ವಿಶಾಖಪಟ್ಟಣಂ: ಯುವಕನ ಪ್ರಾಣ ತೆಗೆದ ಇಯರ್ ಫೋನ್..!

Tuesday, December 4th, 2018
vishakapatanam

ಆಂಧ್ರಪ್ರದೇಶ: ಇಯರ್ ಫೋನ್ನಿಂದಾಗಿಯೇ ಸುಂದರ ಯುವಕನೊಬ್ಬನ ಪ್ರಾಣಪಕ್ಷಿ ಹಾರಿ ಹೋದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದ ರೈಲ್ವೇ ನಿಲ್ದಾಣದ ಬಳಿ ನಡೆದಿದೆ. ಹೌದು, ಉಪ್ಪಾಡ ಅನಿಲ್ (22) ಬೆಳಗ್ಗೆ ಆರು ಗಂಟೆಗೆ ಇಯರ್ ಫೋನ್ ಹಾಕಿಕೊಂಡು ರೈಲ್ವೇ ಟ್ರ್ಯಾಕ್ ಸಮೀಪ ಬಂದಿದ್ದಾನೆ. ಟ್ರ್ಯಾಕ್ ಮೇಲೆ ರೈಲು ಬಂದಿದೆ. ಆ ಟ್ರ್ಯಾಕ್ ಬಿಟ್ಟು ಪಕ್ಕದ ಟ್ರ್ಯಾಕ್ ಬಳಿ ಯುವಕ ಶಿಫ್ಟ್ ಆಗಿದ್ದಾನೆ. ಇದೇ ಸಮಯದಲ್ಲಿ ಶಿಫ್ಟ್ ಆದ ಪಕ್ಕದ ಟ್ರ್ಯಾಕ್ ಮೇಲೆಯೂ ರೈಲು ಬಂದಿದೆ. ಇಯರ್ ಫೋನ್ ಹಾಕಿಕೊಂಡಿದ್ದರಿಂದ […]

ಪ್ರಧಾನಿ ಮೋದಿ ಮೊದಲು ಸಂವಿಧಾನ ಓದಲಿ: ಅಸಾದುದ್ದೀನ್​ ಓವೈಸಿ

Tuesday, December 4th, 2018
narendra-modi

ಹೈದರಾಬಾದ್: ಮುಸ್ಲಿಂ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸುತ್ತಿರುವ ಎಐಎಂಐಎಂನ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಸಂವಿಧಾನವನ್ನು ಓದಬೇಕಾದ ಅಗತ್ಯವಿದೆ ಎಂದು ತಿರುಗೇಟು ನೀಡಿದ್ದಾರೆ. ಹೈದಾರಾಬಾದ್ನಲ್ಲಿ ಸೋಮವಾರ ಬಿಜೆಪಿ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಮಾತನಾಡಿದಕ್ಕೆ ಟಾಂಗ್ ನೀಡಿರುವ ಓವೈಸಿ, ನಿಮಗೆ ಸಂವಿಧಾನ ಗೊತ್ತಿಲ್ಲದೇ ಇದ್ದಲ್ಲಿ ಆ ಬಗ್ಗೆ ಗೊತ್ತಿರುವವರ ಸಹಾಯವನ್ನಾದರೂ ಪಡೆಯಿರಿ ಎಂದು ಕುಟುಕಿದ್ದಾರೆ. ನೀವು ಸಂವಿಧಾನದ 15 ಹಾಗೂ 16 ನೇ ವಿಧಿಯಗಳನ್ನು ಓದಲೇಬೇಕು. ಮಾರಾಠರಿಗೆ, ಜಾಟರಿಗೆ ಹಾಗೂ ಗುಜ್ಜಾರ್ಗಳಿಗೆ ಮೀಸಲಾತಿ […]

ಟಿಆರ್​ಎಸ್​ ಹಾಗೂ ಕಾಂಗ್ರೆಸ್​ ಫ್ರೆಂಡ್ಲಿ ಮ್ಯಾಚ್​ ಆಡುತ್ತಿವೆ: ನರೇಂದ್ರ ಮೋದಿ

Tuesday, November 27th, 2018
narendra-modi

ನಿಜಾಮಾಬಾದ್: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಹಾಗೂ ಕಾಂಗ್ರೆಸ್ ಫ್ರೆಂಡ್ಲಿ ಮ್ಯಾಚ್ ಆಡುತ್ತಿವೆ. ಎರಡೂ ಪಕ್ಷಗಳು ಕುಟುಂಬ ಆಳ್ವಿಕೆಯಲ್ಲಿವೆ. ಹಾಗಾಗಿ ಅವು ಅಭಿವೃದ್ಧಿಗೆ ಪೂರಕವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ನಿಜಾಮಾಬಾದ್ನಲ್ಲಿ ನಡೆದ ಬಿಜೆಪಿ ಚುನಾವಣಾ ರಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಟಿಆರ್ಎಸ್ ಒಂದೇ ನಾಣ್ಯದ ಎರಡು ಮುಖಗಳಿಂದ್ದಂತೆ. ಎರಡೂ ಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಅವೆರಡರ ಸಿದ್ಧಾಂತಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಪ್ರಧಾನಿ ಕುಟುಕಿದರು. ಇಲ್ಲಿನ ಮುಖ್ಯಮಂತ್ರಿ […]

ಶರಣಾದ ಉಗ್ರ ಭಾರತೀಯ ಸೇನೆ ಸೇರಿ ಹುತಾತ್ಮನಾದ

Tuesday, November 27th, 2018
soldier

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಉಗ್ರರ ಗುಂಡಿಗೆ ಎದೆಯೊಡ್ಡಿ ಹುತಾತ್ಮನಾದ ಲ್ಯಾನ್ಸ್ ನಾಯಕ್ ನಜೀರ್ ಅಹ್ಮದ್ ವಾನಿ ಒಂದು ಕಾಲದಲ್ಲಿ ಉಗ್ರಗಾಮಿ ಚಟುವಟಿಕೆಯಲ್ಲಿ ನಿರತರಾಗಿದ್ದರು. ಶರಣಾಗತರಾಗುವ ಉಗ್ರರನ್ನು ಕಾಶ್ಮೀರದಲ್ಲಿ ಇಖ್ವಾನ್ ಎಂದು ಕರೆಯುತ್ತಾರೆ. ಇದೇ ರೀತಿ ಶರಣಾಗಿ ಭಾರತೀಯ ಸೇನಾಪಡೆ ಸೇರಿದವರು ನಜೀರ್. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಆರು ಉಗ್ರಗಾಮಿಗಳು ಯೋಧರ ಗುಂಡಿಗೆ ಬಲಿಯಾಗಿದ್ದರು. ಇದೇ ಕಾರ್ಯಾಚರಣೆಯಲ್ಲಿ ಗುಂಡೇಟು ತಿಂದು ಗಂಭೀರವಾಗಿ ಗಾಯಗೊಂಡಿದ್ದ ನಜೀರ್ ಅವರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, […]

ಇಂದಿಗೆ ಮುಂಬೈ ಮೇಲಿನ ಉಗ್ರರ ದಾಳಿಗೆ 10 ವರ್ಷ..!

Monday, November 26th, 2018
mumbai

ಮುಂಬೈ: ಭಾರತ ಕಂಡ ಘೋರ ಘಟನೆಯಾದ ಮುಂಬೈ ಮೇಲಿನ ಉಗ್ರ ದಾಳಿ ನಡೆದು ಇಂದಿಗೆ 10 ವರ್ಷಗಳಾಗಿವೆ. ದಶಕ ಕಳೆದರೂ ಆ ಕರಾಳ ದಿನದ ನೆನಪು ದೇಶದ ಇತಿಹಾಸದಲ್ಲಿ ಹಾಗೆ ಉಳಿದುಕೊಂಡಿದೆ. 26/11 2008ರಂದು ಪಾಪಿ ಪಾಕಿಸ್ತಾನದಿಂದ ಸಮುದ್ರ ಮುಖಾಂತರ ಮೀನುಗಾರರನ್ನು ಕೊಂದು ಕಳ್ಳತನದಿಂದ ವಾಣಿಜ್ಯ ನಗರವಾದ ಮುಂಬೈ ಪ್ರವೇಶಿಸಿ 7 ಕಡೆ ದಾಳಿ ನಡೆಸಿ, 166 ಜನರನ್ನು ಬಲಿ ತೆಗೆದುಕೊಂಡಿದ್ದರು. ನ.26ರಂದು ಮುಂಬೈನ ಪ್ರಸಿದ್ಧ ತಾಜ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್, ಲಿಯೋಪೋಲ್ಡ್ ಕೆಫೆ, ,ಒಬೆರಾಯ್ […]

ಚೀನಾ ದೂತಾವಾಸದ ಸಿಬ್ಬಂದಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ ಸುಹೈ ಅಜೀಜ್ ತಲ್ಪುರ್

Saturday, November 24th, 2018
karachi

ಪಾಕಿಸ್ತಾನ: ‘ಮಗಳಿಗೆ ಕೇವಲ ಧಾರ್ಮಿಕ ಶಿಕ್ಷಣ ಸಾಲದು, ಆಧುನಿಕ ಶಿಕ್ಷಣ ಸಿಗಬೇಕು ಎಂದು ಅಪ್ಪ ನನ್ನನ್ನು ಖಾಸಗಿ ಶಾಲೆಗೆ ಸೇರಿಸಿದರು. ಸಂಬಂಧಿಕರು, ನೆರೆಹೊರೆಯವರು ನಮ್ಮನ್ನು ದೂರ ಮಾಡಿದರು. ಆದರೆ ಅಪ್ಪ ಅಂಜಲಿಲ್ಲ. ಹುಟ್ಟಿದ ಊರನ್ನೇ ಬಿಟ್ಟು ಬೇರೊಂದು ಊರಲ್ಲಿ ನನಗೆ ಬದುಕುಕಟ್ಟಿಕೊಟ್ಟರು. ನನ್ನ ಎಲ್ಲ ಸಾಧನೆ ಅವರಿಗೆ ಅರ್ಪಣೆ…’ ಹೀಗೆ ತಮ್ಮ ಬಾಲ್ಯ ನೆನಪಿಸಿಕೊಂಡು ಭಾವುಕರಾದವರು ಚೀನಾ ದೂತಾವಾಸದ ಸಿಬ್ಬಂದಿಯನ್ನು ಬಲೂಚ್ ಉಗ್ರರ ದಾಳಿಯಿಂದ ಕಾಪಾಡಿದ ಕರಾಚಿಯ ಪೊಲೀಸ್ ವರಿಷ್ಠಾಧಿಕಾರಿ ಸುಹೈ ಅಜೀಜ್ ತಲ್ಪುರ್. ಉಗ್ರರ ನಿಗ್ರಹ […]

ದೇಶದ 121, ರಾಜ್ಯದ 8 ಜಿಲ್ಲೆಗಳ ಮನೆ ಮನೆಗೂ ಅನಿಲ ಸರಬರಾಜು

Friday, November 23rd, 2018
narendra-modi

ನವದೆಹಲಿ: ದೇಶದ 121 ಜಿಲ್ಲೆ ಹಾಗೂ ರಾಜ್ಯದ 8 ಜಿಲ್ಲೆಗಳಲ್ಲಿ ಕೊಳವೆಗಳ ಮೂಲಕ ನೈಸರ್ಗಿಕ ಅನಿಲವನ್ನು (ಸಿಎನ್‌ಜಿ) ಮನೆ ಮನೆಗೂ ತಲುಪಿಸುವ ಯೋಜನೆಯಾದ ಅನಿಲ ವಿತರಣಾ ವ್ಯವಸ್ಥೆ (ಸಿಜಿಡಿ) ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಬಡವರಿಗೆ ಕಡಿಮೆ ಬೆಲೆಯಲ್ಲಿ ಎಲ್‌ಪಿಜಿ ಸಂಪರ್ಕ ಒದಗಿಸುವ ಕ್ರಾಂತಿಕಾರಿ ಯೋಜನೆ ಇದಾಗಿದೆ. ಮುಂದಿನ 3-4 ವರ್ಷಗಳಲ್ಲಿ ಕೊಳವೆ ಮೂಲಕ ನೈಸರ್ಗಿಕ ಅನಿಲ (ಸಿಎನ್‌ಜಿ) ಮನೆ ಮನೆಗೆ ವಿತರಿಸುವ ಯೋಜನೆಯನ್ನು ಸುಮಾರು 400 ಜಿಲ್ಲೆಗಳಿಗೆ […]

ಹಾಸ್ಪಿಟಲ್ ಸೇರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಹುದ್ದೆ ತೊರೆಯಲು ನಿರ್ಧರಿಸಿದ್ದರು: ವಿಜಯ್ ಸರ್ದೇಸಾಯಿ

Friday, November 23rd, 2018
manohar-parrikar

ಪಣಜಿ: ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಗೋವಾ ಸಿಎಂ ಮನೋಹರ್ ಪರಿಕ್ಕರ್, ಹಾಸ್ಪಿಟಲ್ ಸೇರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಹುದ್ದೆ ತೊರೆಯಲು ನಿರ್ಧರಿಸಿದ್ದರು ಎಂದು ಗೋವಾ ಕೃಷಿ ಸಚಿವ ವಿಜಯ್ ಸರ್ದೇಸಾಯಿ ಹೇಳಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ವೇಳೆ ಪರಿಕ್ಕರ್ ಸಿಎಂ ಹುದ್ದೆ ಜೊತೆಗೆ ತಮ್ಮಲ್ಲಿರುವ ಎಲ್ಲ ಅಧಿಕಾರವನ್ನೂ ಹಸ್ತಾಂತರ ಮಾಡಲು ಇಚ್ಛಿಸಿದ್ದರು. ಆದರೆ ಬಳಿಕ ಹಲವಾರು ಘಟನೆಗಳು ಸಂಭವಿಸಿದವು. ಬಿಜೆಪಿ ಹೈಕಮಾಂಡ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಹುದ್ದೆ ತೊರೆಯದಂತೆ ಪರಿಕ್ಕರ್ಗೆ ಆದೇಶಿಸಿತ್ತು ಎಂದು ಸರ್ದೇಸಾಯಿ ಹೇಳಿದ್ದಾರೆ. ಮನೋಹರ್ ಪರಿಕ್ಕರ್ […]

ಗೂಗಲ್​ನ ಟಾಪ್ ಹುದ್ದೆಗೆ ಬೆಂಗಳೂರಿನ ಥಾಮಸ್ ಕುರಿಯನ್..!

Monday, November 19th, 2018
kuriyan

ಬೆಂಗಳೂರು: ಸುಂದರ್ ಪಿಚೈ ಬಳಿಕ ಮತ್ತೊಬ್ಬ ಭಾರತೀಯನಿಗೆ ಸಾಫ್ಟ್‌ವೇರ್ ದೈತ್ಯ ಗೂಗಲ್ ಕಂಪನಿಯಲ್ಲಿ ಉನ್ನತ ಹುದ್ದೆ ದೊರೆತಿದ್ದು, ಒರಾಕಲ್ ಕಾರ್ಪ್‌ನ ಪ್ರಾಡಕ್ಟ್ ಚೀಫ್ ಆಗಿದ್ದ ಬೆಂಗಳೂರಿನ ಥಾಮಸ್ ಕುರಿಯನ್ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ. ನ.26ರಂದು ಗೂಗಲ್ ಸೇರಲಿರುವ ಕುರಿಯನ್, 2019 ವರ್ಷಾರಂಭದಲ್ಲಿ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿ ಕೆಲಸ ಆರಂಭಿಸಲಿದ್ದಾರೆ ಎಂದು ಗೂಗಲ್ ಪ್ರಕಟಿಸಿದೆ. ಈಗ ಡಯಾನ್ ಗ್ರೀನ್ ಗೂಗಲ್ ಕ್ಲೌಡ್‌ನ ಮುಖ್ಯಸ್ಥರಾಗಿದ್ದಾರೆ. ಅವರು 2019 ಜನವರಿವರೆಗೆ ತಮ್ಮ ಹುದ್ದೆಯಲ್ಲಿ ಮುಂದುವರಿಯಲಿದ್ದು, ಜವಾಬ್ದಾರಿಯನ್ನು ಕುರಿಯನ್‌ಗೆ ವಹಿಸಲಿದ್ದಾರೆ. ಗೂಗಲ್‌ನ […]

ಮುಂದುವರೆದ ಶಬರಿಮಲೆ ವಿವಾದ: ಇಂದು 12 ಗಂಟೆಗಳ ಕಾಲ ಕೇರಳ ಬಂದ್

Saturday, November 17th, 2018
shabarimale

ಕೊಚ್ಚಿನ್: ಹಿಂದೂ ಐಕ್ಯ ವೇದಿ ಸಂಘಟನೆಯ ಅಧ್ಯಕ್ಷೆ ಕೆ.ಪಿ. ಶಶಿಕಲಾರನ್ನು ಕೇರಳ ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಇಂದು 12 ಗಂಟೆಗಳ ಕೇರಳ ರಾಜ್ಯ ಬಂದ್ಗೆ ಕರೆ ನೀಡಲಾಗಿದೆ. ಶಬರಿಮಲೆ ಕರ್ಮ ಸಮಿತಿಯು 12 ಗಂಟೆಗಳ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡಿದ್ದು, ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬಂದ್ ಮಾಡಲು ನಿರ್ಧರಿಸಲಾಗಿದೆ. ರಾತ್ರಿ ವೇಳೆ ಶಶಿಕಲಾ ಪ್ರಯಾಣಕ್ಕೆ ಅಡ್ಡಿಪಡಿಸಿದ ಪೊಲೀಸರ ವಿರುದ್ಧ ಪ್ರತಿಭಟಿಸಿದ್ದಕ್ಕೆ ಅವರನ್ನು ಸನ್ನಿಧಾನಂನಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ. ಇನ್ನೊಂದೆಡೆ, ನಿನ್ನೆಯಷ್ಟೆ ಅಯ್ಯಪ್ಪನ ದೇಗಲು ಪ್ರವೇಶಿಸಲು […]