ಮಂಗಳೂರು ಬಿಜೆಪಿ ಕಚೇರಿಯಲ್ಲಿ ಗೋಪೂಜೆ

Monday, November 16th, 2020
BJP Gopooja

ಮಂಗಳೂರು : ಗೋವನ್ನು ವಿಶ್ವದ ತಾಯಿ ಎಂದು ಬಣ್ಣಿಸಲಾಗಿದೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಗೋವು ಅವಿಭಾಜ್ಯ ಅಂಗವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ನೆರವೇರಿಸಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಬಿಜೆಪಿ ಕಚೇರಿ ಮುಂಭಾಗ ಗೋಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು. ಗೋವಿನ ಸಂರಕ್ಷಣೆ ಎಂದರೆ ರಾಷ್ಟ್ರದ, ಕೃಷಿ ಹಾಗೂ ಕುಟುಂಬದ ಸಂರಕ್ಷಣೆ ಮಾಡಿದಂತೆ . ಹಾಗಾಗಿ ತನ್ನದೆಲ್ಲವನ್ನೂ ತ್ಯಾಗ ಮಾಡುವ ಗೋವಿನ ಪೂಜೆ ಮಾಡುವುದು ಭಾರತೀಯ […]

ಕೊಂಡೆವೂರು ಕಾಮಧೇನು ಗೋಶಾಲೆಯಲ್ಲಿ ಗೋಪೂಜೆ

Monday, November 16th, 2020
Kondevooru

ಮಂಗಳೂರು  : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ” ಕಾಮಧೇನು ಗೋಶಾಲೆ “ಯ ಸಮಸ್ತ ಗೋವುಗಳಿಗೆ ಭಾನುವಾರ ಸಂಜೆ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಗೋಪೂಜೆ ನೆರವೇರಿಸಿ ಗೋಗ್ರಾಸ ನೀಡಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ‘ತುಲಾಭಾರ’ ಮತ್ತು ‘ಅನ್ನಪ್ರಶಾನ’ ಆಚರಣೆಗಳನ್ನು ನವೆಂಬರ್ 15 ರಿಂದ ಆರಂಭಿಸಲಾಗಿದೆ. ಸಾಂಕ್ರಾಮಿಕ ರೋಗದ ಭೀತಿಯಿಂದ ದೇವಸ್ಥಾನ ಮಾರ್ಚ್‌ನಲ್ಲಿ ಮುಚ್ಚಲಾಗಿದ್ದು ಒಂದು ತಿಂಗಳ ಹಿಂದೆ ಮತ್ತೆ ತೆರೆಯಲಾಗಿದೆ. ಆದರೆ ಈ ಎರಡು ಸೇವೆಗಳನ್ನು ಆರಂಭಿಸಿರಲಿಲ್ಲ. ಇದೀಗ ಆರಂಭಿಸಲಾಗಿದೆ. ಅದೇ ರೀತಿ […]

ಕಂದಾವರ ಮಸೀದಿ ಬಳಿ ವ್ಯಕ್ತಿಯೊಬ್ಬರ ಮೇಲೆ ತಲವಾರು ದಾಳಿ

Monday, November 16th, 2020
Kandavara Attack

ಮಂಗಳೂರು : ಉದ್ಯಮಿಯೊಬ್ಬರ ಮೇಲೆ ಇಬ್ಬರು ಯುವಕರು ತಲವಾರು ದಾಳಿ ನಡೆಸಿ ಪರಾರಿಯಾದ ಘಟನೆ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾವರ ಬಳಿ‌ ರವಿವಾರ ರಾತ್ರಿ‌  ನಡೆದಿದೆ. ಕಂದಾವರ ಕೈಕಂಬದ ಅಬ್ದುಲ್ ಅಝೀಝ್ (56)ದಾಳಿಗೊಳಗಾದ ಉದ್ಯಮಿ. ಅವರು ರಾತ್ರಿ ಸುಮಾರು 10:30ಕ್ಕೆ ಮಸೀದಿಯಲ್ಲಿ ನಮಾಝ್ ಮಾಡಿ ಮನೆಗೆ ಮರಳಲು ತನ್ನ ಕಾರಿನತ್ತ ನಡೆದುಕೊಂಡು ಬರುತ್ತಿದ್ದಾಗ ಇಬ್ಬರು ಯುವಕರು ತಲವಾರಿನಿಂದ ಅಝೀಝ್ ಅವರ ತಲೆ, ಕೈ, ಕಾಲಿಗೆ ಕಡಿದು, ಗಂಭೀರ ಗಾಯಗೊಳಿಸಿ, ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡ ಅಝೀಝ್ […]

ಸೈನಿಕನ ಮನೆಯವರೊಂದಿಗೆ ದೀಪಾವಳಿ ಆಚರಿಸಿದ ಬಿಜೆಪಿ ಮಂಗಳೂರು ಮಂಡಲ

Monday, November 16th, 2020
MudipuBJP

ಮಂಗಳೂರು : ಮುಡಿಪು ಹೂ ಹಾಕುವ ಕಲ್ಲಿನಲ್ಲಿರುವ ಮನೋಜ್ ಎಂಬವರು ಗಡಿ ಭದ್ರತಾ ಪಡೆಯಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಮ್ಮೆಯ ಸೈನಿಕರ ಮನೆಯಲ್ಲಿ ಅವರ ಹೆತ್ತವರನ್ನು ಸನ್ಮಾನಿಸಿ ಸಿಹಿತಿಂಡಿಗಳನ್ನು ಹಂಚುವ ಮೂಲಕ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ದೀಪಾವಳಿಯನ್ನು ಆಚರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್, ಪ್ರಧಾನ ಕಾರ್ಯದರ್ಶಿಗಳಾದ ಹೇಮಂತ್ ಶೆಟ್ಟಿ, ನವೀನ್ ಪಾದಲ್ಪಾಡಿ, ಕಾರ್ಯದರ್ಶಿ ಸುಜಿತ್ ಮಾಡೂರು, ಮಾದ್ಯಮ ಪ್ರಮುಖ್ ಪುರುಷೋತ್ತಮ ಕಲ್ಲಾಪು, ಕುರ್ನಾಡ್ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಲೋಹಿತ್ […]

ರಮಾನಾಥ ರೈ ಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನೆಲಕಚ್ಚಲಿದೆ : ಹರಿಕೃಷ್ಣ ಬಂಟ್ವಾಳ್

Monday, November 16th, 2020
Harikrishna Bantwal

ಮಂಗಳೂರು : ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮಾನಾಥ ರೈ ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಂಡಿರುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಕೊಲೆ ಆರೋಪಿಗಳಿಗೆ ರೈ ಬೆಂಬಲ ನೀಡಿದ್ದೇನೆ ಎಂದಿದ್ದೇನೆಯೇ ವಿನಃ ಎಲ್ಲೂ ಕೂಡ ರೈ ಕೊಲೆಗಾರ ಎಂದು ಹೇಳಲಿಲ್ಲ. ಆದರೆ ಅವರ ಹಿಂಬಾಲಕರು ರೈಯನ್ನು ಕೊಲೆಗಾರ ಎಂದು ಹೇಳಿಕೊಂಡು ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಸಾಧ್ಯವಾದರೆ ಅವರು ನನ್ನನ್ನು ಬಂಧಿಸುವ ತಾಕತ್ತು ತೋರಿಸಲಿ ಎಂದು ಕಿಯೋನಿಸ್ಕ್ ಅಧ್ಯಕ್ಷ ಹರಿಕೃಷ್ಣ […]

ಕೈರಂಗಳ ಪಿಡಿಓ ಹೆಸರಿನಲ್ಲಿ 14 ಸಾವಿರ ಟನ್‌‌ ರೆಡ್‌ ಬಾಕ್ಸೈಟ್ ಸಾಗಾಟ : ರಮಾನಾಥ ರೈ

Saturday, November 14th, 2020
Ramanath Rai

ಮಂಗಳೂರು : ಈ ಹಿಂದೆ  ಶಾಸಕರ ಸಂಬಂಧಿಯೊಬ್ಬರು ಅಕ್ರಮ ಮುರಕಲ್ಲು ಗಣಿಕಾರಿಯಲ್ಲಿ ಇದ್ದಾರೆ ಎಂದಿದ್ದೆ. ಆದರೆ, ಯಾವ ಶಾಸಕರು ಎಂದು ಹೇಳಿರಲಿಲ್ಲ. ಈ ಬಗ್ಗೆ ಬಂಟ್ವಾಳ ಶಾಸಕರು ಮಾಧ್ಯಮಗೋಷ್ಠಿ ನಡೆಸಿ ದಾಖಲೆ ಸಮೇತ ಸಾಬೀತು ಪಡಿಸುವಂತೆ ಸವಾಲು ಹಾಕಿದ್ದರು. ಸುದ್ದಿಗೋಷ್ಠಿ ನಡೆಸಿ ಅವರೇ ಅದನ್ನು ವಹಿಸಿಕೊಂಡಂತಾಗಿದೆ. ಇದೀಗ ದಾಖಲೆ ಸಮೇತ ಸಾಬೀತು ಪಡಿಸುತ್ತಿದ್ದೇನೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಮಂಗಳೂರಿನ   ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ತೆಂಕ ಎಡಪದವಿನ ಪರ್ಮಿಟ್‌ ಪಡೆದು ಅಕ್ರಮ ನಡೆಸಲಾಗಿದೆ. ಶಾಸಕ ರಾಜೇಶ್‌ […]

ಕೋವಿಡ್ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ

Saturday, November 14th, 2020
Covid Jatha

ಮಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೋವಿಡ್ ಜಾಗೃತಿ ಜಾಥಾ ವಾಹನಕ್ಕೆ ಮಂಗಳೂರು ಮಹಾನಗರ ಪಾಲಿಕೆ ಆವರಣದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, “ಕೋವಿಡ್ ಹರಡದಂತೆ ಮುಂಜಾಗೃತೆ ಕುರಿತ ಸರಕಾರದ ಸೂಚನೆಗಳನ್ನ ನಾವು ಅನುಸರಿಸಬೇಕಿದೆ. ಕೋವಿಡ್ ಮುಕ್ತ ಜಿಲ್ಲೆಯನ್ನಾಗಿಸಲು ಜಾಗೃತಿ ಜಾಥಾ ವಾಹನದಿಂದ ಸಾಧ್ಯವಾಗಲಿ” ಎಂದರು. ಬೃಹತ್ ಎಲ್ಇಡಿ ಪರದೆ ಹೊಂದಿರುವ ಜಾಗೃತಿ ಜಾಥಾ ವಾಹನವು ಮಂಗಳೂರು ಮಹಾನಗರ ಪಾಲಿಕೆ […]

ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಂದ ದೀಪಾವಳಿ ಸಂದೇಶ

Saturday, November 14th, 2020
veerendra Heggade

ಧರ್ಮಸ್ಥಳ  : ಬೆಳಕಿನ ಹಬ್ಬ ದೀಪಾವಳಿ ಸುಜ್ಞಾನದ ಪ್ರತೀಕ. ದೀಪಾವಳಿ ಹಬ್ಬವನ್ನು ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಸರಳವಾಗಿ ಆಚರಿಸೋಣ. ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಂಪ್ರದಾಯ ಬದ್ಧವಾಗಿ ಸಂಸ್ಕೃತಿ ರಕ್ಷಣೆಯೊಂದಿಗೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸುವುದು ಎಲ್ಲರ ಕರ್ತವ್ಯವೂ, ಹೊಣೆಗಾರಿಕೆಯೂ ಆಗಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆದಷ್ಟು ಶೀಘ್ರ ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಿ ಎಲ್ಲರೂ ಆರೋಗ್ಯ ಭಾಗ್ಯವನ್ನು ಹೊಂದಿ ಭಯ ಮುಕ್ತ ವಾತಾವರಣದಲ್ಲಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುವಂತಾಗಲಿ […]

ಕೊರೋನಾದ ನಡುವೆ ದೀಪಾವಳಿಯನ್ನು ಆಚರಿಸುವುದು ಹೇಗೆ ?

Friday, November 13th, 2020
shail ahet

ಮಂಗಳೂರು  : ಕೊರೋನಾದ ನಡುವೆ ದೀಪಾವಳಿಯನ್ನು ಆಚರಿಸುವುದರೊಂದಿಗೆ ಸರಳತೆ ಮತ್ತು ಎಚ್ಚರಿಕೆ ಪಾಠವನ್ನು ನಾವು ಕಲಿಯಬೇಕಿದೆ.  ಈ ಬಾರಿ ದೀಪಾವಳಿಯನ್ನು ಆಚರಿಸುವಾಗ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವುದರೊಂದಿಗೆ ಪರಿಸರಕ್ಕೆ ಹಾನಿಯಾಗದ ಹಸಿರು ಪಟಾಕಿಗಳನ್ನು ಸುಡಲು ಸರಕಾರ ಆದೇಶಿಸಿದೆ. ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ – ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ. ಈ ವರ್ಷ ದೀಪಾವಳಿಯನ್ನು ನವೆಂಬರ್‌ 14 ರಿಂದ 16 ರವರೆಗೆ  ಆಚರಿಸಲಾಗುತ್ತಿದೆ. ದೀಪಗಳ ಹಬ್ಬ ಎಂದು ಕರೆಯಲಾಗುವ ಈ ಹಬ್ಬವು ಚಂದ್ರಮಾನ ಪಂಚಾಂಗದ ಪ್ರಕಾರ ಕಾರ್ತಿಕ ಮಾಸದಲ್ಲಿ ಅಂದರೆ […]

ಲಕ್ಷ್ಮೀ ಪ್ಯಾನ್ಸಿ ಸೆಂಟರ್‌ನಲ್ಲಿ ದೀಪಾವಳಿಯ ಆಕರ್ಷಕ ಗೂಡುದೀಪಗಳು

Friday, November 13th, 2020
Lakshmi fancy

ಮಂಗಳೂರು : ಕೊರೋನಾದ ನಡುವೆಯೂ  ಈ ಬಾರಿ ದೀಪಾವಳಿ ಕಳೆಗುಂದಿಲ್ಲ. ವರ್ಷಕ್ಕೊಮ್ಮೆ ಬರುವ ದೀಪಾವಳಿ ಯನ್ನು ಆಚರಿಸಲು ಜನ  ಸಿದ್ದರಾಗಿದ್ದಾರೆ. ಮನೆ ಯನ್ನು ಬಣ್ಣದ ದೀಪಗಳಿಂದ ಅಲಂಕರಿಸಲು ಗೂಡು ದೀಪಗಳನ್ನು ಖರೀದಿಸಲು ಉತ್ಸುಕರಾಗಿದ್ದಾರೆ. ಈ ಬಾರಿ ಕೊರೋನಾದ ಪ್ರಭಾವ ಇದ್ದರೂ ದೀಪಾವಳಿಯನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಮಂಗಳೂರಿನ ಮಾರ್ಕೆಟ್ ರಸ್ತೆಯಲ್ಲಿರುವ ಲಕ್ಷ್ಮೀ ಪ್ಯಾನ್ಸಿ ಸೆಂಟರ್ ಸಜ್ಜಾಗಿದೆ. ಇಲ್ಲಿ ಗ್ರಾಹಕರಿಗೆ ಇಷ್ಟವಾಗುವ ಬಟ್ಟೆಗಳಿಂದ ಮಾಡಿದ ಗೂಡುದೀಪಗಳು, ಬಿದಿರಿನ ಗೂಡುದೀಪಗಳು, ತೆಂಗಿನ ನಾರಿನಿಂದ ಮಾಡಿದ ಸಂಪ್ರದಾಯಿಕ ಗೂಡು ದೀಪಗಳು, ಕೈಯಿಂದ ಮಾಡಿದ ಸಾಂಪ್ರದಾಯಿಕ ಗೂಡು […]