ಪಿವಿ ಸಿಂಧುಗೆ ಬ್ಯಾಡ್​ಟೈಮ್: ಸರಣಿ ಸೋಲಿನಿಂದ ನಿರಾಸೆ ಮೂಡಿಸಿದ ಸ್ಟಾರ್ ಪ್ಲೇಯರ್

Wednesday, October 17th, 2018
p-v-sindhu

ನವದೆಹಲಿ: ಭಾರತದ ಟಾಪ್ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧುಗೆ ಸದ್ಯ ಟೈಮ್ ಸರಿಯಿಲ್ಲ. ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ಸಿಂಧು ಸದ್ಯ ಎಲ್ಲಾ ಪಂದ್ಯಗಳಲ್ಲೂ ಊಹಿಸದ ಶಾಕ್ಗಳಿಗೆ ಒಳಗಾಗುತ್ತಿದ್ದಾರೆ. ಏಷ್ಯನ್ ಗೇಮ್ಸ್ ನಂತರ ಪಿ ವಿ ಸಿಂಧು ಪ್ರದರ್ಶನ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಆಡುತ್ತಿರುವ ಪ್ರತೀ ಪಂದ್ಯಗಳಲ್ಲೂ ಆರಂಭದಲ್ಲೇ ಸೋತು ಟೂರ್ನಿಯಿಂದ ಹೊರ ಬೀಳುತ್ತಿದ್ದಾರೆ. ಪ್ರಸ್ತುತ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಸಿಂಧು ಇಂದು ನಡೆದ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನಲ್ಲೇ ಸೋಲು ಅನುಭವಿಸಿದ್ದಾರೆ. ಈ […]

ಮಹಿಳೆಯರ ಸಮಸ್ಯೆ ಪರಿಹರಿಸಲೆಂದೇ ಸರ್ಕಾರ ಕೆಲಸ ಮಾಡ್ತಿದೆ: ನರೇಂದ್ರ ಮೋದಿ

Saturday, October 13th, 2018
prime-minister

ನವದೆಹಲಿ: ನಮ್ಮ ಸರ್ಕಾರ ಮಹಿಳೆಯರ ಸಮಸ್ಯೆಗಳನ್ನ ತೊಲಗಿಸುವ ಸಲುವಾಗಿಯೇ ಕೆಲಸ ಮಾಡುತ್ತಿದೆ. ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕೆಲಸದ ಸಮಯದಲ್ಲಿ ಭದ್ರತೆ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ನವದೆಹಲಿಯಲ್ಲಿ ಎನ್ಎಚ್ಆರ್ಸಿ ಬೆಳ್ಳಿಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಮನಸಿನ ವ್ಯಕ್ತಿಗಳು ಮಗು ಹೆಣ್ಣಾಗಿದ್ದರೆ ಗರ್ಭತೆಗೆಯಿಸುವ ಕೆಲಸ ಮಾಡ್ತಿದ್ದಾರೆ. ಇದನ್ನ ನಿಲ್ಲಿಸಲು ಕಠಿಣ ಕಾನೂನು ಜಾರಿ ಮಾಡಲಾಗಿದೆ. ಇನ್ನು ಎಲ್ಲ ರಾಜ್ಯಗಳಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಜಾರಿಗೆ ತಂದಿದ್ದೇವೆ. ಇದರಿಂದ ಹೆಣ್ಣುಮಗುವಿನ ಜನನ […]

ಗುರುವಾರದಂದು ಭಾರಿ ತಲ್ಲಣ ಮೂಡಿಸಿದ್ದ ಷೇರು ಮಾರುಕಟ್ಟೆ..ಶುಕ್ರವಾರ ಹೂಡಿಕೆದಾರರಿಗೆ ಶುಭದಾಯಕ

Friday, October 12th, 2018
share-market

ನವದೆಹಲಿ: ಗುರುವಾರದಂದು ಭಾರಿ ತಲ್ಲಣ ಮೂಡಿಸಿದ್ದ ಭಾರತೀಯ ಷೇರು ಮಾರುಕಟ್ಟೆ, ಶುಕ್ರವಾರ ಹೂಡಿಕೆದಾರರಿಗೆ ಶುಭದಾಯಕವಾಗಿ ಆರಂಭಗೊಂಡಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 650ಕ್ಕೂ ಹೆಚ್ಚು ಅಂಕ ಜಿಗಿತ ಕಂಡಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೊತೆಯಲ್ಲಿ ನಿಫ್ಟಿ ಸಹ ಕೊಂಚ ಚೇತರಿಕೆಯನ್ನು ಪಡೆದು, 10,350ರ ಅಸುಪಾಸಿನಲ್ಲಿ ಆರಂಭ ಪಡೆದಿದೆ. ಕಳೆದ ಕೆಲ ದಿನಗಳಲ್ಲಿ ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದ ಅದಾನಿ ಪೋರ್ಟ್, ವೇದಾಂತ, ಇಂಡಸ್ಸಿಂಡ್ ಬ್ಯಾಮಕ್, ರಿಲಯನ್ಸ್,ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಏಷ್ಯನ್ ಪೈಂಟ್ಸ್, ಹೀರೋ ಮೋಟೋ ಕಾರ್ಪ್ಗಳು ಚೇತರಿಕೆಯ […]

ಪಿಬಿಎಲ್ ಬ್ಯಾಡ್ಮಿಂಟನ್​ ಲೀಗ್​: ಭಾರಿ ಮೊತ್ತಕ್ಕೆ ಸೈನಾ ನೆಹ್ವಾಲ್​, ಪಿ.ವಿ. ಸಿಂಧು

Tuesday, October 9th, 2018
badmitton

ನವದೆಹಲಿ:ಭಾರತದ ಬ್ಯಾಡ್ಮಿಂಟನ್ ಸ್ಟಾರ್ಗಳಾದ ಸೈನಾ ನೆಹ್ವಾಲ್, ಸಿಂಧೂ ಹಾಗೂ ಕಿಡಂಬಿ ಶ್ರೀಕಾಂತ್ ಪ್ರಸಕ್ತ ವರ್ಷದ ಪಿಬಿಎಲ್ನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಗರಿಷ್ಠ ಬೆಲೆ ಪಡೆದ ದೇಶಿ ಹಾಗೂ ವಿದೇಶಿ ಪ್ಲೇಯರ್ಸ್: ಒಟ್ಟು 9 ತಂಡಗಳು ಭಾಗವಹಿಸಿದ್ದ 2018ರ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಹರಾಜಿನಲ್ಲಿ (ಪಿಬಿಎಲ್‌) ಸೈನಾ ನೆಹ್ವಾಲ್‌ ನಾರ್ತ್‌ ಈಸ್ಟರ್ನ್ ವಾರಿಯರ್ ತಂಡಕ್ಕೂ ಪಿ.ವಿ. ಸಿಂಧು ಹೈದರಾಬಾದ್‌ ಹಂಟರ್ ತಂಡಕ್ಕೂ, ಶ್ರೀಕಾಂತ್‌ ಬೆಂಗಳೂರು ರ‍್ಯಾಪ್ಟರ್ ತಂಡಕ್ಕೆ ಮತ್ತೊಬ್ಬ ಯುವ ಆಟಗಾರ ಪ್ರಣಯ್‌ ಅವರನ್ನು ಡೆಲ್ಲಿ ಡ್ಯಾಶರ್ ಖರೀದಿಸಿತು. […]

ಪೊಲೀಸ್ ಇಲಾಖೆ: ಒಂದೇ ಬಾರಿಗೆ 25 ಸಾವಿರ ಕಾನ್ಸ್​ಟೇಬಲ್ಸ್​ಗಳಿಗೆ ಹೆಡ್​ ಪಿಸಿಯಾಗಿ ಬಡ್ತಿ

Tuesday, October 9th, 2018
police-u-p

ನವದೆಹಲಿ: ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ದೊಡ್ಡ ಇತಿಹಾಸವೇ ಸೃಷ್ಟಿಯಾಗಿದೆ. ಒಂದೇ ಬಾರಿಗೆ 25 ಸಾವಿರ ಕಾನ್ಸ್ಟೇಬಲ್ಸ್ಗಳಿಗೆ ಹೆಡ್ ಪಿಸಿಯಾಗಿ ಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಮಾಸ್ ಪ್ರಮೋಷನ್ ನೀಡಿ ಹೊಸ ಇತಿಹಾಸವನ್ನೇ ಬರೆದಿದೆ. ಇದು 25091 ಪೊಲೀಸ್ ಪೇದೆಗಳ ಮೊಗದಲ್ಲಿ ಸಂತಸ ಮೂಡಿಸಿದೆ. ಇದೇ ಖುಷಿಗೆ ಹೆಡ್ ಪಿಸಿಯಾಗಿ ಬಡ್ತಿ ಪಡೆದಿರುವವರು ಸ್ಪೀಟ್ ಹಂಚಿ ಸಂತಸ ಪಡುತ್ತಿದ್ದಾರೆ. ಇದು ಉತ್ತರ ಪ್ರದೇಶ ಇತಿಹಾಸದಲ್ಲಿ ಮೊದಲು ಎನ್ನಲಾಗುತ್ತಿದೆ. ಈ ವಿಷಯವನ್ನ ಉತ್ತರಪ್ರದೇಶ ಪೊಲೀಸ್ ಇಲಾಖೆ ತನ್ನ […]

ಕತ್ತು ಸೀಳಿದ ಗಾಳಿಪಟದ ದಾರ: ವೈದ್ಯೆ ದುರ್ಮರಣ

Tuesday, October 9th, 2018
pune-died

ಪುಣೆ: ಗಾಳಿ ಪಟದ ಚೈನಾ ಮಾಂಜಾ ದಾರ ಕತ್ತು ಸೀಳಿದ ಪರಿಣಾಮ ಫ್ಲೈಓವರ್‌ನಲ್ಲಿ ಸ್ಕೂಟರ್‌ ಸವಾರೆಯಾಗಿ ತೆರಳುತ್ತಿದ್ದ ಯುವ ವೈದ್ಯೆ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಪುಣೆಯ ಬೋಸಾರಿ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ. 26 ರ ಹರೆಯದ ಆಯುರ್ವೇದ ವೈದ್ಯೆ ಕೃಪಾಲಿ ನಿಕ್ಕಂ ಅವರು ಮೃತ ದುರ್‌ದೈವಿ. ಹಾರಾಡುತ್ತಿದ್ದ ಗಾಳಿಪಟದ ಮಾಂಜಾ ದಾರ ಕತ್ತನ್ನು ಸೀಳಿದ ಪರಿಣಾಮ ಏಕಾಏಕಿ ಸ್ಕೂಟರ್‌ನಿಂದ ಕುಸಿದು ಬಿದ್ದಿದ್ದಾರೆ. ಕತ್ತಿನ ಭಾಗದಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಆಕೆ ಮಾತನಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ […]

ಯೂಥ್​ ಒಲಂಪಿಕ್ಸ್​ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕ..!

Tuesday, October 9th, 2018
olampic

ಅರ್ಜೆಂಟೀನಾ: ವೇಟ್ಲಿಫ್ಟರ್ ಜೆರೆಮಿ ಲಾಲ್ರಿನುಂಗ ಯೂಥ್ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಬಂಗಾರದ ಪದಕ ತಂದುಕೊಟ್ಟಿದ್ದಾರೆ. ಪುರುಷರ 62 ಕೆ.ಜಿ. ವಿಭಾಗದಲ್ಲಿ ಜೆರೆಮಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಟರ್ಕಿಯ ಟಾಪ್ಟಾಸ್ ಕೇನರ್ ಬೆಳ್ಳಿಗೆ ಕೊರಳೊಡ್ಡಿದರೆ, ಕೊಲಂಬಿಯಾದ ವಿಲ್ಲಾರ್ ಎಸ್ಟಿವೆನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಇದೇ 26ರಂದು 16ನೇ ವರ್ಷಕ್ಕೆ ಕಾಲಿಡಲಿರುವ ಜೆರೆಮಿ ವೇಟ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕದ ಮೂಲಕ ತಮ್ಮ ಸಾಮರ್ಥ್ಯ ನಿರೂಪಿಸಿದ್ದಾರೆ.

ಸರ್ಫಿಂಗ್​ ವೇಳೆ ಅಪಘಾತ: ಆಸೀಸ್​ ಮಾಜಿ ಆಟಗಾರ ಹೇಡನ್​ಗೆ ಗಂಭೀರ ಗಾಯ

Monday, October 8th, 2018
mathew-hadden

ಕ್ವೀನ್ಸ್ಲ್ಯಾಂಡ್: ಆಸ್ಟ್ರೇಲಿಯಾ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಅವರಿಗೆ ಅಪಘಾತವಾಗಿದ್ದು ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಹೇಡನ್ ಕುಟುಂಬದೊಂದಿಗೆ ವೀಕೆಂಡ್ ಎಂಜಾಯ್ ಮಾಡಲು ಅವರು ಕ್ವೀನ್ಸ್ಲೆಂಡ್ಗೆ ತೆರಳಿದ್ದರು. ಸಮುದ್ರದಲ್ಲಿ ಮಗನೊಂದಿಗೆ ಸರ್ಫಿಂಗ್ ಆಟವಾಡುತ್ತಿದ್ದ ವೇಳೆ ಹೇಡನ್ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಅಪಘಾತಕ್ಕೀಡಾದ ತಕ್ಷಣವೇ ಹೇಡನ್ ಅವರನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಅಪಘಾತವಾದ ಸಂದರ್ಭದ ಫೋಟೋವೊಂದನ್ನು ಹೇಡನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ಆ ಫೋಟೋದಲ್ಲಿ ಹೇಡನ್ ತಲೆ ಭಾಗಕ್ಕೆ ಗಾಯವಾಗಿದ್ದು, ರಕ್ತದ ಕಲೆ ಕಾಣಿಸುತ್ತಿದೆ. […]

ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾಗೆ ರೋಚಕ ಗೆಲುವು: 7ನೇ ಬಾರಿ ಚಾಂಪಿಯನ್​ ಪಟ್ಟ..!

Saturday, September 29th, 2018
indai

  ದುಬೈ: ಯುಎಇನಲ್ಲಿ ನಡೆದ 14ನೇ ಆವೃತ್ತಿ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 3ವಿಕೆಟ್ಗಳ ರೋಚಕ ಗೆಲುವು ದಾಖಲು ಮಾಡಿಕೊಳ್ಳುವ ಮೂಲಕ 7ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಬಲಗೈ ಓಪನರ್ ಲಿಟನ್ ದಾಸ್ ಅವರ ಚೊಚ್ಚಲ ಶತಕದ (121) ನೇರವಿನಿಂದ 48.3 ಓವರ್‌ಗಳಲ್ಲೇ 222 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಇದರ ಬೆನ್ನತ್ತಿದ್ದ ಟೀಂ ಇಂಡಿಯಾ ಲಾಸ್ಟ್ ಓವರ್ನ […]

ಪ್ರಧಾನಿ ನರೇಂದ್ರ ಮೋದಿಗೆ ‘ಚಾಂಪಿಯನ್​ ಆಫ್​ ದಿ ಅರ್ಥ್ ಪ್ರಶಸ್ತಿ’

Thursday, September 27th, 2018
narendra-modi

ಯುನೈಟೆಡ್ ನೆಷನ್ಸ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ವಿಶ್ವಸಂಸ್ಥೆಯ ಚಾಂಪಿಯನ್ ಆಪ್ ದಿ ಅರ್ಥ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2022 ರೊಳಗೆ ಭಾರತವನ್ನು ಪ್ಲಾಸ್ಟಿಕ್ ಮುಕ್ತ ರಾಷ್ಟ್ರವನ್ನಾಗಿಸುವ ನಿಟ್ಟಿನಲ್ಲಿ ನರೇಂದ್ರಮೋದಿ ಅವರ ಸಂಕಲ್ಪ ಹಾಗೂ ಪರಿಸರ ರಕ್ಷಣೆ ನಿಟ್ಟಿನಲ್ಲಿ ಮ್ಯಾಕ್ರೋನ್ ಅವರ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಿಶ್ವದ ಅತ್ಯಂತ ದೊಡ್ಡ ಪರಿಸರ ಪ್ರಶಸ್ತಿಯಾಗಿದ್ದು, ಅಂತಾರಾಷ್ಟ್ರೀಯ ಸೌರಶಕ್ತಿ ರಾಷ್ಟ್ರಗಳ ಮೈತ್ರಿಯಲ್ಲಿ ಮಾಡಿದ ಅನುಪಮ ಕೆಲಸ ಹಾಗೂ ಪರಿಸರ ಸಂರಕ್ಷಣೆಯಲ್ಲಿ […]