ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಹರ್ಕೂರು ಮಂಜಯ್ಯ ಶೆಟ್ಟಿ

Wednesday, September 2nd, 2020
Manjayya Shetty

ಕುಂದಾಪುರ:  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಆಲೂರು – ಹರ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹರ್ಕೂರು ಮಂಜಯ್ಯ ಶೆಟ್ಟಿ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಸಮ್ಮುಖದಲ್ಲಿ ಬುಧವಾರ ಬೆಳಗ್ಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಶಾಸಕರು ಪಕ್ಷದ ಶಾಲು ಹಾಗೂ ಧ್ವಜವನ್ನು ನೀಡುವ ಮೂಲಕ ಹರ್ಕೂರು ಮಂಜಯ್ಯ ಶೆಟ್ಟಿಯವರನ್ನು ಬಿಜೆಪಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ.‌ಸದಸ್ಯರಾದ ರೋಹಿತ್ ಕುಮಾರ್ ಶೆಟ್ಟಿ, […]

ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಣ್ಣುಆನೆ ಮರಿಗೆ ಶಿವಾನಿ ಎಂದು ನಾಮಕರಣ

Wednesday, September 2nd, 2020
Shivani

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಗುಲದಲ್ಲಿ ಜುಲೈ1 ರಂದು ಜನಿಸಿದ ಆನೆ ಮರಿಗೆ ಮಂಗಳವಾರ ನಾಮಕರಣ ಶಾಸ್ತ್ರ ನಡೆಸಲಾಗಿದ್ದು, ಶಿವಾನಿ ಎಂದು ಹೆಸರಿಡಲಾಗಿದೆ. ದೇಗುಲದ ಆನೆ ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಆನೆ ಮರಿಯ ನಾಮಕರಣ ಆ.31 ರಂದು ಅಂದರೆ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ ಕಟ್ಟುವ ಮೂಲಕ ವಿಧಿ ನೆರವೇರಿಸಿದರು. ಧರ್ಮಸ್ಥಳದ […]

ಕೇರಳ ಪೊಲೀಸರು ಮತ್ತು ಜಿಲ್ಲಾಡಳಿತದ ದೌರ್ಜನ್ಯ ಖಂಡಿಸಿ ಬಿಜೆಪಿಯಿಂದ ತಲಪಾಡಿಯಲ್ಲಿ ಪ್ರತಿಭಟನೆ

Tuesday, September 1st, 2020
Bjp protest

ಮಂಜೇಶ್ವರ : ಕೇರಳ ಮತ್ತು ಕರ್ನಾಟಕ ಅಂತರ್ ರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಬೇಕೆಂದು ಆಗ್ರಹಿಸಿ ಮಂಜೇಶ್ವರ ಬಿಜೆಪಿ ಮಂಡಲ ಸಮಿತಿಯ ನೇತೃತ್ವದಲ್ಲಿ ತಲಪಾಡಿಯಲ್ಲಿ ಗಡಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿಗಳು ಆದ ಶ್ರೀಕಾಂತ್ ಚಾಲನೆ ನೀಡಿದರು. ಮಂಜೇಶ್ವರ ಮಂಡಲ ಸಮಿತಿಯ ಅಧ್ಯಕ್ಷರಾದ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಕೊರೊನಾ ಪಾಸಿಟಿವ್ ಹೆಚ್ಚಿರುವ ಮಲಪ್ಪುರಂ, ಕಣ್ಣೂರು ಮತ್ತು ಅನ್ಯರಾಜ್ಯಗಳಿಂದ ವ್ಯಾಪಾರ ಸಂಭಂದಿತ ಸರಕು ವಾಹನಗಳಿಗೆ ಯಾವುದೇ ನಿರ್ಬಂಧ ಮಾಡದೆ ಕೇವಲ ದಕ್ಷಿಣಕನ್ನಡ ಜಿಲ್ಲೆಗೆ […]

ಸ್ಕೂಟರಿಗೆ ಅಪರಿಚಿತ ದ್ವಿಚಕ್ರ ವಾಹನ ಹಿಟ್ ಎಂಡ್ ರನ್, ತಲೆಗೆ ಗಾಯಗೊಂಡಿದ್ದ ಸವಾರ ಸಾವು

Tuesday, September 1st, 2020
Scooter hit

ಬಂಟ್ವಾಳ: ಬಿ.ಸಿ.ರೋಡು ಸರ್ಕಲ್ ಬಳಿಯಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಹನವನ್ನು ಮೆಲ್ಕಾರ್ ಟ್ರಾಫಿಕ್ ಠಾಣಾ ಎಸ್. ಐ.ರಾಜೇಶ್ ಕೆ.ವಿ.ನೇತೃತ್ವದ ತಂಡ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ವಾಹನ ಚಾಲಕನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಸೋಮವಾರ ಸಂಜೆ ನಡೆದ ಹಿಟ್ ಎಂಡ್ ರನ್ ಪ್ರಕರಣದಲ್ಲಿ ಗಂಭೀರ ಸ್ವರೂಪದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದ್ವಿಚಕ್ರ ವಾಹನ ಸವಾರ ಪ್ರಕಾಶ್ ಆರ್. ಚೌಟ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ನಿನ್ನೆ ಸಂಜೆ ವೇಳೆ ಬಿ.ಸಿ.ರೋಡು […]

ಎಕ್ಕೂರು ಬಾಬಾ ಹಿಂದುತ್ವ ದಿಂದ ರೌಡಿಸಂ ವರೆಗೆ ..!

Monday, August 31st, 2020
MegaMedia

ಮಂಗಳೂರು : ಶುಭಕರ ಶೆಟ್ಟಿ ಪೀಲ್ಡ್ ಗೆ ಇಳಿದಿದ್ದು ಹಿಂದುತ್ವದ ಬೆಂಗಾವಲಿಗಾಗಿ, ಆತನ ರಕ್ತದಲ್ಲೇ ಕುದಿಯುತ್ತಿತ್ತು ಹಿಂದುತ್ವದ ಹೋರಾಟ, ಹೀಗೆ ಮುಂದೊಂದು ದಿನ ದೊಡ್ಡ ಮಟ್ಟದ ರೌಡಿ ಎಂಬ ಹೆಸರು ಪಡೆದುಕೊಂಡ. ಪೊಲೀಸರ ರೌಡಿಗಳ ಪಟಿಯಲ್ಲಿಯೂ ರೌಡಿ ಶೀಟರ್ ಆಗಿ ಗುರುತಿಸಿಕೊಂಡ. ಶುಭಕರ ಶೆಟ್ಟಿ ಹೆಚ್ಚಾಗಿ ಗುರುತಿಸಿಕೊಂಡದ್ದು ಎಕ್ಕೂರು ಬಾಬಾ ಎಂಬ ಹೆಸರಿನಲ್ಲಿ. ಇಪ್ಪತೈದು ವರ್ಷಗಳ ಹಿಂದೆ ಎಕ್ಕೂರು ಬಾಬಾ ಹೆಸರು ಮಂಗಳೂರಿನಲ್ಲಿ ಫೇಮಸ್ ಆಗಿತ್ತು.  ಪೂರ್ತಿ ಸ್ಟೋರಿ ಮೆಗಾ ಮೀಡಿಯಾ ನ್ಯೂಸ್ ಆಗಸ್ಟ್ ತಿಂಗಳ ಮುದ್ರಿತ ಆವೃತ್ತಿಯಲ್ಲಿ  ಪ್ರಕಟವಾಗಿದೆ.

ಕೊರೊನಾ ಸೊಂಕು : ದಕ್ಷಿಣ ಕನ್ನಡ 334, ಉಡುಪಿ 254

Monday, August 31st, 2020
CORONA

ಮಂಗಳೂರು, : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರದಂದು 334 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12443ಕ್ಕೆ ಏರಿಕೆಯಾಗಿದೆ. ರವಿವಾರ ಮತ್ತೆ 213 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಒಟ್ಟು ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 9422ಕ್ಕೆ ಏರಿಕೆಯಾಗಿದೆ. ಇನ್ನು 2665 ಮಂದಿ ಜಿಲ್ಲೆಯಲ್ಲಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಆ. 30ರಂದು ಮತ್ತೆ 6 ಮಂದಿ ಕೊರೊನಾಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 356ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 82770 […]

ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೇರವಾಗಿ ಬ್ಯಾಂಕ್ ಖಾತೆಗೆ ಬಿಡುಗಡೆ

Monday, August 31st, 2020
Raviraj Hegde

ಮಂಗಳೂರು  : ಕರ್ನಾಟಕ ಸರ್ಕಾರವು ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನದ ವಿವರಗಳನ್ನು DBT ಕ್ಷೀರಸಿರಿ ತಂತ್ರಾಂಶದಲ್ಲಿ ಅಳವಡಿಸಿ ನೇರವಾಗಿ ಖಜಾನೆ-2 ದಿಂದ ಪಾವತಿಸುವ ಪದ್ಧತಿಯನ್ನು ಅನುಸರಿಸುತ್ತಿದ್ದು, ಜೂನ್ 2020 ರ ಮಾಹೆಯ ರೂ. 5/- ಪ್ರೋತ್ಸಾಹಧನವನ್ನು ಸದಸ್ಯರುಗಳ ಬ್ಯಾಂಕ್ ಖಾತೆಗೆ ನೇರವಾಗಿ ಬಿಡುಗಡೆ ಮಾಡಲಾಗಿರುತ್ತದೆ ಹಾಗೂ ಸರ್ಕಾರವು ನೀಡುತ್ತಿರುವ ಪ್ರೋತ್ಸಾಹಧನವನ್ನು ಹೈನುಗಾರರು ಪಡೆದುಕೊಂಡು ಉತ್ತಮ ಗುಣಮಟ್ಟದ ಹಾಲನ್ನು ಸಂಘಗಳಿಗೆ ನೀಡಲು ದ.ಕ. ಹಾಲು ಒಕ್ಕೂಟದ ಅಧ್ಯಕ್ಷರಾದ ಶ್ರೀ. ರವಿರಾಜ್ ಹೆಗ್ಡೆಯವರು ತಮ್ಮ ಪ್ರಕಟಣೆಯಲ್ಲಿ ಕೋರಿರುತ್ತಾರೆ.

ಹಳೆಯ ಕಟ್ಟಡದ ಗೋಡೆ ಕುಸಿದು ಬಿದ್ದು ಯುವಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

Sunday, August 30th, 2020
wall colapse

ಬಂಟ್ವಾಳ : ಹಳೆಯ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲಿದ್ದ ಯುವಕ ಮೃತಪಟ್ಟು, ಬಾಲಕ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅಮ್ಮುಂಜೆ ಎಂಬಲ್ಲಿ ನಡೆದಿದೆ. ಅಮ್ಮುಂಜೆ ಗ್ರಾಮದ ಮಾದಕೋಡಿ ಎಂಬಲ್ಲಿ ಘಟನೆ ನಡೆದಿದ್ದು, ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ಗುಡ್ಡೆ ಮನೆ ನಿಲಯ್ಯ ಪೂಜಾರಿ ಎಂಬವರ ಪುತ್ರ ಜನಾರ್ಧನ ಅಂಚನ್ (35) ಮೃತಪಟ್ಟಿದ್ದಾರೆ. ಉಳಿದಂತೆ ಬಾಲಕ ವೃಷಭ (11) ಹಾಗೂ ಸೂರಜ್ (20) ಘಟನೆ ಯಲ್ಲಿ ಅಲ್ಪಸ್ವಲ್ಪ ಗಾಯಗೊಂಡು […]

ಮಂಗಳೂರು ಹೆದ್ದಾರಿ 75ರಲ್ಲಿ ಪ್ರತಿದಿನ ಸಂಚರಿಸುವ ನಾಲ್ಕು ಆನೆಗಳ ಹಿಂಡು

Sunday, August 30th, 2020
wild-elephant

ಉಪ್ಪಿನಂಗಡಿ:  ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಆನೆಗಳು ಹಿಂಡು ಹಿಂಡಾಗಿ ಸಾಗುವ ಮೂಲಕ ವಾಹನ ಸವಾರರಲ್ಲಿ ಭೀತಿ ಮೂಡಿಸುತ್ತಿವೆ. ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಕೆಲವು ದಿನಗಳಿಂದೀಚೆಗೆ ಪ್ರತಿದಿನ ನಸುಕಿನಲ್ಲಿ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕಡೆಯಿಂದ ಕೌಕ್ರಾಡಿಯತ್ತ ಸಾಗುವ ನಾಲ್ಕು ಆನೆಗಳ ಹಿಂಡು ಸಂಜೆಯ ವೇಳೆಗೆ ಅದೇ ದಾರಿಯಿಂದ ಮರಳುತ್ತಿವೆ. ಇತ್ತ ಭೂತಲಡ್ಕ, ಹೊನ್ನೆಜಾಲು ಮೊದಲಾದ ಗ್ರಾಮಗಳ ಇಬ್ರಾಹಿಂ, ನಾರಾಯಣ ಗೌಡ, ಸೇಸಪ್ಪ, ಥಾಮಸ್‌, ಹರಿಯಪ್ಪ, ಪ್ರಸನ್ನ, ನೌಶಾದ್‌ ಅಮೀದ್‌, ನೀಲಮ್ಮ ಮುಂತಾದವರ ಭತ್ತದ ಪೈರು, ಬಾಳೆ, ತೆಂಗು ಇತ್ಯಾದಿ ಕೃಷಿಯನ್ನು […]

ಕೊರೊನಾ ಸೋಂಕು : ದಕ್ಷಿಣ ಕನ್ನಡ 272, ಉಡುಪಿ ಜಿಲ್ಲೆ172

Sunday, August 30th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮತ್ತೆ 272 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12109 ಕ್ಕೆ ಏರಿಕೆಯಾಗಿದೆ. ಶನಿವಾರ  ಮಂಗಳೂರಿನಲ್ಲಿ 163, ಬಂಟ್ವಾಳದಲ್ಲಿ 30, ಪುತ್ತೂರಿನಲ್ಲಿ 33, ಸುಳ್ಯದಲ್ಲಿ 23, ಬೆಳ್ತಂಗಡಿಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದ್ದು ಇದನ್ನು ಹೊರತುಪಡಿಸಿ ಇತರೆ ಜಿಲ್ಲೆಯ 12 ಮಂದಿಗೆ ಪಾಸಿಟಿವ್‌ ಆಗಿದೆ. ಜಿಲ್ಲೆಯಲ್ಲಿ ಶನಿವಾರ  236 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 9209 ಕ್ಕೆ ಏರಿದೆ. ಜಿಲ್ಲೆಯಲ್ಲಿ […]