ಜ್ಯೋತಿಷಿ ಪ್ರಭಾವದಿಂದ ಡಿವೋರ್ಸ್ : ರಾಡ್​ನಿಂದ ಹಲ್ಲೆ ಮಾಡಿದ ವ್ಯಕ್ತಿ

Tuesday, March 23rd, 2021
Astrologer

ಬಂಟ್ವಾಳ: ವರ್ಷದ ಹಿಂದೆ  ತನ್ನ ಪತ್ನಿ ಬಿಟ್ಟು ಹೋಗಲು ಜ್ಯೋತಿಷಿಯೇ ಕಾರಣ ಎಂದು ಆರೋಪಿಸಿ ರಾಡ್ನಿಂದ ಹಲ್ಲೆಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿ.ಸಿ. ರೋಡ್ ವಾಣಿಜ್ಯ ಸಂಕೀರ್ಣದಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಲಕ್ಷ್ಮೀಕಾಂತ ಭಟ್ ಯಾನೆ ಹನುಮಂತಪ್ಪ ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪಂಜಿಕಲ್ಲು ನಿವಾಸಿ ಮೋಹನ ಪ್ರಭು (38) ಎಂಬಾತನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಜ್ಯೋತಿಷ್ಯದ ಮೂಲಕ ತನ್ನ ಸಂಸಾರದಲ್ಲಿ ಬಿರುಕು ತಂದಿದ್ದ. ತನ್ನ ಹೆಂಡತಿ ಬಿಟ್ಟು ಹೋಗಲು ಕಾರಣವಾಗಿದ್ದ ಎಂಬ ಕೋಪದಲ್ಲಿ ಪ್ರಭು, […]

ಬಾಡಿಗೆ ಮನೆ ಕೇಳುವ ನೆಪದಲ್ಲಿ ಚಿನ್ನಾಭರಣ ಲೂಟಿ : ಆರೋಪಿಯ ಬಂಧನ

Tuesday, March 23rd, 2021
Mujeeb

ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಮ ಮತ್ತು ನಿತ್ಯಾನಂದ ನಗರದ ಮನೆಗಳಿಗೆ ನುಗ್ಗಿ 1.40 ಲಕ್ಷ ರೂ. ಚಿನ್ನಾಭರಣ ಕಳವು ಮಾಡಿದ ಆರೋಪಿಯನ್ನು ಸೊತ್ತು ಸಹಿತ ಪೊಲೀಸರು ಕಾಸರಗೋಡು ಜಿಲ್ಲೆಯ ನರಿಂಗಾನ ಗ್ರಾಮದ ನೆತ್ತಿಲಪದವು ಎಂಬಲ್ಲಿ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳ, ಮಂಗಲ್ಪಾಡಿ ನಿವಾಸಿ ಮುಜೀಬ್ ರೆಹಮಾನ್ ಎಂ.ಎ. ಬಂಧಿತ ಆರೋಪಿ. ಬಾಡಿಗೆ ಮನೆ ಕೇಳಿಕೊಂಡು ಬೆಳ್ಮ ಮತ್ತು ನಿತ್ಯಾನಂದ ನಗರದ ಅಶ್ವಿನಿ ಎಂಬವರ ಮನೆಗೆ ಹೋಗಿದ್ದನು. ಆರೋಪಿ ಮುಜೀಬ್ ಬಳಿಕ […]

ವಿಧಾನಸಭಾ ಚುನಾವಣೆ : ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಸ್ಪರ್ಧೆಗೆ

Tuesday, March 23rd, 2021
Surendran

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆ ಎಪ್ರಿಲ್ 6 ರಂದು ನಡೆಯಲಿದ್ದು ಕಾಸರಗೋಡು ಜಿಲ್ಲೆಯ ಐದು ಕ್ಷೇತ್ರಗಳಲ್ಲಿ 38 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರದಲ್ಲಿ ಆರು, ಕಾಸರಗೋಡು ಏಳು, ಉದುಮ ಆರು, ಕಾಞಂಗಾಡ್ 11, ತೃಕ್ಕರಿಪುರ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರ: ಎ. ಕೆ ಎಂ ಅಶ್ರಫ್ (ಮುಸ್ಲಿಂ ಲೀಗ್), ವಿ.ವಿ ರಮೇಶನ್ (ಸಿ ಪಿ ಐ ಎಂ), ಕೆ. ಸುರೇಂದ್ರನ್ (ಬಿಜೆಪಿ), ಪ್ರವೀಣ್ ಕುಮಾರ್ (ಅಣ್ಣಾ ಡೆಮೊಕ್ರಟಿಕ್ ಹ್ಯೂ ಮನ್ ರೈಟ್ಸ್ ಆಫ್ ಇಂಡಿಯಾ), ಜೋನ್ ಡಿಸೋಜ […]

67ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಪಿಂಗಾರ ತುಳು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

Tuesday, March 23rd, 2021
pingara

ಮಂಗಳೂರು :  ಪಿಂಗಾರ ತುಳು ಚಿತ್ರ 2019ನೆ ಸಾಲಿನ 67ನೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಭಾಗದಲ್ಲಿ ಅತ್ಯತ್ತಮ ತುಳು ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ನಿರ್ದೇಶಕ ಆರ್. ಪ್ರೀತಂ ಶೆಟ್ಟಿ ನಿರ್ದೇಶನದ ಪಿಂಗಾರ ಸಿನಿಮಾಕ್ಕೆ ಇದೀಗ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ತುಳುನಾಡಿನ ದೈವಾರಾಧನೆ ಮತ್ತು ಅದರ ಸುತ್ತ ಒಳಗೊಂಡಿರುವ ನಂಬಿಕೆ,ದೈವದ ನುಡಿ ಯೊಂದಿಗೆ ಬೆಳೆದು ಬಂದ ಶ್ರದ್ಧೆ,ಭಕ್ತಿ ಯೊಂದಿಗೆ ಸೇರಿಕೊಂಡಿರುವ ತುಳುವರ ಬದುಕು ಸಂಸ್ಕೃತಿ, ದೈವದ ಪಾತ್ರಿಯ ದೈವಿಕ ನುಡಿಗಳನ್ನು ಅಲೌಕಿಕ ಶಕ್ತಿಯ ಆಜ್ಞೆಯೆಂದು ಪಾಲಿಸುತ್ತಾ ಬಂದಿರುವ ತುಳುವರ ಸಾಮಾಜಿಕ ಮತ್ತು ಧಾರ್ಮಿಕ ಬದುಕಿನ […]

ವಾಟರ್ ಆಡಿಟಿಂಗ್ ಮೂಲಕ ವಿಶ್ವ ಜಲ ದಿನಾಚರಣೆ

Tuesday, March 23rd, 2021
water

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅನ್ವೇಷಣಾ ಸಂಘ ಮತ್ತು ಪರಿಸರ ಸಂಘದ ‌ವತಿಯಿಂದ ವಿಶ್ವ ಜಲ ದಿವಸವನ್ನು ವಾಟರ್ ಆಡಿಟಿಂಗ್ ಮಾಡುವ ಮೂಲಕ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಅವರಣದೊಳಗಿನ ನೀರಿನ ಕಾರಂಜಿಯನ್ನು ಶುಚಿಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪರಿಸರ ಸಂಘದ ಸಹ ನಿರ್ದೇಶಕ ಡಾ. ಸಿದ್ಧರಾಜು ಎಂ. ಎನ್ ವಿದ್ಯಾರ್ಥಿಗಳಿಗೆ ವಿಶ್ವ ಜಲ ದಿನದ ಮಹತ್ವ ತಿಳಿಸಿ ವಾಟರ್ ಆಡಿಟಿಂಗ್ ಎಂದರೇನು, ಶಾಲಾ ಕಾಲೇಜುಗಳಲ್ಲಿ ನೀರಿನ ಆಡಿಟಿಂಗ್ ನಡೆಸುವುದು, ದಾಖಲೀಕರಿಸುವುದು ಮತ್ತು ಅದರ ನಿರ್ವಹಣೆ ಹೇಗೆ […]

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಅವ್ಯವಹಾರ, ಉಪ ಆಯುಕ್ತರ ಸಭೆ

Monday, March 22nd, 2021
Kolluru

ಉಡುಪಿ : ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರದ  ಬಗ್ಗೆ ‘ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕ’ ಬಹಿರಂಗಸಿತ್ತು. ಆ ಬಳಿಕದ 10 ದಿನಗಳ ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಉಪ ಆಯುಕ್ತರು ಭೇಟಿ ನೀಡಿ  2005 ರಿಂದ 2019 ರ ಆಡಿಟ್ ವರದಿಯ ಪ್ರಕಾರ ಆಕ್ಷೇಪಿಸಿದ ಕೆಲವು ಅಂಶಗಳನ್ನು ವಿಚಾರಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದಾರೆ. ಬಳಿಕ ಅವರು  ಸಭೆ ನಡೆಸಿ ಕೊಲ್ಲೂರು […]

ರಾಜ್ಯದಲ್ಲಿ ಹೊಸದಾಗಿ ಐದಾರು ಕೈಗಾರಿಕಾ ಟೌನ್ ಶಿಪ್ : ಸಚಿವ ಜಗದೀಶ್ ಶೆಟ್ಟರ್

Sunday, March 21st, 2021
ficci

ಮಂಗಳೂರು : ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಬೈಂದೂರು ಮತ್ತು ಕಾರವಾರದಲ್ಲಿ ವಿಮಾನ ನಿಲ್ದಾಣಗಳನ್ನು ತೆರೆಯುವ ಯೋಜನೆ ಇದೆ ಮತ್ತು ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ರಾಜ್ಯ ಮಧ್ಯಮ ಮತ್ತು ಭಾರಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮಾರ್ಚ್ 21, ಭಾನುವಾರದಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್‌ನಲ್ಲಿ ಎಫ್‌ಐಸಿಸಿಐ ಆಯೋಜಿಸಿದ್ದ ಕರ್ನಾಟಕ ಕೋಸ್ಟ್‌ಲೈನ್ ಬಿಸಿನೆಸ್ ಕಾನ್ಕ್ಲೇವ್ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಾ ರಾಜ್ಯದಲ್ಲಿ ಹೊಸದಾಗಿ ಐದಾರು ಕೈಗಾರಿಕಾ ಟೌನ್ ಶಿಪ್ ಮಾಡುವ […]

ಜೆಡಿಎಸ್ ಪಕ್ಷದ ತತ್ವ ಸಿದ್ದಾಂತವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಅನುಸರಿಸುತ್ತಾ ಬಂದಿದೆ : ಲೀಲಾವತಿ ಆರ್ ಪ್ರಸಾದ್

Sunday, March 21st, 2021
JDS

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಜಾತ್ಯಾತೀತ ಜನತಾದಳ ಮಹಿಳಾ ಘಟಕದ ವತಿಯಿಂದ ಮಹಿಳಾ ಸಮಾವೇಶ ಮಹಿಳಾ ದಿನಾಚರಣೆ ಮತ್ತು ಸಾಮರಸ್ಯ ಸಂಗಮ ಕಾರ್ಯಕ್ರಮ ಮಂಗಳೂರಿನ ಕದ್ರಿಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾ ಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ಮಾಜಿ ಸಚಿವೆ, ಜೆಡಿಎಸ್ ಮಹಿಳಾ ಘಟಕದ ರಾಜ್ಯಧ್ಯಕ್ಷೆ ಲೀಲಾವತಿ ಆರ್ ಪ್ರಸಾದ್ ದೀಪಬೆಳಗಿ ಚಾಲನೆ ನೀಡಿದರು. ಬಳಿಕ ಗ್ರಾಮಾಪಂಚಯತ್ ಚುನಾವಣೆಯಲ್ಲಿ ಗೆದ್ದ ಜೆಡಿಎಸ್ ಅಭ್ಯರ್ಥಿಗಳಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ನಾಲ್ಕು ಮಹಿಳಾ ಸಾಧಕಿಯರಿಗೆ ಸನ್ಮಾನ […]

ನಾಯಿಯನ್ನು ಬೆನ್ನಟ್ಟಿ ಮನೆಯ ಕೋಣೆಯೊಳಗೆ ನುಗ್ಗಿದ ಚಿರತೆ

Sunday, March 21st, 2021
chita

ಬ್ರಹ್ಮಾವರ : ಚಿರತೆಯೊಂದು ರವಿವಾರ ನಸುಕಿನ ವೇಳೆ ಮನೆಯ ಕೋಣೆ ಯೊಳಗೆ ನುಗ್ಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಿದ್ದಾರೆ.   ನೈಲಾಡಿ ಸಮೀಪ ಬೇಟೆ ಅರಸಿ ನಾಡಿಗೆ ಬಂದ ಚಿರತೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದಾಗ, ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿ ಸೇರಿಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಚಿರತೆಯು ಕೋಣೆಯೊಳಗೆ ಸೇರಿಕೊಂಡಿತು. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆಯ ಬಾಗಿಲು ಹಾಕಿದರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ […]

ಮಂಗಳೂರು ಬಿಎಎಸ್‍ಎಫ್ ಕಂಪೆನಿಯಲ್ಲಿ ರಾಸಾಯನಿಕ ದುರಂತ : ಅಣುಕು ಪ್ರದರ್ಶನ

Saturday, March 20th, 2021
BSF

ಮಂಗಳೂರು : ನಗರದ ಹೊರವಲಯದಲ್ಲಿರುವ ಬಿಎಎಸ್‍ಎಫ್ ರಾಸಾಯನಿಕ ಕಾರ್ಖಾನೆಗೆ ಶನಿವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗಳು, ಕೆಲವೇ ಗಂಟೆಗಳಲ್ಲಿ ಘಟಕದಲ್ಲಿ ತಾಪಮಾನ ಹೆಚ್ಚಾಗಿ ರಾಸಾಯನಿಕ ಸೋರಿಕೆ ಉಂಟಾಗಿರುವುದನ್ನು ಗಮನಿಸಿ , ನೀರು ಸಿಂಪಡಿಸತೊಡಗಿದರು. ಆದರೆ ಎರಡು ರಾಸಾಯನಿಕ ಘಟಕದ ಸ್ಪಿಂಕ್ಲರ್ ಗಳಿಂದ ನೀರು ಚಿಮ್ಮತೊಡಗಿತು. ಅಪಾಯದ ಸೂಚನೆಗಾಗಿ ಕಂಪೆನಿ ಆವರಣದಲ್ಲಿ ಅಳವಡಿಸಿದ್ದ ಸೈರನ್ ಮೊಳಗಿ, ಕಾರ್ಮಿಕರಿಗೆ ಎಚ್ಚರಿಕೆ ನೀಡಿತು. ತಕ್ಷಣವೇ ಹೊರಬಂದ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿತ್ತು. ಘಟಕದಿಂದ ಕೊನೆಯದಾಗಿ ಹೊರಬಂದ ಕಾರ್ಮಿಕ ತೀವ್ರ ಅಸ್ವಸ್ಥನಾಗಿ ಬಿದ್ದಾಗ ವೈದ್ಯಕೀಯ […]