ಯುವಕನ ಅಶ್ಲೀಲ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಯುವತಿಯಿಂದ ಬೆದರಿಕೆ

Friday, November 13th, 2020
Sakshi

ಮಂಗಳೂರು :  ಯುವತಿಯೊಬ್ಬಳ ಮಾತಿಗೆ ಮರುಳಾಗಿ ಮಂಗಳೂರಿನ ಯುವಕನೊಬ್ಬ ತನ್ನ ಅಶ್ಲೀಲ ಭಂಗಿಯ ಚಿತ್ರಗಳನ್ನು ಆಕೆಗೆ ಕಳುಹಿಸಿದ್ದು, ಆಕೆ ಹಣ ಕೊಡದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾಳೆ . ಸಾಕ್ಷಿರಾಜ್ ಎಂಬ ಯುವತಿ ಮಂಗಳೂರಿನ ಯುವಕನೋರ್ವನಿಗೆ ಇದೇ ವರ್ಷದ ಆಗಸ್ಟ್ನಲ್ಲಿ ಪರಿಚಯವಾಗಿದ್ದಳು. ಪರಿಚಯವಾದ ಇವರಿಬ್ಬರು ಮೆಸೆಂಜರ್ನಲ್ಲಿ ಸಂಪರ್ಕದಲ್ಲಿದ್ದು, ಆಕೆ ಈತನಿಗೆ ಅಶ್ಲೀಲ ಭಂಗಿಯ ಫೋಟೊ ಕಳುಹಿಸುತ್ತಿದ್ದಳಂತೆ. ಜೊತೆಗೆ ಖರ್ಚಿಗೆಂದು ಈತನ ಬಳಿ ಹಣ ಕೇಳಿ ಫೋನ್ ಪೇ ಮೂಲಕ ಪಡೆಯುತ್ತಿದ್ದಳಂತೆ. ಇತ್ತೀಚೆಗೆ ಈಕೆ ತನ್ನದೇ ಅಶ್ಲೀಲ ಭಂಗಿಯನ್ನು […]

ಎಲ್ಲಾ ಬೂತ್‌ಗಳಲ್ಲಿಯೂ ಒಂದೇ ರೀತಿಯಲ್ಲಿ ಮತದಾನ ನಡೆದಿರುವ ಬಗ್ಗೆ ಅನುಮಾನವಿದೆ : ಡಿ.ಕೆ. ಶಿವಕುಮಾರ್

Thursday, November 12th, 2020
DK Shivakumar

ಮಂಗಳೂರು : ನಾವು ಯಾರಲ್ಲೂ ಕೇಳಿದರೂ ವಿದ್ಯಾವಂತರೆಲ್ಲಾ ನಾವು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದಾಗಿ ಹೇಳುತ್ತಾರೆ. ಹಾಗಾಗಿ ಮತದಾರರು ಹೇಳಿದರಲ್ಲಿ ತಪ್ಪಿದೆಯಾ, ಮತದಾನ ಬಿದ್ದಿರುವುದರಲ್ಲಿ ತಪ್ಪಿದೆಯಾ ಎಂಬ ಬಗ್ಗೆ ವ್ಯಾಪಕವಾದ ತನಿಖೆ ನಮ್ಮ ವತಿಯಿಂದ ಮಾಡಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲನ್ನು ಒಪ್ಪಿದ್ದೇವೆ. ಆದರೆ ಚುನಾವಣೆಯಲ್ಲಿ ಯಾವ ರೀತಿ ಅಕ್ರಮವಾಗಿದೆ, ದುರುಪಯೋಗವಾಗಿದೆ, ಯಾವ ರೀತಿಯಲ್ಲಿ ಹಣ ಹಂಚಿಕೆಯಾಗಿದೆ ಎಂಬ ಕುರಿತಾದ ಎಲ್ಲಾ ರೀತಿಯ ಮಾಹಿತಿ ಇದೆ. ಅದರ ಬಗ್ಗೆ ವ್ಯಾಪಕವಾದ ಚರ್ಚೆ […]

ಬ್ರೀಜ್ ಕಾರಿನಲ್ಲಿ ಗಾಂಜಾ ಸಾಗಾಟ, ಮೆಲ್ಕಾರ್ ನಲ್ಲಿ ಇಬ್ಬರ ಬಂಧನ

Thursday, November 12th, 2020
breez Ganja

ಬಂಟ್ವಾಳ : ಬ್ರೀಜ್  ಕಾರೊಂದರಲ್ಲಿ ಬಿ.ಸಿ.ರೋಡಿನಿಂದ ಮಾಣಿ ಮಾರ್ಗದಲ್ಲಿರುವ ಮೆಲ್ಕಾರ್ ಬಸ್ ನಿಲ್ದಾಣದ ಸಮೀಪ  ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಡಿಸಿಐಬಿ ಪೊಲೀಸರು, 1.48 ಕೆಜಿ ಗಾಂಜಾ ಮತ್ತು ಕಾರು ವಶಪಡಿಸಿಕೊಂಡಿದ್ದಾರೆ. ಮಂಗಳೂರು ಬಂದರು ಅನ್ಸಾರಿ ಕ್ರಾಸ್ ರೋಡ್ ನಿವಾಸಿ ಟಿ.ಪಿ.ಫಾರೂಕ್ (50) ಮತ್ತು ನೇಪಾಳದ ನಿವಾಸಿ, ಸದ್ಯ ಪಿವಿಎಸ್ ವೃತ್ತದ ಬಳಿ ಪಿಜಿಯಲ್ಲಿ ವಾಸವಿರುವ ಸಾಗರ್ ಸಿಂಗ್ (22) ಬಂಧಿತ ಆರೋಪಿಗಳು. ಇಬ್ಬರೂ ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದು, ಬಳಿಕ ಅವರ ವಶದಲ್ಲಿದ್ದ ಒಟ್ಟು […]

ಹರಿಕೃಷ್ಣ ಬಂಟ್ವಾಳ್ ಆರೋಪದಿಂದ ಎಸ್​​ಡಿಪಿಐ ಮೇಲೆ ಗಂಭೀರ ಪರಿಣಾಮ – ಬಂಟ್ವಾಳ ನಗರ ಠಾಣೆಗೆ ದೂರು

Wednesday, November 11th, 2020
Harikrishna Bantwal

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ರಾಜ್ಯ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾಡಿರುವ ಆರೋಪದಿಂದ ಎಸ್ಡಿಪಿಐ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಪಕ್ಷಕ್ಕೆ ಭಾರೀ ಅವಮಾನ ಉಂಟಾಗಿದೆ ಎಂದು  ಬಂಟ್ವಾಳ ನಗರ ಠಾಣೆಗೆ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಮುಹಮ್ಮದ್ ಇದ್ರೀಸ್ ದೂರು ನೀಡಿದ್ದಾರೆ. ಪಕ್ಷದ ವಿರುದ್ಧ ಸುಳ್ಳು ಮತ್ತು ನಿರಾಧಾರವಾದ ಗಂಭೀರ ಆರೋಪ ಮಾಡಿರುವುದರಿಂದ  ಪಕ್ಷದ ಬೆಂಬಲಿಗರಿಗೆ ಪಕ್ಷದ ಮೇಲೆ ನಂಬಿಕೆ ಕಡಿಮೆಯಾಗುವಂತಾಗಿದೆ. ಪಕ್ಷದ ಬಗ್ಗೆ ಸಮಾಜದಲ್ಲಿ ನಕರಾತ್ಮಕ ಭಾವನೆ ಉಂಟಾಗುವಂತಾಗಿದೆ […]

ಕ್ರೈಬ್ರಾಂಚ್ ಪೊಲೀಸರೆಂದು ನಂಬಿಸಿ ಚಿನ್ಮಾಭರಣ ದರೋಡೆ, ಇಬ್ಬರ ಬಂಧನ

Wednesday, November 11th, 2020
irani Gang

ಬಂಟ್ವಾಳ :  ಕ್ರೈಬ್ರಾಂಚ್ ಪೊಲೀಸರೆಂದು ನಂಬಿಸಿ ಬಿ.ಸಿ.ರೋಡಿನ ಕೈಕಂಬದಲ್ಲಿ ವ್ಯಕ್ತಿಯೊಬ್ಬರ ಚಿನ್ಮಾಭರಣ ದೋಚಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮಹಾರಾಷ್ಟ್ರ ದ ಝಾಕಿರ್ ಹುಸೈನ್(26) ಮತ್ತು ಕಂಬರ್ ರಹೀಂ ಮಿರ್ಜಾ(32) ಬಂಧಿತ ಆರೋಪಿಗಳು. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು  2020ರ ಜ.18ರಂದು ಮಧ್ಯಾಹ್ನ  ಕೈಕಂಬದಲ್ಲಿ ನಡೆದುಕೊಂಡು ಹೋಗುವ ವೇಳೆ ಬೈಕಿನಲ್ಲಿ ಬಂದ ಇಬ್ಬರು ಹಿಂದಿ ಭಾಷೆಯಲ್ಲಿ ಮಾತನಾಡಿ, ನಾವು […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Wednesday, November 11th, 2020
Ganapathy

ಶ್ರೀ ಮಹಾಗಣಪತಿ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣುವುದು ಇಂದು ಕಠಿಣವಾಗಲಿದೆ. ಕೆಲವು ಕೆಲಸಗಳು ನಿಮಗೆ ಹೆಚ್ಚು ಆಯಾಸ ತಂದೊಡ್ಡಬಹುದು. ನಿಮ್ಮ ವೈಯಕ್ತಿಕ ಅಭಿರುಚಿ ಹೊಂದಿರುವ ಇಷ್ಟ ಕಾರ್ಯಗಳು ನೆನೆಗುದಿಗೆ ಬೀಳಲಿದೆ. ಹಣಕಾಸಿನ ಪರಿಸ್ಥಿತಿ ತುಂಬಾ ತಳಮಟ್ಟದಲ್ಲಿ ನಿಮ್ಮ ಮನಸ್ಸು ಕಾಡುತ್ತದೆ. ಸೂಕ್ತ ತಿಳುವಳಿಕೆ […]

ಕೊಂಕಣ ರೈಲ್ವೆ ಇಲಾಖೆಯ ನಕಲಿ ಟಿಸಿ ಬಂಧನ

Wednesday, November 11th, 2020
fake TC

ಉಡುಪಿ : ರೈಲ್ವೆ ಇಲಾಖೆಯಲ್ಲಿ ಟಿಸಿ ಆಗಿರುವುದಾಗಿ ಉಡುಪಿ ಮತ್ತು ಹೊರ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನು ನಂಬಿಸಿ ಹಣ ವಂಚಿಸಿ ಮೋಸ ಮಾಡುತ್ತಿದ್ದ ಆರೋಪದಲ್ಲಿ ಓರ್ವ ನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹೊನ್ನವರ ನಿವಾಸಿ ಗಣೇಶ್ ನಾಯ್ಕ್ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಅ. 25ರಂದು ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿಸಿ ಆಗಿರುವುದಾಗಿ ಹೇಳಿಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಆಗಿರುವ ಮಥಾಯಿಸ್ ಎಂಬವರ ಬಳಿ ಬಂದಿದ್ದು, ರೈಲ್ವೆ ಯಲ್ಲಿ ಉದ್ಯೋಗ ಕೊಡುವುದಾಗಿ ಮಥಾಯಿಸ್ ಅವರನ್ನು ನಂಬಿಸಿ 20,000 ರೂ. […]

ಸರ್ಕಾರದ ಪರಿಹಾರ ಹಣ ಕೊಡಿಸುತ್ತೇನೆಂದು, ಮಹಿಳೆಯ ಬೆಂಡೋಲೆ ಎಗರಿಸಿದ ಖದೀಮ

Monday, November 9th, 2020
jayanti

ಬಂಟ್ವಾಳ : ಕೊರೊನಾ ಸಂಕಷ್ಟದ ಸಮಯದಲ್ಲಿ ಜನರಿಗೆ  ಪರಿಹಾರ ರೂಪದಲ್ಲಿ ನೀಡುವ ಸರ್ಕಾರ ಹಣ  ಪಡೆಯಬೇಕೆಂದರೆ ಮೊದಲು ನಾವು ಹಣ ಕಟ್ಟಬೇಕು ಎಂದು ಹೇಳಿ ಮಹಿಳೆಯಿಂದ ಒಡವೆಗಳನ್ನು ತೆಗೆದುಕೊಂಡು ಹೋಗಿರುವ ಘಟನೆ ಬಂಟ್ವಾಳದ ಮಿನಿ ವಿಧಾನಸೌಧದ ಬಳಿ ನಡೆದಿದೆ. ವ್ಯಕ್ತಿಯೊಬ್ಬ ಮಹಿಳೆಯೊಂದಿಗೆ ಪರಿಚಿತನಂತೆ ನಟಿಸಿ, ಕೊರೊನಾ ಹಿನ್ನೆಲೆ ನಿಮಗೆ ಒಂದೂವರೆ ಲಕ್ಷ ರೂಪಾಯಿ ಹಣ ಬಂದಿದೆ. ಅದನ್ನು ಪಡೆಯಲು 10 ಸಾವಿರ ರೂಪಾಯಿ ಕಟ್ಟಬೇಕು. ಆಧಾರ್ ಕಾರ್ಡ್ ತೆಗೆದುಕೊಂಡು ಮಿನಿ ವಿಧಾನಸೌಧಕ್ಕೆ ಬನ್ನಿ, ಅರ್ಜಿ ನೀಡಬೇಕು ಎಂದು ಕರೆದು […]

ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣ ಕಾರ್ಯಕ್ಕೆ ಕಾಯಕಲ್ಪ : ಜ್ಞಾನತಾಣ ಕಾರ್ಯಕ್ರಮ ಉದ್ಘಾಟನೆ

Monday, November 9th, 2020
Dharmasthala

ಉಜಿರೆ: ಗ್ರಾಮೀಣ ಪ್ರದೇಶದ ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣ ಒದಗಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಜ್ಞಾನತಾಣ ಕಾರ್ಯಕ್ರಮದಡಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇಪ್ಪತ್ತು ಸಾವಿರ ಟ್ಯಾಬ್‌ಗಳು ಹಾಗೂ ಹತ್ತು ಸಾವಿರ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗುವುದು. ಇದಕ್ಕಾಗಿ ೮೧ ಕೋಟಿ ರೂ. ವಿನಿಯೋಗ ಮಾಡಿ ಒಂದು ಲಕ್ಷ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಿಸಿದರು. ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಅವರು ಸೋಮವಾರ ಅಂತರ್ಜಾಲ ಶಿಕ್ಷಣಕ್ಕೆ ಕಾಯಕಲ್ಪ ನೀಡುವ […]

ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ ನಿಧನ

Monday, November 9th, 2020
Rathan Kumar

ಮೂಡುಬಿದಿರೆ: ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರತನ್ ಕುಮಾರ್ ಕಟ್ಟೇಮಾರ್ (82) ಅವರು ಭಾನುವಾರ  ನಿಧನ ಹೊಂದಿದರು. 1967ರಿಂದ 1972ರವರೆಗೆ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರತನ್ ಕುಮಾರ್ ಕಟ್ಟೇಮಾರ್ ಅವರು ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್ ನ ಬಿ.ಗಂಗಾಧರ ದಾಸ್ ವಿರುದ್ಧ ಜಯ ಗಳಿಸಿದ್ದರು. ನಂತರ 1972 ರ ಚುನಾವಣೆಯಲ್ಲಿ ಅವರು ಸುರತ್ಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಜನಪ್ರತಿನಿಧಿಯಾಗಿ ಭೂ ಮಸೂದೆಯ ವಿರುದ್ಧ ಸದಾ ದನಿಯೆತ್ತಿದ್ದ ಅವರು ಪ್ರತ್ಯೇಕ ತುಳು ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದ […]