ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ ಅಮಿತ್ ಶಾ

Thursday, October 3rd, 2019
amith-shah

ನವದೆಹಲಿ : ದೇಶಿ ನಿರ್ಮಿತ, ಅತ್ಯಂತ ವೇಗದ ಇಂಜಿನ್ ರಹಿತ ವಂದೇ ಭಾರತ್ ಎಕ್ಸ್ ಪ್ರೆಸ್ (ಟ್ರೈನ್ 18) ರೈಲಿಗೆ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ದೆಹಲಿ-ಕತ್ರಾ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಕೇವಲ 8ಗಂಟೆಗಳಲ್ಲಿ 655 ಕಿಲೋ ಮೀಟರ್ ತಲುಪಲಿದೆ. ಅಕ್ಟೋಬರ್ 5ರಿಂದ ದೆಹಲಿ-ಕತ್ರಾ ನಡುವೆ ಸಂಚಾರ ಆರಂಭಿಸಲಿದ್ದು, ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ವೈಷ್ಣೋದೇವಿ ದೇವಸ್ಥಾನ […]

ಪ್ರವಾಹ ಪರಿಸ್ಥಿತಿ ಪರಿಶೀಲನೆಯ ಸಮಯದಲ್ಲಿ ನೀರಿಗೆ ಬಿದ್ದ ಪಾಟಲಿಪುತ್ರದ ಬಿಜೆಪಿ ಸಂಸದ

Thursday, October 3rd, 2019
patna

ಪಾಟ್ನಾ : ಬಿಹಾರದಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹ ಉಂಟಾಗಿದ್ದು, ಪ್ರವಾಹ ಸ್ಥಿತಿಯನ್ನು ಪರಿಶೀಲಿಸಲು ತೆರಳಿದ್ದ ಬಜೆಪಿ ಸಂಸದರೊಬ್ಬರ ದೋಣಿ ಮುಳುಗಿದ ಘಟನೆ ಬುಧವಾರ ನಡೆದಿದೆ. ಪಾಟಲಿಪುತ್ರದ ಬಿಜೆಪಿ ಸಂಸದ ರಾಮ್ ಕೃಪಾಳ್ ಯಾದವ್ ಅವರು ಬಿಹಾರ ರಾಜಧಾನಿ ಪಾಟ್ನಾ ಬಳಿಯ ಮಸೌರ್ಹಿ ಎಂಬಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಅವರಿದ್ದ ದೋಣಿ ಮುಳುಗಿತ್ತು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದ ಪರಿಣಾಮ ಅವರು ಪ್ರಾಣಾಪಾಯದಿಂದ ಪಾರಾದರು. ನಂತರ ಮಾತನಾಡಿದ […]

ಹೈದರಬಾದ್ ನಲ್ಲಿ ಇಸ್ರೋ ವಿಜ್ಞಾನಿ ಎಸ್.ಸುರೇಶ್ ಕೊಲೆ

Wednesday, October 2nd, 2019
suresh-s

ಹೈದರಬಾದ್ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ರಾಷ್ಟ್ರೀಯ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ವಿಜ್ಞಾನಿ ಮಂಗಳವಾರ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಸ್ರೋ ವಿಜ್ಞಾನಿ 56 ವರ್ಷದ ಎಸ್.ಸುರೇಶ್ ಅವರನ್ನು ಹೈದರಬಾದ್ ನಗರದ ಹೃದಯಭಾಗದಲ್ಲಿರುವ ಅಮೀರ್‌ಪೇಟೆ ಪ್ರದೇಶದ ಅನ್ನಪೂರ್ಣ ಅಪಾರ್ಟ್‌ಮೆಂಟ್‌ನಲ್ಲಿರುವ ಅವರು ವಾಸವಾಗಿದ್ದ ಫ್ಲ್ಯಾಟ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಲಾಗಿದೆ. ಸುರೇಶ್ ಅವರು ಕೇರಳ ಮೂಲದವರಾಗಿದ್ದು, ಫ್ಲ್ಯಾಟ್ ನಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಪತ್ನಿ ಚೆನ್ನೈ ನಲ್ಲಿ […]

ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ : ಪ್ರಧಾನಿ ಮೋದಿಯವರಿಂದ ಮಹತ್ವದ ಘೋಷಣೆಗಳ ನಿರೀಕ್ಷೆ

Wednesday, October 2nd, 2019
gandhi-150

ನವದೆಹಲಿ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಐತಿಹಾಸಿಕ ಸಂಭ್ರಮದಲ್ಲಿ ಭಾರತ ಹಲವಾರು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಮಹತ್ವದ ಘೋಷಣೆಗಳನ್ನು ಮಾಡುವ ನಿರೀಕ್ಷೆ ಇದೆ. ಇಂದು ಸಾಯಂಕಾಲ ಪ್ರಧಾನಿ ಮೋದಿ ಅವರು ಗುಜರಾತ್ ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸಾಬರ್ ಮತಿ ನದಿ ದಂಡೆಯಲ್ಲಿ ಸುಮಾರು 20,000 ಗ್ರಾಮ ಮುಖಂಡರ ಸನ್ಮುಖದಲ್ಲಿ ಮೋದಿ ಅವರು ಭಾರತ ಬಹಿರ್ದೆಶೆ ಮುಕ್ತ […]

ಡಿ ಕೆ ಶಿವಕುಮಾರ್ ಗೆ ಅಕ್ಟೋಬರ್ 15 ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Tuesday, October 1st, 2019
DKShi

ನವದೆಹಲಿ : ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 15 ವರೆಗೆ ವಿಸ್ತರಿಸಲಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗೆ ಇಡಿ ಅಧಿಕಾರಿಗಳು ಇಂದು ಡಿಕೆ ಶಿವಕುಮಾರ್ ಅವರನ್ನು ಹಾಜರುಪಡಿಸಿದರು. ಕೋರ್ಟ್ ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿದೆ. ಅಕ್ಟೋಬರ್ 4 ಮತ್ತು 5ರಂದು ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ವಿಚಾರಣೆ ನಡೆಸಲು ಕೋರ್ಟ್ ಅವಕಾಶ ನೀಡಿದೆ.  

ಜಮ್ಮು-ಕಾಶ್ಮೀರ : ಬಸ್ ನಲ್ಲಿದ್ದ 15 ಕೆ.ಜಿ ಸ್ಪೋಟಕ ಪತ್ತೆ

Tuesday, October 1st, 2019
bhadrata-pade

ಜಮ್ಮು-ಕಾಶ್ಮೀರ : ಬಸ್ ನಲ್ಲಿದ್ದ 15 ಕೆ.ಜಿ ಭಾರೀ ಸ್ಪೋಟಕಗಳನ್ನು ವಶಪಡಿಸಿಕೊಳ್ಳುವ ಮೂಲಕ ಭದ್ರತಾ ಪಡೆಗಳು ಭಯೋತ್ಪಾದಕ ದಾಳಿಯನ್ನು ವಿಫಲಗೊಳಿಸಿದ್ದಾರೆ. ಕಥುವಾ ಜಿಲ್ಲೆಯ ಬಿಲಾವರ್ ನಿಂದ ಜಮ್ಮು ನಗರಕ್ಕೆ ಬಂದಿರುವ ಬಸ್ ನಲ್ಲಿ ಈ ಭಾರೀ ಸ್ಪೋಟಕಗಳು ಪತ್ತೆಯಾಗಿದ್ದವು. ಬೆಳಗ್ಗೆಯಷ್ಟೆ ಕೆರಾನ್ ಸೆಕ್ಟರ್ ನಲ್ಲಿ ಪಾಕಿಸ್ಥಾನ ಕದನ ವಿರಾಮ ಉಲ್ಲಂಘಿಸಿ ನಿರಂತರ ಗುಂಡಿನ ಮಳೆಗೆರೆದಿತ್ತು. ಉಗ್ರರು ಬಸ್ ನಿಲ್ದಾಣದಲ್ಲಿ ಭಾರೀ ಪ್ರಮಾಣದಲ್ಲಿ ಭಯೋತ್ಪಾದನ ದಾಳಿ ನಡೆಸುವ ಹುನ್ನಾರ ಇದೀಗ ವಿಫಲಗೊಂಡಿದೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ […]

370 ನೇ ವಿಧಿ ರದ್ದತಿ : ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭ

Tuesday, October 1st, 2019
supreemcourt

ನವದೆಹಲಿ : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ. ಇಂದಿನಿಂದ ವಿಚಾರಣೆ ಆರಂಭವಾಗಲಿದ್ದು, ನ್ಯಾ.ಎನ್ ವಿ ರಮಣ ನೇತೃತ್ವದ ಪಂಚಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಕಳೆದ ಆಗಸ್ಟ್ 05 ರಂದು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು […]

ಐಎನ್ ಎಕ್ಸ್ ಮೀಡಿಯಾ ಪ್ರಕರಣ : ಚಿದಂಬರಂ ಜಾಮೀನು ಅರ್ಜಿ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್

Monday, September 30th, 2019
P.Chidambaram

ನವದೆಹಲಿ : ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ವಿತ್ತ ಸಚಿವ ಪಿ.ಚಿದಂಬರಂಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಕಳೆದ ಒಂದು ತಿಂಗಳಿನಿಂದ ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಚಿದಂಬರಂ ತಿಹಾರ್ ಜೈಲಿನಲ್ಲಿ ಕಾಲಕಳೆಯುತ್ತಿದ್ದಾರೆ. ಪ್ರಕರಣದ ಕುರಿತಂತೆ ಸಿಬಿಐ ಚಿದಂಬರಂ ವಿಚಾರಣೆ ಪೂರ್ಣಗೊಂಡ ನಂತರ ತಿಹಾರ್ ಜೈಲಿನಲ್ಲಿದ್ದು, ಈವರೆಗೆ ಜಾಮೀನು ಸಿಕ್ಕಿಲ್ಲ. ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆಯನ್ನು ತಳ್ಳಿಹಾಕಿರುವ ಹೈಕೋರ್ಟ್, ಮಿ.ಚಿದಂಬರಂ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ […]

ಉಗ್ರರ ವಿರುದ್ಧ ಸತತ 10ಗಂಟೆಗಳ ಸೇನಾ ಕಾರ್ಯಾಚರಣೆ ಅಂತ್ಯ : ಮೂವರು ಉಗ್ರರ ಹತ್ಯೆ

Saturday, September 28th, 2019
sene

ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದ ರಂಬಾನ್ ಜಿಲ್ಲೆಯ ಬಾಟೋಟೆ ನಗರದ ಮನೆಯೊಂದರಲ್ಲಿ ಮಾಲೀಕನನ್ನು ಒತ್ತೆಯಾಳುವನ್ನಾಗಿ ಇರಿಸಿಕೊಂಡಿದ್ದ ಉಗ್ರರ ವಿರುದ್ಧ ಸತತ ಹತ್ತು ಗಂಟೆಗಳ ಕಾಲ ಸೇನಾಪಡೆ ಕಾರ್ಯಾಚರಣೆ ನಡೆಸುವ ಮೂಲಕ ಮೂವರು ಉಗ್ರರನ್ನು ಹತ್ಯೆಗೈದಿದ್ದು, ಒತ್ತೆಯಾಳನ್ನು ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಂಬಾನ್ ನ ಬಾಟೋಟೆ ಪ್ರದೇಶದಲ್ಲಿನ ಮನೆಯೊಳಕ್ಕೆ ನುಗ್ಗಿದ್ದ ಮೂವರು ಉಗ್ರರು, ಮನೆಯಲ್ಲಿದ್ದ ಮಾಲೀಕನನ್ನು ಒತ್ತೆಯಾಳುವನ್ನಾಗಿ ಇಟ್ಟುಕೊಂಡು, ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಸೇನೆ ಪ್ರತಿದಾಳಿ ಮೂಲಕ ಕಾರ್ಯಾಚರಣೆ ನಡೆಸಿತ್ತು. ಸತತ ಹತ್ತು ಗಂಟೆಗಳ […]

ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯನ್ನು ಈಡೇರಿಸಿದ ಮಗಳು

Saturday, September 28th, 2019
bansuri-swaraj

ನವದೆಹಲಿ : ಇತ್ತೀಚೆಗೆ ನಿಧನ ಹೊಂದಿದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಕೊನೆಯ ಆಸೆಯೊಂದು ಈಗ ಪೂರೈಸಿದೆ. ಅದು ಅವರ ಮಗಳ ಮೂಲಕ. ಹೌದು ಸುಷ್ಮಾ ಸ್ವರಾಜ್ ಮಗಳು ಬಾನ್ಸುರಿ ಸ್ವರಾಜ್ ಅಮ್ಮನ ಕೊನೆಯಾಸೆ ಈಡೇರಿಸಿದ್ದಾರೆ. ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಪರವಾಗಿ ವಾದ ಮಂಡಿಸಿದ್ದ ಹರಿಶ್ ಸಾಳ್ವೆ ಅವರು ವಾದ ಶುಲ್ಕವಾಗಿ ಒಂದು ರೂಪಾಯಿ ಪಡೆಯಲು ನಿರ್ಧರಿಸಿದ್ದರು. ಈ ಶುಲ್ಕವನ್ನು ಈಗ ಹರಿಶ್ ಸಾಳ್ವೆ ಅವರಿಗೆ ಸುಷ್ಮಾ ಮಗಳು […]