ಜಪ್ಪು ಮಾರ್ಕೆಟ್ ರಸ್ತೆಯಲ್ಲಿ ಶೀಘ್ರದಲ್ಲೇ ‘ಕೆಸರು ಗದ್ದೆ ಓಟ’

Sunday, August 4th, 2019
jeppu market

ಮಂಗಳೂರು : ಜಪ್ಪು ಮಾರ್ಕೆಟ್ ರಸ್ತೆಯಲ್ಲಿ ಶೀಘ್ರದಲ್ಲೇ ‘ಕೆಸರು ಗದ್ದೆ ಓಟ’ ನಡೆಯಲಿದ್ದು ಈ ಬಗ್ಗೆ ಜೆಪ್ಪು ನಾಗರಿಕರು ಮಂಗಳೂರಿನ ಜನಪ್ರತಿನಿಧಿಗಳಿಂದ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಅಭಿಪ್ರಾಯ ಸಂಗ್ರಹಕ್ಕೆ ತಯಾರು ಮಾಡಿದ್ದಾರೆ. ಈ ಬಾರಿ ಮಳೆ ಆರಂಭಕ್ಕೂ ಮುಂಚಿತವಾಗಿ ಜಪ್ಪು ಮಾರ್ಕೆಟ್ ರಸ್ತೆಯನ್ನು ಡ್ರೈನೇಜ್ ಅಳವಡಿಸುವ ನೆಪದಲ್ಲಿ ಅಗೆದು ಹಾಕಲಾಗಿದ್ದು ಈ ವರೆಗೂ ಮುಚ್ಚಿಲ್ಲ, ಇದರಿಂದಾಗಿ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆಯಲ್ಲೇ ಕೆಸರಿನ ತೋಡು ನಿರ್ಮಾಣವಾಗಿದ್ದು ‘ಕೆಸರು ಗದ್ದೆ ಓಟ’ಕ್ಕೆ ಸೂಕ್ತವಾಗಿದೆ ಎಂದು ಸಾರ್ವಜನಿಕರು […]

ವಕೀಲರ ಸಂಘದಲ್ಲಿ ಒಗ್ಗಟ್ಟು ಪ್ರದರ್ಶಿಸಿ: ಶಂಕರ ಭಟ್ ಸಲಹೆ

Saturday, August 3rd, 2019
Mangalore-Bar-Association

ಮಂಗಳೂರು: ಮಂಗಳೂರು ವಕೀಲರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳೂರು ನ್ಯಾಯಾಲಯದ ಸಂಕೀರ್ಣದ ಹಳೆ ಜಿಲ್ಲಾ ಮುಖ್ಯ ನ್ಯಾಯಾಲಯದ ಕಟ್ಟಡದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ನ್ಯಾಯವಾದಿ ಶಂಕರ್ ಭಟ್ ಅವರು ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, 125ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಮಂಗಳೂರು ವಕೀಲರ ಸಂಘಕ್ಕೆ ರಾಜ್ಯ ಹೊರ ರಾಜ್ಯದಲ್ಲೂ ಬಹುಮಾನ್ಯತೆ ಹೊಂದಿದೆ. ಇಲ್ಲಿನ ಅನೇಕ ವಕೀಲರು ಹೈಕೋರ್ಟ್, ಸುಪ್ರೀಂ ಕೋರ್ಟ್ ಸೇರಿದಂತೆ ದೇಶದ ವಿವಿಧೆಡೆ ಕೋರ್ಟ್ ಗಳಲ್ಲಿ ಸೇವೆ […]

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ`ಕೋಟಿ ಚೆನ್ನಯ’ ಹೆಸರು

Saturday, August 3rd, 2019
Koti-chennaya airport

ಮಂಗಳೂರು :  ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ ಹೆಸರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರ್ಕಾರಕ್ಕೆ ಈ ಪ್ರಸ್ತಾವನೆ ಕಳುಹಿಸಲಾಗಿದೆ ಎಂಬ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಆ. 3 ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಿಇಓ ಡಾ.ಸೆಲ್ವಮಣಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ […]

ಆಳ್ವಾಸ್‌ : 3,000 ಮಂದಿಗೆ ಉಚಿತ ಆಟಿ ಕಷಾಯ ವಿತರಣೆ

Saturday, August 3rd, 2019
Alvas-Kashaya

ಮೂಡುಬಿದಿರೆ: ಆಳ್ವಾಸ್‌ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಗುರುವಾರ ಬೆಳಗ್ಗೆ ಸುಮಾರು 3,000 ಮಂದಿಗೆ ಉಚಿತ ಆಟಿ ಕಷಾಯ ವಿತರಿಸಲಾಯಿತು. ಜೋತಿಷಿ ಪುತ್ತಿಗೆ ಸುಧಾಕರ ತಂತ್ರಿ ಸಾಂಕೇತಿಕವಾಗಿ ಔಷಧ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸಿ ಸರ್ವರೋಗ ನಿವಾರಕ ಔಷಧೀಯ ಪಾನೀಯ ಸೇವಿಸಿದರು. ಕಾರ್ಯಕ್ರಮದ ಸಂಯೋಜಕ ಹಾಗೂ ಆತ್ಮ (ಆಳ್ವಾಸ್‌ ಟ್ರೆಡಿಶನಲ್ ಮೆಡಿಸಿನ್‌ ಆರ್ಚೀವ್‌)ರಿಸರ್ಚ್‌ ಸೆಂಟರ್‌ನ ನಿರ್ದೇಶಕ ಡಾ| ಸುಬ್ರಮಣ್ಯ ಪದ್ಯಾಣ […]

ಆರು ಮಂದಿ ಕುಟುಂಬದ ಸದಸ್ಯರನ್ನು ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಯುವಕ

Saturday, August 3rd, 2019
Nathuvala-village

ಪಂಜಾಬ್  :  ಕುಟುಂಬದ ಸದಸ್ಯರೊಂದಿಗೆ ಜಗಳವಾಡಿ ಅಕ್ಕ, ಸೊಸೆ, ಅಜ್ಜ-ಅಜ್ಜಿ, ಕೊನೆಗೂ ತಂದೆ-ತಾಯಿಯನ್ನು ಬಿಡದ ಯುವಕ ಎಲ್ಲರನ್ನು ಗನ್ನಿಂದ ಶೂಟ್ ಮಾಡಿ, ಬಳಿಕ ತಾನು ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ನಥುವಾಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಂದೀಪ್ಸಿಂಗ್ ತನ್ನ ಕುಟುಂಬದ ಜೊತೆ ಯಾವುದೋ ವಿಷಯಕ್ಕೆ ಕಿತ್ತಾಡಿಕೊಂಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಪಿಸ್ತೂಲ್ನಿಂದ ತನ್ನ ಹೆತ್ತ ತಂದೆ ತಾಯಿ, ಅಜ್ಜಿ, ಒಡಹುಟ್ಟಿದ ಅಕ್ಕ ಮತ್ತು ಅಕ್ಕನ 3 ವರ್ಷದ ಮಗಳಿಗೂ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ […]

250 ವರ್ಷಗಳ ಕಾಲ ಬ್ರಿಟಿಷರು ಭಾರತವನ್ನಾಳಿದ ಇಂಡಿಯಾ v/s ಇಂಗ್ಲೆಂಡ್​ ಚಲನಚಿತ್ರ

Saturday, August 3rd, 2019
Nagatihalli

ಮಂಗಳೂರು:  ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಇಂಡಿಯಾ v/s ಇಂಗ್ಲೆಂಡ್ ಹೊಸ ಚಲನಚಿತ್ರದ ಬಗ್ಗೆ ಮಾತನಾಡಿ, ಈ ಚಲನಚಿತ್ರ ನನ್ನ ಮಗಳು ಬರೆದ attitude & longitude ಕಾದಂಬರಿ ಆಧಾರಿತವಾಗಿದ್ದು, ಬ್ರಿಟಿಷರು ಸುಮಾರು 250 ವರ್ಷಗಳ ಕಾಲ ನಮ್ಮನ್ನು ಆಳ್ವಿಕೆ ಮಾಡಿದ್ದರು. ಅದರ ಮರುರೂಪವನ್ನು ಈ ಚಲನಚಿತ್ರದಲ್ಲಿ ತೋರಿಸಲಾಗಿದೆ. ಸಿನಿಮಾದ ಬಹುಭಾಗವನ್ನು ಇಂಗ್ಲೆಂಡ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ವಸಾಹತುಶಾಹಿ ಕಾಲದಿಂದ ಭಾರತಕ್ಕೆ ಆದ ಸಾಧಕ-ಬಾಧಕಗಳೇನು ಎಂಬ ಚರ್ಚೆಯನ್ನು, ಚರಿತ್ರೆಯನ್ನು ಪುನರ್ ಭೇಟಿಯಾಗುವ ಕಥಾವಸ್ತುವನ್ನು ಇರಿಸಿ ಈ ಚಲನಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನನ್ನ ಮಹತ್ವಾಕಾಂಕ್ಷೆಯುಳ್ಳ […]

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ನಿರಂತರ ಕಿರುಕುಳ : ದೂರು

Saturday, August 3rd, 2019
Kerala-pravasi

ಮಂಜೇಶ್ವರ:  ಮಲಯಾಳಿ ಪ್ರವಾಸಿಗಳಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಫಲಪ್ರದವಾಗಲಿಲ್ಲ, ಎಮಿಗ್ರೇಶನ್, ಕಸ್ಟಮ್ಸ್ ಸೇರಿದಂತೆ ಇತರ ವಿಭಾಗಗಳಲ್ಲಿ ಇತರ ಅಧಿಕಾರಿಗಳು ಕೂಡಾ ಮಲಯಾಳಿಗಳನ್ನು ಹುಡುಕಿ ಕಿರುಕುಳ ನೀಡುತ್ತಿರುವುದಾಗಿ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಆರೋಪಿಸಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ನಿರಂತರವಾಗಿ ನೀಡುತ್ತಿರುವ ಕಿರುಕುಳದ ವಿರುದ್ಧ ಕೇರಳ ಪ್ರವಾಸಿ ಸಂಘದ ಮಂಜೇಶ್ವರ ಏರಿಯಾ ಕಮಿಟಿ ಅಧ್ಯಕ್ಷ ಬಶೀರ್ ದೇವಕಾನ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಲಯಾಳಿಗಳಿಗೆ ಕಿರುಕುಳ ನೀಡುತ್ತಿರುವುದು ನಿತ್ಯ ವರದಿಯಾಗಿದೆ […]

ನೇತ್ರಾವತಿ ಸೇತುವೆಗೆ ಸಿಸಿಟಿವಿ ಕ್ಯಾಮೆರಾ : ವೇದವ್ಯಾಸ ಕಾಮತ್

Friday, August 2nd, 2019
cctv

ಮಂಗಳೂರು :  ನೇತ್ರಾವತಿ ಸೇತುವೆ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಯವರೊಂದಿಗೆ ಚರ್ಚಿಸಲಾಗುವು ದೆಂದು ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಉದ್ಯಮಿ ಸಿದ್ಧಾರ್ಥ್ ಅವರ ಸಾವಿನ ಬಳಿಕ ಮಂಗಳೂರು- ಉಳ್ಳಾಲ ರಸ್ತೆಯಲ್ಲಿನ ನೇತ್ರಾವತಿ ಸೇತುವೆ ಹೆಚ್ಚು ಸುದ್ದಿಯಲ್ಲಿದೆ. “ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ನೆಲೆಯಾಗುತ್ತಿದೆ. ಸಿಸಿ ಟಿವಿಗಳನ್ನು ಅಳವಡಿಸಿದರೆ ಸೇತುವೆ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ […]

ಆನ್ ಲೈನ್ ನಲ್ಲಿ ಕಾರು ವಂಚನೆ ಪ್ರಕರಣ; ಇಬ್ಬರು ಆರೋಪಿಗಳ ಸೆರೆ

Friday, August 2nd, 2019
online car

ಉಡುಪಿ : ಆನ್ ಲೈನ್ ನಲ್ಲಿ ಮಾರಾಟಕ್ಕೆ ಇಟ್ಟ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿಗಳಿಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ಇವರಿಂದ 39ಲಕ್ಷ ರೂ. ಮೌಲ್ಯದ ಒಟ್ಟು ಐದು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲೀಸ್ ಹಾಗೂ ಓಎಲ್‌ಎಕ್ಸ್‌ನಲ್ಲಿ ಗ್ರಾಹಕರು ಪ್ರಕಟಿಸುತ್ತಿದ್ದ ಕಾರುಗಳನ್ನು ಲಪಟಾಯಿಸಿ ಇವರು ವಂಚಿಸುತ್ತಿದ್ದರು. ಮಂಗಳೂರು ಪಡ್ಪು ಬಜಾಲ್ ಕಲ್ಲಕಟ್ಟೆ ನಿವಾಸಿ ಅಬ್ದುಲ್ಲ ಅಬ್ಬಾಸ್ (33), ಬಂಟ್ವಾಳ ತಾಲೂಕಿನ ವಿಟ್ಲ ಮೈರಾ ಕೇಪು ಗ್ರಾಮದ ಮುಹಮ್ಮದ್ ಸಫಾನ್ (22) ಬಂಧಿತ ಆರೋಪಿಗಳು. ಅಬ್ದುಲ್ಲ ಅಬ್ಬಾಸ್ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೊಲೆ […]

ಬ್ರಹ್ಮಾವರ ಭೂ ಮಾಪನ ಇಲಾಖೆಯ ಸರ್ವೆಯರ್ ಮೃತ್ಯು

Friday, August 2nd, 2019
Ashoka

ಉಡುಪಿ :  ಬ್ರಹ್ಮಾವರ ತಾಲೂಕು ಕಚೇರಿಯ ಭೂ ಮಾಪನ ಇಲಾಖೆಯ ಸರ್ವೆಯರ್, ಹಂದಾಡಿ ಕಲ್ಬೆಟ್ಟು ನಿವಾಸಿ ಅಶೋಕ ಭೈರವಾಡಗೆ(56) ಎಂಬವರು ಹಿರಿಯ ಅಧಿಕಾರಿಗಳ ಕಿರುಕುಳದ ಬಗ್ಗೆ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು, ಆ.1ರಂದು ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜು.28ರಂದು ‘ಕಚೇರಿಯವರ ಕಿರಿಕಿರಿಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಮರಣ ಪತ್ರ ಬರೆದು ಅಜ್ಜರಕಾಡು ಪಾರ್ಕ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮಧ್ಯೆ ಅಶೋಕ್ ಪತ್ನಿ ನೀಡಿದ ದೂರಿನಂತೆ […]