ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್​ ವಾರಂಟ್!

Friday, September 14th, 2018
chandra-bahu

ಅಮರಾವತಿ: ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. 2010ರಲ್ಲಿ ಗೋಧಾವರಿ ನದಿಗೆ ಬಾಬ್ಲಿ ಅಣೆಕಟ್ಟು ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹಾಗೂ ಇತರೆ 15 ಮಂದಿ ವಿರುದ್ಧ ಮಹಾರಾಷ್ಟ್ರ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ. ನಾಂದೇಡ್ ಜಿಲ್ಲೆಯ ಧರ್ಮಾಬಾದ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್, ಆಂಧ್ರ ಸಿಎಂ ಹಾಗೂ ಇತರರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿದೆ. ಅಲ್ಲದೆ […]

ಶಿಕ್ಷಕರು ನಮ್ಮ ಸಮಾಜದ ಶಿಲ್ಪಿಗಳು: ಶಿಕ್ಷಕರ ದಿನಾಚರಣೆಯ ಮಾತು

Wednesday, September 5th, 2018
teachers-day

ಮುಂಬಯಿ: ಪ್ರತಿ ವರ್ಷ ಸೆಪ್ಟೆಂಬರ್ 5 ನೇ ತಾರೀಕಿನಂದು ನಾವೆಲ್ಲಾ ನಮ್ಮ ದೇಶದ ಎರಡನೇ ರಾಷ್ಟ್ರಪತಿ ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತೇವೆ.ಡಾ| ಸರ್ವಪಳ್ಳಿ ರಾಧಾಕೃಷ್ಣನ್ ಒಬ್ಬ ಶ್ರೇಷ್ಟ ತತ್ವಜ್ಞಾನಿ, ನೆನಪಿನಲ್ಲಿ ಅಚ್ಚಳಿಯದೆ ಉಳಿಯುವ ಶಿಕ್ಷಕ ಮಾತ್ರವಲ್ಲ ಹೃದಯವಂತಿಕೆಯಲ್ಲಿ ಒಬ್ಬ ಮಹಾನ್ ಮಾನವತಾವಾದಿ. ಹಾಗಾಗಿ ಈ ದೇಶದ ಭಾವೀ ನಾಯಕರನ್ನುಬೆಳೆಸಿ, ಪೋಷಿಸುವ, ಅವರಲ್ಲಿ ದೂರದೃಷ್ಟಿತ್ವ ಬೆಳೆಸುವ ಮತ್ತು ಜವಾಬ್ದಾರಿಯುತ ನಾಗರಿಕರನ್ನುಸೃಷ್ಟಿಸುವಲ್ಲಿ ಅಪಾರ ಕೊಡುಗೆಯನ್ನು ನೀಡುವ ಶಿಕ್ಷಕರಿಗೆ ಅವರಹುಟ್ಟಿದ ದಿನವನ್ನು ಅರ್ಪಿಸಲಾಗಿದೆ. ನಮ್ಮ ಎಲ್ಲಾ […]

ಭಾರತದಾದ್ಯಂತ ಶಿಕ್ಷಕರ ದಿನಾಚರಣೆ..ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿಗಳು!

Wednesday, September 5th, 2018
narendra-modi

ನವದೆಹಲಿ: ಭಾರತದಾದ್ಯಂತ ಇಂದು ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಅಜ್ಞಾನದಿಂದ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುವ ಗುರುಗಳನ್ನು ಇಂದು ಪ್ರತಿಯೊಬ್ಬರೂ ಸ್ಮರಿಸಿ ಪೂಜಿಸುತ್ತಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಶಿಕ್ಷಕರ ದಿನದ ಶುಭಾಶಯವನ್ನು ಟ್ವಿಟ್ಟರ್ ಮೂಲಕ ಹೇಳಿದ್ದಾರೆ. ಶಿಕ್ಷಕರ ದಿನದ ಈ ವಿಶೇಷ ಸಂದರ್ಭದಲ್ಲಿ ಶಿಕ್ಷಕ ಸಮುದಾಯಕ್ಕೆ ಶುಭ ಕೋರುತ್ತಿದ್ದೇನೆ. ಯುವಕರ ಮನಸ್ಸನ್ನು ರೂಪಿಸುವಲ್ಲಿ ಹಾಗೂ ದೇಶವನ್ನು ಕಟ್ಟುವಲ್ಲಿಯೂ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಪ್ರಸಿದ್ಧ ಶಿಕ್ಷಕ ಡಾ. […]

‘ಸನಾತನ’ದ ಮೇಲೆ ನಿಷೇಧದ ಬೇಡಿಕೆ ಇದು ಹಿಂದೂವಿರೋಧಿಗಳ ಸಂಚು !

Monday, August 27th, 2018
Sanatan

ಮುಂಬೈ : ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು ಕೆಲವು ಹಿಂದುತ್ವನಿಷ್ಠರನ್ನು ಬಂಧಿಸಿತು. ಕೆಲವು ಪ್ರಗತಿಪರರು, ಸಂಘಟನೆಯವರು, ಅದೇ ರೀತಿ ಕಾಂಗ್ರೆಸ್ ಸಹಿತ ವಿವಿಧ ಪಕ್ಷಗಳ ರಾಜಕೀಯ ನಾಯಕರುಗಳು ಉದ್ದೇಶಪೂರ್ವಕವಾಗಿ ಇವರೆಲ್ಲರೂ ಸನಾತನದ ಸಾಧಕರು ಎಂದು ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಸನಾತನ ಸಂಸ್ಥೆಯು ಆಯಾ ಸಮಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು, ಅದನ್ನು ಇಂದೂ ಸ್ಪಷ್ಟಪಡಿಸಲು ಇಚ್ಛಿಸಿದ್ದು, ಆ ಬಂಧಿತರ ಪೈಕಿ ಒಬ್ಬರೂ ಸನಾತನದ ಸಾಧಕರಲ್ಲ. ಅವರಲ್ಲಿ ಕಳಸಕರ, ಅಂದುರೆ, ಸುರಳೆ ಬಂಧು ಮತ್ತು […]

ಮಹಾಮಳೆಗೆ ಕೇರಳವೇ ಮಾಯ..ತಿಂಗಳ ವೇತನ ನೀಡಿದ ವೆಂಕಯ್ಯ ನಾಯ್ಡು!

Monday, August 20th, 2018
venkaih-naidu

ನವದೆಹಲಿ: ಮಹಾ ಮಳೆಗೆ ಕೇರಳವೇ ಮಾಯವಾಗಿದ್ದು, ಅಲ್ಲಿನ ಜನರ ಬದುಕು ಅಯೋಮಯವಾಗಿದೆ. ಕೇರಳಿಗರಿಗಾಗಿ ದೇಶಾದ್ಯಂತ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಅಂತೆಯೇ ಇದೀಗ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವರು ತಮ್ಮ ತಿಂಗಳ ಸಂಬಳ ನೀಡಲು ನಿರ್ಧರಿಸಿದ್ದಾರೆ. ಕೇರಳ ಪ್ರವಾಹ ಸಂಬಂಧ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಹಾಗೂ ರಾಜ್ಯಸಭೆ, ಉಪ ರಾಷ್ಟ್ರಪತಿ ಸಚಿವಾಲಯದ ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿದ ಈ ವೇಳೆ ಸಂಬಳ ನೀಡುವ ಬಗ್ಗೆ ತೀರ್ಮಾನಿಸಿದ್ದಾರೆ. […]

ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಅವರ 74 ನೇ ಜನ್ಮದಿನೋತ್ಸವ

Monday, August 20th, 2018
rajiv-gandhi

ನವದೆಹಲಿ: ದೇಶದ ಐಟಿ ಹರಿಹಾರ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 74 ನೇ ಜನ್ಮದಿನೋತ್ಸವ ಇಂದು. ಅವರ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಗೌರವ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನ ಟ್ವೀಟ್ ಮಾಡುವ ಮೂಲಕ ಸ್ಮರಿಸಿಕೊಂಡಿದ್ದಾರೆ. ಈನಡುವೆ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನದ ಹಿನ್ನೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ನೆನಪಿಸಿಕೊಂಡಿದ್ದಾರೆ. ಕರುಣೆ ಹಾಗೂ ಶಾಂತಿಯ ಪ್ರತೀಕವಾಗಿ ನನ್ನ ತಂದೆ ನನ್ನ ಬದುಕಿನಲ್ಲಿ ಆಳವಾದ ಶೂನ್ಯವನ್ನ […]

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್​ಖಾನ್​ ಪ್ರಮಾಣ ಸ್ವೀಕಾರ..!

Saturday, August 18th, 2018
imran-khan

ಇಸ್ಲಾಮಾಬಾದ್: ಪಿಟಿಐ ಪಕ್ಷದ ನೇತಾರ, ಮಾಜಿ ಕ್ರಿಕೆಟರ್ ಇಮ್ರಾನ್ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಪಾಕಿಸ್ತಾನದ ಅಧ್ಯಕ್ಷ ಮ್ಯಾಮ್ನೂನ್ ಹುಸೇನ್ ಅವರು ಇಮ್ರಾನ್ ಖಾನ್ ಪ್ರಮಾಣವಚನ ಬೋಧಿಸಿದರು. 1992ರ ವಿಶ್ವಕಪ್ ಎತ್ತಿಹಿಡಿದಿದ್ದ ಇಮ್ರಾನ್ ಖಾನ್ ಇದೀಗ ಪಾಕ್ನ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ. ಶುಕ್ರವಾರ ನಾಷನಲ್ ಅಸೆಂಬ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಇಮ್ರಾನ್ ಖಾನ್, ತಮ್ಮ ಪ್ರತಿಸ್ಪರ್ಧಿ ಪಿಎಂಎಲ್ ನವಾಜ್( ಎನ್) ಶಹಬಾಜ್ ಶರೀಫ್ ಅವರನ್ನ 80 ಮತಗಳಿಂದ ಸೋಲಿಸಿ ಪ್ರಧಾನಿ ಪಟ್ಟಕ್ಕೆ ಏರಿದ್ದಾರೆ. ನಿನ್ನೆ ಪಾಕ್ […]

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನ

Friday, August 17th, 2018
Vajapayee

ನವದೆಹಲಿ : ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಮುನಾ ನದಿಯ ದಡದಲ್ಲಿ ಶುಕ್ರವಾರ ಸಂಜೆ 4.55 ಕ್ಕೆ  ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಾಧಾರಗಳೊಂದಿಗೆ ಪಂಚಭೂತಗಳಲ್ಲಿ ಲೀನರಾದರು. ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಪುರೋಹಿತರು ಹಾಗೂ ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. 21 ಬಾರಿ ಕುಶಾಲ ತೋಪು ಸಿಡಿತ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕೀ ಜೈ ಘೋಷಣೆ ನಡುವೆ ವಾಜಪೇಯಿ ಅವರ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಚಿತೆಗೆ ಅಗ್ನಿ ಸ್ಪರ್ಶ […]

ಮಾಜಿ ಪ್ರಧಾನಿ ವಾಜಪೇಯಿಗೆ ಗೀತ ನಮನ..!

Friday, August 17th, 2018
vajpayee-funeral

ನವದೆಹಲಿ: ನಿನ್ನೆ ನಿಧನರಾದ ವಾಜಪೇಯಿ ಅವರ ಅಂತ್ಯಸಂಸ್ಕಾರ ಸಂಜೆ 4 ಗಂಟೆಗೆ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆಯಲಿದೆ. ಬೆಳಗ್ಗೆಯಿಂದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಈಡಲಾಗಿತ್ತು. ಸುಮಾರು ಎರಡು ಗಂಟೆ ಸುಮಾರಿಗೆ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆ ಆರಂಭಗೊಂಡಿದ್ದು, ಸಂಜೆ 3;50 ರವೇಳೆಗೆ ಸ್ಮೃತಿ ಸ್ಥಳವನ್ನ ತಲುಪಲಿದೆ.

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಸ್ತಂಗತ

Thursday, August 16th, 2018
Vajapeyi

ನವದೆಹಲಿ: ಫೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ತೋರಿಸಿಕೊಟ್ಟ ಭಾರತೀಯ ರಾಜಕಾರಣದ ಅಜಾತಶತ್ರು, ಶ್ರೇಷ್ಠ ವಾಗ್ಮಿ, ದಾರ್ಶನಿಕ ಅಟಲ್ ಬಿಹಾರಿ ವಾಜಪೇಯಿ ಅವರು ವಿಧಿವಶರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5.05 ಗಂಟೆಗೆ ಅವರು ವಿಧಿವಶರಾಗಿದ್ದಾರೆ ಎಂದು ಏಮ್ಸ್ ವೈದ್ಯರು ಸ್ಪಷ್ಟಪಡಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 93 ವರ್ಷದ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದರು. ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿಹಿಸುತ್ತಿತ್ತು. ಕಳೆದ ಒಂಬತ್ತು […]