ಶಾಶ್ವತ ಸೂರು ನೀಡುವ ಕಾರ್ಯದಲ್ಲಿ ಯಶಸ್ವಿ: ಮೊದಿನ್ ಬಾವಾ

Wednesday, March 21st, 2018
mohaiddin-bava

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬಡ ವರ್ಗಕ್ಕೆ ಭೂಮಿಯ ಹಕ್ಕು ನೀಡುವ ಮೂಲಕ ಶಾಶ್ವತ ಸೂರು ನೀಡುವ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು. ಇಂದು ನಾನಾ ಸೌಲಭ್ಯದ ಫಲಾನುಭವಿಗಳಿಗೆ ಚೆಕ್ ಹಾಗೂ ಹಕ್ಕುಪತ್ರ ವಿತರಣೆಯ ಬಳಿಕ ಅವರು ಮಾತನಾಡುತ್ತಿದ್ದರು. ಮಾಜಿ ಮುಖ್ಯ ಮಂತ್ರಿಗಳಾದ ಗುಂಡೂರಾವ್ ಮತ್ತು ಎಸ್.ಎಂ. ಕೃಷ್ಣ ಅವಧಿಯಲ್ಲಿ ಹಕ್ಕು ಪತ್ರ ನೀಡಿದ ಕಾಂಗ್ರೆಸ್ ಸರಕಾರ ಇದೀಗ ಹಕ್ಕು ಪತ್ರ ನೀಡುವ ಕೆಲಸ ಮಾಡಿದೆ. ಹಕ್ಕುಪತ್ರ ನೀಡುವ ಕಾನೂನು ಜಾರಿಗೊಳಿಸಿದ ರಾಜ್ಯ […]

ಯೋಗಿ, ಅಮಿತ್ ಶಾ ಬಂದರೂ ಬಿಜೆಪಿ ಗೆಲ್ಲುವುದಿಲ್ಲ : ಸಿದ್ದರಾಮಯ್ಯ

Wednesday, March 21st, 2018
siddaramaih

ಮಂಗಳೂರು: ‘ಕರ್ನಾಟಕ ಶಿಶುನಾಳ ಷರೀಫ, ಬಸವಣ್ಣ ಅವರ ನಾಡು. ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಎಷ್ಟು ಬಾರಿ ಬೇಕಾರೂ ಬರಲಿ, ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ ಸಂಜೆ ಮಂಗಳೂರಿನ ನೆಹರು ಮೈದಾನದಲ್ಲಿ ಜನಾಶೀರ್ವಾದ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು. ಬೃಹತ್ ಸಮಾವೇಶ ಕರಾವಳಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಆಯಿತು. ಕಾಂಗ್ರೆಸ್ ಪಾಂಡವರಂತೆ, ಬಿಜೆಪಿ ಕೌರವರಂತೆ : ರಾಹುಲ್ ಗಾಂಧಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ […]

ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಕರ್ನಾಟಕ ಜೈನ್ ಪತ್ರಿಕೆ ಬಿಡುಗಡೆ

Wednesday, March 21st, 2018
veerendra-hegdde

ಬೆಳ್ತ೦ಗಡಿ: ಕರ್ನಾಟಕ ಜೈನ್ ಸ್ವಯ೦ ಸೇವಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಆರ೦ಭಿಸಿರುವ ರಾಜ್ಯ ಮಟ್ಟದ ಕರ್ನಾಟಕ ಜೈನ್ ಪತ್ರಿಕೆ ಯನ್ನು (ಪಾಕ್ಷಿಕ) ಪದ್ಮವಿಭೂಷಣ ರಾಜರ್ಷಿ ಪೂಜ್ಯ ಡಾ.ಡಿ ವೀರೇ೦ದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಧರ್ಮಸ್ಥಳದಲ್ಲಿ ಮಾರ್ಚ್ 21ರ೦ದು ಬಿಡುಗಡೆ ಮಾಡಿದರು. ಕರ್ನಾಟಕ ಜೈನ್ ಸ್ವಯ೦ ಸೇವಾ ಚಾರಿಟೇಬಲ್ ಟ್ರಸ್ಟ್, ಅಧ್ಯಕ್ಷ ನೇಮಿರಾಜ ಅರಿಗ, ಪತ್ರಿಕೆ ಸ೦ಪಾದಕ ಶರದ್ ವಿಜಯ, ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿಗಳಾದ ಎ.ವಿ.ಶೆಟ್ಟಿ ಧರ್ಮಸ್ಥಳ, ಶಶಿಕಿರಣ್ ಜೈನ್ ಮತ್ತು ಶಮ೦ತ್ ಕುಮಾರ್, ಪುಷ್ಪರಾಜ್ […]

ಮಾರ್ಚ್ 23 ರಂದು ಮಂಗಳೂರಿನಲ್ಲಿ ‘ತೊಟ್ಟಿಲು’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭ

Wednesday, March 21st, 2018
thottilu-film

ಮಂಗಳೂರು : ತುಳುಚಿತ್ರರಂಗದ ಬಹುನೀರೀಕ್ಷಿತ ತುಳು ಚಿತ್ರ ‘ತೊಟ್ಟಿಲು’ ಮಾರ್ಚ್ 23 ರ ಶುಕ್ರವಾರ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ಮಾಪಕ ರೋಹನ್ ಪ್ರದೀಪ್ ಅಗ್ರಾರ್ ಹೇಳಿದರು. ಅವರು ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಕನ್ನಡ ಚಿತ್ರಗಳಂತೆ ತುಳುವಿನಲ್ಲೂ ಪೈಪೋಟಿ ಆರಂಭವಾಗಿದ್ದು ಗುಣಮಟ್ಟದ ಚಿತ್ರಗಳು ಮಾರುಕಟ್ಟಗೆ ಬರುತ್ತಿದೆ. ‘ಮೈ ಮೂವೀ ಮೇಕರ‍್ಸ್’ ಬ್ಯಾನರಿನಡಿಯಲ್ಲಿ ನಿರ್ಮಾಣದ ಮೊದಲ ತುಳು ಚಿತ್ರ ‘ತೊಟ್ಟಿಲು’ ಮದರ್ ಸೆಂಟಿಮೆಂಟ್, ಲವ್ ಸ್ಟೋರಿ ಹಾಗೂ ಸಂಪೂರ್ಣ ಹಾಸ್ಯಮಯವಾಗಿ ಜನರನ್ನು ಮನರಂಜಿಸಲಿದೆ ಎಂದರು. ಚಿತ್ರದ ನಾಯಕ […]

ರಾಹುಲ್ ಗಾಂಧಿ ಮುಂದೆ ಕಣ್ಣೀರು ಹಾಕಿದ ಜನಾರ್ದನ ಪೂಜಾರಿ

Wednesday, March 21st, 2018
janardhana-poojary

ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಸಂಜೆ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದಿಂದ ವಾಪಾಸಾಗುವಾಗ ರಾಹುಲ್ ಗಾಂಧಿಯ ಮುಂದೆಯೇ ಜನಾರ್ದನ ಪೂಜಾರಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ನೀವೇ ಊಹಿಸಿ ಪ್ರವಾಸದ ಭಾಗವಾಗಿ ರಾಹುಲ್ ಗಾಂಧಿ ಸಂಜೆ ನೆಹರೂ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ನಂತರ ರೊಸಾರಿಯೋ ಚರ್ಚ್ ಗೆ ಭೇಟಿ ನೀಡಿದ ಅವರು ಬಳಿಕ ಕುದ್ರೋಳಿ ದೇವಸ್ಥಾನಕ್ಕೆ ತೆರಳಿದರು. ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ […]

ಬಿಜೆಪಿಯದ್ದು ಕೌರವರ ಪಕ್ಷ, ಕಾಂಗ್ರೆಸ್‌ ಪಾಂಡವರ ಪಕ್ಷ: ರಾಹುಲ್‌ ಗಾಂಧಿ ವಾಗ್ದಾಳಿ

Wednesday, March 21st, 2018
rahul-gandhi

ಮಂಗಳೂರು: ಬಿಜೆಪಿ ಕೌರವರ ಪಕ್ಷ, ಕಾಂಗ್ರೆಸ್ ಪಾಂಡವರ ಪಕ್ಷ. ಬಿಜೆಪಿಯದ್ದು ಸುಳ್ಳಿನ ಹಾದಿ, ಕಾಂಗ್ರೆಸ್‌ನದ್ದು ಸತ್ಯದ ನಡೆ ಎಂದು ಇಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಬ್ಬರಿಸಿದರು. ಕರಾವಳಿ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್, ಜನಾಶೀರ್ವಾದ ರೋಡ್ ಶೋ ನಡೆಸಿದ ಬಳಿಕ ನೆಹರೂ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು. ಕೌರವರಿಗೆ ಯುದ್ಧ ಗೆಲ್ಲಲು ಬೇಕಾದ ಎಲ್ಲ ತಂತ್ರಗಳು, ಸೈನ್ಯ ಬಲವೂ ಇತ್ತು. ಕೊನೆಗೆ ಸತ್ಯದ ಹಾದಿಯಲ್ಲಿ ಪಾಂಡವರು ಗೆದ್ದರು […]

ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ : ಐವನ್ ಡಿ. ಸೋಜಾ

Tuesday, March 20th, 2018
ivan-dsouza

ಮಂಗಳೂರು: ಬಿಜೆಪಿ, ಕೆಜೆಪಿ ಇನ್ನೂ ಜೀವಂತವಾಗಿದೆ. ಬಿಜೆಪಿಯ ಒರಿಜನಲ್ ಮತ್ತು ಡೂಪ್ಲಿಕೇಟ್‌ಗಳ ಮಧ್ಯೆ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಬೇರೆಯವರ ಹುಳುಕು ಹುಡುಕುವುದಕ್ಕಿಂತ ಆಂತರಿಕ ಸಮಸ್ಯೆಯನ್ನು ಬಗೆಹರಿಸಲಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ. ಸೋಜಾ ವಾಗ್ದಾಳಿ ನಡೆಸಿದರು. ಮೂಡುಬಿದಿರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಟಿಕೆಟ್ ಹಂಚಿಕೆಯಲ್ಲಿ ಹಣದ ಪ್ರಭಾವದ ಕುರಿತು ವೀರಪ್ಪ ಮೊಯ್ಲಿ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದೊಳಗಿನ ಸಮಸ್ಯೆಯನ್ನು ಹೈಕಮಾಂಡ್ ಸರಿಪಡಿಸಲಿದೆ. ಪ್ರತಿಯೊಂದರಲ್ಲಿಯೂ ಬಿಜೆಪಿ ಹುಳುಕು ಹುಡುಕುವುದು ಜಾಯಮಾನವಾಗಿದೆ ಎಂದು ಕಿಡಿಕರಿದರು.

ಕೊಹ್ಲಿ ಎಲ್ಲರಿಗೂ ಮಾದರಿ: ಶ್ರೀಲಂಕಾ ತಂಡದ ಕ್ರಿಕೆಟಿಗ ರೋಶನ್ ಸಿಲ್ವಾ

Tuesday, March 20th, 2018
virat-kohli

ಮಂಗಳೂರು: ಭಾರತ ಕಿಕಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಅದ್ಭುತ ಆಟದ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ರೀಲಂಕಾ ತಂಡದ ಟೆಸ್ಟ್ ಕ್ರಿಕೆಟಿಗ ರೋಶನ್ ಸಿಲ್ವಾ ಹೇಳಿದ್ದಾರೆ. ಮಂಗಳೂರು ಪ್ರೀಮಿಯರ್ ಲೀಗ್ ಉದ್ಘಾಟನೆಗೆ ನಗರಕ್ಕೆ ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಅತ್ಯದ್ಭುತ ಆಟಗಾರ, ನಾಯಕನಾಗಿ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಬಲ್ಲ ಚಾಕಚಕ್ಯತೆಯುಳ್ಳವರು ಮಾತ್ರವಲ್ಲ ಶ್ರಮಜೀವಿ. ಕೆಲವು ಸಂದರ್ಭ ಇಡೀ ತಂಡ ಮಾಡಬೇಕಾದ ರನ್‌ಗಳನ್ನು ಏಕಾಂಗಿಯಾಗಿ ಸಂಪಾದಿಸಿ ತಂಡದ ವಿಜಯಕ್ಕೆ ಕಾರಣರಾಗಿದ್ದಾರೆ ಎಂದು […]

ಸುರತ್ಕಲ್‌ನಲ್ಲಿ ರಾಹುಲ್ ಗಾಂಧಿ… ಮೋದಿ ವಿರುದ್ಧ ತೀವ್ರ ವಾಗ್ದಾಳಿ

Tuesday, March 20th, 2018
rahul-surathakal

ಮಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಪ್ರವಾಸದಲ್ಲಿದ್ದು, ಇಂದು ಕರಾವಳಿಯ ಸುರತ್ಕಲ್‌ಗೆ ಭೇಟಿ ನೀಡಿದರು. ಇಲ್ಲಿ ನಡೆದ ಬೃಹತ್‌ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕ‌‌ ಬಸವಣ್ಣ, ನಾರಾಯಣ ಗುರುಗಳು ನಡೆದಾಡಿದ ನಾಡು. ಅವರ ತತ್ವಾದರ್ಶನಗಳನ್ನು ತಮ್ಮ ಭಾಷಣದಲ್ಲಿ ಪ್ರಯೋಗಿಸುವ ಮೋದಿ ಸುಳ್ಳು ಹೇಳುತ್ತಲೇ ಬರುತ್ತಾರೆ. ಬಸವಣ್ಣನ ನುಡಿದಂತೆ ನಡೆ ತತ್ವದಂತೆ ಮೋದಿಯವರೇ ನೀವು ನಡೆದುಕೊಳ್ಳಿ ಎಂದರು. ಪ್ರಧಾನಿಯಾಗುವ ಮುನ್ನ ಪ್ರತಿಯೊಬ್ಬರ […]

ಬ್ರಹ್ಮಕಲಶೋತ್ಸವಗಳಿಂದ ಶಕ್ತಿಸಂಚಯನ: ಡಾ. ಡಿ. ವೀರೇಂದ್ರ ಹೆಗ್ಗಡೆ

Tuesday, March 20th, 2018
veerendra-hegde

ಮೂಲ್ಕಿ: ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶ ವಿಧಿವಿಧಾನಗಳು ಕ್ಷೇತ್ರ ಸಾನ್ನಿಧ್ಯದ ಶಕ್ತಿಯನ್ನು ಸಂಚಯನಗೊಳಿಸಿ ಭಕ್ತ ಸಮುದಾಯಕ್ಕೆ ಮತ್ತು ಊರಿಗೆ ಕ್ಷೇಮವನ್ನು ಉಂಟು ಮಾಡುತ್ತವೆ, ಈ ಕಾರ್ಯದಿಂದ ನಾಡಿನ ಪ್ರಜೆಗಳಲ್ಲಿ ಒಗ್ಗಟ್ಟು ಮತ್ತು ಸಾಮೂಹಿಕ ಸಾಮರಸ್ಯದ ಶಕ್ತಿ ಉಂಟಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಪರಂಪರೆಯಲ್ಲಿ ಅಧ್ಯಾತ್ಮ ಸಂಪತ್ತು ತುಂಬಿ ತುಳುಕುತ್ತಿದೆ. ಈ […]