ಮೇ 17 ರವರೆಗೆ ದ.ಕ. ಜಿಲ್ಲೆಯಾದ್ಯಂತ ರಾತ್ರಿ ನಿಷೇಧಾಜ್ಞೆ

Thursday, May 7th, 2020
Sindhu-roopesh

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 (ಕೋರೋನಾ ವೈರಾಣು ಕಾಯಿಲೆ 2019)ರ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರದ ಆದೇಶದಲ್ಲಿ ನೀಡಿದ ಸಡಿಲಿಕೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 (3) ರನ್ವಯ ಮೇ 4 ರಿಂದ 17 ರವರೆಗೆ ಪ್ರತಿ ದಿನ ಸಂಜೆ 7 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಧಿಸಿ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶಿಸಿರುತ್ತಾರೆ.

ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು

Tuesday, May 5th, 2020
durga balagokula

ಮಂಗಳೂರು : ಕರ್ನಾಟಕ ಕೇರಳ ಗಡಿಪ್ರದೇಶದ ತೌಡುಗೋಳಿ ಶ್ರೀ ದುರ್ಗಾ ಬಾಲಗೋಕುಲಕ್ಕೆ ಸಮಾಜ ಸೇವಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಕ್ಕಿ ಹಾಗೂ ಆಹಾರದ ಕಿಟ್ ಒದಗಿಸಿಕೊಟ್ಟು ಅಲ್ಲಿನ ಹಲವಾರು ಮಕ್ಕಳ ಹಾಗೂ ಹೆತ್ತವರ ಪ್ರೀತಿಗೆ ಪಾತ್ರರಾದರು. ಕೊರೋನಾ ಲಾಕ್‌ಡೌನ್ ನಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಹಳ್ಳಿ ಪ್ರದೇಶದ ಕೂಲಿಮಾಡಿ ಜೀವನ ನಡೆಸುವ ಮತ್ತು ಮಧ್ಯಮವರ್ಗದ ಜನರ ಸಂಕಷ್ಟ ಹೇಳತೀರದು. ಇದನ್ನು ಮನಗಂಡ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಲಾಕ್‌ಡೌನ್ ಆರಂಭದ ದಿನಗಳಿಂದಲೇ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ […]

ಮಣಿಪಾಲದ ಮದ್ಯದಂಗಡಿಯಲ್ಲಿ ವಿದ್ಯಾರ್ಥಿನಿಯರದ್ದೇ ಕ್ಯೂ

Tuesday, May 5th, 2020
udupi wine

ಉಡುಪಿ: ಮೂರನೇ ಹಂತದ ಲಾಕ್ ಡೌನ್ ನಲ್ಲಿ ಮದ್ಯದಂಗಡಿ ತೆರೆಯುತ್ತಿದಂತೆ  ಮಣಿಪಾಲದ ಹಾಸ್ಟೆಲ್, ಪಿಜಿ ಗಳಲ್ಲಿದ್ದ ವಿದ್ಯಾರ್ಥಿನಿಯರು ಸಾರ್ವಜನಿಕವಾಗಿ ಸರತಿಯಲ್ಲಿ ನಿಂತು ಮದ್ಯ ಖರೀದಿಸಿದ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ ಕೊರೊನಾ ಲಾಕ್ ಡೌನ್ ಮೊದಲು ವೀಕೆಂಡ್ ಮೋಜು ಮಸ್ತಿಗಳಲ್ಲಿ ತೊಡಗುತ್ತಿದ್ದ ಈ ಯುವತಿಯರು  ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಮದ್ಯ ಖರೀದಿ ಗಾಗಿ ಮಟಮಟ ಬಿಸಿಲಲ್ಲೂ ಸರತಿಯ ಮೊರೆ ಹೋಗಿದ್ದರು, ಮಣಿಪಾಲದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಇರುವ ವಿದ್ಯಾರ್ಥಿನಿಯರು ಲಾಕ್ ಡೌನ್ ನಿಂದ  ಊರಿಗೆ ಹೋಗಲಾಗದೆ ಸಿಕ್ಕಿಬಿದ್ದಿದ್ದರು. ಹೊರ […]

ಸಂಚಾರಿ ಗಂಟಲು ದ್ರವ ಸಂಗ್ರಹಣ ಕೇಂದ್ರಕ್ಕೆ ಚಾಲನೆ 

Sunday, May 3rd, 2020
mobile-swab

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಆರೋಗ್ಯ ಇಲಾಖೆಗೆ ಸಂಚಾರಿ ಕೋವಿಡ್ ಹಿನ್ನೆಲೆಯಲ್ಲಿ ಸಂಚಾರಿ ಗಂಟಲು ದ್ರವ ಸಂಗ್ರಹಣ ಕೇಂದ್ರ ವಾಹನವನ್ನು ಭಾನುವಾರ ಹಸ್ತಾಂತರಿಸಲಾಯಿತು. ರಾಜ್ಯದ ಪ್ರಥಮ ಸಂಚಾರಿ ಸಂಚಾರಿ ಗಂಟಲು ದ್ರವ ಸಂಗ್ರಹಣ ಕೇಂದ್ರವನ್ನು ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಇದರಿಂದ ಗಂಟಲು ದ್ರವ ಸಂಗ್ರಹಣ ಪರೀಕ್ಷೆಗೆ ಹೆಚ್ಚು […]

ನಿಮ್ಮ ಪ್ರೀತಿಪಾತ್ರರು ಮರಳಿ ನಿಮ್ಮಂತೆ ಬರುವ ಮಾರ್ಗ

Sunday, May 3rd, 2020
Arasina Kunkuma

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ : ನಿಮ್ಮ ಪೂರ್ಣಪ್ರಮಾಣದ ಜೀವನವು ನಿಮ್ಮ ಪ್ರೀತಿಪಾತ್ರರಿಂದ ಸಂಪೂರ್ಣವಾಗುವುದು ಎಂಬ ಭಾವನೆ ಮೂಡುವುದು ಸಾಮಾನ್ಯ. ಆದರೆ ಕೆಲವೊಂದು ಅನಿರೀಕ್ಷಿತವಾದಂತಹ ಘಟನೆಗಳಿಂದ, ಮನಸ್ತಾಪದಿಂದ ಅವರು ನಿಮ್ಮಿಂದ ದೂರ ಹೋಗಬಹುದಾಗಿದೆ. ನಿಮ್ಮ ಪ್ರೀತಿಪಾತ್ರರು ನಿಮ್ಮ ಬಳಿ ಇದ್ದಾಗ ಅವರ ಬೆಲೆ ನಿಮಗೆ ಗೊತ್ತಾಗಲಾರದು ಅವರು ನಿಮ್ಮಿಂದ ದೂರ ಸರಿದಂತೆ ಅವರ ಅವಶ್ಯಕತೆ ನಿಮಗೆ ಅರಿವಿಗೆ ಬರುತ್ತದೆ. ಜೊತೆಗೆ ನಿಮ್ಮ ಪ್ರೀತಿಪಾತ್ರರು ನಿಮ್ಮ ಜೊತೆ ಇಲ್ಲದ ಅನುಭವ ಮತ್ತು ಯಾತನೆ ತಿಳಿದುಬರುತ್ತದೆ […]

ಟಿವಿ ವರದಿಗಾರನ ಪಾಸಿಟಿವ್ ವರದಿ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೊರೊನಾ ಪರೀಕ್ಷೆ

Thursday, April 30th, 2020
Sajith babu

ಕಾಸರಗೋಡು : ಜಿಲ್ಲೆಯ ಪತ್ರಕರ್ತನೋರ್ವನಲ್ಲಿ ಸೋಂಕು ಪತ್ತೆಯಾದ ಹಿನ್ನಲೆ ಕಾಸರಗೋಡು ಜಿಲ್ಲಾಧಿಕಾರಿ ಡಿ. ಸಜಿತ್ ಬಾಬು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲೆಯ ಜಿಲ್ಲಾಧಿಕಾರಿ ಡಿ. ಸಜಿತ್ ಬಾಬು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ವರದಿ ಕೈ ಸೇರಿದೆ. ಪತ್ರಕರ್ತನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ವ ಕ್ವಾರಂಟೈನ್ ಗೆ ಒಳಗಾಗಿದ್ದರು. ಬುಧವಾರ ತಮ್ಮ ಗಂಟಲ ದ್ರವ ಪರೀಕ್ಷೆಗೆ ರವಾನಿಸಿದ್ದರು. ಇಂದು ಸಂಜೆ ಪರೀಕ್ಷಾ ವರದಿ ಕೈ ಸೇರಿದೆ. ಅಧಿಕಾರಿಯೊಬ್ಬರ ವರದಿಯ ನಿರೀಕ್ಷೆ ಯಲ್ಲಿ ಕಾಸರಗೋಡು ಜನರು ಆತಂಕ ಗೊಂಡಿದ್ದರು. ಗುರುವಾರ ದ ವೇಳೆಗೆ, ರಾಜ್ಯದಲ್ಲಿ […]

ದಿನಭವಿಷ್ಯ : ಮೀನ ರಾಶಿ-ಕುಟುಂಬಸ್ಥರ ನೆರವಿನಿಂದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗುವಿರಿ

Thursday, April 30th, 2020
guru raghavendra

ಶ್ರೀ ಗುರು ರಾಯರ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ನಿಮ್ಮ ಕಾರ್ಯಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ವೃತ್ತಿ ಬದಲಾವಣೆಯ ಚಿಂತನೆ ನಿಮ್ಮಲ್ಲಿ ಬರಲಿದೆ. ಸೂಕ್ತ ಕಾಲವನ್ನು ನೋಡಿಕೊಂಡು ಹೊಸ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಒಳಿತು. ನಿಮ್ಮ ಪರಿಶ್ರಮದ ಕೆಲಸದಿಂದ ಉತ್ತಮ ಆದಾಯ ಗಳಿಕೆ ಕಂಡುಬರುತ್ತದೆ. ಗಿರಿಧರ ಭಟ್ 9945410150 ಮಾಹಿತಿಗಾಗಿ ಕರೆ […]

ಕೋಳಿ ಫೀಡ್ ಲಾರಿಗೆ ಬೆಂಕಿ, ಚಾಲಕ ಮತ್ತು ನಿರ್ವಾಹಕರಿಗೆ ಗಂಭೀರ ಗಾಯ

Wednesday, April 29th, 2020
koli-feed

ಬಂಟ್ವಾಳ: ಮೆಲ್ಕಾರ್ ಸಮೀಪದ ಮಾರ್ನಬೈಲು ಎಂಬಲ್ಲಿ ಕೋಳಿ ಫೀಡ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿಗೆ ಬೆಂಕಿ ತಾಗಿ ಢಿಕ್ಕಿಯಾದ ಘಟನೆ ಬಂಟ್ವಾಳದ  ನಡೆದಿದೆ. ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕ ಇಬ್ಬರಿಗೂ ಗಾಯಗಳಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಿನಿ ಲಾರಿಯಲ್ಲಿ ಮಂಗಳವಾರ  ಬೆಳಗ್ಗೆ ಕಂದೂರಿನಿಂದ ಫೀಡ್ ಪ್ರಾಡಕ್ಟ್ ತುಂಬಿಸಿಕೊಂಡು ಹೋಗುವ ವೇಳೆ ಈ ಘಟನೆ ನಡೆದಿದ್ದು, ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದುಬಂದಿಲ್ಲ. ಲಾರಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ, ನಂತರ ಮನೆಯೊಂದರ ಕಂಪೌಂಡ್ ಗೋಡೆಗೆ ಢಿಕ್ಕಿ […]

ಏಪ್ರಿಲ್ 28 ಆದಿ ಶಂಕರಾಚಾರ್ಯರ ಜಯಂತಿ; ಪಾಲಘರ ಸಂತರ ಹತ್ಯೆಗೆ ನ್ಯಾಯ ಸಿಗುವುದೇ

Monday, April 27th, 2020
Shankaracharya

ಮಂಗಳವಾರ  : ಹಿಂದೂ ಧರ್ಮದ ಪುನರುತ್ಥಾನದ ಜನಕರಾಗಿರುವ ಆದಿ ಶಂಕರಾಚಾರ್ಯರ ಜಯಂತಿಯು ಎಪ್ರಿಲ್ 28 ರಂದು ಇದೆ. ಮಹಾರಾಷ್ಟ್ರದ ಪಾಲಘರದಲ್ಲಿ ಉದ್ರಿಕ್ತ ಗುಂಪು ಎಪ್ರಿಲ್ 19 ರಂದು ರಾತ್ರಿ ಪೂ. ಕಲ್ಪವೃಕ್ಷ ಗಿರಿಜೀ ಮಹಾರಾಜ ಹಾಗೂ ಪೂ. ಸುಶೀಲ ಗಿರಿಜೀ ಮಹಾರಾಜ ಈ ಇಬ್ಬರು ಸಂತರೊಂದಿಗೆ ಅವರ ವಾಹನ ಚಾಲಕರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿತು. ಈ ಸಂತರು ಆದಿ ಶಂಕರಾಚಾರ್ಯರು ನಿರ್ಮಿಸಿದ ಆಖಾಡಾ ಪರಂಪರೆಯವರಾಗಿದ್ದರು. ಸಂತರ ಚರಣಗಳಲ್ಲಿ ಶ್ರದ್ಧಾಂಜಲಿಯನ್ನು ಅರ್ಪಿಸಲು ‘ಆದಿ ಶಂಕರಾಚಾರ್ಯರ ಜಯಂತಿ’ ಇದು ಎಲ್ಲಕ್ಕಿಂತ ಯೋಗ್ಯವಾದ […]

ಮಂಗಳೂರು : ಸಂಸದ ನಳಿನ್‌ಕುಮಾರ್‌ ರಿಂದ 20 ಸಾವಿರ ಕಿಟ್ ವಿತರಣೆ

Sunday, April 26th, 2020
Nalin-Kit

ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ 20 ಸಾವಿರ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಭಾನುವಾರ ನಗರದ ಕದ್ರಿ ಮೈದಾನದಲ್ಲಿ ಬಿಜೆಪಿ ಶಾಸಕರು ಹಾಗೂ ಮಂಡಲ ಸಮಿತಿ ಅಧ್ಯಕ್ಷರುಗಳಿಗೆ ಹಸ್ತಾಂತರಿಸಲಾಯಿತು. ಕಿಟ್ ಹಸ್ತಾಂತರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ “ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಬಡ ಜನತೆಯ ನೆರವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ೨೦ ಸಾವಿರ ಕಿಟ್ ನೀಡಲಾಗಿದ್ದು, ಶಾಸಕರು ಹಾಗೂ […]