ನಿಮಿಷಾಂಬಾ ದೇವಿಯ ಮಹಿಮೆ

Monday, November 2nd, 2020
nimishambha

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್, ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ  9945410150 ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ನಿಮಿಷಾಂಬ ದೇವಾಲಯ ಪುರಾಣ ಪ್ರಸಿದ್ಧ ದೈವ ಕ್ಷೇತ್ರವಾಗಿದೆ. ಕಾವೇರಿ ನದಿಯ ತಟದಲ್ಲಿ ಗಂಜಾಂ ಎಂಬ ಗ್ರಾಮದಲ್ಲಿ ನಿಮಿಷಾಂಬ ದೇವಿಯು ಭಕ್ತರನ್ನು ಉದ್ಧರಿಸುತ್ತಿದ್ದಾಳೆ, ಈ ದೇಗುಲದಲ್ಲಿ ಶ್ರೀಚಕ್ರ ಸಹಿತ ಶ್ರೀ ನಿಮಿಷಾಂಬಾದೇವಿ ಇರುವುದು ವಿಶೇಷ, ಇದರ ಜೊತೆಗೆ ಗಣಪತಿ, ಸೂರ್ಯದೇವ, ಮುಕ್ತಿಕಾಶ್ವೇರ ಸ್ವಾಮಿ, ಲಕ್ಷ್ಮೀನಾರಾಯಣ ಸ್ವಾಮಿಯ ಸನ್ನಿಧಿಗಳು ಕಂಡುಬರುತ್ತದೆ. ಮೈಸೂರಿನ ರಾಜ […]

ದಿನ ಭವಿಷ್ಯ : ಖ್ಯಾತ ಜ್ಯೋತಿಷ್ಯರು ಗಿರಿಧರಭಟ್ ಅವರಿಂದ ದ್ವಾದಶ ರಾಶಿ ಫಲಗಳ ಮಾರ್ಗದರ್ಶನ

Monday, November 2nd, 2020
Manjunatha

ಶ್ರೀ ಮಂಜುನಾಥ ಸ್ವಾಮಿಯ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150 ಮೇಷ ರಾಶಿ ಸಂಗಾತಿಯೊಡನೆ ಪ್ರೇಮದ ಮನಸ್ಥಿತಿಯಲ್ಲಿರುವಿರಿ. ಮನೋವೇದನೆ ಗಳಿಂದ ಕಷ್ಟಗಳು ಹೆಚ್ಚಾಗಲಿದೆ. ಸ್ನೇಹದಲ್ಲಿ ವ್ಯವಹಾರ ಮಾಡುವುದು ಬೇಡ ಇದು ವಿಕೋಪಕ್ಕೆ ತಿರುಗುವ ಸಾಧ್ಯತೆ ಇದೆ. ಬಂಡವಾಳದ ಸಮಸ್ಯೆಗಳಿಂದ ನಿಮ್ಮ ಯೋಜನೆಗಳು ನಕಾರಾತ್ಮಕ ಫಲಿತಾಂಶ ತರಲಿದೆ. ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಆಹಾರ ಸೇವನೆಗೆ ಒತ್ತು […]

ಮನ:ಶಾಂತಿಗಾಗಿ ಆಯೋಜಿಸುವ ಕಾರ್ಯಕ್ರಮಕ್ಕೆ ಕಾನೂನಿನ ರಕ್ಷಣೆ ಯಾವತ್ತೂ ಇದ್ದೇ ಇರುತ್ತದೆ – ಹಿರಿಯ ನ್ಯಾಯಾಧೀಶೆ ಎ. ಜಿ. ಶಿಲ್ಪಾ

Monday, November 2nd, 2020
kssap

ಮಂಗಳೂರು  : ನಾನು ನ್ಯಾಯಾಧೀಶಳಾಗಿ ಕಾನೂನನ್ನು ಪ್ರತಿನಿಧಿಸುತ್ತೇನೆ. ಕಡಿಮೆ ಮಾತನಾಡಿದಷ್ಟು ಹೆಚ್ಚು ಗೌರವ ಎಂದುಕೊಂಡಿದ್ದೇನೆ. ಆದರೆ ಭಾಷೆ ಮತ್ತು ಕಾನೂನಿನ ವಿಚಾರ ಬಂದಾಗ ನಾನು ಮಾತನಾಡಲೇ ಬೇಕಿದೆ. ಭಾಷೆ ಎಂಬುದು ಮಾನವ ಕುಲಕ್ಕೆ ಮಾತ್ರ ಸೀಮಿತವಾಗಿದೆ. ಮಗುವಿನ ತೊದಲು ನುಡಿಯಿಂದ ತಾಯಿ ಸಂಗೀತವನ್ನು ಆಲಿಸುತ್ತಾಳೆ. ಆ ಸಂಗೀತದಿಂದ ತನ್ನ ನೋವನ್ನು ಮರೆಯುತ್ತಾಳೆ. ಭಾಷೆ ಎಂಬುದು ಒಂದು ಒಲವಿನ ಸಂಸ್ಕೃತಿ ಇದ್ದಂತೆ ಎಂದು ಹಿರಿಯ ನ್ಯಾಯಾಧೀಶೆ/ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ. ಜಿ. ಶಿಲ್ಪಾ […]

ಮಂಗಳೂರು ನೆಹರೂ ಮೈದಾನಿನಲ್ಲಿ 65ನೇ ಕನ್ನಡ ರಾಜ್ಯೋತ್ಸವ

Sunday, November 1st, 2020
Kannada Rajyotsava

ಮಂಗಳೂರು : ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರು  ನೆಹರೂ ಮೈದಾನದಲ್ಲಿ  65ನೇ ಕನ್ನಡ ರಾಜ್ಯೋತ್ಸವದ  ಧ್ವಜಾರೋಹಣ ನೆರವೇರಿಸಿ ಬಳಿಕ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ  ಅವರ ಪೂರ್ತಿ ಸಂದೇಶ ಇಲ್ಲಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ, ಈ ದಿನ ಆಚರಿಸುತ್ತಿರುವ 65ನೇ ಕನ್ನಡ ರಾಜ್ಯೋತ್ಸವದ ಸುಸಂದರ್ಭದಲ್ಲಿ, ತಮ್ಮೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡವೇ ಧನ ಧಾನ್ಯ, ಕನ್ನಡವೇ ಮನೆ ಮಾನ್ಯ, ಕನ್ನಡವೇ ಎನಗಾಯ್ತು ಕಣ್ಣು –ಕಿವಿ-ಬಾಯಿ.. ಇದು ಮುತ್ಸದ್ಧಿ ನೇತಾರ, ಸಂವಿಧಾನ […]

‘ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕು ಎಂದು ಅದಾನಿ ಕಂಪೆನಿಗೆ ಮನವಿ

Sunday, November 1st, 2020
Mithun Rai

ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ್ಯ ವಿಮಾನ ನಿಲ್ದಾಣ’ ಎಂದು ಹೆಸರಿಡಬೇಕು ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅದಾನಿ ಸಂಸ್ಥೆಯ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಆಗ್ರಹಿಸಿದ್ದಾರೆ. ಈ ಕುರಿತು ಮಿಥುನ್ ರೈ ಅವರು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ “ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ನಿಮ್ಮ ಕೈಗೆ ಬಂದಿರುವುದರಿಂದ ಅದಕ್ಕೆ ಅದಾನಿ ವಿಮಾನ ನಿಲ್ದಾಣ ಎಂದು ಹೆಸರು ಇಡುವುದಲ್ಲ, ಅದಕ್ಕೆ ಕೋಟಿ ಚೆನ್ನಯ್ಯ ವಿಮಾನ […]

ಕಾಸರಗೋಡು ಜಿಲ್ಲೆಯಲ್ಲಿ ನವಂಬರ್ 15 ರ ತನಕ 144 ನಿಷೇಧಾಜ್ಞೆ ವಿಸ್ತರಣೆ

Saturday, October 31st, 2020
Sajith Babu

ಕಾಸರಗೋಡು : ಜಿಲ್ಲೆಯಲ್ಲಿ  ಅಕ್ಟೋಬರ್ 3 ರಿಂದ ಜಾರಿಯಲ್ಲಿರುವ 144 ನಿಷೇಧಾಜ್ಞೆಯನ್ನು ನವಂಬರ್ 15 ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಡಾ .ಡಿ ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗದ ಕಾಣದ ಹಿನ್ನಲೆಯಲ್ಲಿ ಇನ್ನೂ 15 ದಿನಗಳ ಕಾಲ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಪ್ಪ, ಒಡೆಯಂಚಾಲ್, ಪನತ್ತಡಿ ಪೇಟೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಸೋಂಕು ನಿಯಂತ್ರಣದ […]

ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಆಚರಣೆ

Saturday, October 31st, 2020
Indiragandhi Death

ಮಂಗಳೂರು: ಇಂದಿರಾಗಾಂಧಿ ಪುಣ್ಯತಿಥಿ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು  ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ  ಆಚರಿಸಲಾಯಿತು. ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ರಮಾನಾಥ ರೈ   ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು . ಬಳಿಕ ಮಾತನಾಡಿದ ಅವರು  ಇಂದಿರಾಗಾಂಧಿಯವರು ದೇಶದ ಪ್ರಧಾನಿಯಾದ ಬಳಿಕ‌ ದುರ್ಬಲ ವರ್ಗದವರನ್ನು ಮೇಲೆತ್ತುವ ಕೆಲಸ ಮಾಡಿದ್ದಾರೆ ಎಂದು‌ ಮಾಜಿ ಸಚಿವ ರಮಾನಾಥ ರೈ ತಿಳಿಸಿದರು. ದುರ್ಬಲ ವರ್ಗದವರು, ನಿಕೃಷ್ಟ ಸ್ಥಿತಿಯಲ್ಲಿದ್ದವರು, ಮುಖಂಡರಾದಲ್ಲಿ‌ ಅವರು ತಮ್ಮ ಸಮಾಜದ ಏಳಿಗೆಗಾಗಿ ಹೋರಾಟ ಮಾಡೋದು ಸರ್ವೇ ಸಾಮಾನ್ಯ. […]

ಮಂಗಳೂರು ವಿಮಾನ ನಿಲ್ದಾಣ ಇನ್ನು ಮುಂದೆ ಅದಾನಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Saturday, October 31st, 2020
adani airport

ಮಂಗಳೂರು :  ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ವಿಮಾನ‌ ನಿಲ್ದಾಣ ಪ್ರಾಧಿಕಾರ ದಿಂದ  ಅದಾನಿ ಗ್ರೂಪ್ ಇಂದಿನಿಂದ ಕಾರ್ಯಾರಂಭಿಸಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಪ್ರಕಾರ, ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಸಮೂಹದ ಕಂಪನಿಯು ವಹಿಸಿಕೊಂಡಿದೆ. ಅದಾನಿ ಸಂಸ್ಥೆ ಅಕ್ಟೋಬರ್ 30 ರಂದು ಮಧ್ಯರಾತ್ರಿಯಿಂದ ವಿಮಾನ ನಿಲ್ದಾಣದ ನಿರ್ವಹಣೆಯನ್ನು ವಹಿಸಿಕೊಂಡಿದ್ದು, ಅಧಿಕೃತ ಹಸ್ತಾಂತರ ಪ್ರಕ್ರಿಯೆಯು ಇಂದು ನಡೆಯಿತು. ಅದಾನಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಶನಿವಾರ ಬೆಳಿಗ್ಗೆ ಮಂಗಳೂರು […]

ಫಳ್ನೀರ್‌ನ ಜ್ಯೂಸ್ ಮಳಿಗೆ ಯಲ್ಲಿ ಸಿಬ್ಬಂದಿಗಳ ಮೇಲೆ ಪಿಸ್ತೂಲಿನಿಂದ ಶೂಟೌಟ್

Friday, October 30th, 2020
Samosa Shop

ಮಂಗಳೂರು : ಫಳ್ನೀರ್‌ನ ಜ್ಯೂಸ್ ಮಳಿಗೆಯೊಂದರಲ್ಲಿ ಮಂಗಳವಾರ  ಸಂಜೆ 5:30ರ ಸುಮಾರಿಗೆ ಯುವಕರ ತಂಡ ಯೊಂದು ಗ್ರಾಹಕರಾಗಿ ಆಗಮಿಸಿ ಸಮೋಸ ಕೇಳಿ ನಾಲ್ವರು ಹೊಟೇಲ್ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದು, ನಂತರ ಹೊಟೇಲ್‌ನ ಕಿಟಕಿ ಗಾಜು, ಪೀಠೋಪಕರಣ ಧ್ವಂಸಗೊಳಿಸಿ ಪರಾರಿಗೆ ಯತ್ನಿಸಿದ ಘಟನೆ ನಡೆದಿದೆ. ಫಳ್ನೀರ್ ನಿವಾಸಿ ಸಾಹಿಲ್ (30) ಮತ್ತು ಸುರತ್ಕಲ್ ನಿವಾಸಿ ಸೈಫ್ (25) ಗಾಯಗೊಂಡವರು. ಘಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಪೊಲೀಸರು ತಿಳಿಸಿದ್ದಾರೆ. ಅವರನ್ನು ಹಿಡಿಯಲು ಯತ್ನಿಸಿದ ಹೊಟೇಲ್ […]

ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿ ವಿಫಲವಾದ ಮಹಿಳೆ, ಸಮುದ್ರಕ್ಕೆ ಹಾರಿ ಆತ್ಮಹತ್ಯೆ

Friday, October 30th, 2020
Usha

ಮಂಗಳೂರು : ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಶುಕ್ರವಾರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಚ್ಚಿಲದಲ್ಲಿ‌ ನಡೆದಿದೆ. ಇಲ್ಲಿನ ಸಂಕೊಳಿಗೆ ನಿವಾಸಿಯಾಗಿರುವ ಉಷಾ (60) ಎಂಬಾಕೆಯ ಮೃತದೇಹ ಉಚ್ಚಿಲ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಮಾನಸಿಕವಾಗಿ ನೊಂದಿದ್ದ ಮಹಿಳೆ ಈ ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.