ಚಂದ್ರಯಾನ-2 ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಪ್ರಕ್ರಿಯೆ ಯಶಸ್ವಿ

Tuesday, September 3rd, 2019
chandrayana-2

ನವದೆಹಲಿ : ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2ನ ಮತ್ತೊಂದು ಹಂತ ಕೂಡ ಯಶಸ್ವಿಯಾಗಿದೆ. ಹೀಗಾಗಿ ಚಂದ್ರನಿಗೆ ಗಗನ ನೌಕೆ ಮತ್ತಷ್ಟು ಹತ್ತಿರವಾಗಲಿದೆ. ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಪ್ರಕ್ರಿಯೆಯನ್ನು ವಿಜ್ಞಾನಿಗಳು ಮಂಗಳವಾರ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಅಂದರೆ ಮೊದಲ ಬಾರಿಗೆ ತನ್ನ ಕಕ್ಷೆಯಲ್ಲಿ ಸುತ್ತುವಿಕೆಯನ್ನು ನಿಲ್ಲಿಸುವ (ಡಿ-ಆರ್ಬಿಟ್ ) ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿದೆ. ಇಂದು ಭಾರತೀಯ ಕಾಲಮಾನ 8.50 ರ ಸುಮಾರಿಗೆ ಪ್ರಾರಂಭವಾದ ಈ ಪ್ರಕ್ರಿಯೆ ಯಾವುದೇ ತೊಂದರೆಗಳಿಲ್ಲದೆ ನಾಲ್ಕು ಸೆಕೆಂಡ್ […]

ರಾಸಾಯನಿಕ ಉತ್ಪನ್ನ ತಯಾರಿಕಾ​ ಕಾರ್ಖಾನೆ ಸ್ಫೋಟ : 10 ಮಂದಿ ಸಾವು

Saturday, August 31st, 2019
Mumbay

ಮುಂಬೈ : ರಾಸಾಯನಿಕ ಉತ್ಪನ್ನ ತಯಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ. 10ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಧುಲೇ ಸಮೀಪದ ಶಿರ್ಪುರ್ ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಸ್ಫೋಟದ ರಭಸಕ್ಕೆ 70ಕ್ಕೂ ಅಧಿಕ ಮಂದಿ ಕಾರ್ಖಾನೆ ಒಳಗಡೆ ಸಿಲುಕಿದ್ದು, ಸ್ಥಳಕ್ಕೆ ಎನ್ ಡಿಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವುದಾಗಿ ವರದಿ ತಿಳಿಸಿದೆ. ಇಂದು ಬೆಳಗ್ಗೆ 9.45ರ ಸುಮಾರಿಗೆ ಕೆಮಿಕಲ್ ಫ್ಯಾಕ್ಟರಿಯೊಳಗೆ […]

ನವದೆಹಲಿ : ಪಿ.ಚಿದಂಬರಂ ಸೆಪ್ಟೆಂಬರ್ 2 ರವರೆ ಸಿಬಿಐ ವಶದಲ್ಲಿ

Friday, August 30th, 2019
chidambaram

ನವದೆಹಲಿ : ಐಎನ್‌ಎಕ್ಸ್‌ ಮೀಡಿಯಾ ಹಗರಣ ಪ್ರಕರಣದಲ್ಲಿ ಸಿಬಿಐ ವಶದಲ್ಲಿರುವ ಪಿ.ಚಿದಂಬರಂ ಅವರು ಸೆಪ್ಟೆಂಬರ್ 2 ರವರೆಗೂ ಸಿಬಿಐ ವಶದಲ್ಲಿಯೇ ಇರಲಿದ್ದಾರೆ. ಚಿದಂಬರಂ ಅವರನ್ನು ಆಗಸ್ಟ್ 30 ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ನೀಡಲಾಗಿತ್ತು. ಇಂದು ಮತ್ತೆ ಅರ್ಜಿ ಸಲ್ಲಿಸಿದ ಸಿಬಿಐ ಮತ್ತೆ ಐದು ದಿನಗಳ ಕಾಲ ಸಿಬಿಐಗೆ ವಶಕ್ಕೆ ನೀಡುವಂತೆ ಕೇಳಿತ್ತು. ಆದರೆ ಇದಕ್ಕೆ ನಿರಾಕರಿಸಿರುವ ನ್ಯಾಯಾಲಯವು ಸೆಪ್ಟೆಂಬ್ ಎರಡರ ವರೆಗೆ ಮಾತ್ರವೇ ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ನೀಡಿದೆ. ಸೆಪ್ಟೆಂಬರ್ 5 ವರೆಗೆ […]

ರಾಷ್ಟ್ರೀಯ ಕ್ರೀಡಾ ದಿನ : ಫಿಟ್ ಇಂಡಿಯಾ ಆಂದೋಲನಕ್ಕೆ ಮೋದಿ ಚಾಲನೆ

Thursday, August 29th, 2019
Fit-india

ನವದೆಹಲಿ : ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರಾದ್ಯಂತ ಫಿಟ್ ಇಂಡಿಯಾ ಆಂದೋಲನಕ್ಕೆ ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್ ನಲ್ಲಿ ಚಾಲನೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮೊದಲ ಅವಧಿಯಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅದರಂತೆ ಈ ಬಾರಿ ಫಿಟ್ ಇಂಡಿಯಾ ಆಂದೋಲನಕ್ಕೆ ಕರೆ ನೀಡಿದ್ದಾರೆ. ದೇಶಾದ್ಯಂತ ಎಲ್ಲ ರಾಜ್ಯಗಳು ಇದರಲ್ಲಿ ಪಾಲ್ಗೊಳ್ಳಲಿದೆ. ಜೊತೆಗೆ ಈ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಎಲ್ಲಾ ಶಾಲಾ ಕಾಲೇಜು, ಯುನಿವರ್ಸಿಟಿಗಳಿಗೆ ಸೂಚಿಸಲಾಗಿದೆ. ಈ […]

ಜಮ್ಮು ಮತ್ತು ಕಾಶ್ಮೀರ ಇನ್ನು ಕೇಂದ್ರಾಡಳಿತ ಪ್ರದೇಶ : ಪ್ರಧಾನಿ ನರೇಂದ್ರ ಮೋದಿ ಭಾಷಣದಲ್ಲಿ ಘೋಷಣೆ

Thursday, August 8th, 2019
Modi

ನವದೆಹಲಿ  : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ನಾನು ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಇಡೀ ರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ. ಕೆಲವು ವಿಷಯಗಳು ಜೀವಂತವಿರುವವರೆಗೂ ಅವು ಎಂದಿಗೂ ಬದಲಾಗುವುದಿಲ್ಲ ಅಥವಾ ದೂರ ಹೋಗುವುದಿಲ್ಲ ಎಂದು ನಾವು ಭಾವಿಸುತ್ತೇವೆ. 370 ನೇ ವಿಧಿ ಇದೇ ರೀತಿಯದಾಗಿತ್ತು.” ಎಂದು ಪ್ರಧಾನಿ ಹೇಳಿದರು. “ಸರ್ದಾರ್ ಪಟೇಲ್, ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, […]

ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಸಾಯುವ ಸೂಚನೆ ಇರಲಿಲ್ಲ

Wednesday, August 7th, 2019
sushma-swaraj

ನವದೆಹಲಿ:  ಜಮ್ಮು-ಕಾಶ್ಮೀರದ ಐತಿಹಾಸಿಕ ನಿರ್ಣಯಕ್ಕೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಅವರಿಗೆ ರಾತ್ರಿ 9 ಗಂಟೆ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆಕೆಯನ್ನು ಏಮ್ಸ್ ಗೆ ಕರೆದೊಯ್ಯಲಾಗಿದೆ. 9:30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣವೇ ಅವರನ್ನು ತುರ್ತು ಚಿಕಿತ್ಸೆ ನೀಡುವ ವಾರ್ಡ್ ಗೆ ದಾಖಲಿಸಿ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಪ್ರಾರಂಭಿಸಲಾಯಿತು. ಸುಷ್ಮಾ ಸ್ವರಾಜ್ ಅವರನ್ನು ಉಳಿಸಿಕೊಳ್ಳುವುದಕ್ಕೆ ಸತತ 70 ನಿಮಿಷಗಳ ಕಾಲ ವೈದ್ಯರು ಯತ್ನಿಸಿದರು. ಗಂಭೀರ ಸ್ಥಿತಿಯಿಂದ ಆಕೆಯನ್ನು ಪಾರುಮಾಡುವುದಕ್ಕೆ […]

ಆರು ಮಂದಿ ಕುಟುಂಬದ ಸದಸ್ಯರನ್ನು ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಯುವಕ

Saturday, August 3rd, 2019
Nathuvala-village

ಪಂಜಾಬ್  :  ಕುಟುಂಬದ ಸದಸ್ಯರೊಂದಿಗೆ ಜಗಳವಾಡಿ ಅಕ್ಕ, ಸೊಸೆ, ಅಜ್ಜ-ಅಜ್ಜಿ, ಕೊನೆಗೂ ತಂದೆ-ತಾಯಿಯನ್ನು ಬಿಡದ ಯುವಕ ಎಲ್ಲರನ್ನು ಗನ್ನಿಂದ ಶೂಟ್ ಮಾಡಿ, ಬಳಿಕ ತಾನು ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ನಥುವಾಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸಂದೀಪ್ಸಿಂಗ್ ತನ್ನ ಕುಟುಂಬದ ಜೊತೆ ಯಾವುದೋ ವಿಷಯಕ್ಕೆ ಕಿತ್ತಾಡಿಕೊಂಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಪಿಸ್ತೂಲ್ನಿಂದ ತನ್ನ ಹೆತ್ತ ತಂದೆ ತಾಯಿ, ಅಜ್ಜಿ, ಒಡಹುಟ್ಟಿದ ಅಕ್ಕ ಮತ್ತು ಅಕ್ಕನ 3 ವರ್ಷದ ಮಗಳಿಗೂ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ […]

ಬಜೆಟ್ ನಲ್ಲಿ ಗೃಹ ಖರೀದಿದಾರರಿಗೆ 3.5 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ

Friday, July 5th, 2019
Nirmala-Seetharaman

ನವದೆಹಲಿ: ನಿರ್ಮಲಾ ಸೀತಾರಾಮನ್ ಮಂಡಿಸಿರುವ ತಮ್ಮ ಚೊಚ್ಚಲ ಕೇಂದ್ರ ಬಜೆಟ್ 2019-20 ನಲ್ಲಿ ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಅತಿ ಹೆಚ್ಚು ಪ್ರಯೋಜನವಾಗುವ ಬದಲಾವಣೆಗಳನ್ನು ಘೋಷಿಸಿದ್ದಾರೆ. 45 ಲಕ್ಷ ರೂಪಾಯಿ ವರೆಗಿನ ಮನೆಯನ್ನು ಸಾಲ ಪಡೆದು ಕೊಳ್ಳುವವರಿಗೆ ಹೆಚ್ಚುವರಿಯಾಗಿ 1.50 ಲಕ್ಷ ರೂಪಾಯಿ ಬಡ್ಡಿ ಕಡಿತವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಹಿಂದಿದ್ದ 2 ಲಕ್ಷ ರೂಪಾಯಿ ಬಡ್ಡಿ ಕಡಿತ ಪ್ರಯೋಜನವೂ ಸೇರಿ ಈಗ ಒಟ್ಟಾರೆ 3.5 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ ಸಿಗಲಿದೆ. ಮಾರ್ಚ್ 31, […]

ಡಾ. ಬಿ. ಎಂ. ಹೆಗ್ಡೆ ಯವರಿಗೆ “ಸರ್ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ – 2019” ಪ್ರಶಸ್ತಿ ಪ್ರಧಾನ

Wednesday, June 5th, 2019
thonse Jayakrishna

ಮುಂಬಯಿ : ನಾನು ರಾಜಕಾರಣಿಯಾಗಿದ್ದರೂ ಕೂಡಾ ಬಿಡು ಸಮಯದಲ್ಲಿ ಸಮುದ್ರದ ತೆರೆಗಳನ್ನು ನೋಡಿ ಆನಂದಿಸುವ ನನಗೆ ಆ ತೆರೆಗಳ ಹಿಂದಿರುವ ಶಕ್ತಿಯ ಬಗ್ಗೆ ಅರಿವಾಗಿಲ್ಲ. ಅದೇ ರೀತಿ ಡಾ. ಬಿ. ಎಂ. ಹೆಗ್ಡೆಯವರ ಆಳವಾದ ವ್ಯಕ್ತಿತ್ವ. ಸಮಾಜದ ಸುತ್ತಲಿನ ಸಮಸ್ಯೆಗಳ ಬಗ್ಗೆ ಲಕ್ಕೆ ಒಡೆಯುವಂತಹ ವ್ಯಕ್ಟಿತ್ವವುಳ್ಳ ಏಕೈಕ ವ್ಯಕ್ಟಿ ಡಾ. ಬಿ. ಎಂ. ಹೆಗ್ಡೆ. ಹೀಗೆ ಇವರ ವ್ಯಕ್ತಿತ್ವದ ಮೇರುತನದ ಬಗ್ಗೆ ಅರ್ಥವಾಗದೆ ಚಡಪಡಿಸುತ್ತಿರುವವರಲ್ಲಿ ನಾನೂ ಒಬ್ಬ. ಅಂತವರಿಗೆ ಬಾರತ ದೇಶದ ಗೌರವಾನ್ವಿತ ಬೆರಳೆಣೆಕೆಯ ರಾಜಕಾರಣಿಗಳಲ್ಲಿ ಒಬ್ಬರಾದ […]

ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ಖರ್ಚಾಗಿದ್ದು ಬರೊಬ್ಬರಿ 5 ಸಾವಿರ ಕೋಟಿ..!

Friday, December 28th, 2018
new-delhi

ನವದೆಹಲಿ: ಸರ್ಕಾರದ ಯೋಜನೆಗಳ ಪ್ರಚಾರಕ್ಕೆ ನಾಲ್ಕು ವರ್ಷದಲ್ಲಿ 5000 ಕೋಟಿ ರೂಪಾಯಿ ಹಣ ಉಪಯೋಗಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಚಾರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ನಿನ್ನೆ ಲೋಕಸಭೆಗೆ ಅಂಕಿ ಅಂಶಗಳ ಸಮೇತ ವರದಿ ನೀಡಿದ್ದಾರೆ. 2014 ರಿಂದ 2018ರ ಡಿಸೆಂಬರ್ 7ರ ವರೆಗೆ ಸರ್ಕಾರದ ಯೋಜನೆಗಳ ಪ್ರಚಾರ ಕಾರ್ಯಕ್ಕೆ 5,245.73 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ವಿವಿಧ ಯೋಜನೆಗಳನ್ನು ಹೊರ ತರುವ ಸಚಿವಾಲಯಗಳಲ್ಲಿನ ಕಾರ್ಯಕ್ರಮಗಳ ಬಗೆಗಿನ ಪ್ರಚಾರಕ್ಕೆ ಪೂರಕವಾಗುವ ಮತ್ತು ಫಲಾನುಭವಿಗಳಿಗೆ ನೀಡಬೇಕಾದ ಮಾಹಿತಿಯನ್ನು ಹೊಂದಿರುತ್ತವೆ. […]