ಇಂಡಿಯನ್​ ಪ್ರೀಮಿಯರ್​ ಲೀಗ್: ಈ ಮೂವರು ಸ್ಟಾರ್​ ಪ್ಲೇಯರ್ಸ್​ ಕೈಬಿಡಲು ಪ್ರಾಂಚೈಸಿಗಳ ನಿರ್ಧಾರ..!

Thursday, November 15th, 2018
manish-pandey

ಮುಂಬೈ: ಕಳೆದ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ದುಬಾರಿ ಬೆಲೆ ನೀಡಿ ಸ್ಟಾರ್ ಪ್ಲೇಯರ್ಸ್ ಖರೀದಿ ಮಾಡಿದ್ದ ಕೆಲ ಪ್ರಾಂಚೈಸಿಗಳು ಕೈಸುಟ್ಟುಕೊಂಡಿದ್ದು ಗೊತ್ತೇ ಇದೆ. ಇದೇ ಕಾರಣಕ್ಕಾಗಿ ಈ ಸಲ ಅವರನ್ನ ತಂಡದಿಂದ ಕೈಬಿಡಲು ಪ್ರಮುಖ ಪ್ರಾಂಚೈಸಿಗಳು ನಿರ್ಧಾರ ಮಾಡಿರುವ ಹಾಗೇ ಕಾಣಿಸುತ್ತದೆ. 2018ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ದುಬಾರಿ ಬೆಲೆಗೆ ಬಿಕರಿಯಾಗಿದ್ದ ಕನ್ನಡಿಗರಾದ ಮನೀಷ್ ಪಾಂಡೆ, ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ ಹಾಗೂ ಜಯದೇವ್ ಉನ್ಕದತ್ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ಏನು ನೀಡಿಲ್ಲ. ಹೀಗಾಗಿ ಈ […]

ಫ್ಯಾಷನ್​ ಡಿಸೈನರ್ ರನ್ನು ಕೊಚ್ಚಿ ಕೊಂದ ಮನೆಕೆಲಸದವರು..!

Thursday, November 15th, 2018
fasion-designer

ಡೆಲ್ಲಿ: ದೇಶದ ರಾಜಧಾನಿ ದೆಹಲಿಯಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಮನೆಯಲ್ಲೇ ಕೆಲಸಮಾಡುತ್ತಿದ್ದ ಆಳುಗಳು ಫ್ಯಾಷನ್ ಡಿಸೈನರ್ ಒಬ್ಬರನ್ನ ಕೊಚ್ಚಿ ಕೊಲೆಮಾಡಿರುವ ಘಟನೆ ನಡೆದಿದೆ. ಹೌದು, ವಸಂತ್ಕುಂಜ್ ನಿವಾಸಿ 53 ವರ್ಷದ ಮಾಲಾ ಲಖಾನಿ ಫ್ಯಾಶನ್ ಡಿಸೈನರ್ನನ್ನು ಆಕೆಯ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಳುಗಳೇ ಕೊಚ್ಚಿ ಕೊಲೆಮಾಡಿದ್ದಾರೆ. ಇಷ್ಟೇ ಅಲ್ಲದೇ ಆಕೆಯ ಸಹಾಯಕ್ಕೆ ಬಂದ ಮನೆ ಕಾಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಹುದ್ದೂರ್ ಸಿಂಗ್ (42)ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಇನ್ನು ಈ ಸುದ್ದಿ ಪೊಲೀಸರಿಗೆ ತಿಳಿದಿದ್ದು, ಪೊಲೀಸರು […]

ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಕಂಚಿನ ಪ್ರತಿಮೆ ಅನಾವರಣ

Wednesday, November 14th, 2018
jaylalitha

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಕಂಚಿನ ಪ್ರತಿಮೆಯೊಂದನ್ನು ಚೆನ್ನೈನಲ್ಲಿ ಬುಧವಾರ ಅನಾವರಣಗೊಳಿಸಲಾಯಿತು. ಚೆನ್ನೈನ ರೋಯಪೆಟ್ಟಾದಲ್ಲಿರುವ ಎಐಡಿಎಂಕೆ ಮುಖ್ಯ ಕಚೇರಿಯ ಪ್ರಾಂಗಣದಲ್ಲಿ ಜಯಾ ಅವರ ಪ್ರತಿಮೆಯನ್ನು ಮುಖ್ಯಮಂತ್ರಿ ಎಡಪ್ಪಡಿ ಕೆ. ಪಳನಿಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಅವರು ಲೋಕಾರ್ಪಣೆಗೊಳಿಸಿದರು. 2016ರ ಡಿಸೆಂಬರ್ನಲ್ಲಿ ಜಯಲಲಿತಾ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ಮಾಜಿ ಸಿಎಂ ದಿ. ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆ ಪಕ್ಕದಲ್ಲೇ ಜಯಾ ಅವರ ಕಂಚಿನ ಪ್ರತಿಮೆಯೊಂದನ್ನು ನಿರ್ಮಿಸಲಾಗಿತ್ತು. ಆದರೆ, ಆ ಪ್ರತಿಮೆಯು […]

ಐಸಿಸಿ ಏಕದಿನ ರ‍್ಯಾಂಕಿಂಗ್: ನಂಬರ್​ 1 ಸ್ಥಾನದಲ್ಲಿ ಕೊಹ್ಲಿ, ಬುಮ್ರಾ

Tuesday, November 13th, 2018
virat-kohli

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಏಕದಿನ ಶ್ರೇಯಾಂಕ ಪಟ್ಟಿ ರಿಲೀಸ್ ಮಾಡಿದ್ದು, ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಂಬರ್ 1ಸ್ಥಾನದಲ್ಲಿದ್ದು, ಬೌಲಿಂಗ್ ವಿಭಾಗದಲ್ಲಿ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬೂಮ್ರಾ ನಂಬರ್ ಸ್ಥಾನದಲ್ಲಿ ಮುಂದುವರೆದಿದ್ದಾರೆ. 899 ಅಂಕ ಪಡೆದಿರುವ ವಿರಾಟ್ ಕೊಹ್ಲಿ ನಂಬರ್ 1ಸ್ಥಾನ ಹಾಗೂ 871 ಅಂಕ ಹೊಂದಿರುವ ರೋಹಿತ್ ಶರ್ಮಾ ಬ್ಯಾಟಿಂಗ್ ವಿಭಾಗದಲ್ಲಿ ನಂಬರ್ 2 ಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ಬ್ಯಾಟ್ಸ್ಮನ್ ರಾಸ್ ಟೇಲರ್ ತಮ್ಮ ವೃತ್ತಿ ಜೀವನದಲ್ಲಿ 3ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಉಳಿದಂತೆ […]

ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ ವೇಗದ ಬೌಲರ್​ ಮುನಾಫ್​ ಪಟೇಲ್..!

Saturday, November 10th, 2018
munaf-patel

ನವದೆಹಲಿ: ಭಾರತದ ವೇಗದ ಬೌಲರ್ ಮುನಾಫ್ ಪಟೇಲ್ ಶನಿವಾರ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. ವಯಸ್ಸು ಹಾಗೂ ಸದೃಢತೆ ಕಾಪಾಡಿಕೊಳ್ಳುವುದು ಅಸಾಧ್ಯ ಎಂಬ ಕಾರಣ ನೀಡಿ ಮುನಾಫ್ ಪಟೇಲ್ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇದ್ದಕ್ಕಿದ್ದಂತೆ ಕ್ರಿಕೆಟ್ಗೆ ವಿದಾಯ ಹೇಳಲು ಯಾವುದೇ ಇನ್ನಿತರ ಕಾರಣಗಳು ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಮೂಲದ ಮುನಾಫ್ ಪಟೇಲ್ ಭಾರತದ ಪರ 13 ಟೆಸ್ಟ್, 70 ಏಕದಿನ ಹಾಗೂ 3 ಟಿ-20 ಪಂದ್ಯಗಳಲ್ಲಿ ಆಟವಾಡಿದ್ದಾರೆ. ನಿವೃತ್ತಿ ಘೋಷಿಸಿ ಮಾತನಾಡಿರುವ ಅವರು, […]

ರಫೇಲ್ ಡೀಲ್​ನಲ್ಲಿ ಭ್ರಷ್ಟಾಚಾರ ನಡೆದಿದೆ, ಇದಕ್ಕೆ ಪ್ರಧಾನಿಯೇ ನೇರಹೊಣೆ: ರಾಹುಲ್​ ಗಾಂಧಿ

Friday, November 2nd, 2018
Rahul-gandhi

ನವದೆಹಲಿ: ರಫೇಲ್ ಡೀಲ್ನಲ್ಲಿ ಭ್ರಷ್ಟಾಚಾರ ನಡೆದಿದೆ, ಇದಕ್ಕೆ ಪ್ರಧಾನಿಯೇ ನೇರಹೊಣೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇವತ್ತು ಸುದ್ದಿಗೋಷ್ಠಿ ನಡೆಸಿ ಮತ್ತೊಂದು ಆರೋಪ ಮಾಡಿದ್ದಾರೆ. ಅನಿಲ್ ಅಂಬಾನಿ ಅವರು ಜಮೀನು ಹೊಂದಿರುವ ಏಕೈಕ ಕಾರಣಕ್ಕೆ ಡಸಾಲ್ಟ್ ಸಬ್ ಕಾಂಟ್ರಾಕ್ಟ್ ನೀಡಿದೆ ಎಂದು ಕಂಪನಿ ಸಿಇಒ ಹೇಳಿಕೆ ನೀಡಿದ್ದಾರೆ. ಆದರೆ ಇಲ್ಲೇ ಇರುವುದು ವಿಷಯ. ಅನಿಲ್ ಅಂಬಾನಿ ಡಸಾಲ್ಟ್ನಿಂದಲೇ ಹಣ ಪಡೆದು ಜಮೀನು ಖರೀದಿಸಿದ್ದಾರೆ. 8 ಲಕ್ಷ ಮೌಲ್ಯದ ಲಾಸ್ ನಲ್ಲಿರುವ ಕಂಪನಿಯೊಂದಕ್ಕೆ 284 ಕೋಟಿ […]

ಒಂದೇ ವಾರದಲ್ಲಿ ಪೆಟ್ರೋಲ್ ಬೆಲೆ 2 ರೂ.. ಡೀಸೆಲ್​ ಬೆಲೆ 1ರೂ. ಇಳಿಕೆ

Saturday, October 27th, 2018
petrol

ನವದೆಹಲಿ: ಕಳೆದ ಒಂದುವಾರದಿಂದ ಹೆಚ್ಚು ಕಡಿಮೆ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ 2 ರೂ. ಇಳಿಕೆಯಾಗಿದೆ. ಇನ್ನು ಡೀಸೆಲ್ ಬೆಲೆಯಲ್ಲಿ 1 ರೂ. ಇಳಿಕೆ ಕಂಡು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದ ಕಾರಣದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕಡಿತವಾಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 80.85 ರೂ. ಹಾಗೂ ಡೀಸೆಲ್ 74.73 ರೂ. ಇದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಅತಿ ಹೆಚ್ಚು ಅಂದರೆ 84 ರೂ.ಗೆ ಏರಿಕೆ ಕಂಡು ಗ್ರಾಹಕರ […]

ಸಿಬಿಐಗೆ ಹೊಸ ನಿರ್ದೇಶಕರ ನೇಮಕ: ಕ್ರಮ ಸಮರ್ಥಿಸಿಕೊಂಡ ಕೇಂದ್ರ

Wednesday, October 24th, 2018
arun-jetley

ನವದೆಹಲಿ: ಸಿಬಿಐಗೆ ನೂತನ ನಿರ್ದೇಶಕರನ್ನು ನೇಮಕ ಮಾಡಿರುವ ಬಗ್ಗೆ ಸಮರ್ಥನೆ ಮಾಡಿಕೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಸಿಬಿಐನಲ್ಲಿ ವಿಶ್ವಾಸಾರ್ಹತೆ ಉಳಿಯುವುದು ಅಗತ್ಯ ಎಂದು ಹೇಳಿದ್ದಾರೆ. ಸಂಪುಟ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಬಿಐನ ಸ್ಪೆಷಲ್ ಡೈರೆಕ್ಟರ್, ಸಿಬಿಐನ ಡೈರೆಕ್ಟರ್ ಮೇಲೆ ಆರೋಪ ಮಾಡಿದ್ದಾರೆ. ಸಂಸ್ಥೆಯ ಹಿರಿಯ ಅಧಿಕಾರಿಗಳೇ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಆರೋಪ ಹೊತ್ತಿರುವಾಗ ಪ್ರಕರಣದ ತನಿಖೆಯನ್ನು ಯಾರು ನಡೆಸುತ್ತಾರೆ? ಎಂದು ಪ್ರಶ್ನಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ, […]

ಸೈನಿಕರೊಂದಿಗೆ ಆಯುಧ ಪೂಜೆ ಆಚರಿಸಿದ ರಾಜನಾಥ್​ ಸಿಂಗ್​​!

Friday, October 19th, 2018
rajnath-singh

ಗುಜರಾತ್: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಗುಜರಾತ್ನ ಬಿಕಾನೆರ್ನ ಭಾರತ-ಪಾಕ್ ಗಡಿಯಲ್ಲಿರುವ ಸೈನಿಕರೊಂದಿಗೆ ದಸರಾ ಹಬ್ಬ ಆಚರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುರುವಾರ ಆಯುಧ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಡಿ ಭದ್ರತಾ ಪಡೆಗಳ ಕುಟುಂಬಗಳ ಜೊತೆ ಹಬ್ಬ ಆಚರಿಸುವುದು ತುಂಬಾ ಖುಷಿ ತಂದಿದೆ. ನಮ್ಮ ಗಡಿ ಭದ್ರತಾ ಪಡೆಗಳ ಸೈನಿಕರಿಗೆ ಅವರ ಕುಟುಂಬಗಳೇ ಬೆನ್ನೆಲುಬು ಎಂದು ಸೈನಿಕರನ್ನು ಹೊಗಳಿದರು. ಸೈನಿಕರ ಕುಟುಂಬಗಳು ನೀಡುವ ಪ್ರೋತ್ಸಾಹವೇ ಸೈನಿಕರು ಗಡಿಯಲ್ಲಿ ನಿಂತು ದೇಶ […]

ಕ್ರಿಕೆಟರ್​ ಪತ್ನಿ ಹಸಿನ್ ಜಹಾನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ..!

Wednesday, October 17th, 2018
mohammed-shami

ಮುಂಬೈ: ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ಇಂದು ಮುಂಬೈ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಸಂಜಯ್ ನಿರುಪಮ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮೊಹಮ್ಮದ್ ಶಮಿ ವಿರುದ್ಧ ಸರಣಿ ಆರೋಪ ಮಾಡುತ್ತಲೇ ಸುದ್ದಿಕೇಂದ್ರಕ್ಕೆ ಬಂದಿದ್ದ ಹಸಿನ್ ಜಹಾನ್ ಅವರ ಏಕಾಏಕಿ ರಾಜಕೀಯ ಎಂಟ್ರಿ ಕುತೂಹಲಕ್ಕೆ ಕಾರಣವಾಗಿದೆ. ಶಮಿ ತನಗೆ ವರದಕ್ಷಿಣೆ ಕಿರುಕುಳ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಜೊತೆಗೆ ಅಕ್ರಮ ಸಂಬಂಧವನ್ನೂ ಹೊಂದಿದ್ದಾರೆ ಎಂದು ಪತಿ ಶಮಿ ಮೇಲೆ ಹಸಿನ್ ಆರೋಪ ಮಾಡಿದ್ದಳು. […]