ರೋಹನ್ ಬೋಪಣ್ಣ, ಮಲ್ಲಪ್ರಭಾ ಜಾಧವ್​ಗೆ ಚೆಕ್‌ವಿತರಿಸಿದ ಪರಮೇಶ್ವರ್

Saturday, December 15th, 2018
parameshwar

ಬೆಂಗಳೂರು: ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಕುರಾಸ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಬೆಳಗಾವಿಯ ಮಲ್ಲಪ್ರಭಾ ಜಾಧವ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಯುವಜನ ಸೇವೆ, ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್ ಸದಾಶಿವನಗರದ ತಮ್ಮ ಕಚೇರಿಯಲ್ಲಿಂದು ಸನ್ಮಾನಿಸಿದರು. ಬಳಿಕ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರಿಗೆ ನಗದು ಬಹುಮಾನವನ್ನು ಕ್ರೀಡಾ ಇಲಾಖೆಯಿಂದ ನೀಡಲಾಗುತ್ತಿದೆ. ರೋಹನ್‌ ಬೋಪಣ್ಣ ಅವರಿಗೆ 25 ಲಕ್ಷ ರೂ. ಹಾಗೂ ಮಲ್ಲಪ್ರಭಾ […]

ವಿಶ್ವದ 7ನೇ ಅತಿ ದೊಡ್ಡ ವಜ್ರ ಪತ್ತೆ… ಮೊಟ್ಟೆ ಗಾತ್ರದ ಡೈಮಂಡ್​ ಸಿಕ್ಕಿದ್ದು ಎಲ್ಲಿ, ಮೌಲ್ಯವೆಷ್ಟು!?

Saturday, December 15th, 2018
stone-kenada

ಕೆನಡಾ: 552 ಕ್ಯಾರಟ್ ಹಳದಿ ವಜ್ರ ಕೆನಡಾದ ವಾಯವ್ಯ ಪ್ರಾಂತ್ಯದ ದೈವಿಕ್ ಗಣಿ ಪ್ರದೇಶದಲ್ಲಿ ಲಭ್ಯವಾಗಿದ್ದು, ಇದು ಹಿಂದೆಂದೂ ಲಭ್ಯವಾಗದ ಅತಿ ದೊಡ್ಡ ವಜ್ರದ ಹರಳು ಎಂದೇ ಹೇಳಲಾಗುತ್ತಿದೆ. ದೈವಿಕ್ ಗಣಿ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ವಜ್ರ ಉತ್ಪಾದನೆ ಮಾಡುತ್ತಿದ್ದು, ಅದರಲ್ಲಿ ಇದು ಇಲ್ಲಿಯವರೆಗೆ ಲಭ್ಯವಾಗಿರುವ ಅತಿ ದೊಡ್ಡ ವಜ್ರವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಡೊಮಿನಿನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇನ್ ದುರ್ಗಿನ್ ಮಾತನಾಡಿದ್ದು, ಲಭ್ಯವಾಗಿರುವ ವಜ್ರ ಅತಿ ದೊಡ್ಡ ಗುಣಮಟ್ಟದಿಂದ ಕೂಡಿರುವುದಾಗಿ ತಿಳಿಸಿದ್ದಾರೆ. ಆದರೆ ಇದರ ಬೆಲೆ […]

ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪ ಸಾಬೀತು..ಇಂದು ಶಿಕ್ಷೆ ಪ್ರಮಾಣ ಪ್ರಕಟ

Saturday, December 15th, 2018
atttempt

ಮಂಗಳೂರು: ನಾಲ್ಕು ವರ್ಷದ ಬಾಲಕಿ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಮೇಲಿನ‌ ಆರೋಪ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಪೊಕ್ಸೋ ವಿಶೇಷ ನ್ಯಾಯಾಲಯದಲ್ಲಿ ಶುಕ್ರವಾರ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಶನಿವಾರ ಪ್ರಕಟವಾಗಲಿದೆ. ಕಂಕನಾಡಿ ನಿವಾಸಿ ಚಂದ್ರಶೇಖರ್ ಅಲಿಯಾಸ್ ರಾಜೇಶ್ (49) ಅಪರಾಧಿ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಈತನಿಗೆ ವಿವಾಹವಾಗಿ ಮಕ್ಕಳೂ ಇವೆ. ಈ ಹಿಂದೆ ಅಸೈಗೋಳಿ ಸಮೀಪದ ಗ್ರಾಮವೊಂದರಲ್ಲಿ ಈತ ವಾಸವಾಗಿದ್ದ ಸಂದರ್ಭ ಸಂತ್ರಸ್ತ ಬಾಲಕಿಯ ಮನೆಯವವರು ಪಕ್ಕದ ಮನೆಯಲ್ಲಿದ್ದರು. […]

ಜೋಕಟ್ಟೆ ಬಳಿ ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

Saturday, December 15th, 2018
railway

ಮಂಗಳೂರು: ಪಡೀಲ್-ಜೋಕಟ್ಟೆ ನಡುವಿನ ರೈಲು ಮಾರ್ಗದಲ್ಲಿ ಶುಕ್ರವಾರ ಮಧ್ಯಾಹ್ನ ರೈಲು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಜೋಕಟ್ಟೆ ಸಮೀಪದ ಬಬ್ಬರ್ಯ ದೇವಸ್ಥಾನ ಬಳಿಯ ನಿವಾಸಿ ಕಿಶೋರ್ (46) ಮೃತಪಟ್ಟಿದ್ದಾನೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಅವರು ಮಧ್ಯಾಹ್ನ ಊಟ ಮಾಡಿ ರೈಲು ಹಳಿ ದಾಟಲು ಯತ್ನಿಸುತ್ತಿದ್ದಾಗ ಮಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಮತ್ಸಗಂಧಾ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರೈಲು ಅವರನ್ನು ಸುಮಾರು ದೂರಕ್ಕೆ ಎಳೆದೊಯ್ದಿದ್ದು, ತೀವ್ರ ಗಾಯಗೊಂಡ ಕಿಶೋರ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಶರ್ಟ್ […]

ಅಧಿಕಾರ ವಹಿಸಿಕೊಂಡ ಮೂರು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡುವುದು ನಿಶ್ಚಿತ: ರಾಹುಲ್​ ಗಾಂಧಿ

Saturday, December 15th, 2018
rahul-gandhi

ನವದೆಹಲಿ: ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಮೂರು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡುವುದು ನಿಶ್ಚಿತ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೃಢಪಡಿಸಿದ್ದಾರೆ. ಛತ್ತೀಸ್ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 10 ದಿನಗಳೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ರಾಹುಲ್ ಪ್ರಚಾರದ ವೇಳೆ ಭರವಸೆ ನೀಡಿದ್ದರು. ಇದಕ್ಕೆ ಬದ್ಧರಿರುವುದಾಗಿ ಹೇಳಿದ ಅವರು, ಶೀಘ್ರದಲ್ಲಿಯೇ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನೂ ಒಂದು ಅಸ್ತ್ರವಾಗಿ ಬಳಸಿಕೊಂಡು ಕಾಂಗ್ರೆಸ್ ಮತಯಾಚನೆ ಮಾಡಿತ್ತು. ಚುನಾವಣೆ […]

ಆ್ಯಂಬಿಡೆಂಟ್​ ಮಾದರಿಯಲ್ಲೇ ಮತ್ತೊಂದು ಚೀಟಿಂಗ್​ ಕೇಸ್​!

Friday, December 14th, 2018
banglore

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಒಂದಾದರೊಂದಂತೆ ಚೀಟಿಂಗ್ ಪ್ರಕರಣಗಳು ಹೊರ ಬರುತ್ತಲೇ ಇವೆ. ಆ್ಯಂಬಿಡೆಂಟ್ ಪ್ರಕರಣದ ಮಾದರಿಯಲ್ಲಿ ಮತ್ತೊಂದು ಕಂಪನಿ ನೂರಾರು ಜನರಿಗೆ ವಂಚನೆ ಮಾಡಿರುವ ಆರೋಪ ಪ್ರಕರಣ ಬೆಳಕಿಗೆ ಬಂದಿದೆ. ಹಣ ಡಬಲ್ ಮಾಡುವುದಾಗಿ ಹಾಗೂ ಸೈಟ್ ಕೊಡಿಸುವುದಾಗಿ ಸಾರ್ವಜನಿಕರಿಗೆ ನಂಬಿಸಿ ಪ್ರತಿ ಸದಸ್ಯರಿಂದ ಒಂದು ಸಾವಿರ ಸದ್ಯಸತ್ವ ಶುಲ್ಕ ಪಾವತಿಸಿಕೊಂಡು 40 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿವರೆಗೆ ಹಣವನ್ನು ಠೇವಣಿಯಾಗಿಸಿಕೊಂಡು, ಹಣ ನೀಡದೇ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಜಾಜಿನಗರದ ವಿಶ್ವಜ್ಯೋತಿ ಚ್ಯಾರಿಟೇಬಲ್ ಟ್ರಸ್ಟ್ […]

ಇಂದಿರಾಗಾಂಧಿ ಆಪ್ತನಿಗೆ ಮಧ್ಯಪ್ರದೇಶದ ಗದ್ದುಗೆ: ಸಿಎಂ ಗಾದಿಗೇರಲಿರುವ ಕಮಲನಾಥ್

Friday, December 14th, 2018
rahul-gandhi

ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಲು ಕಾರಣರಾದ ಕಮಲನಾಥ್ ಸಿಎಂ ಆಗಿ ಡಿಸೆಂಬರ್ 17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ವ್ಯಾಪಕ ಚರ್ಚೆಯ ನಂತರ ಕಮಲನಾಥ್ರನ್ನೇ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ನಿನ್ನೆ ಅಧೀಕೃತವಾಗಿ ಘೋಷಿಸಿತ್ತು. ಡಿ. 17ರಂದು ಲಾಲ್ ಪರೇಡ್ ಗ್ರೌಂಡ್ನಲ್ಲಿ ನಡೆಯುವ ಸಮಾರಂಭದಲ್ಲಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ . ಒಂಭತ್ತು ಬಾರಿ ಸಂಸದರಾಗಿ ಆಯ್ಕೆಯಾಗಿರುವ 72 ವರ್ಷದ ಕಮಲನಾಥ್, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಸ್ಥಿತ್ವ ತೋರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಕಮಲನಾಥ್ ಗಾಂಧಿ […]

ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಹಿರಿಯ ಪ್ರಬಂಧಕ ಕೆ. ರಾಜಾರಾಮ ಮಡಿ ನಿಧನ

Friday, December 14th, 2018
karnataka-bank

ಮಂಗಳೂರು: ಕರ್ಣಾಟಕ ಬ್ಯಾಂಕ್‌ರಿಟೈರೀಸ್ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ಕೆ. ರಾಜಾರಾಮ ಮಡಿ (79 ವರ್ಷ) ಅಸೌಖ್ಯದಿಂದ ಡಿ. 11 ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕರ್ಣಾಟಕ ಬ್ಯಾಂಕ್‌ನ ಹಿರಿಯ ಪ್ರಬಂಧಕರಾಗಿ ನಿವೃತ್ತಿ ಹೊಂದಿದ್ದ ದಿವಂಗತರು ಪತ್ನಿ ಹಾಗೂ ಇಬ್ಬರು ಪುತ್ರರನ್ನುಅಗಲಿದ್ದಾರೆ.

ರಫೇಲ್‌ ಡೀಲ್‌ ಅರ್ಜಿ ವಜಾದಿಂದ ಕಾಂಗ್ರೆಸ್​ಗೇ ಅವಮಾನ: ಬಿ.ಎಸ್.ಯಡಿಯೂರಪ್ಪ

Friday, December 14th, 2018
yedyurappa

ಬೆಳಗಾವಿ: ರಫೆಲ್‌ ಡೀಲ್‌ ತನಿಖೆಗೆ ಒತ್ತಾಯಿಸಿದ್ದ ಅರ್ಜಿ ವಜಾ ಆಗಿದೆ. ಇದು ಕಾಂಗ್ರೆಸ್ಗೆ ಅವಮಾನಕರ ಬೆಳವಣಿಗೆ ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿರುವುದು ಸಂತಸ ತಂದಿದೆ. ಪ್ರಧಾನಿಯವರನ್ನು ರಾಜಕೀಯವಾಗಿ ಮುಳುಗಿಸುವ ಪ್ರಯತ್ನ ಕಾಂಗ್ರೆಸ್ನಿಂದ ನಡೆದಿದೆ. ರಫೆಲ್ ಡೀಲ್ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ತಿಳಿಸಿದರು. ಕೇಂದ್ರ ಸರ್ಕಾರ ಯಾವುದೇ ತಪ್ಪು ಮಾಡಿಲ್ಲ. ಇದೇ ತೀರ್ಪನ್ನು ನಿರೀಕ್ಷೆ ಮಾಡಿದ್ದೆವು. ನಿರೀಕ್ಷೆಯಂತೆ ಸುಪ್ರೀಂಕೋರ್ಟ್ ತೀರ್ಪು ಕೊಟ್ಟಿದೆ ಎಂದು ಯಡಿಯೂರಪ್ಪ ಹೇಳಿದ್ರು.

ಪಂಚ ರಾಜ್ಯ ಚುನಾವಣೆ ಫಲಿತಾಂಶದ ಮೂಲಕ ಜನರಿಗೆ ನಿಜವಾದ ಅಚ್ಛೇ ದಿನ್‌ ದೊರೆತಿದೆ: ಮಿಥುನ್‌ ರೈ

Friday, December 14th, 2018
mithun-rai

ಸುಳ್ಯ: ನಾಲ್ಕೂವರೆ ವರ್ಷಗಳ ಕಾಲ ಜನವಿರೋಧಿ ಆಡಳಿತ ನಡೆಸಿದ ನರೇಂದ್ರ ಮೋದಿ ಸರಕಾರವನ್ನು ತಿರಸ್ಕರಿಸಿ, ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮುಕ್ತ ರಾಜ್ಯದ ಫಲಿತಾಂಶದ ಮೂಲಕ ಜನರಿಗೆ ನಿಜವಾದ ಅಚ್ಛೇ ದಿನ್‌ ದೊರೆತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ ಹೇಳಿದರು. ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಗುರುವಾರ ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ ಪಂಚ ರಾಜ್ಯ ಫಲಿತಾಂಶದ ವಿಜಯೋತ್ಸವದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಮುಕ್ತ ಮಾಡುವ ಮಾತುಗಳನ್ನಾಡಿದ ಮೋದಿಗೆ ಪ್ರಜ್ಞಾವಂತ ಜನ […]