ಸುಪ್ರೀಂ ಕೋರ್ಟ್ ನಲ್ಲಿ ಇಂದು ಅನರ್ಹ ಶಾಸಕರ 9 ರಿಟ್‌ ಅರ್ಜಿಗಳ ವಿಚಾರಣೆ

Tuesday, September 17th, 2019
supreem-court

ಹೊಸದಿಲ್ಲಿ : ರಾಜಕೀಯ ಜಂಗಿ ಕುಸ್ತಿಯಲ್ಲಿ ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದ 17 ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಂಗಳವಾರ ಸುಪ್ರೀಂ ಕೋರ್ಟ್‌ ನಲ್ಲಿ ನಡೆಯಲಿದೆ. ಸರ್ವೋಚ್ಛ ನ್ಯಾಯಾಲಯದ ನ್ಯಾ.ಎನ್.ವಿ ರಮಣ, ನ್ಯಾ. ಮೋಹನ್‌ ಶಾಂತನಗೌಡರ್‌ ಮತ್ತುನ್ಯಾ ಅಜಯ್‌ ರಸ್ತೋಗಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಅನರ್ಹ ಶಾಸಕರ 9 ರಿಟ್‌ ಅರ್ಜಿಗಳ ವಿಚಾರಣೆ ನಡೆಯಲಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನ ಒಟ್ಟು 17 ಶಾಸಕರನ್ನು ಸ್ಪೀಕರ್‌ ಅವರು ಈ ವಿಧಾನಸಭೆಯ ಅವಧಿಯವರೆಗೆ ಅನರ್ಹಗೊಳಿಸಿ ಆದೇಶ ಮಾಡಿದ್ದರು. ಈ […]

ಆಂಧ್ರಪ್ರದೇಶದ ಮಾಜಿ ಸ್ಪೀಕರ್ ಕೋಡೆಲಾ ಶಿವ ಪ್ರಸಾದ್ ಆತ್ಮಹತ್ಯೆ

Monday, September 16th, 2019
shiva-prasad

ಆಂಧ್ರಪ್ರದೇಶ : ಆಂಧ್ರಪ್ರದೇಶ ವಿಧಾನಸಭೆಯ ಮಾಜಿ ಸ್ಪೀಕರ್, ಟಿಡಿಪಿ ಮುಖಂಡ ಕೋಡೆಲಾ ಶಿವ ಪ್ರಸಾದ್(72) ಹೈದರಾಬಾದ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಭ್ರಷ್ಟಾಚಾರ ಮತ್ತು ಆರ್ಥಿಕ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿರುವುದಾಗಿ ಕುಟುಂಬದ ಮೂಲಗಳು ದೂರಿವೆ. ಸೋಮವಾರ ಬೆಳಗ್ಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಕೂಡಲೇ ಅವರನ್ನು ಬಸವ ತಾರಕರಾಮಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಆಂಧ್ರದಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಪಿ ಸರಕಾರ ಅಧಿಕಾರಕ್ಕೆ […]

ದೇಶದ ಆರ್ಥಿಕಾಭಿವೃದ್ಧಿಗೆ ಕೇಂದ್ರದಿಂದ ಮಹತ್ವದ ಕ್ರಮ : ನಿರ್ಮಲಾ ಸೀತಾರಾಮನ್ ಘೋಷಣೆ

Saturday, September 14th, 2019
nirmala-seetharaman

ನವದೆಹಲಿ : ದೇಶದ ಆರ್ಥಿಕಾಭಿವೃದ್ಧಿ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡ ಮಹತ್ವದ ನಿರ್ಧಾರಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ದೇಶದ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕೈಗೊಂಡ ನಿರ್ಧಾರಗಳ ಮುಖ್ಯಾಂಶ ಇಲ್ಲಿದೆ. *ಭಾರತದ ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಸ್ತುತ ದೇಶದ ಹಣದುಬ್ಬರ ಶೇ.4ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ. ಬ್ಯಾಂಕ್ ಗಳು ನೀಡುತ್ತಿರುವ ಸಾಲ ಪ್ರಮಾಣದ ಹೆಚ್ಚಳ ಮತ್ತು ನಿಯಮಗಳಿಗೆ ಸಂಬಂಧಿಸಿದಂತೆ ಎಲ್ಲಾ […]

ದೆಹಲಿ : ಸಮ-ಬೆಸ ಸಂಚಾರ ಪದ್ದತಿ ಮತ್ತೆ ಜಾರಿ : ಅರವಿಂದ್‌ ಕೇಜ್ರಿವಾಲ್‌

Friday, September 13th, 2019
dehali

ಹೊಸದಿಲ್ಲಿ : ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿಯಲ್ಲಿ ಈ ಹಿಂದೆ ಜಾರಿಗೆ ತರಲಾಗಿದ್ದ ಸಮ-ಬೆಸ ಸಂಚಾರ ಪದ್ದತಿಯನ್ನು ಮತ್ತೆ ಜಾರಿಗೊಳಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಚಳಿಗಾಲದಲ್ಲಿ ವಾಯು ಮಾಲಿನ್ಯ ಪ್ರಮಾಣ ಏರಿಕೆಯಾಗುವ ಹಿನ್ನಲೆಯಲ್ಲಿ ನವೆಂಬರ್‌ 4ರಿಂದ 15ರವರೆಗೆ ಅಂದರೆ ಒಟ್ಟು 12 ದಿನಗಳ ಕಾಲ ಸಮ-ಬೆಸ ಸಂಚಾರ ವ್ಯವಸ್ಥೆ ಮಾಡಲಾಗುವುದು ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಇದರ ಪ್ರಕಾರ ನವೆಂಬರ್‌ 4, 6, 8, 10, 12, 14ರಂದು ಸಮ ಸಂಖ್ಯೆ ನೋಂದಣಿಯ ವಾಹನಗಳು ರಸ್ತೆಗಿಳಿಯಬಹುದು. ಪರ್ಯಾಯ […]

ಮುಂಬೈ : ಗಣೇಶ ವಿಸರ್ಜನೆ ಸಂದರ್ಭದಲ್ಲಿ 17ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವು

Friday, September 13th, 2019
ganesha

ಮುಂಬೈ : ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಕೊನೆಯ ದಿನ ನಡೆದ ಗಣೇಶ ವಿಗ್ರಹಗಳ ವಿಸರ್ಜನೆ ಸಂದರ್ಭದಲ್ಲಿ 17ಕ್ಕೂ ಹೆಚ್ಚು ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಐವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ. ಬಿಗಿ ಬಂದೋಬಸ್ತ್ ನಲ್ಲಿ ಗುರುವಾರ ನಡೆದ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾರೀ ಪ್ರಮಾಣದಲ್ಲಿ ಜನ ಪಾಲ್ಗೊಂಡಿದ್ದರು. ಹತ್ತು ದಿನಗಳ ಕಾಲ ನಡೆದ ಗಣೇಶ ಹಬ್ಬದ ಕೊನೆಯ ದಿನವಾದ ಗುರುವಾರ ಗಣೇಶ ವಿಗ್ರಹಗಳ ವಿಸರ್ಜನೆ ನಡೆದಿತ್ತು. […]

ಚಂದ್ರಯಾನ-2ಕ್ಕೆ ಆತಂಕ : ಪ್ರಧಾನಿ ಮೋದಿಯನ್ನು ತಬ್ಬಿ ಕಣ್ಣೀರಿಟ್ಟ ಇಸ್ರೋ ಮುಖ್ಯಸ್ಥ ಕೆ.ಶಿವನ್

Saturday, September 7th, 2019
shivan

ಬೆಂಗಳೂರು : ತನ್ನ ಗುರಿ ತಲುಪುವ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಚಂದ್ರಯಾನ- 2 ನೌಕೆ ಸಂವಹನ ಕಳೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರಿನ ಇಸ್ರೋದ ಕಂಟ್ರೋಲ್ ಸೆಂಟರ್ ನಲ್ಲಿ ದುಗುಡ ಮನೆ ಮಾಡಿತ್ತು. ಈ ಹೆಮ್ಮೆಯ ಕ್ಷಣಕ್ಕಾಗಿ ಉಸಿರುಬಿಗುಹಿಡಿದು ಕಾದಿದ್ದ ಭಾರತೀಯರ ಮನಸ್ಸಿನಲ್ಲೂ ಬೇಸರ ಮನೆ ಮಾಡಿತ್ತು. ಆದರೆ ಎಲ್ಲಕ್ಕಿಂತ ಭಾವುಕ ಅನಿಸಿದ ಕ್ಷಣವೆಂದರೆ ತಮ್ಮ ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ಕಂಡ ಅನಿರೀಕ್ಷಿತ ತಿರುವನ್ನು ನೆನೆದು ಇಸ್ರೋ ಅಧ್ಯಕ್ಷ ಕೆ. ಶಿವನ್ ಕಣ್ಣೀರಿಟ್ಟಿದ್ದಾರೆ. ಇಸ್ರೋ ಕಂಟ್ರೋಲ್ […]

ಚಂದ್ರಯಾನ-2 ಚಂದ್ರನ ಅಂಗಳದಲ್ಲಿ ಲ್ಯಾಂಡರ್ ಇಳಿಯುವುದನ್ನು ನೋಡಲು ಕುತೂಹಲ : ನರೇಂದ್ರ ಮೋದಿ

Friday, September 6th, 2019
modi

ನವದೆಹಲಿ :ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 2 ನೌಕೆಯ ವಿಕ್ರಮ್ ಲ್ಯಾಂಡರ್ ಇಳಿಯಲು ಕೆಲವೇ ಗಂಟೆಗಳು ಬಾಕಿ ಇದ್ದು, ಇಸ್ರೋದ ಐತಿಹಾಸಿಕ ಸಾಧನೆಯ ಈ ವಿಶೇಷ ಕ್ಷಣಗಳನ್ನು ಜನರು ಕಣ್ತುಂಬಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಚಂದ್ರನ ಮೇಲೆ ಲ್ಯಾಂಡರ್ ಇಳಿಯುವುದನ್ನು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವೀಕ್ಷಿಸಲು ತುಂಬಾ ಕುತೂಹಲಿಯಾಗಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇಸ್ರೋದ ಈ ಐತಿಹಾಸಿಕ ಸಾಧನೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾನು ತುಂಬಾ ಕಾತುರನಾಗಿದ್ದೇನೆ ಎಂದು ಟ್ವೀಟ್ […]

ಪಿ ಚಿದಂಬರಂ ಬಂಧನಕ್ಕೆ ಅಡ್ಡಿಯಿಲ್ಲ : ಸುಪ್ರೀಂಕೋರ್ಟ್ ಆದೇಶ

Thursday, September 5th, 2019
P.-chidambaram

ನವದೆಹಲಿ : ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಸ್ಟಡಿಯಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂಗೆ ಗುರುವಾರದಂದು ಸುಪ್ರೀಂಕೋರ್ಟಿನಿಂದ ಕಹಿ ಸುದ್ದಿ ಸಿಕ್ಕಿದೆ. ಬಂಧನದಿಂದ ರಕ್ಷಣೆ ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರ ವಿಚಾರಣೆಯನ್ನು ಸಿಬಿಐ ಮುಗಿಸಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಜಾರಿ ನಿರ್ದೇಶನಾಲಯವು ಸೆ.05ರ ತನಕ ಬಂಧಿಸದಂತೆ ಕೋರ್ಟ್ ಸೂಚಿಸಿದೆ. ಆದರೆ, ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ […]

ಪಿ.ಚಿದಂಬರಂ ರವರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿ : ಸುಪ್ರೀಂ ಕೋರ್ಟ್‌ ಆದೇಶ

Tuesday, September 3rd, 2019
chidambaram

ಹೊಸದಿಲ್ಲಿ : ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕೇಂದ್ರದ ಮಾಜಿ ಗೃಹಸಚಿವ ಪಿ.ಚಿದಂಬರಂ ಅವರನ್ನು ಸೆ.5ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಅಲ್ಲದೇ ಬಂಧನ ವಾರೆಂಟ್‌ ಕುರಿತಾದ ಅರ್ಜಿಯನ್ನು ಅದೇ ದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್‌ ನ್ಯಾ| ಆರ್‌ ಭಾನುಮತಿ ಮತ್ತು ಎ.ಎಸ್‌. ಬೋಪಣ್ಣ ಅವರಿದ್ದ ನ್ಯಾಯಪೀಠ ಚಿದಂಬರಂ ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್‌ ಮತ್ತು ಸಿಬಿಐ ಕಸ್ಟಡಿಗೆ ನೀಡಿದ್ದರ ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತ […]

ಮುಂಬೈನಲ್ಲಿ ಮತ್ತೆ ಧಾರಾಕಾರ ಮಳೆ : ಹಲವು ಪ್ರದೇಶಗಳು ಜಲಾವೃತ

Tuesday, September 3rd, 2019
maharashtra

ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಸೋಮವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರಿಂದಾಗಿ ನಗರದ ಹಲವು ಪ್ರದೇಶಗಳು ಜಲಾವೃತವಾಗಿದೆ. ವಾಹನ ಸವಾರರು ಪರದಾಡುವಂತಾಗಿದೆ. ಮಂಗಳವಾರವೂ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈನ ಕಿಂಗ್ ಸರ್ಕಲ್, ಮಾಟುಂಗಾ, ಅಂಧೇರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನರು ತೀವ್ರ ಪರದಾಡುವಂತಾಗಿದೆ ಎಂದು ವರದಿ ತಿಳಿಸಿದೆ. ಈ ಮಳೆಗಾಲದಲ್ಲಿ ಮುಂಬೈ ನಗರಿ ಹಲವು ಬಾರಿ ಮಳೆಯಿಂದ ಜಲಾವೃತಗೊಂಡಿದ್ದು, ಸ್ಥಳೀಯ ರೈಲು ಸಂಚಾರ ಹಾಗೂ ಬಸ್, ವಿಮಾನ […]