ಮುಂಬೈಯಲ್ಲಿ ಉಗ್ರರು ಹಲವಾರು ಮಂದಿಯನ್ನು ಬಲಿ ಪಡೆದ ದಿನವೇ ಮಂಗಳೂರಿನಲ್ಲಿ ಗೋಡೆ ಬರಹ : ಎಬಿವಿಪಿ ಖಂಡನೆ

Saturday, November 28th, 2020
Abvp Protest

ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಅಪಾರ್ಟ್‌ಮೆಂಟ್‌ನ ಆವರಣ ಗೋಡೆಯಲ್ಲಿ ಉಗ್ರ ಸಂಘಟನೆಗಳ ಪರ ಬರಹ ಪ್ರಕರಣವನ್ನು ಖಂಡಿಸಿ ನಗರದ ಸರ್ಕೀಟ್ ಹೌಸ್ ಮುಂಭಾಗ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ದೊಂದಿ ಹಿಡಿದು ದೇಶದ್ರೋಹಿಗಳ ವಿರುದ್ಧ ಘೋಷಣೆ ಕೂಗಿದರು. 2008 ನ.26ರಂದು ಪಾಕಿಸ್ತಾನದ ಲಷ್ಕರ್ ಇ ತೊಯ್ಬಾ ಉಗ್ರರ ಕೃತ್ಯದಿಂದ ಮುಂಬೈ ಮಹಾನಗರದಲ್ಲಿ ಸೈನಿಕರು, ಪೊಲೀಸರು ಸೇರಿ ಹಲವಾರು ಮಂದಿ ಮೃತಪಟ್ಟ ದಿನ. ಅದೇ ದಿನ ದೇಶದ್ರೋಹಿಗಳು ಉಗ್ರರ […]

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಪಡೆಯುವುದು ಪಕ್ಷದ ಗುರಿ : ಅಶ್ವತ್ಥ್ ನಾರಾಯಣ

Saturday, November 28th, 2020
Ashwath Narayana

ಮಂಗಳೂರು : ವಿವಿಧ ಜ್ಞಾನ ಕ್ಷೇತ್ರ ಗಳ ನಡುವೆ ಪರಸ್ಪರ ಸಮನ್ವಯ ಮೂಡಿಸುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲಾಗಿದೆ. ವಿಜ್ಞಾನ ತಂತ್ರಜ್ಞಾನ ಸೇರಿದಂತೆ ವಿವಿಧ ಶೈಕ್ಷಣಿಕ ಕ್ಷೇತ್ರಗಳ ನಡುವೆ ಪರಸ್ಪರ ಸಮನ್ವಯ ಸಾಧಿಸಲು ಸಮಗ್ರ ವ್ಯವಸ್ಥೆಯಲ್ಲಿ ಸುಧಾರಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ಅವರು ನಗರದ ಬಿಜೆಪಿ ಕಚೇರಿಯಲ್ಲಿಂದು ಸುದ್ದಿ ಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿ ಮುಂದಿನ ಹಂತದಲ್ಲಿ ಮಗುವಿಗೆ ಮೂರು ವರ್ಷ ತುಂಬುವ ಹಂತದಿಂದಲೇ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಡಾ.ಅಶ್ವತ್ಥ್ […]

ಸಿಪಿಎಂ ಪಕ್ಷದ ಹಿರಿಯ ಮುಂದಾಳು ಮೋರ್ಲ ವೆಂಕಪ್ಪ‌ ಶೆಟ್ಟಿ ನಿಧನ

Saturday, November 28th, 2020
Venkappa Shetty

ಮಂಗಳೂರು : ಸಿಪಿಎಂ ಪಕ್ಷದ ಹಿರಿಯ ಮುಂದಾಳು, ಯಕ್ಷಗಾನ ತಾಳಮದ್ದಲೆ ಅರ್ಥಧಾರಿ, ಕಂಚಿನ ಕಂಠದ ಮಾತುಗಾರ, ವಿಮರ್ಶಕರು, ಚಿಂತಕರಾಗಿರುವ ಮೋರ್ಲ ವೆಂಕಪ್ಪ‌ ಶೆಟ್ಟಿ (87) ಶನಿವಾರ ಬೆಳಗ್ಗೆ ನಿಧನರಾದರು. ಸಿಪಿಎಂ ಪಕ್ಷದಲ್ಲಿ 1965 ರಲ್ಲಿ ರೈತರ ಬೇಡಿಕೆ ಈಡೇರಿಸಲು ಮಂಗಳೂರಿನಿಂದ ಬೆಂಗಳೂರು ತನಕ ಕಾಲ್ನಡಿಗೆ ಜಾಥಾ ನಡೆಸಿದ್ದರು. ಬೀಡಿ ಕಾರ್ಮಿಕರ, ರೈತರ ಪರ ಹೋರಾಟ ಮಾಡಿ ಜನ ಮೆಚ್ಚುಗೆ ಗಳಿಸಿದ್ದರು. ವರ್ಕಾಡಿ ಗಡಿಪ್ರಧಾನ ಮನೆಯವರಾಗಿದ್ದ ವೆಂಕಪ್ಪ‌ ಶೆಟ್ಟಿ ಜ್ಞಾನ ಭಂಡಾರ ಅತಿ ದೊಡ್ಡದು, ಸರಸ್ವತಿ ನಾಲಗೆಯ ತುದಿಯಲ್ಲೇ […]

ಹೈದಾರಾಬಾದ್‌ನಿಂದ ಮಂಗಳೂರು ನಗರಕ್ಕೆ ಸಾಗಾಟ ಮಾಡುತ್ತಿದ್ದ 24 ಕೆ.ಜಿ. ಗಾಂಜಾ ವಶ

Friday, November 27th, 2020
Ganja

ಮಂಗಳೂರು : ನಗರದ ಪಡೀಲ್‌ ಜಂಕ್ಷನ್‌ನಿಂದ ಬಿಕರ್ನಕಟ್ಟೆ ಬರುವ ರಸ್ತೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆಂಧ್ರ ಪ್ರದೇಶದ ಹೈದಾರಾಬಾದ್‌ನಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದ ಸುಮಾರು 24 ಕೆ.ಜಿ. ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಕೇರಳದ ಕಾಸರಗೋಡು ನಿವಾಸಿಗಳಾದ ಇಬ್ರಾಹಿಂ ಮಡನ್ನೂರು ಹಾಗೂ ಅಬ್ದುಲ್‌ ನಿಜಾದ್‌ ಎಂದು ಗುರುತಿಸಲಾಗಿದೆ. ಆರೋಪಿತರಿಂದ 3,60,000 ರೂ. ಮೌಲ್ಯದ ಸುಮಾರು 24 ಕೆ.ಜಿ. ಗಾಂಜಾ ಹಾಗೂ 2 ಲಕ್ಷ ಮೌಲ್ಯದ ಟೂರಿಸ್ಟ್‌ ಕಾರು ಹಾಗೂ 23 […]

ರೌಡಿಶೀಟರ್ ಇಂದ್ರಜಿತ್ ಕೊಲೆ, ಎಂಟು ಮಂದಿ ಪೊಲೀಸರ ವಶಕ್ಕೆ

Friday, November 27th, 2020
Indrajeet

ಮಂಗಳೂರು : ರೌಡಿಶೀಟರ್ ಇಂದ್ರಜಿತ್‌ನನ್ನು ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದ್ದು ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ಬರ್ಕೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕುದ್ರೋಳಿ ಕರ್ನಲ್ ಗಾರ್ಡನ್ ಬಳಿ ಬುಧವಾರ ತಡರಾತ್ರಿ ರೌಡಿಶೀಟರ್ ಇಂದ್ರಜಿತ್ (28) ಕೊಲೆಯಾಗಿತ್ತು. ಸ್ನೇಹಿತನೊಬ್ಬನ ವಿವಾಹದ ಮೆಹಂದಿ ಕಾರ್ಯಕ್ರಮಕ್ಕೆಂದು ಇಂದ್ರಜಿತ್ ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಮನೆಯಿಂದ ಹೊರಹೋಗಿದ್ದು, ಅಲ್ಲಿಂದ ಮರಳಿ ಬರುವ ಸಂದರ್ಭ ಕಾದು ಕುಳಿತಿದ್ದ ಹಂತಕರು ಈ ಕೃತ್ಯ ಎಸಗಿದ್ದಾರೆಂದು ತಿಳಿದು ಬಂದಿದೆ. ಬರ್ಕೆ ಪೊಲೀಸರು […]

ಮಂಗಳೂರಿಗೆ ಉಗ್ರರನ್ನು ಕರೆಸುವ ಕುರಿತ ಬೆದರಿಕೆಯ ಬರಹ, ನಗರದಲ್ಲಿ ಆತಂಕ

Friday, November 27th, 2020
terrorist

ಮಂಗಳೂರು : ಮಂಗಳೂರಿಗೆ ಉಗ್ರರನ್ನು ಕರೆಸುವ ಕುರಿತ ಬೆದರಿಕೆಯ ಬರಹವೊಂದು ನಗರದ ಬಿಜೈ ಸಮೀಪದ ಅಪಾರ್ಟ್‌ಮೆಂಟ್‌ವೊಂದರ ಗೋಡೆ ಮೇಲೆ ಕಂಡುಬಂದಿದ್ದು, ಘಟನೆಯ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ತ್ವರಿತವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ವಿಕಾಶ್ ಕುಮಾರ್ ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ವೊಂದರ ಕಂಪೌಂಡ್ ಮೇಲೆ ‘ಲಷ್ಕರ್ ಇ ತೊಯ್ಬ ಝಿಂದಾಬಾದ್’ ಎಂದು ಬರೆಯಲಾಗಿದ್ದು, ಉಗ್ರರನ್ನು ಮಂಗಳೂರಿಗೆ ಕರೆಸುವ ಬೆದರಿಕೆ ಹಾಕಲಾಗಿದೆ. ಸಂಘಪರಿವಾರಕ್ಕೆ ಬೆದರಿಕೆಯ ಮಾತುಗಳನ್ನು ಬರೆಯಲಾಗಿದೆ. ‘ನಿಮ್ಮನ್ನು (ಸಂಘ ಪರಿವಾರ) ನಿಯಂತ್ರಿಸಲು ಲಷ್ಕರ್ ಉಗ್ರರನ್ನು ಆಹ್ವಾನಿಸಬೇಕಾದೀತು. […]

ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹಿಸಲಾಗದು – ಶಾಸಕ ಕಾಮತ್

Friday, November 27th, 2020
Vedavyas

ಮಂಗಳೂರು  : ಬಿಜೈ ಪರಿಸರದಲ್ಲಿ ಕಟ್ಟಡದ ಕಾಂಪೌಂಡ್ ನಲ್ಲಿ ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್ ಪರ ಬರಹಗಳು ಕಂಡು ಬಂದಿರುವ ವಿಚಾರಕ್ಕೆ ಸಂಬಂಧಿಸಿ ಶಾಸಕ ವೇದವ್ಯಾಸ್ ಕಾಮತ್ ಅವರು ಪೊಲೀಸ್ ಅಧಿಕಾರಿಗಳ‌ಜೊತೆ ಚರ್ಚಿಸಿದ್ದಾರೆ. ಈ ಕುರಿತು ಮಾತನಾಡಿದ ಶಾಸಕ ಕಾಮತ್, ಮಂಗಳೂರಿನಲ್ಲಿ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯ ಪರವಾಗಿ ಕಂಡು ಬಂದಿರುವ ಗೋಡೆ ಬರಹವು ಆತಂಕಕಾರಿಯಾಗಿದೆ. ಇಂತಹ ರಾಷ್ಟ್ರ ವಿರೋಧಿ ಕೃತ್ಯಗಳನ್ನು ಸಹಿಸಲಾಗದು ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ. ಈ ವಿಚಾರವಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳ ಜೊತೆ ಮಾತುಕತೆ […]

ಹಂಡೇಲು ಚಿನ್ನಾಭರಣ ದರೋಡೆ – ನಾಲ್ವರ ಬಂಧನ

Friday, November 27th, 2020
Handelu

ಮೂಡುಬಿದಿರೆ  : ಮನೆಯೊಂದಕ್ಕೆ ನುಗ್ಗಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ ಪೊಲೀಸರು, 22.860 ಗ್ರಾಂ ಚಿನ್ನಾಭರಣ ಹಾಗೂ ₹11 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಕೇರಳದ ಕಾಸರಗೋಡಿನ ಇಬ್ರಾಹಿಂ ಕಲಂದರ್ (38), ಮೊಹಮ್ಮದ್ ಹನೀಫ್ (48), ಶಿವಮೊಗ್ಗದ ಮೊಹಮ್ಮದ್ ಮುದಸ್ಸಿರ್ (20), ಮೂಡುಬಿದಿರೆಯ ಶಾಹೀಂ ಸಿದ್ದೀಕ್ (26) ಬಂಧಿತರು. ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪುತ್ತಿಗೆ ಗ್ರಾಮದ ಹಂಡೇಲು ಹತ್ತಿರದ ಸಾರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ನವೆಂಬರ್  11ರಂದು ಹಿಂಬದಿ ಬಾಗಿಲು ಮುರಿದು ಆರೋಪಿಗಳು ಚಿನ್ನಾಭರಣ ದೋಚಿದ್ದರು. ಈ ಕುರಿತು […]

ಕಾಂಪ್ಕೋ 2019-20ನೇ ಸಾಲಿನಲ್ಲಿ32.10 ಕೋಟಿ ರೂ.ಗಳ ನಿವ್ವಳ ಲಾಭ

Thursday, November 26th, 2020
campco

ಮಂಗಳೂರು : ಕಾಂಪ್ಕೋ  2019-20ನೇ ಸಾಲಿನಲ್ಲಿ1,848 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, 32.10 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಕೊರೋನ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಸರ್ವ ಸದಸ್ಯರ ಮಹಾಸಭೆ ಡಿಸೆಂಬರ್ 13ರಂದು ನಿಗದಿಪಡಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ. ಗ್ರಾಹಕರಿಗೆ  ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಪುತ್ತೂರಿನಲ್ಲಿ ವಿಶೇಷ ಚಾಕಲೇಟು ಕಿಯೋಸ್ಕ್‌ಗಳು ಕಾರ್ಯಪ್ರವೃತ್ತವಾಗಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಪೈಸ್ ಟೋಫಿ ಎಂಬ ಹೊಸ ಚಾಕಲೇಟು ಉತ್ಪನ್ನ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಉತ್ತಮ ಬೇಡಿಕೆ ಇದೆ. […]

ಡಿ.ವೀರೇಂದ್ರ ಹೆಗ್ಗಡೆ ಅವರ 73ನೇ ಹುಟ್ಟುಹಬ್ಬದ ಪ್ರಯುಕ್ತ ವಾತ್ಸಲ್ಯ ಸಹಾಯಹಸ್ತ ವಿತರಣೆಗೆ ಚಾಲನೆ

Thursday, November 26th, 2020
veerendra Heggade

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ 73ನೇ ಹುಟ್ಟುಹಬ್ಬವನ್ನು ಬುಧವಾರ  ಸರಳ ರೀತಿಯಲ್ಲಿ ಆಚರಿಸಲಾಗಿದ್ದು, ಹಲವು ಗಣ್ಯರು ಧರ್ಮಾಧಿಕಾರಿಗಳಿಗೆ ಫಲಪುಷ್ಪವನ್ನು ಅರ್ಪಿಸಿ ಶುಭಾಶಯ ಕೋರಿದರು. ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೆಗ್ಗಡೆಯವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಹಲವು ಗಣ್ಯರು ದೂರವಾಣಿ ಕರೆ ಹಾಗೂ ಸಂದೇಶಗಳ ಮೂಲಕ ಶುಭಾಶಯ ತಿಳಿಸಿದರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಬೆಳ್ತಂಗಡಿ […]