ಜಿಲ್ಲೆಯಲ್ಲಿ ಭೂ ಕುಸಿತ..ಸಂಪರ್ಕ ಕಳೆದುಕೊಂಡ ಗ್ರಾಮಗಳು!

Thursday, August 16th, 2018
chikmagaluru

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆಯ ಆರ್ಭಟಕ್ಕೆ ಕೆಲವೆಡೆ ಭೂ ಕುಸಿತವಾಗಿದ್ದು, ಕಳಸ-ಹೊರನಾಡು, ಕೊಪ್ಪ, ಎನ್.ಆರ್.ಪುರ, ಮೇಲ್ಪಾಲ್, ಹೊದಸಾಳು, ಕೆರೆಹಕ್ಲು ಸೇರಿದಂತೆ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ನಗರದ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಿದ್ದು 45 ದಿನದಲ್ಲಿ 15 ನೇ ಬಾರಿ ಮುಳುಗಿದೆ. ಹೆಬ್ಬಾಳೆ ಸೇತುವೆ ಕುದುರೆಮುಖ, ಕಳಸದ ಭಾಗದಲ್ಲಿ ಮಳೆ ಆಗುತ್ತಲೇ ಇರುವುದರಿಂದ ಭದ್ರೆಗೆ‌ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಕಳಸ-ಹೊರನಾಡು ಸಂಪರ್ಕ ಸೇತುವೆಯನ್ನು ಸಂಪೂರ್ಣ ಮುಳುಗುವಂತೆ ಮಾಡಿದೆ. ಇನ್ನೂ ಮಳೆಯಿಂದ ಮೂರು ದಿನದಲ್ಲಿ ನಾಲ್ಕೈದು ಕಡೆ […]

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರ..!

Thursday, August 16th, 2018
vatal-vajpayee

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಕಳೆದ 24 ಗಂಟೆಗಳಲ್ಲಿ ಅವರ ಆರೋಗ್ಯ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ಏಮ್ಸ್ ಆಸ್ಪತ್ರೆ ಮೂಲಗಳು ತಿಳಿಸಿವೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ, ಕಳೆದ ಜೂನ್ 11ರಂದು ಏಮ್ಸ್ಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಕಳೆದ 24 ಗಂಟೆಗಳಿಂದ ಅವರ ಆರೋಗ್ಯದಲ್ಲಿ ಭಾರಿ ಏರುಪೇರು ಕಂಡು ಬಂದಿದ್ದು, ಲೈಫ್ ಸಪೋರ್ಟ್ ಮೇಲೆ ಇಡಲಾಗಿದೆ. ಇನ್ನು ಅವರ ಆರೋಗ್ಯದಲ್ಲಿ ಏರುಪೇರು ಕಂಡು […]

ಸೆಪ್ಟೆಂಬರ್ 25ರಂದು ಆರೋಗ್ಯ ಸುರಕ್ಷೆ ಯೋಜನೆ ಜಾರಿ: ಪ್ರಧಾನಿ ನರೇಂದ್ರ ಮೋದಿ

Wednesday, August 15th, 2018
new-delhi

ನವದೆಹಲಿ: ಬಹು ನಿರೀಕ್ಷಿತ ಆರೋಗ್ಯ ಸುರಕ್ಷೆ ಯೋಜನೆ ಬಗ್ಗೆ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. ಪ್ರಧಾನಮಂತ್ರಿ ಜನ್ ಆರೋಗ್ಯ ಅಭಿಯಾನವ್ಉ ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಜತೆಗೆ ಶುರುವಾಗುತ್ತದೆ ಎಂದರು. ನಾವು ನಿಲ್ಲುವುದಿಲ್ಲ, ಬಾಗುವುದಿಲ್ಲ, ದಣಿಯುವುದಿಲ್ಲ: ನರೇಂದ್ರ ಮೋದಿ ಇದರಿಂದ ಐವತ್ತು ಕೋಟಿ ಮಂದಿಗೆ ವರ್ಷಕ್ಕೆ ಐದು ಲಕ್ಷ ರುಪಾಯಿ ಆರೋಗ್ಯ ವಿಮೆ ದೊರೆಯುತ್ತದೆ. ಈ ಯೋಜನೆಯು ದೀನ್ ದಯಾಳ್ ಉಪಾಧ್ಯಾಯರ ಜನ್ಮ ದಿನವಾದ ಸೆಪ್ಟೆಂಬರ್ 25ರಂದು ಜಾರಿಗೆ ಬರಲಿದೆ. ಇಂದಿನಿಂದ […]

ದೇಶದ ಜನರಿಗೆ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್​ ಆರೋಗ್ಯ ಯೋಜನೆ: ನರೇಂದ್ರ ಮೋದಿ

Wednesday, August 15th, 2018
narendra-modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಇಂದು ದೆಹಲಿಯ ಕೆಂಪುಕೋಟೆ ಮೇಲೆ ತಮ್ಮ ಕೊನೆ ಭಾಷಣ ಮಾಡಿದರು. ಈ ವೇಳೆ ದೇಶದ ಜನರಿಗೆ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಆರೋಗ್ಯ ಯೋಜನೆ ಗಿಫ್ಟ್ ನೀಡಿದ್ದಾರೆ. ಈ ಹಿಂದೆ ಕೇಂದ್ರ ಬಜೆಟ್ ವೇಳೆ ಈ ಯೋಜನೆ ಪ್ರಸ್ತಾಪಗೊಂಡಿತ್ತು. ಇದೀಗ ಈ ಯೋಜನೆ ಬಗ್ಗೆ ಪ್ರಧಾನಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಇದರಿಂದ ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಆರೋಗ್ಯ ವಿಮೆ ಭಾಗ್ಯ ಸಿಗಲಿದೆ. ಈ ಮೂಲಕ […]

ನನಗೆ ಈಗಾಗಲೇ ಮದುವೆಯಾಗಿದೆ..ಯುವತಿಯೊಂದಿಗೆ ಅಲ್ಲ ಪಕ್ಷದೊಂದಿಗೆ: ರಾಹುಲ್ ಗಾಂಧಿ

Tuesday, August 14th, 2018
rahul-congress

ನವದೆಹಲಿ: ದೇಶದ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್‌ಗಳ ಪೈಕಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಕೂಡ ಒಬ್ಬರು. 47 ರಾಹುಲ್ ಮದುವೆ ಸುತ್ತ ಈವರೆಗೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿವೆ. ಮದುವೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಸಲ ಪ್ರಶ್ನೆ ಉದ್ಭವವಾಗಿದ್ದು, ಅದರಿಂದ ಅವರು ತಪ್ಪಿಸಿಕೊಂಡಿದ್ದಾರೆ. ಆದರೆ, ಇದೀಗ ಪತ್ರಕರ್ತನೊಬ್ಬ ಕೇಳಿರುವ ಪ್ರಶ್ನೆಗೆ ನನಗೆ ಈಗಾಗಲೇ ಮದುವೆಯಾಗಿದೆ ಎಂಬ ಉತ್ತರ ನೀಡಿದ್ದಾರೆ. ಆದರೆ ನಾನು ಮದುವೆಯಾಗಿದ್ದು ಯುವತಿಯೊಂದಿಗೆ ಅಲ್ಲ ಬದಲಿಗೆ ಪಕ್ಷದೊಂದಿಗೆ ಎಂದಿದ್ದಾರೆ. ಎರಡು ದಿನಗಳ ಹೈದರಾಬಾದ್ ಪ್ರವಾಸದಲ್ಲಿರುವ ರಾಹುಲ್ ಗಾಂಧಿಗೆ […]

ಒಸಾಮಾ ಬಿನ್ ಲಾಡೆನ್ ಪುತ್ರನ ಮದುವೆ!

Tuesday, August 7th, 2018
Osama

ಮುಂಬೈ : ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್‌ ಅಮೆರಿಕಾದ 9/11/2001 ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ ಮೊಹಮ್ಮದ್‌ ಅಟ್ಟಾ ಪುತ್ರಿಯನ್ನು ವಿವಾಹವಾಗಿದ್ದಾನೆ. 9/11ರ ದಾಳಿಯಲ್ಲಿ ಮೊಹಮ್ಮದ್‌ ಅಟ್ಟಾ ವಿಮಾನ ಹೈಜಾಕರ್ ಆಗಿದ್ದನು. ’ದಿ ಗಾರ್ಡಿಯನ್’ ಪತ್ರಿಕೆಗೆ ಒಸಾಮಾ ಬಿನ್ ಲಾಡೆನ್‌ ಕುಟುಂಬದ ಅಹ್ಮದ್‌ ಮತ್ತು ಹಸನ್‌ ಅಲ್ ಅಟ್ಟಾಸ್‌ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ. “ಮೊಹಮ್ಮದ್‌ ಅಟ್ಟಾ ಮಗಳನ್ನು ಹಮ್ಜಾ ವಿವಾಹವಾಗಿದ್ದಾನೆ. ಅವನು ಈಗೆಲ್ಲಿದ್ದಾನೆ ಎನ್ನುವುದು ನನಗೆ […]

2019ರ ವಿಶ್ವಕಪ್​ ಟೂರ್ನಿ..ಕೊಹ್ಲಿ ಪಡೆಯಲ್ಲಿ ಇವರೆಲ್ಲ ಸ್ಥಾನ ಪಡೆಯೋ ಸಾಧ್ಯತೆ!

Wednesday, July 25th, 2018
team-india

ಮುಂಬೈ: ಇಂಗ್ಲೆಂಡ್ನಲ್ಲಿ ನಡೆಯಲಿರುವ ಬಹುನೀರಿಕ್ಷಿತ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರದ ತಯಾರಿ ನಡೆಸಿದ್ದು, ಟೀಂ ಇಂಡಿಯಾ ಕೂಡ ಅದರಿಂದ ಹೊರತಾಗಿಲ್ಲ. ಅದಕ್ಕಾಗಿ ಕೆಲವೊಂದು ಪರೀಕ್ಷೆಗೆ ತಂಡ ಒಳಗಾಗಿದೆ. ಈ ಹಿಂದಿನ ಸರಣಿಗಳಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ಈ ಎಲ್ಲ ಆಟಗಾರರು ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿವೆ. ಈಗಾಗಲೇ ಈ ಹಿಂದಿನ ಅನೇಕ ಸರಣಿಗಳಲ್ಲಿ ಉತ್ತಮ ಜೊತೆಯಾಟ ನೀಡಿರುವ ಶಿಖರ್ […]

ಗ್ಯಾಸ್​ ಸಿಲಿಂಡರ್​ ಸ್ಫೋಟ..ಸ್ಥಳದಲ್ಲೇ ಐದು ಮಂದಿ ಸಾವು..!

Tuesday, July 24th, 2018
blasted

ಆಗ್ರಾ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸ್ಥಳದಲ್ಲೇ ಐದು ಮಂದಿ ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಗ್ರಾದ ಇರಾದತ್ ನಗರದಲ್ಲಿ ಸೋಮವಾರ ನಡೆದಿದೆ. ದುರ್ಘಟನೆಯಲ್ಲಿ ಐದು ಜನ ಸಜೀವ ದಹನವಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಶಾಸಕ ಮಹೇಶ್ ಗೋಯಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ […]

ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿ..!

Saturday, July 21st, 2018
narendra-modi

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ನಿರೀಕ್ಷೆಯಂತೆ ವಿಶ್ವಾಸಮತ ಸಾಧಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ. ಈ ವೇಳೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು. ವಿಶ್ವಾಸಮತಕ್ಕೆ 226 ಮಾತ್ರ ಬೇಕಾಗಿತ್ತು. ಎನ್ಡಿಎ 325 ಹಾಗೂ ಪ್ರತಿಪಕ್ಷಗಳು ಕೇವಲ126 ಮತ ಪಡೆದವು. ಹೀಗಾಗಿ ಮೋದಿ ಸರ್ಕಾರ ನಿರೀಕ್ಷೆಯಂತೆ ವಿಶ್ವಾಸ ಮತ ಪರೀಕ್ಷೆಯಲ್ಲಿ ಪಾಸಾಯಿತು. ಒಬ್ಬ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಲು ಇಷ್ಟೊಂದು ಪ್ರಯತ್ನ ಮಾಡುವ ಅಗತ್ಯತೆ ಇತ್ತಾ ಎಂದು ಪ್ರಧಾನಿ ಪ್ರಶ್ನಿಸಿದರು. ಇನ್ನು ಸದನದಲ್ಲಿ […]

ನಾವು ಎಲ್ಲರೂ ಸೇರಿ ಪ್ರಧಾನಿ ಮೋದಿಯನ್ನು ಸೋಲಿಸಲು ಹೋಗುತ್ತಿದ್ದೇವೆ: ರಾಹುಲ್ ಗಾಂಧಿ

Friday, July 20th, 2018
rahul-gandhi

ಹೊಸದಿಲ್ಲಿ: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಬಳಿಕ ಪ್ರಧಾನಿ ಬಳಿ ತೆರಳಿ ಅವರನ್ನು ಆಲಂಗಿಸಿಕೊಂಡರು. ತನ್ನನ್ನು ಆಲಂಗಿಸುತ್ತಿದ್ದಂತೆ ಪ್ರಧಾನಿ ಮೋದಿ ಅವರು ರಾಹುಲ್ ಬೆನ್ನು ತಟ್ಟಿದರು. “ನಾನು ನಿಮಗೆ ಪಪ್ಪು ಇರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶ ಕಟ್ಟಿದೆ. ಈ ಭಾವನೆ ನಿಮ್ಮಲ್ಲಿಯೂ ಇದೆ. ನಾನು ಬಿಜೆಪಿ, ಆರ್ ಎಸ್ ಎಸ್ ಗೆ ಅಭಾರಿಯಾಗಿದ್ದೇನೆ. ನಿಮ್ಮಲ್ಲಿನ ಭಾವನೆ ಹೊರತರುವೆ. ನಿಮ್ಮನ್ನೂ ಕಾಂಗ್ರೆಸ್ ಗರನ್ನಾಗಿ ಮಾಡುವೆ” ಎಂದು ರಾಹುಲ್ ಭಾಷಣದಲ್ಲಿ […]