ಆ್ಯಂಬುಲೆನ್ಸ್ ಚಾಲಕರು ಕೊರೊನಾ ಹೊತ್ತುಕೊಂಡು ಸುತ್ತಾಡುವರು, ಈ ಗೂಡಂಗಡಿಗೆ ಬಂದರೆ ಏನು ಸಿಗಲ್ಲ

Wednesday, June 10th, 2020
Ambulence

ಮಂಗಳೂರು : ಸುಳ್ಯದಿಂದ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಚಾಲಕನಿಗೆ ನೀರು ನೀಡದೆ ಅವಮಾನಿನಿಂದ ಘಟನೆ ಮಂಗಳೂರಿನ ಪಲ್ನೀರ್  ರಸ್ತೆಯಲ್ಲಿ ನಡೆದಿದೆ. ಅಭಿಲಾಷ್ ಎನ್ನುವ ಅಂಬ್ಯುಲೆನ್ಸ್ ಡೈವರ್ ಸುಳ್ಯದಿಂದ ರೋಗಿಯೊಬ್ಬರನ್ನು ಬೆಳಗ್ಗಿನ ಜಾವ 4.30 ರ ವೇಳೆಗೆ ವೆನ್ ಲಾಕ್ ಆಸ್ಪತ್ರೆಗೆ ಕರೆತಂದಿದ್ದರು, ಅಂಬ್ಯುಲೆನ್ಸ್ ನಲ್ಲಿದ್ದ ರೋಗಿಯ ಸಂಬಂಧಿಕರೊಬ್ಬರಿಗೆ ಬಾಯಾರಿಕೆಯಾದ ಹಿನ್ನಲೆ ಮೋತಿಮಹಲ್ ಎದುರುಗಡೆ ಇರುವ ಜನಧ್ವನಿ ಕೇಂದ್ರದ ಗೂಂಡಂಗಡಿಯಲ್ಲಿ ನೀರು ಕೇಳಿದ್ದರು. ಆ್ಯಂಬುಲೆನ್ಸ್ ಚಾಲಕರು ನಮ್ಮ ಅಂಗಡಿಗೆ ಬರವುದು ಬೇಡ,  ಕೊರೊನಾ ವಾರಿಯರ್ ಈ ಗೂಡ ಅಂಗಡಿಗೆ ಬಂದರೆ ಏನು […]

ಮುಳ್ಳು ಹಂದಿ ದಾಳಿ ನಡೆಸಿ ಬೈಕ್​ ಸವಾರನಿಗೆ ಗಾಯ

Wednesday, June 10th, 2020
hedgehog

ಮಂಗಳೂರು: ಬೈಕ್ನಲ್ಲಿ ಸ್ನೇಹಿತನ ಜೊತೆ ತೆರಳುತ್ತಿದ್ದ ಯುವಕನ ಮೇಲೆ ಮುಳ್ಳು ಹಂದಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ನಾಡು ಗ್ರಾಮದಲ್ಲಿ ನಡೆದಿದೆ. 16 ವರ್ಷದ ಶಫೀಕ್ ಮುಳ್ಳುಹಂದಿಯಿಂದ ದಾಳಿ ಗಾಯಗೊಂಡ ಯುವಕ. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಶಫೀಕ್ ತನ್ನ ಸ್ನೇಹಿತನ ಜತೆ ಸಾಲೆತ್ತೂರಿನಿಂದ ಕರೈಗೆ ಬೈಕಿನಲ್ಲಿ ಹೋಗುತ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಬಂದ ಮುಳ್ಳುಹಂದಿ ಬೈಕ್‌ನಲ್ಲಿ ತೆರಳುತ್ತಿದ್ದವರ ಮೇಲೆ ದಾಳಿ ಮಾಡಿದೆ. ಹೀಗಾಗಿ ಶಫೀಕ್‌ನ ಕಾಲಿಗೆ ಮುಳ್ಳುಹಂದಿಯ ಮುಳ್ಳುಗಳು […]

ಸಾರ್ವಜನಿಕ ಸ್ಥಳದಲ್ಲಿ ಪಾನ್ ತಿಂದವರ ಮೇಲೆ 32 ಕೇಸು ದಾಖಲು 

Tuesday, June 9th, 2020
tobaco

ಮಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಮಸಾಲ ತಿನ್ನುವವರ ವಿರುದ್ಧ ಕಾರ್ಯಾಚರಣೆ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಗಳು, 32 ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆಯ ತಂಡವು ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಕೋಪ್ಟಾ -2003 ಕಾಯಿದೆ ಉಲ್ಲಂಘನೆ ವಿರುದ್ದ ನಗರದ ಹೊರವಲಯದ ದೇರಳಕಟ್ಟೆ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿತು. ಈ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಾದ ಬಸ್‍ಸ್ಟಾಂಡ್, ರಸ್ತೆ ಬದಿಗಳಲ್ಲಿ, ಅಂಗಡಿ ವಠಾರ ಮತ್ತಿತರ ಸ್ಥಳಗಳಲ್ಲಿ […]

ಕುದುರೆಮುಖ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಧರ್ಮಸ್ಥಳದ ಮೂಲಕ ಸಾಗುವ ನೇತ್ರಾವತಿ ನದಿಗೆ ಕಾಯಕಲ್ಪ

Thursday, June 4th, 2020
netravathi

ಧರ್ಮಸ್ಥಳ : ನದಿಗಳು ನಿತ್ಯ ಚಲನಶೀಲವಾಗಿದ್ದು ಕ್ರಿಯಾಶೀಲ ವಾಗಿರುತ್ತವೆ. ನದಿಗಳ ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ಹಲವು ನದಿ-ತೊರೆಗಳನ್ನು ಸೇರಿಸಿಕೊಂಡು ತಮ್ಮಉಭಯ ಮಗ್ಗುಲುಗಳಲ್ಲಿ ಜನರಿಗೆ ಉಪಯುಕ್ತ ವಾಗುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎಂದೇ ಕರೆಯಲ್ಪಡುವ ನೇತ್ರಾವತಿ ನದಿಯ ಉಗಮಸ್ಥಾನ ಕುದುರೆಮುಖ ಪರ್ವತ ಶ್ರೇಣಿಯ ಎಳನೀರು ಘಾಟಿಯ ಬ೦ಗ್ರ ಬಲಿಗೆ ಕಣಿವೆ ಆಗಿದೆ. ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದ ಮೂಲಕ ಹರಿದು ಹೋಗುವ ನೇತ್ರಾವತಿ ನದಿ ಪುಣ್ಯನದಿ ಎಂದು ಮಾನ್ಯತೆ ಹೊಂದಿದ್ದು ಧರ್ಮಸ್ಥಳಕ್ಕೆ ಬರುವ ಭಕ್ತರು ನದಿಸ್ನಾನ ಮಾಡಿ ದೇವರ […]

ಸರಕಾರಿ ಸಾಲಮನ್ನಾದ ಹೆಚ್ಚಿನ ಲಾಭ ಪಡೆದವರು ದಕ್ಷಿಣ ಕನ್ನಡ, ಉಡುಪಿ ಮೀನುಗಾರರು

Sunday, May 31st, 2020
fishing

ಭಟ್ಕಳ : ರಾಜ್ಯ ಸರಕಾರ ಘೋಷಣೆ ಮಾಡಿದ್ದ ಮೀನುಗಾರರ ಸಾಲಮನ್ನಾದ ಲಾಭವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯ ಮೀನುಗಾರರೇ ಹೆಚ್ಚಿನ ಪ್ರಮಾಣದಲ್ಲಿ ಪಡೆದಿದ್ದಾರೆ ಎಂದು ಇಲ್ಲಿಯ ಮೀನುಗಾರರ ಮುಖಂಡ ವಸಂತ ಖಾರ್ವಿ ಹೇಳಿದ್ದಾರೆ. ಅವರು ನಗರದ ಮಾವಿನಕುರ್ವೆ ಬಂದರಿನ ಬೋಟ್‌ ಯೂನಿಯನ್‌ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಸಮುದಾಯದವರಿಗೂ ನೆರವು ನೀಡುತ್ತಿದೆ. ಆದರೆ ಮೀನುಗಾರರನ್ನು ಕಡೆಗಣಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ. ಮೀನು ಕ್ಷಾಮ ಕಳೆದೆರಡು ವರ್ಷಗಳಿಂದ ಮೀನುಗಾರರನ್ನು […]

ಜಗದೀಶ ಶೆಟ್ಟರ್‌, ಜೋಶಿ ಮುಖ್ಯಮಂತ್ರಿ ಮಾಡಲು ತಂತ್ರ !

Sunday, May 31st, 2020
satish-jakkaraholi

ಹುಬ್ಬಳ್ಳಿ : ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಪ್ರಹ್ಲಾದ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಸರಕಾರದಲ್ಲಿ ಸಚಿವರಾಗಿರುವ ಜಗದೀಶ ಶೆಟ್ಟರ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಬೆಳಗಾವಿಯಲ್ಲಿ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಹೆಚ್ಚಿಸಿದೆ. ಬೆಳಗಾವಿಯಲ್ಲಿ ಈ ಕುರಿತು ಮಾತನಾಡಿರುವ ಜಾರಕಿಹೊಳಿ, ಬಿಜೆಪಿಯ ಕೆಲ ನಾಯಕರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಗ್ಗೆ ಬಿಜೆಪಿಯ […]

ಖಾಸಗಿ ಬಸ್‌ ಓಡುವ ಮಾರ್ಗದಲ್ಲಿ ಸರಕಾರಿ ಬಸ್‌ ಸಂಚಾರ ಬೇಡ

Friday, May 29th, 2020
tumakuru bus

ತುಮಕೂರು : ಲಾಕ್‌ ಡೌನ್‌ ಘೋಷಣೆಯಾದ ಮಾರ್ಚ್ 24 ರಿಂದ ಖಾಸಗಿ ಬಸ್‌ ಗಳು ರಸ್ತೆಗಿಳಿದಿಲ್ಲ ನಾವೆಲ್ಲರೂ ಸಂಕಷ್ಟದಲ್ಲಿದ್ದೇವೆ ಎಂದು ಖಾಸಗಿ ಬಸ್‌ ಮಾಲೀಕರ ಸಂಘದವರು ಗೋಳು ತೋಡಿಕೊಂಡಿದ್ದಾರೆ. ತಮ್ಮ ಹಲವಾರು ಬೇಡಿಕೆಗಳನ್ನು ಸರಕಾರದ ಮುಂದೆ ಸಲ್ಲಿಸಿರುವ ಖಾಸಗಿ ಬಸ್‌ ಮಾಲೀಕರು ತಮ್ಮ ಬೇಡಿಕೆ ಈಡೇರಿಕೆಯ ಬಗ್ಗೆ ಸರಕಾರದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ. ಅವರ ಬೇಡಿಕೆಗಳೆಂದರೆ : ಖಾಸಗಿ ಬಸ್‌ ಸಂಚಾರಕ್ಕೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು.ಡಿಸೆಂಬರ್‌ ವರೆಗೆ ತೆರಿಗೆ ಪಡೆಯಲು ವಿನಾಯಿತಿ ನೀಡಬೇಕು. ಡಿಸೆಂಬರ್‌ […]

ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 164ಕ್ಕೆ ಎರಿಕೆ, ಶುಕ್ರವಾರ 15 ಹೊಸ ಸೋಂಕು ಪ್ರಕರಣ ಪತ್ತೆ

Friday, May 29th, 2020
Udupi-covid

ಉಡುಪಿ: ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 164ಕ್ಕೆ ಎರಿಕೆಯಾಗಿದ್ದು, ಶುಕ್ರವಾರ 15 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಸೋಂಕಿತರಲ್ಲಿ ಇಬ್ಬರು ಹತ್ತು ವರ್ಷಕ್ಕಿಂದ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರೆ, ಇಬ್ಬರು 60 ವರ್ಷಕ್ಕಿಂದ ಮೇಲ್ಪಟ್ಟ ವೃದ್ಧರೂ ಸೇರಿದ್ದಾರೆ. ಇಂದಿನ ಎಲ್ಲಾ 14 ಪ್ರಕರಣಗಳೂ ಕೂಡಾ ಮಹಾರಾಷ್ಟ್ರದಿಂದ ಬಂದವರಿಂದಲೇ ವರದಿಯಾಗಿದೆ. ಇವರೆಲ್ಲರನ್ನೂ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಇವರಲ್ಲಿ ಗ್ರೀನ್ ಜೋನ್ ನಲ್ಲಿದ್ದ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುತ್ತಿರುವವರಿಂದ ಸೋಂಕು ಪ್ರಕರಣ ಹೆಚ್ಚುತ್ತಿದೆ. ಕೇರಳ, ತೆಲಂಗಾಣ ಪ್ರಯಾಣಿಕರಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಆದರೆ ಮಹಾರಾಷ್ಟ್ರದ […]

ಹುಬ್ಬಳ್ಳಿಗೆ ಇನ್ಮೇಲೆ ವಿಮಾನ ಬರಲ್ಲ, ಇಲ್ಲಿಂದ ಹೋಗಲ್ಲ

Friday, May 29th, 2020
star Airlines

ವರದಿ: ಶಂಭು, ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ- ಹುಬ್ಬಳ್ಳಿ: ಲಾಕ್ ಡೌನ್‌ ನಿಂದ ಎರಡು ತಿಂಗಳುಗಳ ಕಾಲ ಬಂದ್‌ ಆಗಿದ್ದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ಮೂರು ದಿನಗಳ ಹಿಂದೆ ಸ್ಟಾರ್‌ ಏರ್‌ ಲೈನ್ಸ್‌ ಸಂಸ್ಥೆಯು ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ ಮತ್ತು ಮುಂಬಯಿಗೆ ವಿಮಾನ ಸಂಚಾರ ಆರಂಭಿಸಿತ್ತು. ಆದರೀಗ ಕೇವಲ ಮೂರೇ ದಿನಗಳಲ್ಲಿ ಈ ಸಂಸ್ಥೆಯು ನಗರದಿಂದ ಸಂಚರಿಸುತ್ತಿದ್ದ ತನ್ನೆಲ್ಲ ವಿಮಾನಯಾನಗಳನ್ನು ದಿಢೀರ್‌ ಎಂದು ಬಂದ್‌ ಮಾಡಿದೆ. ಈ ಬಗ್ಗೆ ವಿಚಾರಿಸಿದರೆ, ಪ್ರಯಾಣಿಕರ ಕೊರತೆ ಹಾಗೂ […]

ಪಿಯುಸಿ: ಪಿಸಿಎಂಬಿ, ಇಂಗ್ಲೀಷ್‌ ಭಾಷಾ ಉತ್ತರ ಪತ್ರಿಕೆ ಮೌಲ್ಯಮಾಪನವಿಲ್ಲ

Thursday, May 28th, 2020
suresh-kumar

ಬೆಂಗಳೂರು: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಯಾವುದೇ ಉಪನ್ಯಾಸಕರ ಸುರಕ್ಷತೆಗೆ ಭಂಗ ಬಾರದ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಕೊರೋನಾ ಸೃಷ್ಟಿಸಿರುವ ಅನಿವಾರ್ಯ ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದ ರೀತಿಯಲ್ಲಿ ಮೌಲ್ಯಮಾಪನ ಕಾರ್ಯವನ್ನು ಕಾಲಮಿತಿಯಲ್ಲಿ ಪೂರೈಸಬೇಕಾದ ಅಗತ್ಯತೆಯನ್ನು ತಾವು ಸಹ ಒಪ್ಪುತ್ತೀರೆಂಬುದು ನನ್ನ ಭರವಸೆಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ. ಮೇ. 27 ರಿಂದ ಪ್ರಾರಂಭವಾಗಿರುವ ಮೌಲ್ಯಮಾಪನ ಪ್ರಕ್ರಿಯೆ ಪ್ರಸ್ತುತ ಲಭ್ಯವಿರುವ ಮೌಲ್ಯಮಾಪಕರ ಆಧಾರದ […]