ಮೀನುಗಾರಿಕಾ ಕಾಲೇಜಿನಲ್ಲಿ 3 ದಿನಗಳ ಫಿಶ್ಕೋ ಫೆಸ್ಟಿವಲ್ ಗೆ ಚಾಲನೆ

Monday, October 22nd, 2018
fishco festival

ಮಂಗಳೂರು : ನಗರದ ಮೀನುಗಾರಿಕಾ ಮಹಾವಿದ್ಯಾಲಯವು 50 ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಗೋಲ್ಡನ್ ಜೂಬಿಲಿ ಫಿಶ್ಕೋ ಫೆಸ್ಟಿವಲ್ ಗೆ ಸೋಮವಾರ ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ರವರು ಚಾಲನೆ ನೀಡಿದರು. ಕಾಲೇಜಿನ ನುರಿತ ಪ್ರಾದ್ಯಾಪಕರು ವಿಶೇಷವಾದ ಸಂಶೋದನೆ ಮಾಡುವಲ್ಲಿ ನುರಿತರಾಗಿದ್ದರೂ ಸಹಾ ಮೀನುಗಾರಿಕೆಗೆ ಪೂರಕ ಸಂಶೋದನೆಗಳನ್ನು ಮಾಡುವ ಅಗತ್ಯತೆ ಇದೆ ಎಂದು ಅವರು ಹೇಳಿದರು. ಅಲ್ಲದೇ, ಶೈಕ್ಷಣಿಕವಾಗಿ ಮಾಹಿತಿ ರವಾನಿಸಲು ಎಲ್ಲಾ ಅದ್ಯಾಪಕ ವೃಂದದವರ ಜವಾಬ್ದಾರಿಯಾಗಿರುತ್ತದೆ ಎಂದು […]

ಡಿಸಿ ಮನ್ನಾ ಭೂಮಿ ಒತ್ತುವರಿ ತೆರವುಗೊಳಿಸಲು ಕಂದಾಯ ಇಲಾಖೆಗೆ ಡಿಸಿ ಸೂಚನೆ

Monday, October 22nd, 2018
DC-Manna land

ಮಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದವರ ಮೇಲೆ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ಸಮಾಜ ಕಲ್ಯಾಣ ಇಲಾಖೆಯು ಪ್ರಕರಣ ವಿಚಾರಣಾ ಹಂತದಲ್ಲಿ ನಿರಂತರವಾಗಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ. ಅವರು ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ದೌರ್ಜನ್ಯ ಪ್ರಕರಣಗಳ ದೂರುಗಳು ಬಂದಾಗ ವಿಳಂಭವಿಲ್ಲದೇ ದಾಖಲಿಸಬೇಕು. ಪ್ರಕರಣಗಳು ದಾಖಲಾದ ನಂತರ ವಿಚಾರಣೆಯಾಗಿ, ನೈಜ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದು […]

ಕೇರಳಕ್ಕೆ ಮರಳು ಅಕ್ರಮ ಸಾಗಾಟ: ಟಿಪ್ಪರ್, ಲಾರಿ ಮುಟ್ಟುಗೋಲು

Monday, October 22nd, 2018
Lorry

ಮಂಗಳೂರು: ಅಡ್ಯಾರ್ ಕಣ್ಣೂರಿಂದ ಕೇರಳಕ್ಕೆ ಸಾಗಿಸುತ್ತಿದ್ದ ಮರಳು ಟಿಪ್ಪರ್, ಲಾರಿಗಳನ್ನು ಸಂಚಾರಿ‌ ಪೊಲೀಸರು  ಸೋಮವಾರ ಬೆಳಗ್ಗಿನ ಜಾವ 3 ಗಂಟೆಯ ವೇಳೆಗೆ ಮುಟ್ಟುಗೋಲು ಹಾಕಿದ್ದಾರೆ. ಸಬ್ ಇನ್ ಸ್ಪೆಕ್ಟರ್ ಕಬ್ಬಲ್ ರಾಜ್ ನೇತೃತ್ವದಲ್ಲಿ ಪೊಲೀಸರು ಸೋಮವಾರ ಬೆಳಗ್ಗಿನ ಜಾವ ದಾಳಿ  ನಡೆಸಿ 10 ಚಕ್ರದ ಬೃಹತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಲಪಾಡಿ ಬಳಿ ಮುಟ್ಟುಗೋಲು ಹಾಕಿಕೊಂಡರು. ತಲಪಾಡಿ ದೇವಿನಗರ ಮೂಲಕ ಕೇರಳಕ್ಜೆ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಮರಳನ್ನು ಅಕ್ರಮವಾಗಿ ಟಿಪ್ಪರ್ ನಲ್ಲೂ ಸಾಗಿಸಲಾಗುತ್ತಿತ್ತು. ಟಿಪ್ಪರನ್ನೂ ಪೊಲೀಸರು ವಶಕ್ಕೆ […]

ಯೋಗಾಸನ ಸ್ಪರ್ಧೆ: ಆಳ್ವಾಸ್‍ನ ಐವರು ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Monday, October 22nd, 2018
alwas-clg

ಮೂಡುಬಿದಿರೆ: ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ಪ್ರಶಸ್ತಿ ಅದರಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕನ್ನಡ ಮಾಧ್ಯಮ ಐವರು ವಿದ್ಯಾರ್ಥಿಗಳು ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸಿ, ನವೆಂಬರ್‍ನಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 14ರ ವಯೋಮಿತಿಯ ಬಾಲಕರ ವಿಭಾಗದ ಗುಂಪು ಯೋಗದಲ್ಲಿ ಆಳ್ವಾಸ್‍ನ ಸಂಜು ಮುತ್ತಪ್ಪ , 17ರ ವಯೋಮಿಯ ಬಾಲಕರ ವಿಭಾಗದಲ್ಲಿ ಅಥ್ಲೇಟಿಕ್ ಯೋಗದಲ್ಲಿ ಮಿಲನ್ ಲೋಕೇಶ್ , ರಿದೇಮಿಕ್ ಯೋಗಾ ಪವನ್ […]

ಶಿಷ್ಯವೇತನ ಪಾವತಿಸದ ವಿರುದ್ಧ ವೈದ್ಯ ವಿದ್ಯಾರ್ಥಿಗಳು ನಗರದ ವೆನ್ಲಾಕ್ ಆಸ್ಪತ್ರೆ ಎದುರು ಪ್ರತಿಭಟನೆ

Monday, October 22nd, 2018
wenlock1

ಮಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸೌಲಭ್ಯ ಪಡೆಯುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಸರ್ಕಾರಿ ಕೋಟಾದ ಗೃಹ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ 8 ತಿಂಗಳಿನಿಂದ ಶಿಷ್ಯವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿ ಇಂದು ವೈದ್ಯ ವಿದ್ಯಾರ್ಥಿಗಳು ನಗರದ ವೆನ್ಲಾಕ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು‌. ಈ ಬಗ್ಗೆ ಮಾತನಾಡಿದ ವೈದ್ಯ ವಿದ್ಯಾರ್ಥಿಗಳು, ದಿನದ 24 ಗಂಟೆಗಳ ಕಾಲ ದುಡಿಯುತ್ತೇವೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬ ಭೀತಿಯಿದೆ. ಆದರೂ ನಾವು ಎಲ್ಲಾ ರೀತಿಯಲ್ಲಿ ರೋಗಿಗಳ ಶುಶ್ರೂಷೆಯನ್ನು ಮಾಡುತ್ತಿದ್ದೇವೆ. ಸರ್ಕಾರಿ […]

ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಆಗಿ ಅಣ್ಣಾಮಲೈ ಅಧಿಕಾರ ಸ್ವೀಕಾರ

Monday, October 22nd, 2018
annamalai

ಬೆಂಗಳೂರು: ದಕ್ಷಿಣ ವಿಭಾಗ ಡಿಸಿಪಿ ಆಗಿ ಅಣ್ಣಾಮಲೈ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಖಡಕ್ ಆಫೀಸರ್ ಅಂತಾನೇ ಫೇಮಸ್ ಆಗಿರುವ ಅಣ್ಣಾಮಲೈ ಅವರನ್ನು ರಾಜ್ಯ ಸರ್ಕಾರ ಸಿಟಿಗೆ ಚಾರ್ಜ್ ತೆಗೆದುಕೊಳ್ಳುವಂತೆ ಸೂಚಿಸಿದೆ. ಇನ್ನು ನಿರ್ಗಮಿತ ಡಿಸಿಪಿ ಡಾ. ಶರಣಪ್ಪ ಎಸ್.ಡಿ. ಅವರು ಅಣ್ಣಾಮಲೈ ಅವರನ್ನು ಸ್ವಾಗತಿಸಿದ್ದಾರೆ. ಇನ್ನು ಅಣ್ಣಾಮಲೈ ಅಧಿಕಾರ ಸ್ವೀಕಾರ ಮಾಡಿದ ದಿನವೇ ಎಲ್ಲಾ ಠಾಣೆಗಳಿಗೆ ತೆರಳಿ ಸಿಬ್ಬಂದಿ ಜೊತೆ ಮಾತುಕತೆ ನಡೆಸಿದ್ದಾರೆ.

ಮೀ ಟೂ: ನನಗೆ ಗೊತ್ತಿಲ್ಲದೇ ಇರೋ ವಿಷಯದ ಬಗ್ಗೆ ಮಾತಾಡಲ್ಲ: ಸಚಿವೆ ಜಯಮಾಲ

Monday, October 22nd, 2018
jayamala

ಶಿವಮೊಗ್ಗ: ಮೀ ಟೂ ವಿಷಯದ ಬಗ್ಗೆ ಕಾಮೆಂಟ್ ಮಾಡಲ್ಲ.‌ ನನಗೆ ಗೊತ್ತಿಲ್ಲದೇ ಇರೋ ವಿಷಯದ ಬಗ್ಗೆ ಮಾತಾಡಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮೀ ಟೂ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿ ಉತ್ತರ ಕೊಡಿ ಎಂದಿದ್ದಕ್ಕೆ ‘ಏನ್ರೀ ಅದು’ ಎಂದರು. ಚುನಾವಣೆ, ಇಲಾಖೆ, ಅಂಗನವಾಡಿ ಮಕ್ಕಳ‌ ಬಗ್ಗೆ ಯೋಚಿಸುತ್ತಿದ್ದೇನೆ.‌ ಸಿನಿಮಾದಲ್ಲಿ ಏನಾಗ್ತಿದೆ ಎಂದು ನಂಗೆ ಗೊತ್ತಿಲ್ಲ. ಪ್ರತಿಕ್ರಿಯೆ ಬೇಕೇಬೇಕು […]

ಮಹಿಳಾ ಪ್ರವೇಶ ವಿರೋಧಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ

Monday, October 22nd, 2018
protest

ಪುತ್ತೂರು: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕು. ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೊಲನದಲ್ಲಿ ಒಕ್ಕೊರಲಿನ ಒತ್ತಾಯ. ಪುತ್ತೂರು, ಅ. 22 ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ ತೀರ್ಪಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟುಗಿದೆ. ಧಾರ್ಮಿಕ ವಿಷಯಗಳ ತೀರ್ಪು ನೀಡುವಾಗ ಶಬರಿಮಲೆ ದೇವಸ್ಥಾನದ ತಂತ್ರಿಗಳ, ರಾಜಮನೆತನ ಮತ್ತು ಹಿಂದೂ ಧರ್ಮಚಾರ್ಯರ ಅಬಿಪ್ರಾಯ ಪಡೆಯದಿರುವುದು ದುರದೃಷ್ಟಕರವಾಗಿದೆ. ಇಂದು ದೇಶದಲ್ಲಿ […]

ನಾನು ಎಷ್ಟೋ ನಟರೊಂದಿಗೆ ನಟಿಸಿದ್ದು, ಅವರೆಂದೂ ಈ ರೀತಿ ನಡೆದುಕೊಂಡಿಲ್ಲ: ಶ್ರುತಿ ಹರಿಹರನ್

Monday, October 22nd, 2018
shruti-hariharan

ಬೆಂಗಳೂರು: ನಟಿಯರ ಮೇಲಿನ‌ ದೌರ್ಜನ್ಯಕ್ಕೆ ಚಿತ್ರರಂಗದ ಫೈರ್ ಶುರುವಾಗಿದೆ. ನಟ ಅರ್ಜುನ್‌ ಸರ್ಜಾ ವಿರುದ್ಧ ಮಿ-ಟೂ ಆರೋಪ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ನಟಿ ಶ್ರುತಿ ಹರಿಹರನ್ ಸುದ್ದಿಗೋಷ್ಟಿ ನಡೆಸಿದರು. ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಟಿ ಶೃತಿ ಹರಿಹರನ್, ನನಗೆ ಧೈರ್ಯ ನೀಡಿದ್ದು ಮಿ-ಟೂ ಅಭಿಯಾನ. ನಾನು ಎಷ್ಟೋ ನಟರೊಂದಿಗೆ ನಟಿಸಿದ್ದು, ಅವರೆಂದೂ ಈ ರೀತಿ ನಡೆದುಕೊಂಡಿಲ್ಲ. ಆದರೆ ಈ ನಟ(ಅರ್ಜುನ್ ಸರ್ಜಾ)ನೊಂದಿಗೆ ಆದ ಕೆಟ್ಟ ಅನುಭವವನ್ನು ಒಂದೂವರೆ ವರ್ಷದ ನಂತರ ಬಾಯಿ ಬಿಟ್ಟಿದ್ದೇನೆ. […]

ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋದ ನಟಿ ರಾಗಿಣಿ ದ್ವಿವೇದಿ

Monday, October 22nd, 2018
ragini-fish

ಮಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಮಂಗಳೂರು ಮೀನಿನ ಖಾದ್ಯಕ್ಕೆ ಮಾರು ಹೋಗಿದ್ದಾರೆ. ನಾನ್ವೆಜ್ ಪ್ರಿಯೆ ರಾಗಿಣಿ ಎರಡು ದಿನ ಮಂಗಳೂರಿನಲ್ಲಿದ್ದರು. ನಿನ್ನೆ ರಾತ್ರಿ ಏರ್ಪೋರ್ಟ್ಗೆ ತೆರಳುವ ವೇಳೆ ಯೆಯ್ಯಾಡಿಯ ರೆಸ್ಟೋರೆಂಟ್ಗೆ ಎಂಟ್ರಿ ಕೊಟ್ಟ ಅವರು, ಕಾನೆ ಮೀನು, ಏಡಿ, ಅಂಜಲ್, ಸಿಗಡಿ ಮತ್ತು ನೀರು ದೀಸ ಸವಿದರು. ಈ ವೇಳೆ ಬಿಗ್ ಎಫ್ಎಂ ಆರ್ಜೆ ಎರೋಲ್ ಅವರು ರಾಗಿಣಿಗೆ ಸಾಥ್ ನೀಡಿದ್ರು .