ದ್ವಿತೀಯಾರ್ಧದಲ್ಲಿ ದೇಶದ ಆರ್ಥಿಕತೆಯ ಬೆಳವಣಿಗೆ : ನಿರ್ಮಲಾ ಸೀತಾರಾಮನ್‌

Friday, September 27th, 2019
nirmala-seetharaman

ಹೊಸದಿಲ್ಲಿ : ದೇಶದ ಆರ್ಥಿಕತೆಯು ಪ್ರಸ್ತುತ ಆರ್ಥಿಕ ವರ್ಷದ ದ್ವಿತೀಯಾರ್ಧದ ನಂತರ ಮೇಲೇರಲಿದೆ ಎಂಬ ಆಶಾವಾದವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ವ್ಯಕ್ತಪಡಿಸಿದ್ದಾರೆ. ಗುರುವಾರ, ಖಾಸಗಿ ಹಣಕಾಸು ಸಂಸ್ಥೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಜತೆಗೆ ಮಾತುಕತೆ ನಡೆಸಿದ ಅವರು, “”ದೇಶದಲ್ಲಿ ನೋಟುಗಳ ಚಲಾವಣೆಯ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಆಗಿಲ್ಲ. ಈಗಲೂ ಬ್ಯಾಂಕುಗಳ ಸಾಲಗಳಿಗೆ ಸಾಕಷ್ಟು ಬೇಡಿಕೆಯಿದೆ. ದ್ವಿತೀಯಾರ್ಧದಲ್ಲಿ ಉತ್ಪನ್ನಗಳ ಬಳಕೆ ಹೆಚ್ಚಾಗಲಿದ್ದು, ಬ್ಯಾಂಕುಗಳ ಸಾಲ ನೀಡುವಿಕೆಯ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ, ದೇಶದ ಆರ್ಥಿಕತೆಯ ಬೆಳವಣಿಗೆಯೂ ಆಗಲಿದೆ” […]

17 ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್

Wednesday, September 25th, 2019
supreem-court

ನವದೆಹಲಿ : ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಗುರುವಾರಕ್ಕೆ ಮುಂದೂಡಿದೆ. ಬುಧವಾರ ಅನರ್ಹ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಒಂದೂವರೆ ಗಂಟೆಗಳ ಕಾಲ ವಾದ ಮಂಡಿಸಿದ್ದರು. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ಸ್ಪೀಕರ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅನರ್ಹ ಶಾಸಕ ಡಾ.ಸುಧಾಕರ್ ಪರ ಸುಂದರಂ ವಾದ ಮಂಡಿಸಿದ್ದರು. ವಾದ, ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ನ ನ್ಯಾ.ಎನ್ ವಿ ರಮಣ್ […]

ಚಿನ್ಮಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ ಆರೋಪ : ವಿದ್ಯಾರ್ಥಿನಿಯ ಬಂಧನ

Wednesday, September 25th, 2019
shahajahan-pura

ಶಹಜಹಾನ್ ಪುರ್ : ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದ ಕಾನೂನು ವಿದ್ಯಾರ್ಥಿನಿಯನ್ನು ಸುಲಿಗೆ ಆರೋಪದಡಿ ಎಸ್ ಐಟಿ ಬುಧವಾರ ಬಂಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಂದು ಬೆಳಗ್ಗೆ 23ವರ್ಷದ ಕಾನೂನು ವಿದ್ಯಾರ್ಥಿನಿಯನ್ನು ಉತ್ತರಪ್ರದೇಶದ ಮನೆಯಲ್ಲಿ ಆಕೆಯನ್ನು ವಿಶೇಷ ತನಿಖಾ ತಂಡ ಬಂಧಿಸಿದ್ದು, ವಿದ್ಯಾರ್ಥಿನಿಯನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ ಎಂದು ವರದಿ ವಿವರಿಸಿದೆ. ಸ್ವಾಮಿ ಚಿನ್ಮಯಾನಂದ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿ ಕಾನೂನು ವಿದ್ಯಾರ್ಥಿನಿ ದೂರು ಆಧರಿಸಿ ಸ್ವಾಮಿ ಅವರನ್ನು […]

ಪಾಕಿಸ್ಥಾನವು ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ : ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್

Monday, September 23rd, 2019
bipin-ravath

ಚೆನ್ನೈ : ಕಳೆದ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಯ ದಾಳಿಗೆ ನಾಮಾವಶೇಷವಾಗಿದ್ದ ಜೈಶ್-ಎ-ಮಹಮ್ಮದ್ ಉಗ್ರ ಸಂಘಟನೆಯ ಬಾಲಾಕೋಟ್ ಉಗ್ರ ತರಬೇತಿ ಶಿಬಿರ ಮತ್ತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನೀಡಿದ್ದಾರೆ. ಫೆಬ್ರವರಿ 26ರ ವಾಯು ದಾಳಿಯಲ್ಲಿ ಬಾಲಾಕೋಟ್ ಉಗ್ರ ತರಬೇತಿ ಶಿಬಿರ ಸಂಪೂರ್ಣವಾಗಿ ಹಾನಿಗೊಂಡಿತ್ತು ಮತ್ತು ನಾಶವಾಗಿತ್ತು. ಆದರೆ ಇದೀಗ ಮತ್ತೆ ಅದನ್ನು ಪುನರ್ ಸ್ಥಾಪಿಸಲಾಗಿದೆ ಎಂದು ರಾವತ್ ಅವರು ಮಾಹಿತಿ ನೀಡಿದರು. ಇಷ್ಟು ಮಾತ್ರವಲ್ಲದೇ ಸುಮಾರು 500 […]

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

Monday, September 23rd, 2019
petrol

ಹೊಸದಿಲ್ಲಿ : ದೇಶದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ಗೆ ದಿಲಿಯಲ್ಲಿ ಕ್ರಮವಾಗಿ 27, 18 ಪೈಸೆ ದರ ಹೆಚ್ಚಾಗಿದೆ. ಹಿಂದಿನ ಆರು ದಿನಗಳಲ್ಲಿ ಒಟ್ಟಾರೆ, ಪ್ರತಿ ಲೀ. ಪೆಟ್ರೋಲ್‌ಗೆ 1.59 ರೂ., ಡೀಸೆಲ್‌ಗೆ 1.31ರೂ. ಏರಿಕೆಯಾಗಿದೆ. 2 ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ಗರಿಷ್ಠ ದರ ಏರಿಕೆಯಾಗಿದೆ. ದಿಲ್ಲಿ ಪೆಟ್ರೋಲ್‌ಗೆ ಕೋಲ್ಕತಾದಲ್ಲಿ 76.32 ರೂ., ಮುಂಬಯಿನಲ್ಲಿ 79.29 ರೂ., ಚೆನ್ನೈಯಲ್ಲಿ 76.52 ರೂ., ಹೊಸದಿಲ್ಲಿಯಲ್ಲಿ 73.62 ರೂ. ಆಗಿದ್ದರೆ, ಪ್ರತಿ ಲೀ. ಡೀಸೆಲ್‌ಗೆ ಕೋಲ್ಕತಾದಲ್ಲಿ 69.15 ರೂ., […]

ಅಕ್ಟೋಬರ್21ರಂದು 15 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ

Saturday, September 21st, 2019
shasakaru

ನವದೆಹಲಿ : ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸಿದ ಬೆನ್ನಲ್ಲೇ ಕರ್ನಾಟಕದ 15 ಅನರ್ಹ ಶಾಸಕರ ಕ್ಷೇತ್ರಗಳಿಗೂ ಉಪಚುನಾವಣೆಯ ದಿನಾಂಕ ಘೋಷಿಸಿದೆ. ಅಕ್ಟೋಬರ್ 21ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿಲ್ಲ. ಆರ್ ಆರ್ ನಗರ(ಮುನಿರತ್ನ ಕ್ಷೇತ್ರ) ಮತ್ತು ಮಸ್ಕಿ(ಪ್ರತಾಪ್ ಗೌಡ)ಕ್ಷೇತ್ರಗಳಲ್ಲಿ ಉಪಚುನಾವಣೆ […]

ಅತ್ಯಾಚಾರ ಆರೋಪ : ಸ್ವಾಮಿ ಚಿನ್ಮಯಾನಂದ ಬಂಧನ

Friday, September 20th, 2019
Chinmayanand

ಶಹಜಹಾನ್‌ ಪುರ : ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಭಾರತೀಯ ಜನತಾ ಪಕ್ಷದ ನಾಯಕ ಸ್ವಾಮಿ ಚಿನ್ಮಯಾನಂದ ಅವರನ್ನು ಪೊಲೀಸರು ಶುಕ್ರವಾರ ಬೆಳಿಗ್ಗೆ ಬಂಧಿಸಿದ್ದಾರೆ. ಸ್ವಾಮಿ ಚಿನ್ಮಯಾನಂದ ಅವರು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. 73ರ ಹರೆಯದ ಬಿಜೆಪಿ ನಾಯಕ ಕಳೆದ ಹಲವು ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದು, ವೈದ್ಯಕೀಯ ತಂಡದಿಂದ ಆಶ್ರಮದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಶಹಜಹಾನ್‌ ಪುರದ ಸ್ವಾಮಿ ಸುಖದೇವಾನಂದ ಕಾನೂನು ಕಾಲೇಜಿನ ವಿದ್ಯಾರ್ಥಿಯೋರ್ವಳು […]

ಬ್ಯಾಂಕುಗಳನ್ನು ವಿಲೀನಗೊಳಿಸದಂತೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಒತ್ತಾಯ

Thursday, September 19th, 2019
Pejawar

ನವದೆಹಲಿ : ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ನವದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ಕರಾವಳಿ ಕರ್ನಾಟಕದಲ್ಲಿ ಹುಟ್ಟಿದ ಬ್ಯಾಂಕುಗಳನ್ನು ವಿಲೀನಗೊಳಿಸುವ ಯೋಜನೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಕರ್ನಾಟಕದ ಕರಾವಳಿ ಪ್ರದೇಶದ ಬ್ಯಾಂಕುಗಳನ್ನು ಇತರ ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸುವುದರಿಂದ ಅವರ ಹೆಸರಿನೊಂದಿಗೆ ಸಂಸ್ಕೃತಿಯೂ ಶಾಶ್ವತವಾಗಿ ಅಳಿಸಿ ಹೋಗುತ್ತದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ನೀಡಲು ಬ್ಯಾಂಕುಗಳ ವಿಲೀನ ಅತ್ಯಗತ್ಯ ಎಂದು ಇದೇ ವೇಳೆ ನಿರ್ಮಲಾ ಅವರಿಗೆ […]

ನರೇಂದ್ರ ಮೋದಿ ಹುಟ್ಟುಹಬ್ಬದಿನದಂದು ಸರ್ದಾರ್ ಸರೋವರ ಆಣೆಕಟ್ಟು ವೀಕ್ಷಣೆ

Tuesday, September 17th, 2019
modi

ಅಹಮದಾಬಾದ್ :  ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಗುಜರಾತ್ ರಾಜ್ಯದ ಕೇವಡಿಯಾ ಜಿಲ್ಲೆಯಲ್ಲಿರುವ ಸರ್ದಾರ್ ಸರೋವರ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ಆರತಿ ಬೆಳಗಿದ್ದಾರೆ. ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ಮೋದಿಯವರು ಬಣ್ಣ, ಬಣ್ಣದ ಚಿಟ್ಟೆಗಳನ್ನು ಹಾರಿಸುವ ಮೂಲಕ ಸಂಭ್ರಮಿಸಿದ್ದು, ಬಳಿಕ ಸರ್ದಾರ್ ಸರೋವರ ಅಣೆಕಟ್ಟನ್ನು ವೀಕ್ಷಣೆ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಪ್ರಥಮ ಪೂರ್ಣವೈಭವ ವೀಕ್ಷಿಸಿದ್ದಾರೆ. 1961, ಏಪ್ರಿಲ್‌ 5ರಂದು ಸರ್ದಾರ್‌ ಸರೋವರ ಅಣೆಕಟ್ಟೆ ನಿರ್ಮಾಣಕ್ಕೆ ಅಂದಿನ ಪ್ರಧಾನಿ […]

ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಮುಂದಿನ ಸೋಮವಾರಕ್ಕೆ ಮುಂದೂಡಿಕೆ

Tuesday, September 17th, 2019
supreem-court

ನವದೆಹಲಿ : ಹಲವು ತಿಂಗಳ ವಿಳಂಬದ ಬಳಿಕ ಇಂದು ನಡೆಯಬೇಕಿದ್ದ ಅನರ್ಹ ಶಾಸಕರ ಶಾಸಕರ ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಲಾಗಿದೆ. ಕರ್ನಾಟಕ ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ತೀರ್ಪು ಪ್ರಶ್ನಿಸಿ 17 ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ಇಂದು ಕೈಗೆತ್ತಿಕೊಂಡಿತ್ತು. ಆದರೆ, ತ್ರಿಸದಸ್ಯ ಪೀಠದಲ್ಲಿ ಇದ್ದ ನ್ಯಾ.ಮೋಹನ್ ಶಾಂತನಗೌಡರ ಅವರು ತಾವು ಕರ್ನಾಟಕ ಮೂಲದವರು ಎಂಬ ಕಾರಣ ನೀಡಿ, ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದ, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಪೀಠ ಮುಂದೂಡಿತು. […]