ಬಿಲ್ಡರ್ ಕಛೇರಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ

Tuesday, October 9th, 2018
lathif-khader

ಮಂಗಳೂರು :  ಕೋಟೆಕಾರ್ ಬೀರಿ ಹಿಂದೂಸ್ಥಾನ್ ಬಾವ ಬಿಲ್ಡರ್ ಕಛೇರಿಯಲ್ಲಿ ಅಕ್ಟೋಬರ್  8 ರಂದು  ಮದ್ಯಾಹ್ನ ಯುವತಿ ಒಬ್ಬರೇ  ಇದ್ದಾಗ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿತ ಅಬ್ದುಲ್ ಲತೀಪ್ ಖಾದರ್ ಕಛೇರಿಯೊಳಗೆ ಬಂದು ಪಿರ್ಯಾದಿದಾರರಿಗೆ ಲೈಂಗಿಕ ಕಿರುಕುಳ ನೀಡಿ, ಬೆದರಿಕೆ ಹಾಕಿ ತೊಂದರೆಪಡಿಸಿರರುವುದಾಗಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 200/2018 ಕಲಂ 341,354(ಎ), 354, 506 ಐಪಿಸಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ಲತೀಪ್ ಖಾದರ್, ಪ್ರಾಯ 37 ವರ್ಷ, ತಂದೆ. […]

ಶರಬರಿಮಲೆ ಕುರಿತು ಸುಪ್ರೀಂ ಕೋರ್ಟ್ ತೀರ್ಪು: ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆ

Monday, October 8th, 2018
shabarimale

ಮಂಗಳೂರು: ಶರಬರಿಮಲೆ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳು ಆರಂಭವಾಗಿವೆ . ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯತೊಡಗಿದೆ. ಶರಬರಿಮಲೆ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರಾಕರಿಸಿದ್ದ ಪಿಣರಾಯಿ ವಿಜಯನ್ ನೇತೃತ್ವ ಈಗ ಪೇಚಿಗೆ ಸಿಲುಕಿದ್ದು, ಶಬರಿಮಲೆ ಬಿಕ್ಕಟ್ಟು ಶಮನಕ್ಕೆ ಕೇರಳ ಸರಕಾರದ ಪ್ರಯತ್ನಗಳನ್ನು ಮುಂದುವರೆಸಿದೆ. ಈ ನಡುವೆ ವಿದೇಶದಲ್ಲೂ ಪ್ರತಿಭಟನೆಗಳು ಆರಂಭವಾಗಿದ್ದು, ವಿದೇಶದ ನೆಲದ ಮೇಲೂ ಸ್ವಾಮಿ ಶರಣಂ ಭಜನೆ ಕೇಳಿಬರತೊಡಗಿದೆ. ಆಸ್ಟ್ರೇಲಿಯಾದಲ್ಲಿ […]

ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ: ಸಂಸದ ನಳಿನ್ ಅವರಿಂದ ಉದ್ಘಾಟನೆ

Monday, October 8th, 2018
nalin-kumar

ಮಂಗಳೂರು: ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯುವಜನ ಒಕ್ಕೂಟ ಇವರ ಆಶ್ರಯದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಇಂದು ಬೆಳಗ್ಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಂಡಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಸ್ತೂರಿ ಪಂಜ, ಮಮತಾ ಗಟ್ಟಿ, ಲಿಲ್ಲಿ ಪಾಯಸ್ ಮತ್ತಿತರರು […]

ಕಾರ್ಖಾನೆಯಲ್ಲಿ ವಿದ್ಯುತ್​​ ಶಾಕ್​​: ಯುವಕ ಸ್ಥಳದಲ್ಲೇ ಸಾವು..!

Monday, October 8th, 2018
current-shock

ಮಂಗಳೂರು: ಕಾರ್ಖಾನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವಕನಿಗೆ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸುಳ್ಯ ತಾಲೂಕಿನ ಗಾಂಧಿನಗರದ ಗುರುಂಪು ಎಂಬಲ್ಲಿ ನಡೆದಿದೆ. ದುಗ್ಗಲಡ್ಕದ ನಾಗರಾಜ್ ಕಂದಡ್ಕ (18) ಮೃತ ದುರ್ದೈವಿ. ಎಂಟು ತಿಂಗಳ ಹಿಂದೆ ಈತ ಕಾರ್ಖಾನೆಗೆ ಸೇರಿಕೊಂಡಿದ್ದ. ಕಾರ್ಯನಿರ್ವಹಣೆ ವೇಳೆ ಆಕಸ್ಮಿಕವಾಗಿ ವಿದ್ಯುತ್ ಹರಿವು ಹೆಚ್ಚಾಗಿ ಶಾಕ್ ಹೊಡೆದಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾನೆ. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ್ಫಿಂಗ್​ ವೇಳೆ ಅಪಘಾತ: ಆಸೀಸ್​ ಮಾಜಿ ಆಟಗಾರ ಹೇಡನ್​ಗೆ ಗಂಭೀರ ಗಾಯ

Monday, October 8th, 2018
mathew-hadden

ಕ್ವೀನ್ಸ್ಲ್ಯಾಂಡ್: ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಅವರಿಗೆ ಅಪಘಾತವಾಗಿದ್ದು ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಹೇಡನ್ ಕುಟುಂಬದೊಂದಿಗೆ ವೀಕೆಂಡ್ ಎಂಜಾಯ್ ಮಾಡಲು ಅವರು ಕ್ವೀನ್ಸ್ಲೆಂಡ್ಗೆ ತೆರಳಿದ್ದರು. ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್ ಆಟವಾಡುತ್ತಿದ್ದ ವೇಳೆ ಹೇಡನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತಕ್ಕೀಡಾದ ತಕ್ಷಣವೇ ಹೇಡನ್ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಪಘಾತವಾದ ಸಂದರ್ಭದ ಫೋಟೋವೊಂದನ್ನು ಹೇಡನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಆ ಫೋಟೋದಲ್ಲಿ ಹೇಡನ್ ತಲೆ ಭಾಗಕ್ಕೆ ಗಾಯವಾಗಿದ್ದು, ರಕ್ತದ ಕಲೆ ಕಾಣಿಸುತ್ತಿದೆ. […]

ಕುದ್ರೋಳಿ ಕಸಾಯಿಖಾನೆ ವಿವಾದ: ಯು ಟಿ ಖಾದರ್ ಸ್ಪಷ್ಟನೆ‌

Monday, October 8th, 2018
u-t-kadher

ಮಂಗಳೂರು: ಕುದ್ರೋಳಿ ಕಸಾಯಿಖಾನೆ ವಿವಾದಕ್ಕೆ ಸಂಬಂಧಪಟ್ಟಂತೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಸ್ಪಷ್ಟನೆ‌ ನೀಡಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಟಿಯಲ್ಲಿ, ಕುದ್ರೋಳಿ ಕಸಾಯಿಖಾನೆಗೆ 15 ಕೋಟಿ ರೂ. ಸ್ಮಾರ್ಟ್ ಯೋಜನೆಯ ಅನುದಾನ ನೀಡುವೆ ಎಂದು ಅವರು ಹೇಳಿದ್ದರು. ಇಂದು ಈ ವಿಚಾರ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಚಿವ ಖಾದರ್ ಪ್ರತಿಕ್ರಿಯಿಸಿದ್ದಾರೆ. ನಾವು ತಿನ್ನುವ ಆಹಾರ ಸ್ವಚ್ಛವಾಗಿರಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕಸಾಯಿಖಾನೆಗೆ ಜನರ ಆರೋಗ್ಯಕ್ಕೆ ಹಾನಿಯಾಗದ ಮಾಂಸ ಬರಬೇಕು. ಕಸಾಯಿಖಾನೆ ಪರಿಸರ […]

ಉಮ್ರಾ ಯಾತ್ರೆಗೆ ಹೋಗಿದ್ದ ಪುತ್ತೂರಿನ ವ್ಯಕ್ತಿ ಉಸಿರಾಟ ತೊಂದರೆಯಿಂದ ನಿಧನ..!

Monday, October 8th, 2018
dides

ಮಂಗಳೂರು: ಉಮ್ರಾ ಯಾತ್ರೆಗೆ ಹೋಗಿದ್ದ ಪುತ್ತೂರಿನ ವ್ಯಕ್ತಿಯೊಬ್ಬರು ಉಸಿರಾಟ ತೊಂದರೆಯಿಂದ ಮದೀನದಲ್ಲಿ ನಿಧನರಾದ ಘಟನೆ ಬೆಳಕಿಗೆ ಬಂದಿದೆ. ಪವಿತ್ರ ಉಮ್ರಾ ಕರ್ಮ ನಿರ್ವಹಿಸಿ ಮದೀನಾ ಝಿಯಾರತ್ ನಡೆಸಲು ಸೌದಿ ಅರೇಬಿಯಾದ ಮದೀನಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಡೀಲ್ನ ಹಸೈನಾರ್ ಪಡೀಲ್ ಮದೀನಾದಲ್ಲಿ ಗುರುವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಸೈನಾರ್ ಮದೀನಾ ತಲುಪಿದ ವೇಳೆ ಉಸಿರಾಟದ ತೊಂದರೆಯಿಂದ ತೀವ್ರ ಅಸ್ವಸ್ಥತರಾಗಿದ್ದು, ತಕ್ಷಣ ಅವರನ್ನು ಮದೀನಾದ ಅಲ್ ಅನ್ಸಾರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅಂದೇ ನಿಧನರಾಗಿದ್ದಾರೆ. […]

ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಕೇಸ ವಜಾ..!

Monday, October 8th, 2018
case

ಮಂಗಳೂರು: ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಕೇಸನ್ನು ಮಂಗಳೂರು ನ್ಯಾಯಾಲಯ ವಜಾಗೊಳಿಸಿದೆ. ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಸೇರಿದಂತೆ 23 ಮಂದಿಯ ಮೇಲಿನ ಕೇಸ್ ವಜಾ ಆಗಿದೆ. ಪಂಪ್ವೆಲ್ನಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಯ ವೇಳೆ ಹಾಕಲಾಗಿದ್ದ ಪ್ರಕರಣವನ್ನು ಮಂಗಳೂರು ನ್ಯಾಯಾಲಯ ವಜಾಗೊಳಿಸಿದೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ಹಿಂದೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಹಿಂದೂ ಜಾಗರಣಾ ವೇದಿಕೆ ಮುಖಂಡ ಸತ್ಯಜಿತ್ ಸುರತ್ಕಲ್, ಮಂಗಳೂರು ಮನಪಾ ಸದಸ್ಯೆ […]

ಸಚಿವ ಡಿ.ಕೆ.ಶಿವಕುಮಾರ್​ ವಿರುದ್ಧ ಮತ್ತೊಂದು ಎಫ್​ಐಆರ್​​!

Monday, October 8th, 2018
d-k-shivkumar

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಅಧಿಕಾರಿ ನೀಡಿದ ದೂರಿನನ್ವಯ ಸಚಿವರ ವಿರುದ್ಧ ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಅನಧಿಕೃತ ಜಾಹೀರಾತು ಫಲಕ ಅಳವಡಿಸಿದಕ್ಕಾಗಿ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್ ರಾಜ್ಯ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಅನಧಿಕೃತ ಜಾಹೀರಾತು ಫಲಕ ಪ್ರದರ್ಶಿಸಿದಕ್ಕೆ ಡಿಕೆಶಿ ವಿರುದ್ಧ ಬಿಬಿಎಂಪಿ ಅಧಿಕಾರಿ ದೂರು ನೀಡಿದ್ದಾರೆ. ಅನಧಿಕೃತ ಜಾಹೀರಾತು ಫಲಕಗಳನ್ನು ನಿಷೇಧಿಸಿದ್ದ ಹೈಕೋರ್ಟ್, ಬಳಿಕ ನ್ಯಾಯಾಲಯದ ಸೂಚನೆಯಂತೆ ನಗರದಾದ್ಯಂತ […]

ಸ್ಮಾರ್ಟ್ ಸಿಟಿ ಸಲಹಾ ಸಮಿತಿ ರಚನೆಗೆ ಸಂಸದ ನಳಿನ್‌ಕುಮಾರ್ ಆಗ್ರಹ

Sunday, October 7th, 2018
nalin Kumar

ಮಂಗಳೂರು : ಮಂಗಳೂರು ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣ ಗೊಂದಲಮಯವಾಗಿದೆ. ಯೋಜನೆಯ ಕೋಟ್ಯಾಂತರ ರೂ.ದುರುಪಯೋಗವಾಗುತ್ತಿದೆ . ರಾಜ್ಯ ಸರ್ಕಾರ ತಕ್ಷಣ ಸ್ಮಾರ್ಟ್ ಸಿಟಿ ಯೋಜನೆಗೆ ಪೂರ್ಣ ಪ್ರಮಾಣದ ಎಂಡಿ ಹಾಗೂ ಸಲಹಾ ಸಮಿತಿ ರಚಿಸಬೇಕೆಂದು ಸಂಸದ ನಳಿನ್‌ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ. ನಗರದ ಸಮಗ್ರ ಅಭಿವೃದ್ದಿ ಉzಶದಿಂದ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಈ ಉzಶವನ್ನೇ ಮರೆತ ಹಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಯೋಜನೆಯಡಿ ೧೫ […]