ಡಾ.ಬಿ.ಆರ್ ಶೆಟ್ಟಿಗೆ ‘ಕರ್ನಾಟಕದ ಕಲಾರತ್ನ ಪ್ರಶಸ್ತಿ’ ಪ್ರಧಾನ..!

Tuesday, November 6th, 2018
b-r-shetty

ಅಬುದಾಬಿ: ಕರ್ನಾಟಕ ಸಂಘ ಅಬುಧಾಬಿ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ನವಂಬರ್ 2 ರಂದು ನಗರದ ಇಂಡಿಯನ್ ಕಲ್ಚರಲ್ ಸೋಷ್ಯಲ್ ಸೆಂಟರ್ ನಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಜರಗಿತು. ಕಾರ್ಯಕ್ರಮವು ಸಂಘದ ಮಾಹ ಪೋಷಕರಾದ ಡಾ. ಬಿ ಆರ್ ಶೆಟ್ಟಿ ,ಶ್ರೀಮತಿ ಡಾ. ಚಂದ್ರಕುಮಾರಿ ಶೆಟ್ಟಿ, ಯುಎಇ ಎಕ್ಷೆಂಜಿನ ಸುಧಿರ್ ಕುಮರ್ ಶೆಟ್ಟಿ, ಹಾಸ್ಯ ಬಾಷಾಣಗಾರ ಪ್ರೋ. ಕೃಷ್ಣಗೌಡರು, ಉದ್ಯಮಿ ರೊನೊಲ್ಡ್ ಫಿಂಠೊ, ಇಂಡಿಯಾನ್ ಸೋಷಿಯಲ್ ಕಲ್ಚರಲ್ ಸೆಂಟರ್ ಅಬುಧಾಬಿಯ ಅಧ್ಯಕ್ಷ ರಮೇಶ್ ಪಣಿಕಾರ್, […]

ರಾಜ್ಯ ಲೋಕಸಭೆಯ ಚುನಾವಣೆಗೂ ನಾವು ಒಟ್ಟಾಗಿ ಸ್ಪರ್ಧಿಸಲಿದ್ದೇವೆ: ಹೆಚ್​.ಡಿ. ದೇವೇಗೌಡ

Tuesday, November 6th, 2018
devegouda

ಬೆಂಗಳೂರು: ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿದ್ದ ಮಿನಿ ಸಮರದಲ್ಲಿ ಮೈತ್ರಿ ಸರ್ಕಾರ ಭರ್ಜರಿ ಗೆಲುವು ಸಾಧಿಸಿದ್ದು, ಈ ಕುರಿತಂತೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಮೈತ್ರಿ ಸರ್ಕಾರದ ಗೆಲುವು ಇದಾಗಿದ್ದು, ಜನರ ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತ್ರ ಗೆದ್ದಿರುವ ಬಿಜೆಪಿ ಹೆಚ್ಚಿನ ಸಂತಸಪಡುವ ಅಗತ್ಯವಿಲ್ಲ ಎಂದಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯಲಿದೆ ಎಂದಿರುವ ಹೆಚ್ಡಿಡಿ, ಈ ಕುರಿತಾಗಿ ಎರಡೂ ಪಕ್ಷದ ಮುಖಂಡರು ಒಟ್ಟು ಸೇರಿ ಚುನಾವಣಾ ರೂಪುರೇಷೆ ಸಿದ್ಧಪಡಿಸುವುದಾಗಿ ಹೇಳಿದ್ದಾರೆ.

ಸೋತ ಮಾತ್ರಕ್ಕೆ ಕೈ ಕಟ್ಟಿ ಕೂರಲ್ಲ, ನಾವೇನು ಎಂದು ತೋರಿಸಲಿದ್ದೇವೆ: ಬಿ.ಎಸ್.ಯಡಿಯೂರಪ್ಪ

Tuesday, November 6th, 2018
yedyurappa

ಬೆಂಗಳೂರು: ಉಪ ಚುನಾವಣೆಯಲ್ಲಿ ನಮ್ಮ ಪಕ್ಷ ಸೋತಿದೆ ಎಂದು ಕೈಕಟ್ಟಿ ಕೂರುವುದಿಲ್ಲ. ನಾವು ಸೋತದ್ದು ಬಳ್ಳಾರಿ ಮಾತ್ರ. ನಮ್ಮ ಸೋಲನ್ನು ಆತ್ಮಾವಲೋಕನ ಮಾಡಿಕೊಂಡು ಮುಂದಿನ 2019ರ ಚುನಾವಣೆಯನ್ನು ಗೆಲ್ಲುವತ್ತ ನಮ್ಮ ದೃಷ್ಟಿಯನ್ನು ಹರಿಸುತ್ತೇವೆ. ನಾವೇನು ಎಂದು ಮುಂದೆ ತೋರಿಸಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. 5 ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲಾ ಮತದಾರರಿಗೂ ನನ್ನ ಅಭಿನಂದನೆ ಮತ್ತು ವಂದನೆಗಳು. 5 ಕ್ಷೇತ್ರಗಳ ಮತದಾರರ ತೀರ್ಪನ್ನು ನಾನು ಮತ್ತು ನಮ್ಮ ಪಕ್ಷ ಸ್ವೀಕರಿಸುತ್ತದೆ. ಸತ್ಯಸಂಗತಿ […]

ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ

Tuesday, November 6th, 2018
deepavali

ಮಂಗಳೂರು: ನಗರದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಮನಮೋಹಕ‌ ಆಕಾಶ ಬುಟ್ಟಿಗಳ ಸ್ಪರ್ಧೆ ನಡೆಯಿತು. ವಿವಿಧ ಪ್ರಕಾರದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸೆಗಣಿ, ವ್ಯಾಲ್ವೇಟ್, ರಬ್ಬರ್ ಬ್ಯಾಂಡ್, ಶಂಖ, ಧಾನ್ಯಗಳು, ಭತ್ತ, ಹುಣಸೆ ಬೀಜ, ಕಡಲೆಕಾಳು, ಕ್ಯಾಸೇಟ್ ರೀಲ್, ಕ್ರೇಯಾನ್ಸ್, ಬಿದಿರಿನ ಕೋಲು, ನ್ಯೂಸ್ ಪೇಪರ್ ಹೀಗೆ ವಿವಿಧ ಪ್ರಕಾರದ ವಸ್ತುಗಳಿಂದ ತಯಾರಿಸಿದ ಆಕಾಶ ಬುಟ್ಟಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ವಿಭಾಗ ಹೀಗೆ ಮೂರು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಸುಮಾರು […]

ರಾಮನಗರದ ಮೊದಲ ಮಹಿಳಾ ಶಾಸಕಿಯಾಗಿ ಅನಿತಾ ಕುಮಾರಸ್ವಾಮಿ ಆಯ್ಕೆ!

Tuesday, November 6th, 2018
anitha-kumarswamy

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕೊನೆಯ ಹಾಗೂ 20ನೇ ಸುತ್ತು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿ ಈ ಕ್ಷೇತ್ರದ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಈ ಉಪಸಮರದಲ್ಲಿ ಒಟ್ಟು 1,25,043 ಮತಗಳನ್ನು ಅನಿತಾ ಕುಮಾರಸ್ವಾಮಿ ಪಡೆದುಕೊಂಡು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ 15,906 ಮತಗಳನ್ನು ಪಡೆದು ಭಾರೀ ಅಂತರದಿಂದ ಸೋಲು ಕಂಡಿದ್ದಾರೆ. ಇನ್ನು ಅನಿತಾ ಕುಮಾರಸ್ವಾಮಿ ಸುಮಾರು ಒಂದು ಲಕ್ಷ ಮತಗಳಿಂದ ಭಾರೀ ಗೆಲುವು ಸಾಧಿಸಿದ್ದಾರೆ. […]

ಉಪಚುನಾವಣಾ: ಐದರ ಪೈಕಿ ನಾಲ್ಕರಲ್ಲಿ ಮೈತ್ರಿ ಸರ್ಕಾರ ಅಭ್ಯರ್ಥಿಗಳಿಗೆ ಗೆಲುವು..!

Tuesday, November 6th, 2018
by-polls

ಮಂಡ್ಯ: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಉಪಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಈ ನಡುವೆ ಐದರಲ್ಲಿ ನಾಲ್ಕು ಕಡೆ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಗೆಲುವಿನ ಬಗ್ಗೆ ಅಧಿಕೃತ ಘೋಷಣೆಯೊಂದು ಬಾಕಿ ಇದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಭರ್ಜರಿಯಾಗಿ ಗೆಲುವು ಸಾಧಿಸಿದರೇ ಇತ್ತ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 1ಲಕ್ಷದ 82 ಸಾವಿರ ಮತಗಳ ಅಂತರದಿಂದ ಗೆದ್ದು ಅಂಬರೀಶ್ ದಾಖಲೆ ಮುರಿದಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ […]

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ ಭರ್ಜರಿ ಗೆಲುವು…!

Tuesday, November 6th, 2018
kumarswamy

ರಾಮನಗರ: ವಿಧಾನಸಭೆ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಗೆಲುವು ಕಾಯ್ದುಕೊಂಡಿದ್ದು, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಅನಿತಾ ಗೆಲುವು , ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅನಿತಾ ಕುಮಾರಸ್ವಾಮಿ ಅವರ ಭಾವಚಿತ್ರವಿರುವ ಫ್ಲೆಕ್ಸ್ ಹಿಡಿದು, ಜಯಘೋಷ ಕೂಗುತ್ತಿದ್ದಾರೆ.

ಜಮಖಂಡಿ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಆನಂದ್​ ನ್ಯಾಮಗೌಡ ಗೆಲುವು

Tuesday, November 6th, 2018
anand

ಬಾಗಲಕೋಟೆ: ಜಮಖಂಡಿ ವಿಧಾನಸಭೆ ಉಪ ಚುನಾವಣೆ ಮತ ಎಣಿಕೆ ನೆಡೆದಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಾಯ್ದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಇನ್ನೂ ಹನ್ನೆರಡು ಸುತ್ತು ಮತ ಎಣಿಕೆ ಬಾಕಿ ಇರುವಾಗಲೇ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಶುರುವಾಗಿದೆ. ಪಟಾಕಿ ಸಿಡಿಸಿ, ಬಣ್ಣ ಎರಚಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಿಸುತ್ತಿದ್ದಾರೆ. ಮತ ಎಣಿಕೆ ಕೇಂದ್ರದತ್ತ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇನ್ನೂ ಸುಳಿದಿಲ್ಲ.

ಮಿಥುನ್ ರೈ ಸೇರಿ 10 ಯುವ ಕಾಂಗ್ರೆಸ್ ಅಧ್ಯಕ್ಷರುಗಳ ಅಮಾನತು..!

Tuesday, November 6th, 2018
mithun-rai

ಮಂಗಳೂರು: ಪಕ್ಷ ಸಂಘಟನೆಯಲ್ಲಿ ಯಶಸ್ವಿಯಾಗದ ಹಿನ್ನಲೆ : ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಮಿಥುನ್ ರೈ ಅಮಾನತು ಬೆಂಗಳೂರು, ನ. 5 : ಪಕ್ಷದ ಚಟುವಟಿಕೆ ಹಾಗು ಸಂಘಟನೆಯಲ್ಲಿ ನಿಷ್ಕ್ರಿಯತೆ ತೋರಿಸಿದ್ದಾರೆ ಎಂಬ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಅಖಿಲ ಭಾರತ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗು ಯುವ ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರವೀಂದ್ರದಾಸ್ ಅವರು […]

ಮಂಗಳೂರು : ಚಿನ್ನಾಭರಣ ಮಳಿಗೆಯ 1ಕೋಟಿ 75 ಲಕ್ಷ ವಶ, ಇಬ್ಬರ ಬಂಧನ

Monday, November 5th, 2018
police commissioner

ಮಂಗಳೂರು : ಕಾರ್ ಸ್ಟ್ರೀಟ್ ನ ವೈಷ್ಣವಿ ಆಭರಣಗಳ ಮಳಿಗೆ ಮಾಲಕರಿಗೆ ಸೇರಿದ 1ಕೋಟಿ 75 ಲಕ್ಷ ರೂಪಾಯಿ ಹಣ ದರೋಡೆ ಪ್ರಕರಣಕ್ಕೆ ಸಂಭಂದಿಸಿದ ಇಬ್ಬರು ಆರೋಪಿಗಳನ್ನು ಉರ್ವ ಪೊಲೀಸ್, ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಕ್ಟೋಬರ್ 26 ರಂದು ಮುಂಬೈಯಿಂದ ಮಂಗಳೂರಿಗೆ ಚಿನ್ನಾಭರಣ ಮಾರಿ ಹಣ ತರುತ್ತಿದ್ದ ವೇಳೆ  ಮಂಗಳೂರಿನ ಲೇಡಿಹಿಲ್ ನಲ್ಲಿ  ಮಂಜುನಾಥ್ ಗಣಪತಿ ಎಂಬುವವರನ್ನು ಬೆದರಿಸಿ ಚಿನ್ನಾಭರಣಗಳ ಮಳಿಗೆ ಕೆಲಸದಾಳುವಾಗಿದ್ದ ಮಂಜುನಾಥ್ ಮತ್ತು ಇತರರು ಹೊಂಚು ಹಾಕಿ ಕುಳಿತು 1ಕೋಟಿ 75 ಲಕ್ಷ ರೂಪಾಯಿ ದರೋಡೆ ಮಾಡಿದ್ದರು. ಮಂಜುನಾಥ್ ಗಣಪತಿ ಎಂಬುವವರು ನೀಡಿದ್ದ ದೂರಿನ ಮೇಲೆ […]