ಮಂಜೇಶ್ವರ ತಾಲೂಕಿನಲ್ಲಿ ಮುಂದುವರಿದ ನಿಷೇಧಾಜ್ಞೆ

Friday, January 4th, 2019
Kerala-Hartal

ಕಾಸರಗೋಡು : ಶಬರಿಮಲೆ ಹಿತ ರಕ್ಷಣಾ ಸಮಿತಿ ಹಾಗೂ ಹಿಂದೂ ಸಂಘಟನೆಗಳು ನೀಡಿದ  ಗುರುವಾರ ಕರೆ ನೀಡಲಾಗಿದ್ದ ಹರತಾಳದ ಸಂದರ್ಭ ಉದ್ವಿಗ್ನಗೊಂಡಿದ್ದ ಕಾಸರಗೋಡು ಜಿಲ್ಲೆ ಇಂದು ಸಹಜ ಸ್ಥಿತಿಯತ್ತ ಮರಳುತ್ತಿದೆ. ಶುಕ್ರವಾರ  ಬೆಳಗ್ಗೆಯಿಂದ ಜಿಲ್ಲಾದ್ಯಂತ ಜನಸಂಚಾರ, ವಾಹನಗಳ ಓಡಾಟ ಎಂದಿನಂತಿದ್ದು, ಅಂಗಡಿಮುಂಗಟ್ಟುಗಳು ತೆರೆದಿವೆ. ಹರತಾಳ ಮುಗಿದ ಬಳಿಕವೂ ಚೂರಿ ಇರಿತಗಳಂತಹ ಅಹಿತಕರ ಘಟನೆಗಳು ಮುಂದುವರಿದಿದ್ದ ಮಂಜೇಶ್ವರ ತಾಲೂಕಿನಲ್ಲೂ ಪರಿಸ್ಥಿತಿ ಶಾಂತವಾಗಿದ್ದು, ತಾಲೂಕಿನಾದ್ಯಂತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅದೇರೀತಿ ಇಂದು ತಾಲೂಕಿನ ಎಲ್ಲ […]

ಹೊಟ್ಟೆ ತುಂಬಾ ಊಟ ಮಾಡಿ, ಹೋಟೆಲಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

Friday, January 4th, 2019
Canteen

ಉಳ್ಳಾಲ : ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಬಳಿಕ ಅದರ ಮಾಲಕ ಹಣ ಕೇಳಿದಕ್ಕೆ ತಂಡವೊಂದು ಕ್ಯಾಂಟೀನ್‌ಗೇ ಬೆಂಕಿ ಹಚ್ಚಿದ ಘಟನೆ ತೊಕ್ಕೊಟ್ಟು ಸಮೀಪ ಕಾಪಿಕಾಡ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ಉಳ್ಳಾಲ ಹಳೆಕೋಟೆಯ ಅಬೀದ್ ಎಂಬವರಿಗೆ ಸೇರಿದ ಕಾಪಿಕಾಡಿನಲ್ಲಿರುವ ಕ್ಯಾಂಟಿನ್‌ನಲ್ಲಿ ಈ ಘಟನೆ ನಡೆದಿದೆ. ಬೆಂಕಿಯಿಂದ ಕ್ಯಾಂಟೀನ್ ಭಾಗಶ: ಹಾನಿಗೀಡಾಗಿದೆ. ಕುಂಪಲ ನಿವಾಸಿ ರವೂಫ್ ಹಾಗೂ ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಕುಂಪಲ ನಿವಾಸಿ ರವೂಫ್ ಮತ್ತು ಆತನ ತಂಡ ನಿನ್ನೆ ರಾತ್ರಿ […]

ಪ್ರವಾದಿ ನಿಂದನೆ: ಮತ್ಸ್ಯವರ್ತಕರ ಸಂಘ ಖಂಡನೆ

Friday, January 4th, 2019
cm-musthafa

ಮಂಗಳೂರು  : ಇತ್ತೀಚೆಗೆ ಬೆಂಗಳೂರು ಪ್ರಸಾದಿತ ಸುವರ್ಣ ನ್ಯೂಸ್ ಟಿ.ವಿ ವಾಹಿನಿಯ ನಿರೂಪಕ ಅಜಿತ್ ಹನುಮಕ್ಕನವರ್ ಟಿ.ವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಇತರ ವಿಷಯಗಳನ್ನು ಪ್ರಸ್ತಾಪ ಮಾಡುವಾಗ ಜಗತ್ತಿನ ಸರ್ವ ಮುಸ್ಲಿಮರೊಂದಿಗೆ ಸಹ ಸಮುದಾಯ ಬಾಂಧವರೂ ಕೂಡಾ ಗೌರವಿಸುವ ಪ್ರವಾದಿ ಮೊಹಮ್ಮದ್ ರವರನ್ನು ನಿಂದಿಸಿ ಅವಹೇಳನೆಯಾಗುವಂತಹ ಹೇಳಿಕೆಗಳನ್ನು ನೀಡಿ, ಒಂದು ನಿರ್ದಿಷ್ಟ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಲು ಪ್ರಯತ್ನಿಸಿದ್ದು, ವಿಭಿನ್ನ ಮತೀಯರ ಮಧ್ಯೆ ಕೋಮುದ್ವೇಷ ಸೃಷ್ಟಿಸುವಂತಹ ಅಪರಾಧ ಕೃತ್ಯವನ್ನು ಎಸಗಿರುತ್ತಾರೆ. ಈ ಘಟನೆಯಿಂದಾಗಿ ಸಾರ್ವಜನಿಕರ ಮನಸ್ಸಿಗೆ […]

ಬಂಟ್ವಾಳ ಸಿಪಿಐ ಕಚೇರಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

Thursday, January 3rd, 2019
Bantwala CPI

ಬಂಟ್ವಾಳ : ಸಿಪಿಐ ಬಂಟ್ವಾಳ ಸಮಿತಿಯ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಗುರುವಾರ ಬೆಳಗ್ಗೆ ಕೃತ್ಯ ಬೆಳಕಿಗೆ ಬಂದಿದೆ‌. ಬಿ.ಸಿ.ರೋಡಿನ ಬೈಪಾಸ್ ನ ನಾಲ್ಕು ಮಾರ್ಗದ ಬಳಿ ಕಾರ್ಯಾಚರಿಸುತ್ತಿರುವ ಕಮ್ಯುನಿಸ್ಟ್ ಬಂಟ್ವಾಳ ಸಮಿತಿಯ ಕಚೇರಿಗೆ ತಡರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಘಟನೆಯಿಂದ ಕಚೇರಿಯೊಳಗಿದ್ದ ಪಕ್ಷಕ್ಕೆ ಸಂಬಂಧಪಟ್ಟ ಕಡತಗಳು ಹಾಗೂ ಮುಖ್ಯವಾದ ಅರ್ಜಿಗಳು, ವಿದ್ಯಾರ್ಥಿ ವೇತನದ ಸಂಬಂಧಿಸಿದ ದಾಖಲೆಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಬಂಟ್ವಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ […]

ಮಂಗಳ ಈಜುಕೊಳ ಫೆಬ್ರವರಿಯಲ್ಲಿ ಸಾರ್ವಜನಿಕರಿಗೆ ಮುಕ್ತ

Thursday, January 3rd, 2019
Mangala swimming

ಮಂಗಳೂರು: ಮೂರು ತಿಂಗಳ ಹಿಂದೆ ಪ್ರಾರಂಭವಾದ ಮಂಗಳ ಈಜುಕೊಳ ಮೇಲ್ದರ್ಜೆಗೇರಿಸುವ  ಕಾಮಗಾರಿ ಅಂತಿಮ ಹಂತದಲ್ಲಿದ್ದು, ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣಗೊಂಡು ಫೆಬ್ರವರಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಮೇಯರ್‌ ಭಾಸ್ಕರ್‌ ಕೆ. ಹೇಳಿದರು. ಬುಧವಾರ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರೊಂದಿಗೆ ಕಾಮಗಾರಿ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಈಜುಕೊಳದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ನೂತನ ತಂತ್ರಜ್ಞಾನ ಅಳವಡಿಕೆ, ಈಜುಕೊಳದ ನೀರನ್ನು ಓಝೋನ್‌ ಘಟಕದಲ್ಲಿ ಸಂಸ್ಕರಿಸುವ ನೂತನ ತಂತ್ರಜ್ಞಾನ, ಈಜುಕೊಳ ಲೇನ್‌ ಮಾರ್ಕ್‌ ಸಹಿತ ಇತರ ಕಾಮಗಾರಿಗಳು ಸುಮಾರು ಒಂದೂವರೆ ಕೋಟಿ […]

ಕುದ್ರೋಳಿ ಗೋಕರ್ಣನಾಥ ದೇವಾಲಯದ ಧ್ವಜ ಕಂಬ ತೆರವು

Thursday, January 3rd, 2019
Kudroli-Dwaja

ಮಂಗಳೂರು: ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿರುವ  ಹಳೆಯ  ಕೊಡಿಮರದ (ಧ್ವಜ ಕಂಬ ) ಕಂಬವನ್ನು ಬುಧವಾರ ತೆರವು ಮಾಡಲಾಯಿತು. ದೇವಸ್ಥಾನದ ಮುಂಭಾಗದಲ್ಲಿ ಶತಮಾನದಿಂದ ಆರಾಧಿಸಿಕೊಂಡು ಬರಲಾಗುತ್ತಿರುವ ಕೊಡಿಮರದ ಕಂಬ ಹಳೆಯದಾಗಿದ್ದು, ಅದನ್ನು ತೆರವುಗೊಳಿಸಲಾಗಿದೆ. ಫೆ. 17ಕ್ಕೆ ನಡೆಯುವ ಬ್ರಹ್ಮಕಲಶದ ಬಳಿಕ ಇಲ್ಲಿಗೆ ಹೊಸ ಕೊಡಿಮರದ ಕಂಬ ಪ್ರತಿಷ್ಠಾಪನೆ ಆಗಲಿದೆ. ಬೆಳಗ್ಗೆ 10 ಗಂಟೆಗೆ ಆರಂಭವಾದ ಹೋಮ, ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮದ ಬಳಿಕ ಕೊಡಿಮರಕ್ಕೆ ಹಾಕಲಾದ ಕವಚವನ್ನು ತೆಗೆಯಲಾಯಿತು. ನಂತರ ದೊಡ್ಡ ಕ್ರೇನ್ ಬಳಸಿ ಅದನ್ನು ಅಲ್ಲಿಂದ ಎತ್ತಿ ದೇವಾಲಯದ […]

ಮಹಾಮಸ್ತಕಾಭಿಷೇಕ ಅಂಗವಾಗಿ ಅಟ್ಟಳಿಗೆ ಮುಹೂರ್ತಕ್ಕೆ ಚಾಲನೆ

Wednesday, January 2nd, 2019
Attalige Muhoortha

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿಯಲ್ಲಿ ಫೆಬ್ರವರಿ 9 ರಿಂದ ನಡೆಯಲಿರುವ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಅಂಗವಾಗಿ ಅಟ್ಟಳಿಗೆ ಮುಹೂರ್ತ ನೆರವೇರಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ತ್ಯಾಗಿಗಳಾದ ಆಚಾರ್ಯ ಶ್ರೀ 108 ಸೂರ್ಯನಂದಿ ಸಾಗರ್ ಮಹಾರಾಜ್ ಹಾಗೂ ಆಚಾರ್ಯ ಶ್ರೀ 108 ಶ್ರೇಯ ಸಾಗರ್ ಮಹಾರಾಜ್ ಸಮ್ಮುಖದಲ್ಲಿ ಜೈನ ಪುರೋಹಿತರ(ಇಂದ್ರರ) ಮಂತ್ರಘೋಷಗಳೊಂದಿಗೆ ಅಟ್ಟಳಿಗೆ ನಿರ್ಮಾಣಕ್ಕೆ ಬುಧವಾರ ಬೆಳಗ್ಗೆ ಮುಹೂರ್ತ ನೆರವೇರಿಸಲಾಯಿತು. ಮಾಣಿಯ ಮಹಾವೀರ ಪ್ರಸಾದ್ ಇಂಡಸ್ಟ್ರಿ ನೇತೃತ್ವದಲ್ಲಿ ಅಟ್ಟಳಿಗೆ ನಿರ್ಮಾಣ ಕಾರ್ಯ ನಡೆಯಲಿದೆ. ಅಟ್ಟಳಿಗೆ ಮುಹೂರ್ತದ ವೇಳೆ […]

ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನಕ್ಕೆ ಚಾಲನೆ

Wednesday, January 2nd, 2019
Kshaya roga

ಮಂಗಳೂರು : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜನವರಿ 2 ರಿಂದ 12 ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನವನ್ನು ಬುಧವಾರ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಉದ್ಘಾಟಿಸಿದರು. ನಗರದ ಕೋಡಿಕಲ್ ಕುದ್ಮುಲ್ ರಂಗರಾವ್ ಕೊರಗ ಸಮುದಾಯ ಭವನ ಸಚಿವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂರ್ಭದಲ್ಲಿ ಮಾತನಾಡಿದ ಸಚಿವ ಯು.ಟಿ.ಖಾದರ್, ನಮ್ಮ ಜೀವನ ಶೈಲಿ ಬದಲಾದಂತೆ ಆರೋಗ್ಯದಲ್ಲಿ ಬದಲಾವಣೆಗಳಾಗುತ್ತವೆ. ನಮ್ಮ ಸುತ್ತಮುತ್ತಲ […]

ಬುಧವಾರ ಬೆಳಗ್ಗೆ3 ಗಂಟೆಗೆ ಶಬರಿ ಮಲೆ ಪ್ರವೇಶಿಸಿದ ಇಬ್ಬರು ಮಹಿಳೆಯರು

Wednesday, January 2nd, 2019
Sabarimala

ತಿರುವನಂತಪುಂ: ಕೊನೆಗೂ ಶಬರಿ ಮಲೆ ದೇವಾಲಯಕ್ಕೆ 50 ವರ್ಷದೊಳಗಿನ ಇಬ್ಬರು ಮಹಿಳೆಯರು ಬುಧವಾರ ಬೆಳಗ್ಗೆ ಪ್ರವೇಶ ಮಾಡಿರುವ ಕುರಿತು ವಿವರಗಳು ಲಭ್ಯವಾಗಿವೆ. 40 ವರ್ಷ ಪ್ರಾಯದ ಬಿಂದು ಮತ್ತು ಕನಕದುರ್ಗ ಎನ್ನುವ ಇಬ್ಬರು ಮಾಲಾಧಾರಿ ಮಹಿಳೆಯರು ನಸುಕಿನ 3 ಗಂಟೆಯ ಒಳಗೆ ದೇವಾಲಯ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಿ ವಾಪಾಸಾಗಿದ್ದಾರೆ. ಮಹಿಳೆಯರಿಗೆ ಪೊಲೀಸ್‌ ತಂಡವೊಂದು ರಕ್ಷಣೆ ನೀಡಿದೆ ಎನ್ನುವುದು ತಿಳಿದು ಇದೇ ಮಹಿಳೆಯರು ಡಿಸೆಂಬರ್‌ ತಿಂಗಳಿನಲ್ಲಿ ದೇವಾಲಯ ಪ್ರವೇಶಿಸಲು ಪ್ರಯತ್ನಿಸಿ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ವಾಪಾಸಾಗಿದ್ದರು ಎಂದು […]

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಿ.ಎಂ. ಲಕ್ಷ್ಮೀಪ್ರಸಾದ್‌

Wednesday, January 2nd, 2019
BM-Laxmi-Prasad

ಮಂಗಳೂರು:  ಯುವ ಐಪಿಎಸ್‌ ಪೊಲೀಸ್‌ ಅಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್‌ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬುಧವಾರ ಅಧಿಕಾರ ವಹಿಸಿಕೊಂಡರು . ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಡಾ| ಬಿ.ಆರ್‌. ರವಿಕಾಂತೇ ಗೌಡ ಭಡ್ತಿ ಹೊಂದಿದ್ದು, ಬೆಂಗಳೂರಿನ ಅಗ್ನಿಶಾಮಕ ಸೇವೆಯ ಐಜಿಪಿಯಾಗಿ ನೇಮಿಸಲಾಗಿದೆ. 2018ರ ವರ್ಷಾಂತ್ಯದ ದಿನ 10 ಜನ ಹಿರಿಯ ಅಧಿಕಾರಿಗಳಿಗೆ ಭಡ್ತಿಯೂ ಸೇರಿದಂತೆ ಒಟ್ಟು 21 ಮಂದಿ ಐಪಿಎಸ್‌ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಸ್‌ಪಿ ಅವರ ವರ್ಗಾವಣೆ ಮತ್ತು ಅವರಿಂದ […]