ಪ್ರೇಯಸಿ ಜೊತೆ ವಿವಾಹಿತ ಆತ್ಮಹತ್ಯೆ

Tuesday, April 16th, 2019
Kiran-Sangeetha

ಮಂಗಳೂರು: ವಿವಾಹಿತ ಯುವಕನೊಬ್ಬ ಪ್ರೇಯಸಿಯ  ಜೊತೆಗೆ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಸುದಮುಗೇರಿ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಬಾಡಿಗೆ ಮನೆಯಲ್ಲಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಣ್ಸೇಕಟ್ಟೆ ನಿವಾಸಿ ಕಿರಣ್ (30), ಲಾಯಿಲ ನಿವಾಸಿ ಸಂಗೀತ (15) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ . ಕಿರಣ್ಗೆ ಎರಡು ಮದುವೆಯಾಗಿದ್ದು, ಪ್ರೇಯಸಿಯನ್ನು ಅಪ್ರಾಪ್ತೆ ಎನ್ನಲಾಗಿದೆ.  ಕಿರಣ್ ಆಕೆಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಎನ್ನಲಾಗುತ್ತಿದೆ.  ಇನ್ನು ಕಿರಣ್ ಪಿಟ್ಟರ್ ಕೆಲಸ ನಿರ್ವಹಿಸುತ್ತಿದ್ದ. ಬಾಲಕಿ ಹತ್ತನೇ ತರಗತಿಯನ್ನು ಅರ್ಧದಲ್ಲಿ ಬಿಟ್ಟಿದ್ದಳು‌. […]

ಕಾರು-ಸ್ಕೂಟರ್ ಢಿಕ್ಕಿ: ಕ್ರಿಕೆಟ್ ಆಟಗಾರ ಮೃತ್ಯು

Tuesday, April 16th, 2019
Abraham

ಕಾಸರಗೋಡು : ಕಾರು ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಕರಂದಕ್ಕಾಡ್ ನಲ್ಲಿ ನಡೆದಿದೆ. ಮೃತರನ್ನು ಎರಿಯಾಲ್ ಬ್ಲಾರ ಕ್ಕೋಡ್ ನಿವಾಸಿ ಅಹ್ರಾಝ್(22) ಎಂದು ಗುರುತಿಸಲಾಗಿದೆ. ಮಲಪ್ಪುರಂನಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರು ಮತ್ತು ಎರಿಯಾಲ್ ನಿಂದ ಕಾಸರಗೋಡಿಗೆ ಬರುತ್ತಿದ್ದ ಸ್ಕೂಟರ್ ನಡುವೆ ಈ ಅಪಘಾತ ನಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಅಹ್ರಾಝ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕ್ರಿಕೆಟ್ ಆಟಗಾರನಾಗಿದ್ದ ಅಹ್ರಾಝ್ ತರಬೇತಿಗಾಗಿ ಚೆಮ್ನಾಡ್ ಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಇವರು ಕೆಲದಿನಗಳ ಹಿಂದೆ ಗಲ್ಫ್ ನಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡು […]

ನಳಿನ್ 2 ಲಕ್ಷ ಅಂತರದಲ್ಲಿ ಗೆಲುವು: ರಾಜೇಶ್ ನಾಯ್ಕ್

Tuesday, April 16th, 2019
Rajesh Naik

ಬಂಟ್ವಾಳ: ದ.ಕ.ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ ಈ ಬಾರಿ 2 ಲಕ್ಷ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಿಸಿರೋಡಿನ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 16 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದು , ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ 20ಸಾವಿರ ಅಂತರ ನೀಡುವ ವಿಶ್ವಾಸ ವಿದೆ […]

ಮಿಥುನ್ ರೈ ವಿಜಯಕ್ಕಾಗಿ ತಂದೆ ಮಹಾಬಲ ರೈ ಪ್ರಾರ್ಥನೆ

Monday, April 15th, 2019
dr-mhabala-rai

ತೊಕ್ಕೋಟು : ಉಳ್ಳಾಲ ಶ್ರೀ ಕ್ಷೇತ್ರ ಕೊಟ್ಟಾರ ಸ್ಥಾನ ಮಲರಾಯ ಕ್ಷೇತ್ರದಲ್ಲಿ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿಜಯಕ್ಕಾಗಿ ತಂದೆ ಡಾ ಮಹಾಬಲ ರೈ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ಉಳ್ಳಾಲ ನಗರ ಸಭಾ ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಸದಸ್ಯ ದಿನೇಶ್ ರೈ, ನಗರ ಸಭಾ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಶ್ರಫ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶ್ರೀಮತಿ ದೇವಕಿ, ಕಾಂಗ್ರೆಸ್ ಮುಖಂಡರಾದ […]

ನಳಿನ್ ಕುಮಾರ್ ಕಟೀಲ್ ಸೋಲಿಸಿ . ಜಿಲ್ಲೆಯ ಜನಪರ ಸಂಘಟನೆಗಳ ಜಂಟಿ ಮನವಿ

Monday, April 15th, 2019
cpim

ಮಂಗಳೂರು  : ಒಂದು ಕಾಲದಲ್ಲಿ ಅಭಿವೃದ್ದಿ, ಸಾಮರಸ್ಯಕ್ಕೆ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಕಳೆದ ಎರಡು ದಶಕಗಳಿಂದ ಅಭಿವೃದ್ದಿಯಲ್ಲಿ ಹಿನ್ನಡೆ ಕಾಣುತ್ತಿದೆ. ಮತೀಯ ಸಂಘರ್ಷದಿಂದ ಸಾಮರಸ್ಯಕ್ಕೆ ಧಕ್ಕೆಯಾಗಿದ್ದು ಪರಸ್ಪರ ಅಪನಂಬಿಕೆ ಹೆಚ್ಚಾಗಿದೆ. ಇದು ಇಲ್ಲಿನ ಜನಜೀವನದ ಮೇಲೆ ಗಂಭೀರ ಪರಿಣಾಮ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಈ ಸ್ಥಿತಿಗೆ ಕಳೆದ ಮೂರು ದಶಕಗಳಿಂದ ಬಿಜೆಪಿ ಸತತವಾಗಿ ಗೆಲ್ಲುತ್ತಿರುವುದೇ ಕಾರಣ. ಜಿಲ್ಲೆಯ ಜನತೆ ಈ ಬಾರಿಯ ಚುನಾವಣೆಯಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು. ದೇಶದ ಪಾಲಿಗೆ […]

ಮಿಥುನ್ ರೈ ಗೆಲ್ಲಿಸಿ, ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗೆ ಒತ್ತು ನೀಡಿ : ಡಿ.ಕೆ.ಶಿವಕುಮಾರ್

Monday, April 15th, 2019
Mithun-Rai

ಸುಳ್ಯ : ದಕ್ಷಿಣ ಕನ್ನಡ ಲೋಕಸಭಾ ಸದಸ್ಯನಾಗಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಎಂ.ರೈಯನ್ನು ಗೆಲ್ಲಿಸಿ, ನಾವೆಲ್ಲರೂ ಸೇರಿ ಸುಳ್ಯ ಪ್ರದೇಶವನ್ನು ಅಭಿವೃದ್ಧಿ ಮಾಡುವುದಲ್ಲದೆ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಬಲಿಷ್ಠವಾಗಿ ಸಂಘಟಿಸೋಣ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಸುಳ್ಯ ತಾಲೂಕಿನ ಗುತ್ತಿಗಾರು ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು. ಸುಳ್ಯ ಪ್ರದೇಶದ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ ಎಂಬುದು ತನ್ನ ಗಮನಕ್ಕೆ ಬಂದಿದ್ದು, ಈ ಬಾರಿ […]

ಎಂಡೋಪೀಡಿತ ಅಭಿಷೇಕ್, ದ್ವಿತೀಯ ಪಿ.ಯು.ಸಿ.ಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆ

Monday, April 15th, 2019
Abhishek

ಮಂಗಳೂರು : ಅಭಿಷೇಕ್, ಎಂಡೋಪಾಲನಾ ಕೇಂದ್ರ, ಕೊಲದ ವಿದ್ಯಾರ್ಥಿ ದ್ವಿತೀಯ ಪಿ.ಯು.ಸಿ. ಕಲಾವಿಭಾಗ ದಲ್ಲಿ 63 ಶೇಕಡಾ ಅಂಕ ಪಡೆದು ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿರುತ್ತಾನೆ. ಶ್ರೀ ವಸಂತ ಮತ್ತು ಶ್ರೀಮತಿ ಗಂಗರತ್ನ ಇವರ ಪುತ್ರನಾದ ಅಭಿಷೇಕ್ ಕಳೆದ ವರ್ಷ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 76% ಅಂಕ ಪಡೆದು ತೇರ್ಗಡೆಯಾಗಿರುವನು. ಸೇವಾ ಭಾರತಿ (ರಿ) ಮಂಗಳೂರು ಅಭಿಷೇಕ್‌ನ ಸಾಧನೆಗೆ ಅಭಿನಂದಿಸಿದೆ. ಹಾಗೂ ಈ ಸಾಧನೆಗೈಯಲು ಸಹಕರಿಸಿದ ದ.ಕ. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಪ್ರಾಂಶುಪಾಲರು ಸರ್ಕಾರಿ […]

ವಿಪಕ್ಷೀಯರು ಭ್ರಷ್ಟಾಚಾರದ ಮೂಲಕ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದರು

Monday, April 15th, 2019
Vijayasankalpa

ಮಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮತ್ತಿತರ ಪಕ್ಷಗಳು ವಂಶೋದಯದ ಬಗ್ಗೆಯೇ ಗಮನವನ್ನು ಕೇಂದ್ರೀಕರಿಸಿವೆ. ಆದರೆ ಬಿಜೆಪಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾ ನತೆಯ ಲಾಭ ದೊರೆಯಬೇಕೆಂಬ ಅಂತ್ಯೋದಯದ ತಣ್ತೀವನ್ನು ಹೊಂದಿದೆ. ವಂಶೋ ದಯದವರು ಅವರ ಕುಟುಂಬದ ಹಿತಾಸಕ್ತಿ ಯನ್ನೇ ನೋಡಿಕೊಳ್ಳುವರು. ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮಂಗಳೂರಿನ ಕೇಂದ್ರ ಮೈದಾನದಲ್ಲಿ ಶನಿವಾರ ಬಿಜೆಪಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌-ಜೆಡಿಎಸ್‌ ಅವರ ಕುಟುಂಬಿಕರನ್ನು ಮಾತ್ರ ಅಧಿಕಾರಕ್ಕೆ ತರಲು ಯತ್ನಿಸುವರು ಎಂದರು. ವಿಪಕ್ಷೀಯರು ಭ್ರಷ್ಟಾಚಾರದ ಮೂಲಕ ದೇಶದ ಸಂಪತ್ತನ್ನು ಕೊಳ್ಳೆ […]

ಮೋದಿ ಸ್ವಾಗತಿಸಲು ಶಾಸಕ ಹರೀಶ್ ಪೂಂಜಾ ಚೌಕಿದಾರ್ ಸಮವಸ್ತ್ರ

Saturday, April 13th, 2019
Harish-poonja

ಮಂಗಳೂರು :   ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ವಿಭಿನ್ನ ರೀತಿ ಯಲ್ಲಿ ಮೋದಿ ಅವರನ್ನು ಸ್ವಾಗತಿಸಲು ತಯಾರಿ ನಡೆಸಲಾಗಿದೆ. ಈ ನಡುವೆ ಚೌಕಿದಾರ್ ಸಮವಸ್ತ್ರ ಧರಿಸಿದ ಶಾಸಕ ಹರೀಶ್ ಪೂಂಜಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈ ಭಿ ಚೌಕಿದಾರ್ ಎಂದು ಬರೆದಿರುವ ಖಾಕಿ ಸಮವಸ್ತ್ರ, ಖಾಕಿ ಟೋಪಿ ಧರಿಸಿ ಬಿಜೆಪಿ ಕಾರ್ಯಕರ್ತರು ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ […]

ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ- ಮತದಾನ ಜಾಗೃತಿಗಾಗಿ ಜಾಥಾ

Saturday, April 13th, 2019
Srinivasa College

ಮಂಗಳೂರು : ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ ವಳಚ್ಚಿಲ್ ಹಾಗೂ ಎಸ್‌ವಿಇಇಪಿ ಸಮಿತಿಯ ಸಹಯೋಗದೊಂದಿಗೆ ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಜನ ಸಾಮಾನ್ಯರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ನಲ್ಲಿ ಮಾನವ ಸರಪಳಿ ಹಾಗೂ ಜಾಥಾ ಕಾರ್ಯಕ್ರಮವನ್ನು ವಳಚ್ಚಿಲ್ ನಲ್ಲಿ ಹಮ್ಮಿಕೊಳ್ಳಲಾಯಿತು. ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಸ್ವೀಪ್ ಘಟಕದ ಸಂಯೋಜಕರಾದ ಡಾ| ಅನಂತ ಕುಲಕರ್ಣಿಯವರು ಸ್ವಾಗತಿಸಿದರು. ಬಲವಾದ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮತದಾನ ಕೇಂದ್ರಕ್ಕೆ ತೆರಳಿ […]