ಲೇಡಿಸ್ ಪಿಜಿಗೆ ನುಗ್ಗಿ ಒಳವಸ್ತ್ರಗಳನ್ನು ಕದಿಯುತ್ತಿದ್ದವನಿಗೆ ಥಳಿಸಿದ ಯುವತಿಯರು

Thursday, August 27th, 2020
ladise PG

ಮಂಗಳೂರು: ಶರವು ದೇವಸ್ಥಾನದ ಬಳಿ ಇರುವ ಲೇಡಿಸ್ ಪಿಜಿಗೆ ನುಗ್ಗಿ ಯುವತಿಯರ ಒಳವಸ್ತ್ರಗಳನ್ನು ಕದಿಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಥಳಿಸಿರುವ ಘಟನೆ  ನಡೆದಿದೆ. ಮಹಿಳಾ ಪಿಜಿಗೆ ರಾತ್ರಿ ವೇಳೆ ನುಗ್ಗಿದ ಕಾಮುಕನೊಬ್ಬ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ. ಈಗಾಗಲೇ ಅನೇಕ ಬಾರಿ ಈ ರೀತಿಯ ಕೆಲಸ ಮಾಡಿದ್ದ ಈತನಿಗೆ ಬುದ್ದಿ ಕಲಿಸಬೇಕು ಎಂದು ಅಲ್ಲಿದ್ದ ಕೆಲಸಗಾರರ ಜೊತೆ ಸೇರಿ ಯುವತಿಯರು ವ್ಯಕ್ತಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ

ಹೊಡೆದಾಟದ ವೇಳೆ ಇರಿತಕ್ಕೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

Thursday, August 27th, 2020
Kripakar

ಮಂಜೇಶ್ವರ  : ಎರಡು ತಂಡಗಳ ನಡುವೆ ನಡೆದ ಹೊಡೆದಾಟದಲ್ಲಿಇರಿತಕ್ಕೊಳಗಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವಿನಲ್ಲಿ ಆಗಸ್ಟ್ 26ರ ಬುಧವಾರ ರಾತ್ರಿ  ನಡೆದಿದೆ. ಮೃತರನ್ನು ಬೇರಿಕೆ ನಿವಾಸಿ ಕೃಪಾಕರ್‌ (28) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ  ನಡೆದ ಹೊಡೆದಾಟದ ಸಂದರ್ಭ ಇರಿತಕ್ಕೊಳಗಾದ ಕೃಪಾಕರ್‌ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಯಿತ್ತಾದರೂ, ಅವರು ಮೃತಪಟ್ಟಿದ್ದಾರೆ. ಇದಲ್ಲದೇ, ಘಟನೆಯಲ್ಲಿ ಗಾಯಗೊಂಡಿದ್ದ ಜಿತೇಶ್‌ ಹಾಗೂ ವಿಜೇಶ್‌‌ ಎನ್ನುವವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ, ಕ್ಷುಲ್ಲಕ ಕಾರಣಕ್ಕೆ  ಹೊಡೆದಾಟದ […]

ಶೀಘ್ರವೇ ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ : ಸಚಿವ ಡಾ. ನಾರಾಯಣ ಗೌಡ

Thursday, August 27th, 2020
Narayana Gowda

ಬಂಟ್ವಾಳ : ಪುರಸಭೆಯ ಅಭಿವೃದ್ಧಿ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ನೀಡಿದ ಸಲಹೆಯನ್ನು ಗಮನದಲ್ಲಿರಿಸಲಾಗಿದೆ. ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯ ಬಗ್ಗೆ ಹಿರಿಯ ಸದಸ್ಯ ಎ. ಗೋವಿಂದ ಪ್ರಭು ಗಮನ ಸೆಳೆದಿದ್ದು, ಇದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ನಾರಾಯಣ ಗೌಡ ಹೇಳಿದರು. ಬುಧವಾರ ಸಂಜೆ ಬಂಟ್ವಾಳಕ್ಕೆ ಭೇಟಿ ನೀಡಿದ, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಜೊತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.  ಮುಂದೆ ಯಾರೂ ಕೂಡ ಸರ್ಕಾರದ ಮೀಸಲಾತಿಯನ್ನು ಪ್ರಶ್ನಿಸದಂತೆ ಮುಖ್ಯಮಂತ್ರಿ […]

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಲು ಮಧ್ಯವರ್ತಿಯಾಗಿದ್ದ ಮಹಿಳೆಯ ಬಂಧನ

Wednesday, August 26th, 2020
Sunitha

ಕಾಸರಗೋಡು : ಮಹಿಳೆ ಯೊಬ್ಬಳು  ಮಧ್ಯವರ್ತಿ ಯಾಗಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಲು ಯುವಕರಿಬ್ಬರಿಗೆ ಸಹಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಕುಂಬ್ಳೆ ಪೊಲೀಸರು ಬಂಧಿಸಿದ್ದಾರೆ. ಕಟ್ಟದಂಗಡಿ ಪೆರಿಯಡ್ಕದ ಕಾಲನಿಯ ಸುನಿತಾ (30) ಬಂಧಿತಳು. ಘಟನೆ ಕುಂಬಳೆಯಿಂದ ಒಂದು ವರ್ಷದ ಬಳಿಕ ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಂಬಳೆಯಲ್ಲಿ ಉತ್ಸವ ನೋಡಲೆಂದು 2018 ರ ಡಿಸಂಬರ್ 18 ರಂದು ರಾತ್ರಿ ಬಾಲಕಿಯನ್ನು ಕರೆದೊಯ್ದು ನಿರ್ಜನ ಸ್ಥಳದಲ್ಲಿ ಕೃತ್ಯ ನಡೆಸಿದ್ದು, ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ರಾತ್ರಿ ಓರ್ವ […]

ಕರ್ನಾಟಕಕ್ಕೆ ತೆರಳಿ ಮರಳುವ ಪ್ರಯಾಣಿಕರಿಗೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ : ಜಿಲ್ಲಾಧಿಕಾರಿ

Wednesday, August 26th, 2020
sajith-babu

ಕಾಸರಗೋಡು : ಕೊರೋನ ಕೋರ್ ಸಮಿತಿಯ ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕರ್ನಾಟಕಕ್ಕೆ ತೆರಳಿ ಮರಳುವ ದಿನನಿತ್ಯದ ಪ್ರಯಾಣಕ್ಕೆ ಇನ್ನು ಮುಂದೆ ರೆಗ್ಯುಲರ್ ಪಾಸ್ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮುಂದೆ ಆಂಟಿಜೆನ್ ಟೆಸ್ಟ್ ನಡೆಸಿ, ಅಲ್ಲಿ ಲಭಿಸುವ ನೆಗೆಟಿವ್ ಸರ್ಟಿಫಿಕೆಟ್ ಸಹಿತ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿದರೆ ಸಾಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇದಕ್ಕಾಗಿ ಜಿಲ್ಲಾ ವೈದ್ಯಾಧಿಕಾರಿ ತಲಪ್ಪಾಡಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಸೌಲಭ್ಯ ಏರ್ಪಡಿಸುವರು. ಪ್ರತಿ ಪ್ರಯಾಣಿರು […]

ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ.ಎಂ.ಕೆ ನಿಧನ

Wednesday, August 26th, 2020
mmk

ಮಂಗಳೂರು : ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ನಗರದ ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮೊಹಮದ್‌ ಮುಸ್ತಫಾ (59) ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಣ್ಣು ಹಂಪಲು ವ್ಯಾಪಾರಿಯಾಗಿದ್ದ ಅವರು ವ್ಯಾಪಾರಸ್ಥರ ವಲಯದಲ್ಲಿ ” ಎಂ.ಎಂ.ಕೆ” ಎಂದು ಜನಪ್ರಿಯರಾಗಿದ್ದರು. ಜಿಲ್ಲಾಡಳಿತ ಸೆಂಟ್ರಲ್‌ ಮಾರುಕಟ್ಟೆಯ ತರಕಾರಿ ಹಾಗೂ ಹಣ್ಣುಹಂಪಲು  ಸಗಟು ವ್ಯಾಪಾರವನ್ನು ನಗರದ ಹೊರ ವಲಯದ ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಲು ನಿರ್ಧರಿಸಿದ್ದಾಗ ವ್ಯಾಪಾರಸ್ಥರ ಸಂಘದ […]

ಕೊರೊನಾ ಪಾಸಿಟಿವ್ ಪ್ರಕರಣಗಳು : ದಕ್ಷಿಣ ಕನ್ನಡ ಜಿಲ್ಲೆ247 , ಉಡುಪಿ ಜಿಲ್ಲೆ 217 , ಕಾಸರಗೋಡು ಜಿಲ್ಲೆ 99

Wednesday, August 26th, 2020
corona

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 247 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆ ಮೂಲಕ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 10774ಕ್ಕೆ ಏರಿಕೆಯಾಗಿದೆ. 247 ಮಂದಿ ಸೋಂಕಿತರ ಪೈಕಿ ಪ್ರಾಥಮಿಕ ಸಂಪರ್ಕದಿಂದ 85 ಮಂದಿಗೆ ಕೊರೊನಾ ದೃಢಪಟ್ಟಿದೆ. 72 ಐಎಲ್‌ಐ ಪ್ರಕರಣಗಳಾಗಿದ್ದು, 11 ಸಾರಿ ಪ್ರಕರಣಗಳಾಗಿವೆ. 78 ಮಂದಿಯ ಸೋಂಕಿನ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಮಂಗಳವಾರದಂದು 218 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ ಇಲ್ಲಿಯ ತನಕ 8136 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದಂತಾಗಿದೆ. ಮಂಗಳವಾರ […]

ಬೀಜ ಫ್ಯಾಕ್ಟರಿಯಲ್ಲಿ ಬೆಂಕಿ, ಕೋಟ್ಯಂತರ ಮೌಲ್ಯದ ವಸ್ತುಗಳು ಭಸ್ಮ

Tuesday, August 25th, 2020
cashew

ಕಾರ್ಕಳ : ಸೋಮವಾರ ರಾತ್ರಿ  ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅನಾಹುತದಿಂದ ಹಿರ್ಗಾನ ಗ್ರಾಮದ ಗೇರು ಬೀಜ ಫ್ಯಾಕ್ಟರಿಯಲ್ಲಿ ಕೋಟ್ಯಂತರ ಮೌಲ್ಯದ ಗೇರು ಬೀಜ, ಎಣ್ಣೆ ಮಿಷನರಿಗಳು ಸುಟ್ಟು ಹೋಗಿದೆ. ಸೋಮವಾರ ತಡರಾತ್ರಿ ರಾತ್ರಿ  12.30 ರ ವೇಳೆಗೆ ಪಕ್ಕದಲ್ಲಿ ಮಲಗಿದ್ದ ಕೆಲಸಗಾರರ ಗಮನಕ್ಕೆ ಬೆಂಕಿ ತಗುಲಿದ ವಿಚಾರ ಬಂದಿದ್ದು ಕೂಡಲೇ ಮಾಲಕರಿಗೆ ಮಾಹಿತಿ ನೀಡಿ ಅಗ್ನಿ ಶಾಮಕ ದಳದವರನ್ನು ಕರೆಸಲಾಗಿದೆ. ಗೇರು ಬೀಜದ ಸಿಪ್ಪೆ ಮತ್ತು ಎಣ್ಣೆ ಇರುವುದರಿಂದ ಬೆಂಕಿಯು ಪಸರಿಸುತ್ತಲೇ  ಇತ್ತು ಎಂದು ಹೇಳಲಾಗಿದೆ. ಫ್ಯಾಕ್ಟರಿ ಮಾಲಕ […]

ಮಂಗಳೂರು ನಗರ ಪಾಲಿಕೆಗೆ ನೂತನ ಆಯುಕ್ತರಾಗಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್

Tuesday, August 25th, 2020
Akshay Sudhir

ಮಂಗಳೂರು : ಮಂಗಳೂರು ನಗರ ಪಾಲಿಕೆಗೆ ನೂತನ ಆಯುಕ್ತರನ್ನಾಗಿ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಕ್ಷಯ್ ಶ್ರೀಧರ್ ಅವರು ಈ ಹಿಂದೆ ಸಹಾಯಕ ಆಯುಕ್ತರಾಗಿ, ಬೀದರ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಎಲೆಕ್ಟ್ರಿಕಲ್ ಎಂಜಿನಿಯರ್ ನಲ್ಲಿ ಪದವಿ ಪಡೆದಿರುವ ಅಕ್ಷಯ್ ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗುವ ಮುನ್ನ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು

ಸೆ. 11ರಂದು ಕೃಷ್ಣಜನ್ಮಾಷ್ಟಮಿ; ಉಡುಪಿ ರಥಬೀದಿಯಲ್ಲಿ ಗುರ್ಜಿ ನೆಡುವ ಮುಹೂರ್ತ

Tuesday, August 25th, 2020
gurji

ಉಡುಪಿ:  ಕೃಷ್ಣ ಲೀಲೋತ್ಸವದ ಪೂರ್ವತಯಾರಿಯ ಅಂಗವಾಗಿ ಸೋಮವಾರ ರಥಬೀದಿಯಲ್ಲಿ ಗುರ್ಜಿ ನೆಡುವ ಮುಹೂರ್ತ ನೆರವೇರಿತು. ಪರ್ಯಾಯ ಅದಮಾರು ಮಠಾಧೀಶರಾದ ವಿಶ್ವಪ್ರಿಯ ತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಈಶಪ್ರಿಯ ತೀರ್ಥರ ನೇತೃತ್ವದಲ್ಲಿ ಕೃಷ್ಣ ಲೀಲೋತ್ಸವ ನಡೆಯಲಿದೆ. ಸೆ. 11ರಂದು ಕೃಷ್ಣಮಠದಲ್ಲಿ ಕೃಷ್ಣಜನ್ಮಾಷ್ಟಮಿ ನಡೆಯಲಿದೆ. ಗುರ್ಜಿ ನೆಡುವ ವೇಳೆ ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಾರುಪತ್ಯಗಾರರಾದ ಮುದರಂಗಡಿ ಲಕ್ಷ್ಮೀಶ ಭಟ್, ಕೊಠಾರಿಗಳಾದ ಶ್ರೀರಮಣ ಆಚಾರ್ಯ, ವ್ಯವಸ್ಥಾಪಕ ಗೋವಿಂದರಾಜ್, ಪದ್ಮನಾಭ ಮೇಸ್ತ್ರಿ, ಪ್ರದೀಪ್ ಕುಮಾರ್ ಇದ್ದರು.