ತಕ್ಷಣ ಪ್ರಸಿದ್ದಿ ಹೊಂದಲು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಅರೋಪಿ

Friday, August 21st, 2020
vikash Kumar

ಮಂಗಳೂರು : ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇಟ್ಟಿದೆ ಎಂದು ಬೆದರಿಕೆ ಕರೆ ಮಾಡಿದರೆ ಧಿಡೀರನೆ ಪ್ರಸಿದ್ದಿ ಪಡೆಯ ಬಹುದು ಎಂದು ಆರೋಪಿ ಯೋಚಿಸಿದ್ದ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಹೇಳಿದ್ದಾರೆ. 33 ವರ್ಷದ ಕಾರ್ಕಳ ಮುದ್ರಾಡಿ ನಿವಾಸಿ ವಸಂತ್ ಶೇರಿಗಾರ್ ಆರೋಪಿಯಾಗಿದ್ದು ಈತ 8 ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾನೆ , ಮೊಬೈಲ್ ಫೋನ್ ಬಳಸುವಲ್ಲಿ ತುಂಬಾ ಪರಿಣಿತರಿದ್ದಾನೆ ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ. ಶುಕ್ರವಾರ (ಆಗಸ್ಟ್ 21) ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ […]

ಹೊಸ ಮೊಬೈಲ್ ಫೋನ್ ಅವಾಂತರ, ಮಂಜೇಶ್ವರದ ಒಂದೇ ಮನೆಯಿಂದ ಮೂವರು ಯುವತಿಯರು ನಾಪತ್ತೆ

Thursday, August 20th, 2020
missing

ಮಂಗಳೂರು: ಮಂಜೇಶ್ವರ ಸಮೀಪದ ಮೀಯಪದವು ಎಂಬಲ್ಲಿ ಒಂದೇ ಮನೆಯಿಂದ ಮೂವರು ಯುವತಿಯರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರು 16, 17 ಹಾಗೂ 21 ವಯಸ್ಸಿನ ಸೋದರಿಯಾರಾಗಿದ್ದು ಮನೆಯವರು ಮತ್ತು ಅಕ್ಕ ಪಕ್ಕದವರಲ್ಲಿ ಆತಂಕಕ್ಕೆ  ಕಾರಣವಾಗಿದೆ. ಆಗಸ್ಟ್ 16ರಂದು ಮೂರು ಮಂದಿ ಜೊತೆಯಲ್ಲೇ ಆಸ್ಪತ್ರೆಗೆಂದು ಹೋಗಿದ್ದು ಬಳಿಕ ವಾಪಸ್ ಆಗಿಲ್ಲ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಯುವತಿಯರ  ನಾಪತ್ತೆಗೆ ಹೊಸ ಮೊಬೈಲ್ ಫೋನ್ ಎಂದು ಹೇಳಲಾಗುತ್ತಿದೆ. ಮೂವರಲ್ಲಿ ಓರ್ವ ಯುವತಿ ಕೆಲದಿನಗಳಿಂದ ಹೊಸ ಮೊಬೈಲ್ ಫೋನ್ ಬಳಸುತ್ತಿದ್ದು ಈ ಬಗ್ಗೆ ಮನೆಮಂದಿ ವಿಚಾರಿಸಿದ್ದರು. […]

ಲಾಡ್ಜ್‌ವೊಂದರಲ್ಲಿ ಮೂವರು ಯುವತಿಯರನ್ನುಇಟ್ಟುಕೊಂಡು ದಂಧೆ, ಇಬ್ಬರು ಅರೆಸ್ಟ್

Thursday, August 20th, 2020
prostitution

ಮಂಗಳೂರು : ನಗರದ ಲಾಡ್ಜ್‌ವೊಂದರಲ್ಲಿ ಮೂವರು ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ನಗರ ಪೊಲೀಸರು ಬಂಧಿಸಿ ದ್ದಾರೆ. ಕಡಂದಲೆ ನಿವಾಸಿ ಹರೀಶ್(45), ಬೊಳುವಾರು ನಿವಾಸಿ ಸಾಗರ್ (40) ಬಂಧಿತ ಆರೋಪಿಗಳು. ನಗರದ  ಪಂಪ್‌ವೆಲ್ ಲಾಡ್ಜ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಹರೀಶ್ ಲಾಡ್ಜ್ ಸಿಬ್ಬಂದಿಯಾಗಿದ್ದರೆ, ಸಾಗರ್ ದಲ್ಲಾಳಿಯಾಗಿದ್ದ. ಮೂವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಂಗಳೂರು ಮಹಿಳಾ ಪೊಲೀಸ್ […]

ಕ್ಯಾನ್ಸರ್ ಚಿಕಿತ್ಸೆಗೆ ಲಯನ್ ಪ್ರಶಾಂತ್ ಭಟ್ ಕಡಬ ಅವರಿಂದ ಸಹಾಯ

Thursday, August 20th, 2020
Lion prashanth Bhat

ಮಂಗಳೂರು : ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅಡ್ಯಾರ್ ನಿವಾಸಿ ಸುಗಂಧಿ ಅವರ ಚಿಕಿತ್ಸೆಗೆ ತನ್ನ ವಯ್ಯಕ್ತಿಕ ನೆಲೆಯಲ್ಲಿ ಲಯನ್ ಪ್ರಶಾಂತ್ ಭಟ್ ಕಡಬ ಅವರು ಹತ್ತು ಸಾವಿರ ರೂಪಾಯಿಗಳ ಚೆಕ್ ಹಸ್ತಾಂತರಿಸಿದ್ದಾರೆ. ಮಂಗಳೂರಿನ ಲಯನ್ಸ್ ಕ್ಲಬ್ 317ಡಿ ಮಲ್ಲಿಕಟ್ಟೆ ಯಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಿವೃತ್ತ ಸೈನಿಕ ಲಯನ್ ರಾಘವೇಂದ್ರ ಭಟ್ ಅವರು ಸುಗಂಧಿಯವರ ಪುತ್ರ ಅಜಿತ್ ಪೂಜಾರಿಗೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಸತೀಶ್ ರೈ, ಮಾಜಿ ಅಧ್ಯಕ್ಷ ಶೇಖರ್ […]

ಸಾಲಕೊಟ್ಟ 26 ಸಾವಿರ ವಾಪಸು ಕೊಟ್ಟಿಲ್ಲ ಎಂದು ಚಾರ್ಮಾಡಿ ಘಾಟಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Thursday, August 20th, 2020
Nagaraj Holalkere

ಚಿಕ್ಕಮಗಳೂರು : ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆಯ  ವ್ಯಕ್ತಿಯೋರ್ವ ಚಾರ್ಮಾಡಿ ಘಾಟಿಯ ಮಲಯ ಮಾರುತ ಬಳಿ ತನ್ನ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಕಾರಿನಲ್ಲಿ ದೊರೆತ ದಾಖಲೆಗಳ ಪ್ರಕಾರ ಮೃತಪಟ್ಟ ವ್ಯಕ್ತಿಯನ್ನು 44 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ. ಈತ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಹೊರಕೆರೆ ದೇವಪುರ ಗ್ರಾಮದವರು ಎನ್ನಲಾಗಿದೆ. ವಿಷ ಸೇವಿಸಿದ ವ್ಯಕ್ತಿಯ ಬಾಯಲ್ಲಿ ನೊರೆ ಬಂದಿಲ್ಲ. ಅಷ್ಟೆ ಅಲ್ದೆ ಜುಲೈ 31ನೇ ತಾರೀಖಿನಂದೆ ಬರೆದಿರೋ ಡೆತ್ ನೋಟ್ ಕೂಡ ಜೇಬಲ್ಲಿರುವುದು  ಸಂಶಯಕ್ಕೆ […]

ಕಂಕನಾಡಿ ಬಾರ್&ರೆಸ್ಟೋರೆಂಟ್ ನ ಶೆಡ್ಡಿನಲ್ಲಿ ಹೆಣ

Thursday, August 20th, 2020
bar

ಮಂಗಳೂರು : ನಗರದ ಕಂಕನಾಡಿ ಹಾಲಿವುಡ್ ಬಾರ್&ರೆಸ್ಟೋರೆಂಟ್ ನ ಶೆಡ್ಡಿನ ಬಳಿ ಆಗಸ್ಟ್ 18 ರಂದು 53 ವರ್ಷ ಪ್ರಾಯದ ಮಹೇಶ್ ಎಂಬವರ ಮೃತ ಶರೀರ ಪತ್ತೆಯಾಗಿದೆ. ರೆಸ್ಟೋರೆಂಟ್‍ನ ಶೆಡ್ಡಿನ ಪಕ್ಕಾಸಿಗೆ ಹಳೆಯ ಇಲೆಕ್ಟ್ರಿಕಲ್ ವಯರನ್ನು ಕಟ್ಟಿ ವಯರ್‍ನ ಇನ್ನೊಂದು ತುದಿಯನ್ನು ಕುತ್ತಿಗೆಗೆ ಉರುಳಾಗಿ ಉಪಯೋಗಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದೇಹದ ಭಾರದಿಂದ ವಯರ್ ತುಂಡಾಗಿ ಕೆಳಕ್ಕೆ ಬಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಗಂಡಸಿನ ಚಹರೆ ಇಂತಿವೆ: ಹೆಸರು: ಮಹೇಶ, ತಂದೆ: ಹನುಮಂತ, ಪ್ರಾಯ: ಸುಮಾರು 53 ವರ್ಷ. […]

ಕೊರೊನಾ ಪಾಸಿಟಿವ್ : ದಕ್ಷಿಣ ಕನ್ನಡ ಜಿಲ್ಲೆ 234, ಸಾವು ನಾಲ್ಕು, ಉಡುಪಿ ಜಿಲ್ಲೆ 375, ಕಾಸರಗೋಡು ಜಿಲ್ಲೆ 174

Thursday, August 20th, 2020
coronavirus

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 234 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಬುಧವಾರ 115 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಬುಧವಾರದ ವರದಿ ಪ್ರಕಾರ  ಒಟ್ಟು ಸೋಂಕಿತರ ಸಂಖ್ಯೆ 9535ಕ್ಕೆ ಏರಿಕೆಯಾಗಿದೆ. ಈ ವರೆಗೆ  6942 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ಸದ್ಯ ದ.ಕ ಜಿಲ್ಲೆಯಲ್ಲಿ 2303 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಇನ್ನು ಕೊರೊನಾ ಸೋಂಕಿಗೆ ಬುಧವಾರ ನಾಲ್ವರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 290ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ ಸಂಪರ್ಕದಿಂದ 35 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. […]

ಸಹಾಯ ಮಾಡುವ ನೆಪದಲ್ಲಿ ವೃದ್ಧೆಯೊಬ್ಬರ 4.32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ರಿಕ್ಷಾ ಚಾಲಕ

Wednesday, August 19th, 2020
gold ornament

ಮಂಗಳೂರು : ರಿಕ್ಷಾ ಚಾಲಕನೋರ್ವ ವೃದ್ಧೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಲಪಟಾಯಿಸಿ ಬುಧವಾರ ಪೋಲೀಸರ ಬಲೆಗೆ ಬಿದ್ದಿದ್ದಾನೆ. ಶಕ್ತಿನಗರ ನಿವಾಸಿ ಪ್ರವೀಣ್ ರಾಮನಾಯ್ಕಿ (40) ಬಂಧಿತ ಆರೋಪಿ. ಚಿಲಿಂಬಿಯ ಸಮೀಪ ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಲ್ಲಿ  ಉರ್ವ ಪೊಲೀಸರು ಬುಧವಾರ ಆತನನ್ನು ಬಂಧಿಸಿದ್ದಾರೆ. ಜೂ.7ರಂದು ಚಿಲಿಂಬಿಯ ದೇವಸ್ಥಾನವೊಂದರ ಬಳಿ 72 ವರ್ಷದ ವೃದ್ಧೆಗೆ ಸಹಾಯ ಮಾಡುವ ನೆಪದಲ್ಲಿ ಈತ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಎಂದು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ […]

ವಧೆಗಾಗಿ 37 ಕೋಣಗಳನ್ನು ಹಿಂಸ್ಮಾತಕವಾಗಿ ಸಾಗಿಸುತ್ತಿದ್ದ ಟ್ರಕ್ ವಶ

Wednesday, August 19th, 2020
buffalo

ಕುಂದಾಪುರ :  ಅಮಾಸೆಬೈಲು ಪೊಲೀಸ್ ಠಾಣೆಯ ಹೊಸಂಗಡಿ ಚಕ್ ಪೋಸ್ಟ್  ವಾಹನ ತಪಾಸಣೆಯ ವೇಳೆಯಲ್ಲಿ ಹುಲಿಕಲ್ ಘಾಟಿಯಿಂದ ಹೊಸಂಗಡಿ ಕಡೆಗೆ ಬರುತ್ತಿರುವ ಟ್ರಕ್ ವಾಹನದಲ್ಲಿ ಅಕ್ರಮ ಗೋ ಸಾಗಣಿಕೆ ಪತ್ತೆ ಹಚ್ಚಿದ್ದಾರೆ. ಉತ್ತರ ಪ್ರದೇಶ ನೊಂದಾವಣೆಯ ಟ್ರಕ್‍ನಲ್ಲಿ ಸುಮಾರು 37 ಕೋಣಗಳನ್ನು ಹಿಂಸ್ಮಾತಕವಾಗಿ ಕಟ್ಟಿಹಾಕಿ, ವಧೆ ಮಾಡುವ ಉದ್ದೇಶಕ್ಕಾಗಿ ಸಾಗಣಿಕೆ ಮಾಡುತ್ತಿದ್ದರು. ಪೊಲೀಸರು ವಾಹನ ಮತ್ತು ಕೋಣಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಉತ್ತರ ಪ್ರದೇಶದ ಸಾಹಿರ್ ಜಿಲ್ಲೆಯ ಕಮಲಾಪುರದ ಶಕೀಲ್(35) ಮತ್ತು ಮೀರತ್ ಜಿಲ್ಲೆಯ ಪಕ್ರಿ ಆಲಂ (24)ನ್ನು […]

ಮಂಗಳೂರು ನಗರಕ್ಕೆ ಬಂದ ಹೆಬ್ಬಾವು

Tuesday, August 18th, 2020
snake

ಮಂಗಳೂರು  : ನಗರದ ಹೃದಯ ಭಾಗ ಜಿ.ಹೆಚ್.ಎಸ್. ರಸ್ತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೆಲವು ಪಾದಚಾರಿಗಳು ಗಲಿಬಿಲಿ ಗೊಂಡಿದ್ದರು. ಈ ವೇಳೆ ಕೆಲವರು ತರಕಾರಿಗಳನ್ನಿಡುವ ಟ್ರೇಯನ್ನು ಹೆಬ್ಬಾವು ಮೇಲೆ ಹಾಕಿ ಅದು ಚಲಿಸದಂತೆ ಮಾಡಿದ್ದಾರೆ. ಬಳಿಕ ಪೈಪ್‌ವೊಂದರ ಮತ್ತೊಂದು ಭಾಗದಲ್ಲಿ ಗೋಣಿಚೀಲವನ್ನಿಟ್ಟು ಪೈಪ್‌ನೊಳಗೆ ಹಾವು ಹೋಗುವಂತೆ ಮಾಡಲಾಯಿತು. ಗೋಣಿ ಚೀಲದೊಳಗೆ ಹೋದ ಹೆಬ್ಬಾವನ್ನು ಬಳಿಕ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.