ಪುರಿ : ಚಿರತೆ ದಾಳಿಯಿಂದ ತನ್ನ ತಮ್ಮನನ್ನು ರಕ್ಷಿಸಿದ ಬಾಲಕಿ

Wednesday, October 9th, 2019
powri

ಪುರಿ : ತಮ್ಮ ಜಮೀನಿನಿಂದ ಮನೆಗೆ ಮರಳುತ್ತಿದ್ದಾಗ ನಾಲ್ಕು ವರ್ಷದ ಪುಟ್ಟ ತಮ್ಮ ರಾಘವ್ ಮೇಲೆ ಚಿರತೆ ಎರಗಿದಾಗ ಎದೆಗುಂದದೆ, ಚಿರತೆಯೊಂದಿಗೆ ಸೆಣಸಾಡಿ ತಮ್ಮನನ್ನು ರಕ್ಷಿಸಿದ ಹನ್ನೊಂದು ವರ್ಷದ ಬಾಲಕಿ ರಾಖಿ ಇದೀಗ ತನ್ನ ಪ್ರಾಣಕ್ಕಾಗಿ ದೆಹಲಿಯ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾಳೆ. ಈ ಘಟನೆ ಅಕ್ಟೋಬರ್ 4 ರಂದು ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ ದೇವ್ ಕುಂಡೈ ಟಾಲ್ಲಿ ಗ್ರಾಮದಲ್ಲಿ ನಡೆದಿದ್ದು, ಇಡೀ ದೇಶವೇ ಆಕೆಯ ಸಾಹಸವನ್ನು ಕೊಂಡಾಡುತ್ತಿದೆ. ಆಕೆಯ ಧೈರ್ಯಕ್ಕೆ ಇದೀಗ ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರಕ್ಕೆ […]

ಶಾಸಕ ಕೆ.ಎಸ್ ರಾಜಣ್ಣ ಅವರನ್ನು ಇಂದು ಇಡಿ ಅಧಿಕಾರಿಗಳು ವಿಚಾರಣೆ

Wednesday, October 9th, 2019
KS-Rajanna

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಮಾಜಿ ಸಚಿವ ಡಿಕೆ ಶಿವಕುಮಾರ್ ಈಗಾಗಲೇ ತಿಹಾರ್ ಜೈಲು ಸೇರಿದ್ದಾರೆ. ಈ ಬೆನ್ನಲ್ಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೂಡ ವಿಚಾರಣೆ ನಡೆಸಲಾಯಿತು. ಇದೀಗ ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕನ ವಿಚಾರಣೆಗೆ ಇಡಿ ಅಧಿಕಾರಿಗಳು ಮುಂದಾಗಿದ್ದಾರೆ. ದೆಹಲಿಯ ಲೋಕನಾಯಕ್ ಭವನದ ಇಡಿ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎಸ್ ರಾಜಣ್ಣ ಅವರನ್ನು ಇಂದು ಇಡಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಣ್ಣ ಅವರು ಈಗಾಗಲೇ ದೆಹಲಿ ತಲುಪಿದ್ದಾರೆ. ರಾಜಣ್ಣ […]

ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ಹತ್ತು ಮಂದಿ ನೀರು ಪಾಲು

Wednesday, October 9th, 2019
rajastan

ಧೋಲ್ಪುರ್ : ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ಪರ್ಬಾತಿ ನದಿಯಲ್ಲಿ ಮುಳುಗಿ ಹತ್ತು ಮಂದಿ ನೀರು ಪಾಲಾದ ಘಟನೆಯು ರಾಜಸ್ಥಾನದ ಧೋಲ್ಪುರ್ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ವೇಳೆ ನಡೆದಿದೆ. ಹತ್ತು ಮಂದಿಯ ಶವವನ್ನು ಅಗ್ನಿಶಾಮಕ ದಳದವರು ಈಗಾಗಲೇ ಪತ್ತೆ ಹಚ್ಚಿದ್ದಾರೆ ಮತ್ತು ಇನ್ನು ನಾಲ್ಕು ಮಂದಿಗಾಗಿ ಹುಡುಕಾಟ ನಡೆಯುತ್ತಿದೆ. ಘಟನೆ ವೇಳೆ ಹತ್ತು ಮಂದಿ ನೀರು ಪಾಲಾಗಿದ್ದಾರೆ. ಹತ್ತು ಮಂದಿಯ ಶವವನ್ನು ಪತ್ತೆ ಮಾಡಲಾಗಿದೆ. ಇನ್ನು ನಾಲ್ಕು ಮಂದಿಯ ಶವಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಧೋಲ್ಪುರ ಜಿಲ್ಲಾಧಿಕಾರಿ […]

ಇಂದು ರಫೇಲ್ ಯುದ್ಧ ವಿಮಾನ ಹಸ್ತಾಂತರ ಸಚಿವ ರಾಜನಾಥ ಸಿಂಗ್

Tuesday, October 8th, 2019
Rafale

ನವದೆಹಲಿ : ಮಂಗಳವಾರ ಪ್ಯಾರಿಸ್‌ನಲ್ಲಿ ರಫೇಲ್ ಯುದ್ಧ ವಿಮಾನವನ್ನು ರಕ್ಷಣ ಸಚಿವ ರಾಜನಾಥ ಸಿಂಗ್ ಅವರು ಹಸ್ತಾಂತರ ಮಾಡಿಕೊಳ್ಳಲಿದ್ದಾರೆ. ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನ ಹಾಗೂ ವಿಜಯದಶಮಿ ದಿನವಾದ ಮಂಗಳವಾರ ಪ್ಯಾರಿಸ್‌ನಲ್ಲೆ ರಫೇಲ್ ಯುದ್ಧ ವಿಮಾನಕ್ಕೆ ‘ಶಸ್ತ್ರ ಪೂಜೆ’ಯನ್ನು ಅವರು ಸಲ್ಲಿಸಲಿದ್ದಾರೆ. ದಸರಾ ವೇಳೆ ರಾಜನಾಥ್ ಸಿಂಗ್ ಅವರು ಹಲವು ವರ್ಷಗಳಿಂದ ಶಸ್ತ್ರ ಪೂಜೆ ಮಾಡಿಕೊಂಡು ಬಂದಿದ್ದಾರೆ.  

ಶ್ರೀ ಕನ್ಯಕ ಪರಮೇಶ್ವರಿ ದೇವಿಗೆ 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟುಗಳಿಂದ ಅಲಂಕಾರ

Tuesday, October 8th, 2019
sri-kanyaka-devi

ವಿಶಾಖಪಟ್ಟಣಂ : ನವರಾತ್ರಿ ಸಂಭ್ರಮದಲ್ಲಿ ನವ ದುರ್ಗೆಯರ ಆರಾಧನೆ ದೇಶದೆಲ್ಲೆಡೆ ಅದ್ಧೂರಿಯಾಗಿ ನಡೆಯುತ್ತದೆ. ಆದ್ದರಿಂದ ಈ ಬಾರಿ ನವರಾತ್ರಿ ಆಚರಣೆ ವಿಶಾಖಪಟ್ಟಣದಲ್ಲಿ ಜೋರಾಗಿಯೇ ನಡೆಯುತ್ತಿದ್ದು, ಶ್ರೀ ಕನ್ಯಕ ಪರಮೇಶ್ವರಿ ದೇವಿಗೆ ಬರೋಬ್ಬರಿ 4 ಕೆಜಿ ಚಿನ್ನ, 2 ಕೋಟಿ ಮೌಲ್ಯದ ನೋಟಿನಿಂದ ಸಿಂಗರಿಸಿ ಆರಾಧಿಸಲಾಯಿತು. ಭಾನುವಾರ ದುರ್ಗಾಷ್ಠಮಿ ದಿನದ ಆರಾಧನೆ ಹಿನ್ನೆಲೆಯಲ್ಲಿ ಶ್ರೀ ಕನ್ಯಕ ಪರಮೇಶ್ವರಿ ದೇವಸ್ಥಾನವನ್ನು ಅದ್ಧೂರಿಯಾಗಿ ಅಲಂಕರಿಸಲಾಗಿತ್ತು. ಜೊತೆಗೆ ಕನ್ಯಕ ಪರಮೇಶ್ವರಿ ದೇವಿಗೆ 4 ಕೆಜಿ ಚಿನ್ನ ಹಾಕಿ, ದೇವಿಯ ಸುತ್ತಲು ನೋಟುಗಳಿಂದ ಅಲಂಕರಿಸಲಾಗಿತ್ತು. […]

ಜೈಪುರ : ಗುಜರಾತಿ ಶೈಲಿಯ ನೃತ್ಯ ಮಾಡುವಾಗ ಕುಸಿದು ಬಿದ್ದು ವ್ಯಕ್ತಿ ಮೃತ್ಯು

Tuesday, October 8th, 2019
jaipur

ಜೈಪುರ : ಗರ್ಬಾ ಡ್ಯಾನ್ಸ್(ಗುಜರಾತಿ ಶೈಲಿಯ ನೃತ್ಯ) ಮಾಡುತ್ತಿದ್ದ ವೇಳೆ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ರಾಜಸ್ಥಾನದ ಮೌಂಟ್ ಅಬುದಲ್ಲಿ ನಡೆದಿದೆ. ಜಗದೀಶ್ ಮೃತಪಟ್ಟ ವ್ಯಕ್ತಿ. ಜಗದೀಶ್ ಮೂಲತಃ ಗುಜರಾತ್‍ನ ಸುರತ್ ನಿವಾಸಿಯಾಗಿದ್ದು, ತಮ್ಮ ಪತ್ನಿ ಹಾಗೂ ಐವರು ದಂಪತಿ ಜೊತೆ ವೀಕೆಂಡ್ ಕಳೆಯಲು ರಾಜಸ್ಥಾನದ ಮೌಂಟ್ ಅಬುಗೆ ತೆರಳಿದ್ದರು. ಇಲ್ಲಿ ಅವರು ಗರ್ಬಾ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಈ ವೀಕೆಂಡ್ ಕಳೆಯಲು ನಾವು ಸುರತ್‍ನಿಂದ ಮೌಂಟ್ ಅಬುಗೆ ಬಂದಿದ್ದೇವು. ಭಾನುವಾರ ನಾವು ಹೊರಗೆ ಸುತ್ತಾಡಿ […]

ಲಕ್ನೋ : 4 ವರ್ಷದ ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಪರಾರಿ

Saturday, October 5th, 2019
lackno

ಲಕ್ನೋ : 4 ವರ್ಷದ ಬಾಲಕಿ ಮೇಲೆ 28 ವರ್ಷದ ಯುವಕನೋರ್ವ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ, ಬಾಲಕಿ ‘ದುರ್ಗಾ ಪೂಜೆ’ ನೋಡಲು ತನ್ನ ಮನೆಯಿಂದ ಹೊರಗೆ ಹೋದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯರು ಆರೋಪಿಯನ್ನು ಹಿಡಿದಿದ್ದು, ಆರೋಪಿಯನ್ನು ವಿನೋದ್ ಗಿರಿ ಎಂದು ಗುರುತಿಸಲಾಗಿದೆ. ನಂತರ ಆತ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಪೋಕ್ಸೊ ಮತ್ತು ಐಪಿಸಿ ಸೆಕ್ಷನ್ 376(ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಅಡಿ […]

ಕಾಂಗ್ರೆಸ್​ಗೆ ಸೋಲು ಕಟ್ಟಿಟ್ಟ ಬುತ್ತಿ : ಖರ್ಗೆ ವಿರುದ್ಧ ಸಂಜಯ್ ನಿರುಪಮ್ ಆಕ್ರೋಶ

Saturday, October 5th, 2019
nirupam

ಮುಂಬೈ : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲು ಕಟ್ಟಿಟ್ಟ ಬುತ್ತಿ. ಮುಂಬೈ ಮಹಾನಗರದಲ್ಲಿ ಮೂರ್ನಾಲ್ಕು ಕ್ಷೇತ್ರದಲ್ಲಿ ಗೆದ್ದರೆ ಅದೇ ಹೆಚ್ಚು ಎಂದು ಪಕ್ಷದ ಹೈಕಮಾಂಡ್ ವಿರುದ್ಧ ಬಂಡಾಯ ಸಾರಿರುವ ಮುಖಂಡ ಸಂಜಯ್ ನಿರುಪಮ್ ಹೇಳಿದ್ದಾರೆ. ಅಭ್ಯರ್ಥಿಗಳ ಆಯ್ಕೆ ನೋಡಿದರೆ ಮುಂಬೈನಲ್ಲಿ ಮೂರ್ನಾಲ್ಕು ಕ್ಷೇತ್ರದಲ್ಲಷ್ಟೆ ಕಾಂಗ್ರೆಸ್ ಗೆಲ್ಲಬಹುದು. ಉಳಿದವರು ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋಲಲಿದ್ದಾರೆ. ರಾಹುಲ್ ಗಾಂಧಿಗೆ ಆಪ್ತರಾದವರನ್ನು ಪಕ್ಷದಿಂದ ಹೊರಹಾಕುವ ಪಿತೂರಿ ವ್ಯವಸ್ಥಿತವಾಗಿ ನಡೆಯುತ್ತಿದೆ. ದೆಹಲಿಯಲ್ಲಿ ಕುಳಿತವರಿಗೆ ಕ್ಷೇತ್ರದಲ್ಲಿನ ವಾಸ್ತವ ಗೊತ್ತಿಲ್ಲ. ವಿವೇಚನೆ ಇಲ್ಲದೆ ಕೈಗೊಂಡ […]

ಸತತ 5ನೇ ಬಾರಿ ಬಡ್ಡಿ ದರ ಕಡಿತಗೊಳಿಸಿದ ಆರ್ ಬಿಐ

Friday, October 4th, 2019
RBI

ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, 5ನೇ ಬಾರಿ ಬಡ್ಡಿದರವನ್ನು ಕಡಿತಗೊಳಿಸುವ ಮೂಲಕ ಆರ್ಥಿಕ ಚೇತರಿಕೆಗೆ ಆದ್ಯತೆ ನೀಡಿದೆ. 25 ಬೇಸಿಸ್ ಅಂಶಗಳಷ್ಟು ಇಳಿಕೆ ಮಾಡಲು ಆರ್ ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಯ ಆರು ಸದಸ್ಯರು ಸಮ್ಮತಿ ನೀಡುವ ಮೂಲಕ ರೆಪೋ ದರ ಶೇ.5.15ಕ್ಕೆ ಇಳಿಕೆಯಾಗಲಿದೆ ಎಂದು ವರದಿ ತಿಳಿಸಿದೆ. ರಿವರ್ಸ್ ರೆಪೋ ದರ ಶೇ.4.9ಕ್ಕೆ ಇಳಿಕೆ ಮಾಡಿದೆ. ಪ್ರಸ್ತುತ ಹಣದುಬ್ಬರ ನಿಯಂತ್ರಿಸಿ ಆರ್ಥಿಕ ಚೇತರಿಕೆಗೆ ಕ್ರಮ […]

ಮುಂದಿನ ವಾರಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆ

Thursday, October 3rd, 2019
petrol

ಹೊಸದಿಲ್ಲಿ : ಪೆಟ್ರೋಲ್‌ ಬೆಲೆ ಏರಿಕೆಗೆ ಅ.3ರಂದು ತುಸು ಬ್ರೇಕ್‌ ಬಿದ್ದಿದೆ. ಮುಂದಿನ ವಾರಗಳಲ್ಲಿ ಇನ್ನಷ್ಟು ಬೆಲೆ ಇಳಿಯುವುದಾಗಿ ಸರಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌ ಹೇಳಿದೆ. ಗುರುವಾರ ಪೆಟ್ರೋಲ್‌ ಬೆಲೆ 10 ಪೈಸೆ ಇಳಿಕೆಯಾಗಿದ್ದು, ಡೀಸೆಲ್‌ ಬೆಲೆ 6 ಪೈಸೆ ಇಳಿಕೆಯಾಗಿದೆ. ಸೆ.14ರಂದು ಸೌದಿ ಅರೇಬಿಯಾದ ಅರಾಮ್ಕೋ ತೈಲ ಕಂಪೆನಿ ಮೇಲೆ ಡ್ರೋನ್‌ ದಾಳಿ ಬಳಿಕ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿತ್ತು. ಪೂರೈಕೆಯಲ್ಲಿ ವ್ಯತ್ಯಯ ಮತ್ತು ಅಂ.ರಾ. ಮಾರುಕಟ್ಟೆಯಲ್ಲಿಯ ಪರಿಣಾಮದಿಂದಾಗಿ ಬೆಲೆ ಏರಿಕೆ ಕಂಡಿತ್ತು. ಸದ್ಯ ಸಮಸ್ಯೆ […]