “ತುಳು ಲಿಪಿ ಕಲ್ಪುಗ” ಯೋಜನೆಯಡಿ ಆಸಕ್ತರಿಗೆ ತುಳು ಲಿಪಿ ಕಲಿಸುವ ಸಲುವಾಗಿ ಉಚಿತ ತುಳು ಲಿಪಿ ಕಲಿಕಾ ತರಗತಿಯನ್ನು ಆಯೋಜಿಸುತ್ತಿದೆ. ಅಕಾಡೆಮಿ ಸಿರಿ ಚಾವಡಿಯಲ್ಲಿ ತರಗತಿಗಳನ್ನು ಸಪ್ಟೆಂಬರ್ 9 ರಿಂದ 4ಭಾನುವಾರಗಳಂದು ವ್ಯವಸ್ಥೆ ಮಾಡಲಾಗುವುದು. ತುಳು ಲಿಪಿ ಕಲಿಯಲಿಚ್ಚಿಸುವ ಆಸ್ತಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ. ಆಸಕ್ತರು ಅಕಾಡೆಮಿ ಮೊಬೈಲ್ ಸಂಖ್ಯೆ: 9901016962 ಗೆ SMS ಅಥವಾ ಕರೆ ಮೂಲಕ ಅಕಾಡೆಮಿಗೆ ದಿನಾಂಕ 20-08-2018 ರ ಒಳಗಾಗಿ […]

ಗುರು-ಶಿಷ್ಯ ಪರಂಪರೆ ಜಗತ್ತಿಗೇ ಹಿಂದೂ ಧರ್ಮ ನೀಡಿದ ಅಮೂಲ್ಯ ಕೊಡುಗೆ

Monday, July 30th, 2018
Gurupurnime

ಮಂಗಳೂರು : ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಂಗಳೂರಿನ ಎಸ್.ಡಿ.ಎಮ್. ಲಾ ಕಾಲೇಜಿನ ಸಭಾಗೃಹದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಬೆಳಿಗ್ಗೆ ಗುರುಪೂಜೆ ಹಾಗೂ ಸಾಯಂಕಾಲ ಸಭಾ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ಆದಿಗುರು ಮಹರ್ಷಿ ವ್ಯಾಸರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ಗುರುಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಶ್ರೀ. ವೇಣು ಗೋಪಾಲ ರಾಮ ಮತ್ತು ಸೌ. ಪರಮೇಶ್ವರಿ ಇವರು ಮಾಡಿದರು. ಸನಾತನ ಸಂಸ್ಥೆಯ ಶ್ರದ್ಧಾಸ್ಥಾನ ಪ.ಪೂ ಭಕ್ತರಾಜ ಮಹಾರಾಜರ ಪ್ರತಿಮೆಗೆ ಆರತಿ ಬೆಳಗಲಾಯಿತು. ಗುರುಪೂಜೆಯ ಪೌರೋಹಿತ್ಯವನ್ನು […]

ಧಾರವಾಡ : ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ

Monday, July 30th, 2018
Milan

ಧಾರವಾಡ : ಹೆಣ್ಣು ಮಕ್ಕಳು ತಮ್ಮ ಗುರಿಗಳನ್ನು ತಲುಪಲು ನಿರ್ದಿಷ್ಟವಾದ ಯೋಜನೆಗಳನ್ನು ಹಮ್ಮಿಕೊಂಡು ಅದರ ಯಶಸ್ಸಿಗೆ ಶ್ರಮಿಸುತ್ತ ಸತತ ಪ್ರಯತ್ನ ಮಾಡಬೇಕೆಂದು ಧಾರವಾಡ ಜಿಲ್ಲಾ ಪಂಚಾಯತ ಸಿ.ಇ.ಓ ಸ್ನೇಹಲ್ ಆರ್ ಅವರು ಹೇಳಿದರು. ಅವರು ಇತ್ತೀಚೆಗೆ ಧಾರವಾಡದ ಕರ್ನಾಟಕ ಕುಲಪುರೋಹಿತ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಮಿಲಾನ್ ಗರ್ಲ್ ಐಕಾನ್ ಲೀಡರ್ಸ್ ಗೆ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಾಧನ ಸಂಸ್ಥೆ ಸಂಸ್ಥಾಪಕಿ ಇಸಾಬೆಲ್ ಮಾತನಾಡಿ, ಹೆಣ್ಣುಮಕ್ಕಳ ಇಂದಿನ ಚಿಂತಾಜನಕ ಪರಿಸ್ಥಿತಿ ಈಗಾಗಲೇ ಎಲ್ಲರಿಗೂ […]

ದುಬಾಯಿಯಲ್ಲಿ ವಿಶ್ವ ತುಳು ಸಮ್ಮೇಳನ ಲಾಂಛನ ಲೋಕಾರ್ಪಣೆ

Monday, July 30th, 2018
tulu-sahitya

ಮಂಗಳೂರು: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವ ತುಳು ಸಮ್ಮೇಳನ ದುಬಾಯಿ 2018 ನವೆಂಬರ್23 ಮತ್ತು 24ರಂದು ದುಬಾಯಿಯ ಅಲ್ ನಾಸರ್ ಲೀಸರ್ ಲ್ಯಾಂಡ್‌ಐಸ್‌ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು ಆ ನಿಮಿತ್ತ ವಿಶ್ವ ತುಳು ಸಮ್ಮೇಳನದ ಸಲಹಾ ಸಮಿತಿಯ ಸರ್ವ ಸದಸ್ಯರ ಸಭೆ ಕಳೆದ ಶುಕ್ರವಾರ ದುಬಾಯಿ ಮಾರ್ಕೊಪೋಲ್ ಹೋಟೆಲ್ ಸಭಾಂಗಣದಲ್ಲಿ ಸಾಗರೋತ್ತರ ತುಳುವರ ಮುಖ್ಯ ಸಂಘಟಕ ಸರ್ವೋತ್ತಮ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಸರ್ವೋತ್ತಮ ಶೆಟ್ಟಿ ಮಾತನಾಡಿ ವಿಶ್ವ ತುಳು ಸಮ್ಮೇಳನ ದುಬಾಯಿ-2018ರ ವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಸಭೆಯಲ್ಲಿ […]