ಪತ್ನಿಯ ಕೊಲೆ; ಪತಿ ಮತ್ತು ಅತ್ತೆಗೆ ಜೀವಾವಧಿ ಶಿಕ್ಷೆ

Wednesday, August 17th, 2016
Vittla Murder

ಮಂಗಳೂರು:  ವಿಟ್ಲದ ಅಪ್ಪೆರಿಪಾದೆ ಎಂಬಲ್ಲಿ ಐದೂವರೆ ವರ್ಷಗಳ ಹಿಂದೆ ಪತ್ನಿಯ ಶೀಲ ಶಂಕಿಸಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ ಗಂಡ ರವೀಶ್ (43) ಹಾಗೂ ಅತ್ತೆ ಪಾರ್ವತಿ (60)ಯ ಅಪರಾಧ ಸಾಬೀತಾಗಿದ್ದು, ನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ. ರವೀಶ್ ಪತ್ನಿ 2011ರ ಫೆಬ್ರವರಿ 18ರಂದು ತಮ್ಮ ಮನೆಯಲ್ಲೇ ಕೊಲೆಯಾಗಿದ್ದರು. ಇದನ್ನು ಕಣ್ಣಾರೆ ಕಂಡ ಮಗ ಲೋಹಿತಾಶ್ವ (ಆಗ ಅವನಿಗೆ ನಾಲ್ಕು ವರ್ಷ) ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದ. ಘಟನೆಗೆ ಸಂಬಂಧಿಸಿದಂತೆ […]

ಮುಖ್ಯಮಂತ್ರಿಯವರ ಮೇಲೆ ಪೂಜಾರಿ ಮಾಡಿರುವ ಟೀಕೆ ಸರಿಯಲ್ಲ : ಖಾದರ್‌

Wednesday, August 17th, 2016
Khader Press

ಮಂಗಳೂರು:  ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ಮಹಾದಾಯಿ ಪ್ರತಿಭಟನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ನೀಡಿರುವ ಹೇಳಿಕೆ ನನಗೆ ನೋವು ತಂದಿದೆ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಶಾಪ ತಟ್ಟಲಿದೆ ಎಂಬ ಪೂಜಾರಿಯವರ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜನಾರ್ದನ ಪೂಜಾರಿ ನನ್ನ ನಾಯಕರು. ನನ್ನ ರಾಜಕೀಯ ಭವಿಷ್ಯ ರೂಪಿಸಿದವರು. ಅವರ ಮೇಲೆ ಅಪಾರ ಗೌರವ ಇದೆ. ಆದರೆ ಮಹಾದಾಯಿ ವಿಚಾರದಲ್ಲಿ […]

ಕರ್ಣಾಟಕ ಬ್ಯಾಂಕ್‌ನಿಂದ ಕದ್ರಿ ಪಾರ್ಕ್‌ಗೆ 18 ಲಕ್ಷ ರೂ. ವೆಚ್ಚದ ಸೌರದೀಪ ಅಳವಡಿಕೆ

Wednesday, August 17th, 2016
Karnataka Bank

ಮಂಗಳೂರು: ನಗರದ ಕದ್ರಿ ಪಾರ್ಕ್‌ನ ಅಭಿವೃದ್ಧಿಗೆ ಕರ್ಣಾಟಕ ಬ್ಯಾಂಕ್‌, ಸಾರ್ವಜನಿಕರ ಸಂಜೆಯ ವಾಯುವಿಹಾರಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉದ್ಯಾನವನದ ಕಾಲು ದಾರಿಯುದ್ದಕ್ಕೂ 18 ಲಕ್ಷ ರೂ. ವೆಚ್ಚದ ಸುಮಾರು 60ಕ್ಕೂ ಮಿಕ್ಕಿ ಸೌರ ದೀಪಗಳನ್ನು ಕೊಡುಗೆಯಾಗಿ ನೀಡಿದೆ . ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯಡಿ ಪ್ರಾಯೋಜಿಸಲಾಗಿರುವ ಈ ಸೋಲಾರ್‌ ದೀಪಗಳ ಉದ್ಘಾಟನೆಯನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ. ಜಯರಾಂಭಟ್‌ ಮಂಗಳವಾರ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ಕರ್ಣಾಟಕ ಬ್ಯಾಂಕ್‌ ಸುಮಾರು […]

ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ: ನಾರಾಯಣ ಭಂಡಾರಿ

Tuesday, August 16th, 2016
Indipendent-day

ಬಂಟ್ವಾಳ: ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ ಅದರ ಕೊರತೆ ಎದ್ದು ಕಾಣುತ್ತಿದೆ, ಯಾವುದೇ ಪಠ್ಯಪುಸ್ತಕಗಳಲ್ಲಿ ಕೂಡಾ ಈ ವ್ಯವಸ್ಥೆ ಇಲ್ಲದೆ ಇರುವುದು ನಮ್ಮ ದುರಂತ ಎಂದು ಎಸ್.ವಿ.ಎಸ್ ಕಾಲೇಜಿನ ಉಪನ್ಯಾಸಕ ನಾರಾಯಣ ಭಂಡಾರಿ ಹೇಳಿದರು. ಅವರು ವಿವಿಧ ಸಮಿತಿಗಳ ಆಶ್ರಯದಲ್ಲಿ ಬಿಸಿರೋಡಿನ ಕಂದಾಯ ಇಲಾಖೆಯ ಅವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು. ದೇಶಾಭಿಮಾನವನ್ನು ಮೂಡಿಸುವ ಕೆಲಸ ಮಾಡದ ಹಿನ್ನಲೆಯಲ್ಲಿ ದೇಶಭಕ್ತಿಯ ಕೊರತೆಯಿಂದ ದೇಶ ದ್ರೋಹದ ಕೆಲಸ ಆಗುತ್ತಿದೆ ಎನ್ನುವುದಕ್ಕೆ ಖೇಧವಾಗುತ್ತಿದೆ ಎಂದರು. […]

ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ತುಳು ಸಮ್ಮೇಳನ

Tuesday, August 16th, 2016
Heggade

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪ್ರಧಾನಿ ಜೊತೆ ಮಾತನಾಡಲು ಕೇಂದ್ರ ಸಚಿವರ ಮೂಲಕ ಪ್ರಯತ್ನಿಸುತ್ತಿದ್ದು, ಆ.17ರ ನಂತರ ಭೇಟಿಗೆ ಸಮಯ ನಿಗದಿ ಪಡಿಸುವ ಸಾಧ್ಯತೆಯಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ 2 ದಿನ ನಡೆದ ತುಳುವ ಐಸಿರಿದ ಐಸ್ರ ತುಳು ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನೇತ್ರಾವತಿ ನದಿ ತಿರುವು ಯೋಜನೆಯ ಹೆಸರನ್ನು ಬದಲಾಯಿಸಿದೆ. ಘಟ್ಟ ಪ್ರದೇಶದಲ್ಲಿ ಎತ್ತಿನಹೊಳೆ […]

ಬೆಳ್ತಂಗಡಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಸಂದರ್ಭ ಕಪ್ಪು ಬಾವುಟ ಪ್ರದರ್ಶನ

Tuesday, August 16th, 2016
Belthangadi

ಬೆಳ್ತಂಗಡಿ: ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ಗೋವಿನ ರಕ್ಷಣೆ ಹೆಸರಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ದಲಿತ ವಿರೋಧ ನೀತಿ ಖಂಡಿಸಿ ಬೆಳ್ತಂಗಡಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣಕ್ಕೆ ಕಪ್ಪುಪಟ್ಟಿ ಪ್ರದರ್ಶಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಮೆರವಣಿಗೆ ಸಂದರ್ಭ ಮೆರವಣಿಗೆಗೆ ತಡೆ ಮಾಡಿ ಕಪ್ಪು ಬಾವುಟವನ್ನು ಬೆಳ್ತಂಗಡಿ ಸಂತೆಕಟ್ಟೆ ಬಳಿ ಪ್ರದರ್ಶಿಸಿದರು. ಧ್ವಜಾರೋಹಣಕ್ಕೆ ಅಡ್ಡಿಪಡಿಸುವ ಬಗ್ಗೆ ಈ ಮೊದಲೇ ದ.ಸಂ.ಸ ಸರಕಾರಕ್ಕೆ ಎಚ್ಚರಿಕೆ ನೀಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ […]

ವೈವಿಧ್ಯತೆಯಲ್ಲೂ ಸಮಬಾಳ್ವೆಯ ಜೀವನ ನಮ್ಮದಾಗಬೇಕು: ಎಂ.ರಾಮಚಂದ್ರ

Tuesday, August 16th, 2016
Indipendent-day

ಪುತ್ತೂರು: ಸ್ವಾತಂತ್ರ್ಯವನ್ನು ಏಕತೆ ಹಾಗೂ ಒಗ್ಗಟ್ಟಿನಿಂದ ಆಚರಿಸುತ್ತಿದ್ದೇವೆ. ವೈವಿಧ್ಯತೆಯಲ್ಲೂ ಸಮಬಾಳ್ವೆಯ ಜೀವನ ನಮ್ಮದಾಗಬೇಕು. ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಂಡಾಗ ಸಮಬಾಳ್ವೆಯ ಜೀವನ ಸಾಧ್ಯ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ರಾಮಚಂದ್ರ ಹೇಳಿದರು. ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ವತಿಯಿಂದ ದರ್ಬೆಯಲ್ಲಿ ‘ಯಾದ್ ಕರೋ ಕುರ್ಬಾನಿ’ ಕಾರ್ಯಕ್ರಮದಲ್ಲಿ ಫ್ರೀಡಂ ರನ್‍ಗೆ ಬಲೂನ್ ಹಾರಿಸುವ ಮೂಲಕ ಅವರು ಚಾಲನೆ ನೀಡಿದರು. ಬಳಿಕ ಬೊಳುವಾರುವರೆಗೆ ವಿದ್ಯಾರ್ಥಿಗಳಿಂದ ಫ್ರೀಡಂ ರನ್ ನಡೆಯಿತು. ಕಾರ್ಯಕ್ರಮವನ್ನು ಮಾಜಿ ಶಾಸಕ […]

ಐಟಿಐ ಆದವರು ಉನ್ನತ ಶಿಕ್ಷಣ ಪಡೆಯಲು ಸಮಾನಾಂತರ ಕೋರ್ಸ್‌: ರಾಜೀವ ಪ್ರತಾಪ್

Tuesday, August 16th, 2016
Rajiv-Pratap-Rudy

ಮಂಗಳೂರು: ಕೌಶಲ್ಯಾಭಿವೃದ್ಧಿ ತರಬೇತಿ (ಐಟಿಐ) ಪಡೆದ ಯುವಕರಿಗೆ ಉನ್ನತ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ಸಮಾನಾಂತರ ಪದವಿ ನೀಡುವ ನಿಯಮ ರೂಪಿಸಲಾಗುತ್ತಿದ್ದು, ಇದಕ್ಕಾಗಿ ವಾರದೊಳಗೆ ಮಾರ್ಗಸೂಚಿ ತಯಾರಾಗಲಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ರಾಜೀವ ಪ್ರತಾಪ್ ರೂಡಿ ತಿಳಿಸಿದ್ದಾರೆ. ಕೆನರಾ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗುವ ವಿದ್ಯಾರ್ಥಿಗಳು ಐಟಿಐ ತರಬೇತಿ ಪಡೆದ ನಂತರ ಅವರಿಗೆ ಶಿಕ್ಷಣ ಮುಂದುವರಿಸಲು ತೊಡಕುಂಟಾಗುತ್ತದೆ. ಈಗಾಗಲೇ ದೇಶದಲ್ಲಿ ಐಟಿಐ ಶಿಕ್ಷಣ […]

ಸಾಂಸ್ಕೃತಿಕ ವೈವಿಧ್ಯತೆ ದೇಶದ ಪ್ರಜಾತಂತ್ರದ ಶಕ್ತಿ : ಸಚಿವ ಇ.ಚಂದ್ರಶೇಖರನ್

Tuesday, August 16th, 2016
E Chandrashekharan

ಕಾಸರಗೋಡು: ಸ್ವಾತಂತ್ರ್ಯ ಲಭಿಸಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾದರಿಯಾಗಬಲ್ಲ ಸಾಧನೆಯನ್ನು ಸಾಧಿಸಿರುವ ಭಾರತ ಸಮಗ್ರ ಪ್ರಗತಿ ಸಾಧಿಸಲು ಒಗ್ಗಟ್ಟಿನ ಪ್ರಯತ್ನ ಅಗತ್ಯ. ಹಲವು ರಾಷ್ಟ್ರಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ ನೆಲಕಚ್ಚುತ್ತಿರುವಾಗ ನಮ್ಮ ದೇಶದಲ್ಲಿ ಪ್ರಜಾತಂತ್ರ ಬಲಿಷ್ಠಗೊಳ್ಳುತ್ತಿದೆ. ದೇಶದಲ್ಲಿ ಹಾಸುಹೊಕ್ಕಾಗಿರುವ ಸಾಂಸ್ಕೃತಿಕ ವೈವಿದ್ಯತೆ ಪ್ರಜಾತಂತ್ರಕ್ಕೆ ಬಲ ನೀಡುತ್ತದೆ ಅಲ್ಲದೆ ದೇಶಕ್ಕೆ ಶಕ್ತಿ ತುಂಬುತ್ತಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು. ರಾಷ್ಟ್ರದ 70 ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ವಿದ್ಯಾನಗರದ ಮುನ್ಸಿಪಲ್ ಸ್ಟೇಡಿಯಂನಲ್ಲಿ ಸೋಮವಾರ ಬೆಳಿಗ್ಗೆ ಆಯೋಜಿಸಿದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ […]

ಮೋದಿ ಹೆಸರಿದ್ದ ಅನುಮಾನಾಸ್ಪದ ಕಾರು ತಡೆದ ಸ್ಥಳೀಯರು

Saturday, August 13th, 2016
Modi-vichar-manch

ಮುಳ್ಳೇರಿಯ: ‘ನರೇಂದ್ರ ಮೋದಿ ವಿಚಾರ್ ಮಂಚ್’ ಎಂಬ ಬೋರ್ಡ್ ತೂಗಿಸಿ ಬಂದ ಕಾರನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ತಡೆದ ಘಟನೆ ಗುರುವಾರ ಮುಳ್ಳೇರಿಯಾದಲ್ಲಿ ನಡೆದಿದೆ. ಕಾಸರಗೋಡು ಆರ್‌ಟಿಒ ಕಛೇರಿ ಯಲ್ಲಿ ನೋಂದಾಯಿಸಲ್ಪಟ್ಟ ಕಾರಿನಲ್ಲಿ ನರೇಂದ್ರ ಮೋದಿ ವಿಚಾರ್ ಮಂಚ್, ಕೇರಳ ಸ್ಟೇಟ್ ಪ್ರೆಸಿಡೆಂಟ್ ‘ಯುವ’ ಎಂದು ಬೋರ್ಡ್ ತೂಗಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಈ ಕಾರು ಮುಳ್ಳೇರಿಯ ಪರಿಸರದಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕಾರನ್ನು ತಡೆದು ಹಿಡಿಯಲಾಯಿತು. ಕಾರಿನಲ್ಲಿದ್ದ ಚೆನ್ನೈ ನಿವಾಸಿ ರಾದಾ ಮುಹಮ್ಮದ್ ನನ್ನು […]