ಟ್ರಕ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ – ನವದಂಪತಿ ದಾರುಣ ಸಾವು

Tuesday, October 27th, 2020
Rayan-priya

ಮಂಗಳೂರು  : ಟ್ರಕ್  ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಮಂಗಳವಾರ  ಸಂಜೆ ಸಂಭವಿಸಿದೆ. ಬಜಾಲ್ ನಿವಾಸಿ ರಯಾನ್ ಫೆರ್ನಾಂಡಿಸ್(30) ಮತ್ತು ಪ್ರಿಯಾ ಫೆರ್ನಾಂಡಿಸ್(32) ಮೃತರು. ಕಂಕನಾಡಿ ಫಾದರ್ ಮುಲ್ಲಸ್೯ ಆಸ್ಪತ್ರೆಯಲ್ಲಿ ಸಿಬ್ಬಂದಿಯಾಗಿರುವ ಇಬ್ಬರು ಕರ್ತವ್ಯ ಮುಗಿಸಿ ಉಳ್ಳಾಲ ಬಂಗೇರಲೇನ್ ನಲ್ಲಿರುವ ಬಾಡಿಗೆ ಮನೆಗೆ ತೆರಳುವ ಸಂದರ್ಭ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಅಪಘಾತ ಸಂಭವಿಸಿದೆ. ದಂಪತಿಗಳು ಬೈಕ್ ಮೂಲಕ  ಉಳ್ಳಾಲ ಕಡೆಗೆ ತಿರುಗುವ […]

ಪಿಲಿಕುಳ ಮೃಗಾಲಯದ ವಿಕ್ರಮ್ ಹುಲಿ ಸಾವು

Tuesday, October 27th, 2020
Vikram

ಮಂಗಳೂರು: ಪಿಲಿಕುಳ ಮೃಗಾಲಯದ ಹಳೇ ತಲೆಮಾರಿನ ಹುಲಿ 21 ವರ್ಷ ಪ್ರಾಯದ ಹುಲಿ ವಿಕ್ರಮ್ ನಿನ್ನೆ ಸಾವನ್ನಪ್ಪಿದೆ. ವಿಕ್ರಮ್ ಹುಲಿಯನ್ನು 4 ವರ್ಷದ ಮರಿಯಾಗಿದ್ದ ಸಂದರ್ಭದಲ್ಲಿ 2003ರಲ್ಲಿ ಶಿವಮೊಗ್ಗ ಜಿಲ್ಲೆಯ ತ್ಯಾವರೆಕೊಪ್ಪ ಸಫಾರಿಯಿಂದ ತರಲಾಗಿತ್ತು. ಈ ಹುಲಿಗೆ 10 ಮರಿಗಳಿವೆ. ಕದಂಬ, ಕೃಷ್ಣ, ವಿನಯ, ಒಲಿವರ್, ಅಕ್ಷಯ, ಮಂಜು, ಅಮರ್, ಅಕ್ಬರ್, ಆಂಟನಿ ಮತ್ತು ನಿಷ ಎಂಬ ಮರಿಗಳಿವೆ‌. ಅವುಗಳನ್ನು ದೇಶದ ವಿವಿಧ ಮೃಗಾಲಯಗಳಾದ ರಾಜಸ್ಥಾನ, ಗುಜರಾತ್, ತೆಲಂಗಾಣ, ಆಂಧ್ರ ಪ್ರದೇಶ, ಮೈಸೂರು ಮೃಗಾಲಯಗಳಿಗೆ ಕಳುಹಿಸಿಕೊಡಲಾಗಿತ್ತು. ಸಂದರ್ಶಕರಿಗೆ ಸುಲಭವಾಗಿ […]

ದನ ಕಳವು ಮತ್ತು ಅಕ್ರಮ ಸಾಗಾಟ ಪತ್ತೆ ದಳ ರಚನೆ, 32 ಸ್ಥಳಗಳಲ್ಲಿ ಚೆಕ್‌ಪೋಸ್ಟ್ : ವಿಕಾಸ್‌ ಕುಮಾರ್

Tuesday, October 27th, 2020
Ujjodi Cow

ಮಂಗಳೂರು : ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದನ ಕಳವು ಮತ್ತು ಅಕ್ರಮ ಸಾಗಾಟ ಪತ್ತೆ ದಳ ರಚಿಸಲಾಗಿದ್ದು, ಇಲ್ಲಿಯವರೆಗೆ 28 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ವಿಕಾಸ್‌ ಕುಮಾರ್ ತಿಳಿಸಿದ್ದಾರೆ. ದನ ಕಳವು, ಅಕ್ರಮ ದನ ಸಾಗಾಟ ಮತ್ತು ಅಕ್ರಮ ದನಗಳ ವಧೆ ತಡೆಟ್ಟುವ ಸಲುವಾಗಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ‘ದನ ಕಳವು ಮತ್ತು ಅಕ್ರಮ ಸಾಗಾಟ ಪತ್ತೆ ದಳ’ ಎಂಬ ವಿಶೇಷ ತಂಡ ಅ.5ರಿಂದ ಕಾರ್ಯಾಚರಿಸುತ್ತಿದೆ. ನಗರಕ್ಕೆ […]

ಆತನಿಗೆ ಮದುವೆಯಾಗಿತ್ತು, ಪ್ರಿಯತಮೆ ಆ ವಿಚಾರ ತಿಳಿದ ತಕ್ಷಣ ಆತ್ಮ ಹತ್ಯೆ ಮಾಡಿಕೊಂಡಳು

Tuesday, October 27th, 2020
Rakshitha

ಉಡುಪಿ : ಅಂಬಾಗಿಲಿನಲ್ಲಿರುವ ಬಾಡಿಗೆ ರೂಮಿ ನಲ್ಲಿ ಅ.24ರಂದು ಸಂಶಯಾಸ್ಪದವಾಗಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಪ್ರಿಯಕರನನ್ನು ಉಡುಪಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕುಕ್ಕೆಹಳ್ಳಿಯ ಪ್ರಭಾಕರ ನಾಯಕ್ ಎಂಬವರ ಮಗಳು ರಕ್ಷಿತಾ ನಾಯಕ್(19) ಬಾಡಿಗೆ ರೂಮಿ ನಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಪಟ್ಟಿದ್ದಳು. ರಕ್ಷಿತಾ ಮಂಗಳೂರಿನ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರು. ಅ.22ರಂದು ಉಡುಪಿಗೆ ಬಂದಿದ್ದ ಆಕೆ ಮಂಗಳೂರಿಗೆ ತೆರಳಿದ್ದಳು. ಅ.24 ರಂದು ಪ್ರಶಾಂತ್ ಎಂಬಾತ ಕರೆ ಮಾಡಿ, ರಕ್ಷಿತಾಳನ್ನು ಉಡುಪಿ ಖಾಸಗಿ ಅಸ್ಪತ್ರೆಗೆ […]

ಉಪಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇವೆ : ಬಿ.ಜನಾರ್ದನ ಪೂಜಾರಿ

Monday, October 26th, 2020
janardhan poojary

ಮಂಗಳೂರು: ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ‌ ಕಾಂಗ್ರೆಸ್ ಅನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಖಂಡಿತಾ ಗೆಲ್ಲಿಸುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ‘ಮಂಗಳೂರು ದಸರಾ’ ಕಾರ್ಯಕ್ರಮದ ವೇಳೆ ದೀಪ ಬೆಳಗಿಸಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಪ್ರಯತ್ನ ಬಿಡುವುದಿಲ್ಲ. ಆದ್ದರಿಂದ ಯಾವ ಭಯವೂ ನಮಗಿಲ್ಲ. ಉಪಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇವೆ ಎಂದು ಹೇಳಿದರು. ಡಿ.ಕೆ.ಶಿವ ಕುಮಾರ್ ಕೆಪಿಸಿಸಿ […]

ಸುರೇಂದ್ರ ಬಂಟ್ವಾಳ್ ಕೊಲೆ ಆರೋಪಿ ಸತೀಶ್ ಕುಲಾಲ್ ಮತ್ತು ಇನ್ನೊಬ್ಬ ಸಹಚರನ ಬಂಧನ

Sunday, October 25th, 2020
Surendra Bantwal

ಬಂಟ್ವಾಳ : ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ.20ರಂದು ರಾತ್ರಿ ಸುರೇಂದ್ರ ಬಂಟ್ವಾಳ್ ನನ್ನು ಬಿ.ಸಿ.ರೋಡಿನ ಪ್ಲ್ಯಾಟ್ ನಲ್ಲಿ ಚೂರಿಯಿಂದ ಇರಿದು ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಗಳಾದ ಸುರೇಂದ್ರನ ಆಪ್ತ ಸ್ನೇಹಿತ ಬಂಟ್ವಾಳ ನಿವಾಸಿ ಸತೀಶ್ ಕುಲಾಲ್ ಮತ್ತು ಕಿನ್ನಿಗೋಳಿ ನಿವಾಸಿ ಗಿರೀಶ್ ಯಾನೆ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಬ್ಬರು ಕಾಸರಗೋಡು ಕಡೆಯಿಂದ ಬಾಡಿಗೆ ವಾಹನದಲ್ಲಿ ಬಂಟ್ವಾಳ ಕಡೆ ಶನಿವಾರ ರಾತ್ರಿ ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ಪಿ […]

ಡಿ. ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ವರ್ಧಂತಿ, ಜನಮಂಗಳ ಯೋಜನೆಗಳಿಗೆ ಚಾಲನೆ

Saturday, October 24th, 2020
SKD

ಧರ್ಮಸ್ಥಳ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 21 ಕೋಟಿ ರೂ. ವೆಚ್ಚದಲ್ಲಿ 20,000 ಟ್ಯಾಬ್ ಗಳನ್ನು ಹಾಗೂ 10,000 ಲ್ಯಾಪ್ ಟಾಪ್ ಗಳನ್ನು ವಿತರಿಸಲಾಗುವುದು. 15 ಕೋಟಿ ರೂಪಾಯಿ ವೆಚ್ಚದಲ್ಲಿ “ಯಂತ್ರ ಶ್ರೀ” ಯೋಜನೆಯಡಿ ಕೃಷಿಕರಿಗಾಗಿ ಯಂತ್ರಗಳನ್ನು ಖರೀದಿಸಿ ಕೃಷಿಗೆ ಪ್ರೋತ್ಸಾಹ ನೀಡಿ ಎಂಟು ಸಾವಿರ ಎಕರೆ ಪ್ರದೇಶದಲ್ಲಿ ಕೃಷಿಗೆ ಕಾಯಕಲ್ಪ ನೀಡಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ. ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶನಿವಾರ ತಮ್ಮ 53ನೇ ವರ್ಷದ ಪಟ್ಟಾಭಿಷೇಕ […]

ನವರಾತ್ರಿ – ಶಸ್ತ್ರಾಸ್ತ್ರ, ವಾಹನಗಳಿಗೆ ಆಯುಧ ಪೂಜೆ

Saturday, October 24th, 2020
Ayudha Pooja

ಮಂಗಳೂರು : ಆಯುಧ ಪೂಜೆ ನವರಾತ್ರಿ ಹಬ್ಬದ ದಿನಗಳಲ್ಲಿ ಬರುವ ಒಂದು ವಿಶೇಷ ದಿನ. ಇದನ್ನು ಸಾಂಪ್ರದಾಯಿಕವಾಗಿ ಭಾರತದಲ್ಲಿ ಆಚರಿಸಲಾಗುತ್ತದೆ. ನವರಾತ್ರಿ ಯಲ್ಲಿ ಒಂಬತ್ತನೇ ದಿನ ಶಸ್ತ್ರಾಸ್ತ್ರ ಮತ್ತು ಸಾಧನಗಳನ್ನು ಪೂಜಿಸಲಾಗುತ್ತದೆ ಅದನ್ನೇ ಆಯುಧ ಪೂಜೆ ಎಂದು ಕರೆಯಲಾಗುತ್ತದೆ ನವರಾತ್ರಿಯ ಸಂದರ್ಭದಲ್ಲಿ ಬರುವ ಆಯುಧ ಪೂಜೆಯ ದಿನ ಜನರು ಜೀವನೋಪಾಯಕ್ಕಾಗಿ ಬಳಸುವ ಸಾಧನಗಳು ಮತ್ತು ವಸ್ತುಗಳನ್ನು ಪೂಜಿಸಿವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಹಿಂದೂ ಸಮುದಾಯದ ಪೂಜಾ ಸಾಧನಗಳು, ವಿದ್ಯುತ್ ಉಪಕರಣಗಳು, ವಾಹನಗಳು ಮತ್ತುತಮ್ಮ ಜೀವನೋಪಾಯವನ್ನು ಗಳಿಸಲು ಬಳಸುವ ಉಪಕರಣಗಳಿಗೆ […]

ದೇವಿಯರ ಹಬ್ಬ “ನವರಾತ್ರಿ – ದಸರಾ”

Saturday, October 24th, 2020
Nava durge

ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ನವರಾತ್ರಿ ಅಥವಾ `ದಸರಾ’ ಹಬ್ಬಕ್ಕೆ ತನ್ನದೇ ಆದ ಮಹತ್ವ, ಪೌರಾಣಿಕ ಹಿನ್ನೆಲೆ ಇದೆ. ಭಾರತಾದ್ಯಂತ `ದಸರಾ’ ಹಬ್ಬವನ್ನು ತುಂಬಾ ಉತ್ಸಾಹದಿಂದ ವಿಜೃಂಭಣೆಯಿಂದ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ 9 ದಿನಗಳಲ್ಲಿ ದುರ್ಗಾದೇವಿಯ ವಿಶಾಲವಾದ ಸುಂದರ ಮೂರ್ತಿಗಳನ್ನು ದೊಡ್ಡ ಪ್ರಮಾಣದಲ್ಲಿ, ಅಲಂಕೃತ ಮಂಟಪಗಳಲ್ಲಿ ಕೂರಿಸಿ ಪೂಜಿಸಲಾಗುತ್ತದೆ. ವಿಜಯದಶಮಿಯ ದಿನ ಭವ್ಯ ಮೆರವಣಿಗೆಯ ಮೂಲಕ ವಿಸರ್ಜಿಸಲಾಗುತ್ತದೆ. ಇದು ಬಂಗಾಳಿಯವರಿಗೆ ನಾಡಹಬ್ಬವಾಗಿದೆ, ಪಂಜಾಬ್ನಲ್ಲಿ ಭಕ್ತರು 7 ದಿನಗಳ ಕಾಲ ಉಪವಾಸ ಮಾಡಿದ ನಂತರ ಎಂಟನೇ ದಿನ ಪುಟ್ಟ್ […]

ಫಾರೂಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸಿದ ಪೊಲೀಸರು

Saturday, October 24th, 2020
KhalilShoot

ಬಂಟ್ವಾಳ : ರೌಡಿ ಶೀಟರ್ ಉಮರ್ ಫಾರೂಕ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡ್ಯದಲ್ಲಿ ಪೊಲೀಸರು ಗುಂಡು ಹಾರಿಸಿ  ಶನಿವಾರ ಬೆಳಗ್ಗೆ ಬಂಧಿಸಿದ್ದಾರೆ. ಕಾರಿನಲ್ಲಿ ಬೆಂಗಳೂರಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಶರಣಾಗುವಂತೆ ಸೂಚಿಸಿದರು ತಪ್ಪಿಸಲು ಯತ್ನಿಸಿದ ಆರೋಪಿಯನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.  ಘಟನೆಯಲ್ಲಿ  ಬಂಟ್ವಾಳ  ಎಸ್ಸೈ  ಪ್ರಸನ್ನ  ಗಾಯಗೊಂಡಿದ್ದಾರೆ ಮೂಲತಃ ಕಲ್ಲಡ್ಕ ನಿವಾಸಿ ಪ್ರಸಕ್ತ ನಂದಾವರದಲ್ಲಿ ವಾಸವಿರುವ ಖಲೀಲ್ ಬಂಧಿತ ಆರೋಪಿ. ಶುಕ್ರವಾರ ಸಂಜೆ ಮೆಲ್ಕಾರ್ ಸಮೀಪದ ಬೋಗೋಡಿ ಎಂಬಲ್ಲಿ ಕಲ್ಲಡ್ಕ ನಿವಾಸಿ ರೌಡಿ ಶೀಟರ್ ಉಮರ್ ಫಾರೂಕ್ ಎಂಬಾತನನ್ನು […]