ಕೊರೋನಾ ನಡುವೆ ಜಿಲ್ಲಾಧಿಕಾರಿಗಳಿಗೆ ಹೈಟೆಕ್​ ಕಾರು ಕೊಡಿಸಿದ ಸರಕಾರ, ವಿರೋಧ ಪಕ್ಷಗಳ ವಿರೋಧ

Monday, June 14th, 2021
telangana

ಹೈದರಾಬಾದ್ :  ತೆಲಂಗಾಣ ಸರ್ಕಾರವು ತನ್ನ 32 ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಹೈಟೆಕ್ ಕಾರು ಕೊಡಿಸಿ, ಬಂಪರ್ ಕೊಡುಗೆ ನೀಡಿದೆ. ರಾಜ್ಯವು ಸುಮಾರು 40,000 ಕೋಟಿ ರೂ.ಗಳ ಖೋತಾ ಬಜೆಟ್ಅನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಈ ‘ದುಂದುವೆಚ್ಚ’ದ ಬಗ್ಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಕರೊನಾ ಎರಡನೇ ಅಲೆಯಿಂದ ಆರ್ಥಿಕತೆ ತತ್ತರಿಸಿರುವ ಸಮಯದಲ್ಲಿ, ತಲಾ 25 ರಿಂದ 30 ಲಕ್ಷ ರೂಪಾಯಿ ಮೌಲ್ಯದ 32 ಕಿಯಾ ಕಾರ್ನಿವಲ್ ಕಾರುಗಳನ್ನು ತೆಲಂಗಾಣ ಸರ್ಕಾರ ಖರೀದಿಸಿದ್ದು, ಭಾನುವಾರ ಹೈದರಾಬಾದ್ನ […]

ಪುಟ್ಟ ಮಗುವಿಗೆ ಚಿತ್ರ ಹಿಂಸೆ ಕೊಡುತ್ತಿದ್ದ ಬಂಟ್ವಾಳದ ಮಹಿಳೆ ಮುಂಬಯಿಯಲ್ಲಿ ಬಂಧನ

Saturday, June 12th, 2021
irin

ಮುಂಬೈ : ಮಗುವನ್ನು ನೋಡಿಕೊಳ್ಳಲು ತಿಂಗಳಿಗೆ ಐವತ್ತು ಸಾವಿರ ಸಂಬಳಕ್ಕೆ ನೇಮಕವಾಗಿದ್ದ ಬಂಟ್ವಾಳ ತಾಲೂಕಿನ ಬಾಂಬಿಲಪದವು ಮೂಲದ ದಾದಿಯು ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡುತ್ತಿರುವ ಆರೋಪದ ಮೇಲೆ ಮುಂಬೈಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮೂಲದ ಸೆರಾವೋ ಕುಟುಂಬದ ನವದಂಪತಿಗಳಿಗೆ ಮುಂಬಯಿಯ ವಾಶಿ  ಮನೆಯಲ್ಲಿ ಗಂಡು ಮಗು ಜನಿಸಿದ್ದು, ಬಾಣಂತಿಯ ಆರೈಕೆಗಾಗಿ ಬಂಟ್ವಾಳ ತಾಲೂಕಿನ ಬಾಂಬಿಲಪದವು ಮೂಲದ ಐರಿನ್ ವಾಸ್ ಅವರನ್ನು ನೇಮಕ ಮಾಡಲಾಗಿತ್ತು. ಐರಿನ್ ಬಂಟ್ವಾಳ ಅಮ್ಟಾಡಿ ಗ್ರಾಮದ ಬಾಂಬಿಲ ಪದವು ಮೆಕ್ಸಿಮ್ ವಿನ್ಸೆಂಟ್ ಲಾಸ್ರದೋ ಇವರ ಪತ್ನಿ. ಮಗು […]

ಇಸ್ಲಾಮಿಕ್ ಸ್ಟೇಟ್ ಸೇರಿದ 4 ಕೇರಳ ಮಹಿಳೆಯರನ್ನು ಹಿಂದಿರುಗಿ ಬರಲು ಭಾರತ ಅನುಮತಿ ನಿರಾಕರಣೆ

Saturday, June 12th, 2021
Indian-Women

ನವದೆಹಲಿ : ಖೋರಾಸಾನ್ ಪ್ರಾಂತ್ಯದ (ಐಎಸ್‌ಕೆಪಿ) ಇಸ್ಲಾಮಿಕ್ ಸ್ಟೇಟ್ ಸೇರಲು ತಮ್ಮ ಗಂಡಂದಿರೊಂದಿಗೆ ತೆರಳಿ ಅಫ್ಘಾನಿಸ್ತಾನ ಜೈಲಿನಲ್ಲಿ ಬಂಧಿತರಾದ ನಾಲ್ವರು ಭಾರತೀಯ ಮಹಿಳೆಯರು ದೇಶಕ್ಕೆ ಮರಳಲು ಅವಕಾಶವಿಲ್ಲ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲಿ ಬಂಧಿತರಾದ ಮಹಿಳೆಯರು, ಎಲ್ಲರೂ ಕೇರಳದವರು, 2016-18ರಲ್ಲಿ ಅಫ್ಘಾನಿಸ್ತಾನದ ನಂಗರ್ಹಾರ್ಗೆ ಪ್ರಯಾಣ ಬೆಳೆಸಿದರು. ಅಫ್ಘಾನಿಸ್ತಾನದಲ್ಲಿ ನಡೆದ ಬೇರೆ ಬೇರೆ ದಾಳಿಯಲ್ಲಿ ಅವರ ಗಂಡಂದಿರು ಕೊಲ್ಲಲ್ಪಟ್ಟರು. 2019 ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಅಫ್ಘಾನಿಸ್ತಾನ ಅಧಿಕಾರಿಗಳ ಮುಂದೆ ಶರಣಾದ ಸಾವಿರಾರು ಇಸ್ಲಾಮಿಕ್ […]

ದೇಶದ 80 ಕೋಟಿ ಜನರಿಗೆ ಫ್ರೀ ರೇಶನ್: ಎಲ್ಲರಿಗೂ ಉಚಿತ ಲಸಿಕೆ: ಪ್ರಧಾನಿ

Monday, June 7th, 2021
narendra-modi

ನವದೆಹಲಿ: ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯಾರೂ ಹಸಿವಿನಿಂದ ಮಲಗಬಾರದು. ಹೀಗಾಗಿ, ದೇಶದ 80 ಕೋಟಿ ಜನರಿಗೆ ಬರುವ ದೀಪಾವಳಿವರೆಗೆ ಆಹಾರ ಧಾನ್ಯ ವಿತರಿಸಲಾಗುವುದು. ಇದರ ಕಟ್ಟುನಿಟ್ಟಿನ ಅನುಷ್ಟಾನಕ್ಕಾಗಿ ‘ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯನ್ನು ಮತ್ತೆ ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ‌. ದೇಶಾದ್ಯಂತ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು‌. ಲಸಿಕೆ ವಿತರಣಾ ವ್ಯವಸ್ಥೆಯನ್ನು ಕೇಂದ್ರೀಕೃತಗೊಳಿಸಲಾಗುವುದು. ಮೊದಲ ಅಲೆಯಲ್ಲಿ ನಮಗೆ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದೇವೆ. ಎರಡನೇ ಅಲೆಯಲ್ಲಿ ನಮ್ಮೊಂದಿಗೆ ಜನರ ಸಹಕಾರ ಸಿಕ್ಕಿದೆ‌ ಎಂದಿದ್ದಾರೆ.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 91 ನೇ ಹುಟ್ಟು ಹಬ್ಬದ ಸಂಸ್ಮರಣೆ.

Saturday, June 5th, 2021
Jayasree Krishna

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ರ ಹೆಸರಿಡುವ ಪ್ರಸ್ತಾವನೆ ಬಗ್ಗೆ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ರವಾನೆ – ತೋನ್ಸೆ ಜಯಕೃಷ್ಣ ಎ ಶೆಟ್ಟಿ ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ ಅವಿಭಜಿತ ದಕ್ಷಿಣ ಕನ್ನಡ,. ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ […]

ಸಿಬಿಎಸ್ಇ (CBSC)12ನೇ ಪರೀಕ್ಷೆಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರ

Tuesday, June 1st, 2021
cbsc

ನವದೆಹಲಿ : ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಿಬಿಎಸ್ಇ 12ನೇ ಪರೀಕ್ಷೆಯನ್ನುರದ್ದುಗೊಳಿಸಿದೆ.  ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ನಮ್ಮ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಸಿಬಿಎಸ್‌ಇ ಫಲಿತಾಂಶಗಳನ್ನು ಘೋಷಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಭೆಯ […]

ಕೊರೋನಾ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ನದಿಗೆ ಎಸೆಯುವ ವಿಡಿಯೋ ವೈರಲ್

Sunday, May 30th, 2021
Prem Nath Misra

ಸಿದ್ಧಾರ್ಥ್ ನಗರ : ಸೇತುವೆಯೊಂದರಿಂದ ನದಿಗೆ ಕೊರೋನಾ ವೈರಸ್ ರೋಗಿಯ ದೇಹವನ್ನುಇಬ್ಬರು ವ್ಯಕ್ತಿಗಳು ಎಸೆಯುವ ವಿಡಿಯೋ ಈಗ ಬಾರಿ ವೈರಲ್ ಆಗಿದೆ. ಒಬ್ಬರು ಪಿಪಿಇ ಕಿಟ್ ಧರಿಸಿದ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಜೊತೆ ಸೇರಿ  ಉತ್ತರಪ್ರದೇಶದ ಬಲರಾಂಪುರ್ ಜಿಲ್ಲೆಯ ರಾಪ್ತಿ ನದಿಗೆ ಮೇ 30 ಭಾನುವಾರ ಮೃತ ದೇಹ ಎಸೆಯುವುದನ್ನು ಕಾರಿನಲ್ಲಿ ಹೋಗುತ್ತಿದ್ದವರು ಚಿತ್ರೀಕರಿಸಿದ್ದರು. ವಿಡಿಯೋ ತುಣುಕುಗಳು ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿ ವಿವರ ಸಂಗ್ರಹಿಸಿ ಕೇಸು ದಾಖಲಿಸಿದ್ದಾರೆ. ಉತ್ತರಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯ ಸೊಹರತ್‌ ನಿವಾಸಿ ಪ್ರೇಮ್ […]

ಕೋವಿಡ್ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಶಿಕ್ಷಣದ ಜೊತೆಗೆ, 10 ಲಕ್ಷ ಹಣ

Saturday, May 29th, 2021
PMModi

ನವದೆಹಲಿ: ಮೋದಿ ಸರ್ಕಾರ ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ವರ್ಷ ಪೂರ್ಣಗೊಳಿಸುತ್ತಿರುವ ನಡುವೆ ಮೇ.29 ರಂದು ಮಹತ್ವದ ಘೋಷಣೆ ಪ್ರಕಟಿಸಿದೆ. ಮಕ್ಕಳು 18 ವರ್ಷದವರಾಗುತ್ತಿದ್ದಂತೆಯೇ 10 ಲಕ್ಷ ಹಣ ದೊರೆಯಲಿದ್ದು ಶಿಕ್ಷಣವೂ ದೊರೆಯಲಿದೆ. ಕೋವಿಡ್-19 ನಿಂದ ಅನಾಥರಾದ ಮಕ್ಕಳಿಗಾಗಿ ಯೋಜನೆ ರೂಪಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಕ್ಕಳಿಗಾಗಿ ಪಿಎಂ-ಕೇರ್ಸ್ ಯೋಜನೆಯಡಿ ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಯೋಜನೆಯ ಬಗ್ಗೆ ಪ್ರಧಾನಿಗಳ ಕಚೇರಿ […]

ಯಾಸ್ ಚಂಡುಮಾರುತದ ಹಾನಿಯನ್ನು ಪರಿಶೀಲಿಸಲು ಬಂದ ಮೋದಿಯನ್ನು ಅರ್ಧ ಗಂಟೆಗೂ ಹೆಚ್ಚು ಕಾಯಿಸಿದ ಮಮತಾ ಬ್ಯಾನರ್ಜಿ

Friday, May 28th, 2021
modi Banarji

ನವದೆಹಲಿ: ಯಾಸ್ ಚಂಡುಮಾರುತದಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಲು ಕಲಾಯಿಕುಂಡ್ ವಾಯುನೆಲೆಗೆ ಪ್ರಧಾನಿ ಆಗಮಿಸಿದಾಗ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಮತ್ತು ರಾಜ್ಯಪಾಲ ಜಗದೀಪ್ ಧಾಂಕರ್ ಅವರನ್ನು ಅರ್ಧ ಗಂಟೆಗಳ ಕಾಲ ಕಾಯಿಸಿದ್ದಾರೆ ಎಂದು ಸರ್ಕಾರ ಆರೋಪಿಸಿದೆ. ವಾಯುನೆಲೆಯಲ್ಲಿ ಪ್ರಧಾನಿಯೊಂದಿಗೆ ತರಾತುರಿಯಲ್ಲಿ 15 ನಿಮಿಷ ಸಂವಾದ ನಡೆಸಿ, ಪ್ರಧಾನಿ ಯೊಂದಿಗಿನ ಚಂಡಮಾರುತ ಹಾನಿ ಪರಾಮರ್ಶನಾ ಸಭೆಯಲ್ಲಿ ಮಮತಾ ಪಾಲ್ಗೊಳ್ಳದೆ  ಕೇವಲ ಹಾನಿಯ ವರದಿ ಕೊಟ್ಟು ಹೋದ ಘಟನೆ ನಡೆದಿದೆ. ನೀವು ನನ್ನನ್ನು ಭೇಟಿಯಾಗಲು ಬಯಸಿದ್ದರಿಂದ ಇಂದು ಬಂದೆ. ನಾನು ಮತ್ತು ನನ್ನ […]

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮನೆಯಲ್ಲಿಯೇ ಕಪ್ಪುಧ್ವಜ ಹಾರಿಸಿದ ಕಾಂಗ್ರೆಸ್ ಶಾಸಕ ನವಜೋತ್ ಸಿಂಗ್ ಸಿಧು

Wednesday, May 26th, 2021
sidu

ನವದೆಹಲಿ :  ರೈತರನ್ನು ಬೆಂಬಲಿಸಿ ಪಂಜಾಬ್ ಕಾಂಗ್ರೆಸ್ ನ ಶಾಸಕ ನವಜೋತ್ ಸಿಂಗ್ ಸಿಧು ಪಟಿಯಾಲದಲ್ಲಿರುವ ತಮ್ಮ ನಿವಾಸದ ಮೇಲೆ ಕಪ್ಪು ಧ್ವಜ ಹಾರಿಸಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಮನೆಯಲ್ಲಿಯೇ ಕಪ್ಪುಧ್ವಜ ಹಾರಿಸುತ್ತಿದ್ದೇನೆ, ಪ್ರತಿಯೊಬ್ಬ ಪಂಜಾಬಿಯೂ ರೈತರನ್ನು ಬೆಂಬಲಿಸಬೇಕು ಎಂದು ಸಿಧು ಟ್ವೀಟ್ ಮಾಡಿದ್ದಾರೆ. ತಮ್ಮ ಪತ್ನಿ ನವ್ಜೋತ್ ಕೌರ್ ಸಿಧು ಅವರೊಂದಿಗೆ ಆರೋಹಣ ಮಾಡಿರುವ “ಕಪ್ಪು ಧ್ವಜ ಕೃಷಿ ಕಾಯ್ದೆಯ ವಿರೋಧದ ಸಂಕೇತ” ಎಂದು ಕಿರು ವಿಡಿಯೋ ಕ್ಲಿಪ್ ನ್ನು […]