ಮಡಿಕೇರಿಯ ಎಫ್.ಎಮ್.ಕೆ.ಎಮ್.ಸಿ ಕಾಲೇಜು ಚಾಂಪಿಯನ್

Monday, February 19th, 2018
alwas-college

ಮೂಡಬಿದಿರೆ: ಇಂದಿನ ಪೀಳಿಗೆ ದೃಶ್ಯ ಮಾಧ್ಯಮದೆಡೆಗಿನವ್ಯಾಮೋಹದಿಂದಇಲ್ಲವೇ ಹಣ ಗಳಿಸುವುದಕ್ಕಾಗಿಪತ್ರಿಕೋದ್ಯಮಕ್ಕೆ ಬರುತ್ತಿದ್ದಾರೆ, ಸೇವಾ ಮನೋಭಾವ ಉಳ್ಳವರ ಸಂಖ್ಯೆಕ್ಷೀಣಿಸುತ್ತಿದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಂಚಾಲಕ ಶಶಿಧರ್ ಶೆಟ್ಟಿ ತಿಳಿಸಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಹಾಗೂ ಪದವಿ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ಮೀಡಿಯಾ ಬಝ್ó 2018ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ನಂತರ ಪತ್ರಿಕಾರಂಗ ಪತ್ರಿಕಾಉದ್ಯಮವಾಗಿರೂಪಾಂತರಗೊಂಡಿದೆ. ಉದ್ಯಮದೆಡೆಗೆ ಸಾಗುತ್ತಾ ನಮ್ಮ ಮಾಧ್ಯಮಗಳು ಸುದ್ದಿ ಮೌಲ್ಯತೆ ಕಳೆದುಕೊಳ್ಳುತ್ತಿವೆ. ನಾವೇ ಮೊದಲು ಸುದ್ದಿ ನೀಡಬೇಕೆಂಬ ಆತುರತೆ, ಯಾವುದೇ ವಿಷಯವನ್ನು ಪರಿಪೂರ್ಣವಾಗಿ ತಿಳಿದುಕೊಳ್ಳುವ […]

ಅಮಿತ್ ಷಾ ಪ್ರವಾಸದ ತಿಳಿದು ಕಾಂಗ್ರೆಸ್‌ ಹುಲಿಗಳು ಗುಹೆ ಸೇರಿವೆ: ನಳಿನ್‌ ಕಟೀಲ್ ಲೇವಡಿ

Monday, February 19th, 2018
nalin-kumar

ಮಂಗಳೂರು: ಅಮಿತ್ ಷಾ ನಾಳೆ ಕರಾವಳಿಯಲ್ಲಿ ಪ್ರವಾಸ ಕೈಗೊಳ್ಳಲಿರುವ ಮಾಹಿತಿ ತಿಳಿದು ಕಾಂಗ್ರೆಸ್ ಹುಲಿಗಳು ಗುಹೆ ಸೇರಿದ್ದಾರೆ ಎಂದು ಬಿಜೆಪಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಲೇವಡಿ ಮಾಡಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ನಾಳೆ ಅಮಿತ್ ಷಾ ಕರಾವಳಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವಿಷಯ ತಿಳಿದ ಕಾಂಗ್ರೆಸ್ ಹುಲಿಗಳು ಗುಹೆ ಸೇರಿಕೊಂಡಿದ್ದಾರೆ. ಷಾ ಬಗ್ಗೆ ಕಾಂಗ್ರೆಸ್ ಮುಖಂಡರು ಬೇರೆ ಬೇರೆ ಹೇಳಿಕೆ ನೀಡುತ್ತಿರುತ್ತಾರೆ. ಈ ಹೇಳಿಕೆಗಳಿಂದಲೇ ಅಮಿತ್ ಷಾ ಬಗ್ಗೆ ‌ಕಾಂಗ್ರೆಸ್‌ಗೆ ಭಯವಿದೆ‌ ಎಂದು […]

ಬಿಜೆಪಿಯವರು ಚುನಾವಣಾ ಆಯೋಗವನ್ನು ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದಾರಾ?

Monday, February 19th, 2018
u-t-kader

ಮಂಗಳೂರು: ರಾಜ್ಯದ ವಿಧಾನಸಭೆ ಚುನಾವಣೆ ಘೋಷಣೆಯ ದಿನಾಂಕವನ್ನು ಮಾರ್ಚ್‌ ಅಂತ್ಯದವರೆಗೆ ಮುಂದೂಡುವಂತೆ ಆಹಾರ ಸಚಿವ ಯು.ಟಿ. ಖಾದರ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಚುನಾವಣೆ ಘೋಷಣೆ ದಿನಾಂಕವನ್ನು ಮುಂದೂಡಿದಂತೆ ಇಲ್ಲಿಯೂ ಮುಂದೂಡಬೇಕು. ಗುಜರಾತ್‌‌ನಲ್ಲಿ ಕೇವಲ 20 ದಿನ ಇರುವಾಗ ಹಾಗೂ ಹಿಮಾಚಲ ಪ್ರದೇಶದಲ್ಲಿ 30 ದಿನ ಇರುವಾಗ ಚುನಾವಣೆ ಘೋಷಣೆಯಾಗಿತ್ತು. ಇನ್ನು ಚುನಾವಣೆಗೆ ಒಂದು ವಾರ ಇರುವಾಗ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿತ್ತು […]

ಮಂಗಳೂರು ಬೃಹತ್ ಉದ್ಯೋಗ ಮೇಳ

Saturday, February 17th, 2018
udyoga-mela

ಮಂಗಳೂರು :ಮಂಗಳೂರು ಬೃಹತ್ ಉದ್ಯೋಗ ಮೇಳಕ್ಕೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ ಜಿಲ್ಲಾ ಉಸುವಾರಿ ಸಚಿವ ಬಿ ರಮಾನಾಥ್ ರೈ ಚಾಲನೆ ನೀಡಿದರು. ಮಂಗಳೂರು ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಇಂದು ನಡೆದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಉದ್ಯೋಗ ಮೇಳವು ಅನೇಕ ನಿರುದ್ಯೋಗಿಗಳ ಬಾಳಲ್ಲಿ ನವಚೇತನವನ್ನು ಮೂಡಿಸುವ ಕೆಲಸವನ್ನು ಮಾಡುವುದರಿಂದ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಅವರವರ ನೈಪುಣ್ಯತೆ ಹಾಗೂ ಪ್ರತಿಭೆಗಳಿಗೆ ಸಂಬಂಧಪಟ್ಟು ನಡೆಯುತ್ತದೆ ಬದಲಾಗಿ ಯಾವುದೇ ಅಂಕಗಳು ಇಲ್ಲಿ […]

ಬಸ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ; ಇಬ್ಬರು ಆಸ್ಪತ್ರೆಗೆ

Saturday, February 17th, 2018
assaulted

ಮಂಗಳೂರು: ಚಲಿಸುತ್ತಿದ್ದ ಬಸ್‌ ಅಡ್ಡಗಡ್ಡಿ ಒಳನುಗ್ಗಿದ ಗುಂಪೊಂದು ಐವರು ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗಾ ಥಳಿಸಿ ಪರಾರಿಯಾದ ಕಳವಳಕಾರಿ ಘಟನೆ ತಲಪಾಡಿ ಜಂಕ್ಷನ್‌ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ತಲಪಾಡಿ ನಡುವೆ ಸಂಚರಿಸುವ ಖಾಸಗಿ ಬಸ್ ತಡೆದ ಕೇರಳ ಹೊಸಂಗಡಿ ಮೂಲದ ತಂಡ ಹಲ್ಲೆ ನಡೆಸಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ಐವರ ಪೈಕಿ ಇಬ್ಬರು ಕುಂಜತ್ತೂರು ನಿವಾಸಿ ಇಮ್ರಾನ್ ಮತ್ತು ಫಯಾಝ್ ಎನ್ನುವವರು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರೂ ಮಿಲಾಗ್ರಿಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. […]

ಪೊಲೀಸ್‌ ಫೋನ್‌ ಇನ್‌

Saturday, February 17th, 2018
police

ಮಂಗಳೂರು : ಬಲ್ಮಠ ನ್ಯೂ ರೋಡ್‌ನ‌ಲ್ಲಿ ಪೊಲೀಸರು ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಏಕ ಮುಖ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗಿದ್ದು, ಶುಕ್ರವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಈ ಕುರಿತಂತೆ ಹಲವಾರು ಮಂದಿ ಕರೆ ಮಾಡಿ ತಮ್ಮ ಅಹವಾಲುಗಳನ್ನು ಮಂಡಿಸಿದರು. ಈ ರಸ್ತೆಯಲ್ಲಿ ಫಳ್ನೀರ್‌ನ ಅವೇರಿ ಜಂಕ್ಷನ್‌ನಿಂದ ಜ್ಯೋತಿ ಜಂಕ್ಷನ್‌ ಕಡೆಗೆ ವಾಹನ ಸಂಚಾರವನ್ನು ನಿಷೇಧಿಸಿರುವುದರಿಂದ ತಮಗೆ ಜ್ಯೋತಿ ಜಂಕ್ಷನ್‌ ಕಡೆಗೆ ಹೋಗಲು ಸುಮಾರು ಒಂದು ಕಿಲೋ ಮೀಟರ್‌ ಸುತ್ತು ಬಳಸಿ […]

ಪ್ರಿಯಾ ವಾರಿಯರ್ ಕಣ್ಣೋಟಕ್ಕೆ ಜಾರಿ ಬಿದ್ದ ಮಂಗಳೂರು ಕಾರ್ಪೊರೇಟರ್

Saturday, February 17th, 2018
priya-varier

ಮಂಗಳೂರು: ಕೇರಳದ ಚೆಲುವೆ ಪ್ರಿಯಾ ಪ್ರಕಾಶ ವಾರಿಯರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡುತ್ತಿದ್ದಾರೆ. ತನ್ನ ಕಣ್ಣೋಟದಿಂದ ಭಾರತದ ಉದ್ದಗಲಕ್ಕೂ ಸಂಚಲನ ಸೃಷ್ಠಿಸಿದ್ದಾರೆ ಪ್ರಿಯಾ. ಈ ಮಲೆಯಾಳಿ ಬೆಡಗಿಯ ಕೆಣಕುವ ಕಣ್ಣೋಟಕ್ಕೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಕೂಡ ಫಿದಾ ಆಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದಾಗ ಕಾರ್ಪೊರೇಟರ್ ಒಬ್ಬರು ಪ್ರಿಯಾ ಪ್ರಕಾಶ್ ವಾರಿಯರ್ ಕುಡಿನೋಟಕ್ಕೆ ಮರುಳಾಗಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ […]

ಕರಾವಳಿಯಲ್ಲಿ ರಂಗೇರಿದ ಚುನಾವಣಾ ಕದನ: ಕೈ-ಕಮಲದಿಂದ ಭರ್ಜರಿ ತಯಾರಿ

Saturday, February 17th, 2018
election

ಮಂಗಳೂರು: ಕರಾವಳಿಯಲ್ಲಿ ವಿಧಾನಸಭಾ ಚುನಾವಣೆ ರಂಗೇರುತ್ತಿದೆ. ಒಂದು ಕಡೆ ಪಕ್ಷೇತರ ಅಭ್ಯರ್ಥಿಗಳು ವೈಯಕ್ತಿಕವಾಗಿ ಈಗಾಗಲೇ ಪ್ರಚಾರದಲ್ಲಿ ತೊಡಗಿದರೆ, ಮತ್ತೊಂದಡೆ ಬಿಜೆಪಿ ಮತ್ತು ಕಾಂಗ್ರೆಸ್‌‌ ಪಕ್ಷಗಳು ತಮ್ಮ ರಾಷ್ಟ್ರಮಟ್ಟದ ನಾಯಕರನ್ನು ಇಲ್ಲಿಗೆ ಬರಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಪರವಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದರೆ, ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌‌‌‌ ಶಾ ಅವರ ಸರದಿಯಾಗಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿರುವ ಅಮಿತ್‌‌‌ ಶಾ, ಫೆ. 19ರಿಂದ ಮೂರು ದಿನಗಳ ಕಾಲ ಕರಾವಳಿ […]

ಉಪ್ಪಿನಂಗಡಿಯಲ್ಲಿ ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್

Saturday, February 17th, 2018
gang-rape

ಮಂಗಳೂರು: ದಲಿತ ಯುವತಿಯ ಮೇಲೆ ಯುವಕರಿಬ್ಬರು ಅತ್ಯಾಚಾರ ನಡೆಸಿದ ಪೈಶಾಚಿಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದೆ. ಗುರುವಾರ ತಡ ರಾತ್ರಿ ಈ ಘಟನೆ ನಡೆದಿದ್ದು ದಲಿತ ಯುವತಿಯ ಮೇಲೆ ಕಾಮುಕರು ನೆಲ್ಯಾಡಿ ಎಂಬಲ್ಲಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಗುರುವಾರ ರಾತ್ರಿ ಬೆಟ್ಟಂಪಾಡಿಯ ಯುವತಿಯೋರ್ವಳನ್ನು ಕರೆತಂದು ನೆಲ್ಯಾಡಿ ಬಳಿಯ ಖಾಲಿ ಮನೆಯೊಂದರಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ತಡರಾತ್ರಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಯುವತಿಯನ್ನು […]

ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ದರೋಡೆಗೆ ಸಂಚು: ಮೂವರ ಬಂಧನ

Saturday, February 17th, 2018
arrested

ಮಂಗಳೂರು: ಪಣಂಬೂರು ಕುದುರೆಮುಖ ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಹಣ ಹಾಗೂ ಚಿನ್ನಾಭರಣ ದರೋಡೆಗೆ ಸಂಚು ರೂಪಿಸುತ್ತಿದ್ದ ತಂಡದ ಮೇಲೆ ಶುಕ್ರವಾರ ದಾಳಿ ಮಾಡಿರುವ ಪಣಂಬೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಉಡುಪಿ ಅಂಬಲಪಾಡಿಯ ಪ್ರದೀಪ್ ಕುಮಾರ್ ಯಾನೆ ಪ್ರದೀಪ್ ಮೆಂಡನ್ (47), ಕುದ್ರೋಳಿ ಬೆಂಗ್ರೆಯ ಸುನೀಲ್ (20), ಬೋಳಾರದ ಚರಣ್ (32) ಬಂಧಿತ ಆರೋಪಿಗಳು. ಭರತ್ ಮತ್ತು ನವೀನ್ ಎಂಬವರ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ […]