ಅಪಘಾತಕ್ಕೊಳಗಾದ ಮೃತನ ಅಂಗಾಂಗ ದಾನ ಮಾಡುವ ಮೂಲಕ ಹೃದಯವಂತಿಕೆ ಮೆರೆದ ಪೋಷಕರು

Wednesday, August 10th, 2016
Hardik raj Kottary

ಮಂಗಳೂರು: ಅಪಘಾತಕ್ಕೊಳಗಾಗಿ ಮೆದುಳು ನಿಷ್ಕ್ರಿಯವಾಗಿದ್ದ ಯುವಕನೋರ್ವನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮೃತನ ಪೋಷಕರು ಹೃದಯವಂತಿಕೆ ಮೆರೆದಿದ್ದಾರೆ. ನಗರದ ಹೊರವಲಯದ ಪಚ್ಚನಾಡಿಯ ನಿವಾಸಿ ಬಜರಂಗದಳದ ಸಕ್ರಿಯ ಕಾರ್ಯಕರ್ತ ಹಾರ್ದಿಕ್ ರಾಜ್ ಕೊಟ್ಟಾರಿ (24) ಕಳೆದ ಜುಲೈ 24ರಂದು ಪಚ್ಚನಾಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಯುವಕನನ್ನು ನಗರದ ಏ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಕೋಮಾಕ್ಕೆ ಜಾರಿದ್ದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಪೋಷಕರು ಅಂಗಾಂಗ ದಾನ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಅವರ […]

ಜಾಗತಿಕ ಸಮಸ್ಯೆಗಳಿಂದ ಹೊರಬರಲು ಭಾರತೀಯ ದರ್ಶನವೊಂದೇ ಪರಿಹಾರ: ನಗರೇಶ್ ನಾಯಕ್

Monday, August 8th, 2016
Deenthanana

ಕಾಸರಗೋಡು: ಆಧುನಿಕ ವ್ಯವಸ್ಥೆಗಳು ಸೌಕರ್ಯ ವೃದ್ದಿಗೊಳಿಸುತ್ತಿದ್ದರೂ ಸಾಮೂಹಿಕ ಸಮಸ್ಯೆಗಳು ಸುತ್ತಿಕೊಳ್ಳುತ್ತಿರುವುದು ಜಾಗತಿಕವಾಗಿ ಕಳವಳಕಾರಿಯಾಗಿದೆ.ಈ ಹಿನ್ನೆಲೆಯಲ್ಲಿ ಪ್ರಾಚೀನ ಭಾರತೀಯ ದರ್ಶನ ಎಲ್ಲಾ ಸಮಸ್ಯೆಗಳಿಗೂ ಏಕ ಪರಿಹಾರವಾಗಿ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುವುದೆಂದು ಕೇರಳದ ಕೇಂದ್ರ ಸರಕಾರಿ ಮುಖ್ಯ ಅಭಿಯೋಜಕ(ಸೋಲಿಸಿಟರಲ್ ಜನರಲ್)ನಗರೇಶ್ ನಾಯಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಕಾಸರಗೋಡಿನ ಸಾಹಿತ್ತಿಕ,ಸಾಂಸ್ಕೃತಿಕ ಸಂಘಟನೆಯಾದ ರಂಗಚಿನ್ನಾರಿ ಶನಿವಾರ ಮುಸ್ಸಂಜೆ ನಗರದ ನಗರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ “ಧೀಂತನನ” ನೃತ್ಯ ಗಾಯನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಗತ್ತಿನಲ್ಲಿ ತನ್ನದೇ ಧರ್ಮ ಸರ್ವಶ್ರೇಷ್ಠವೆಂದು ಭಾರತ […]

ಮಂಜೇಶ್ವರದ ಹಲವೆಡೆ ಸಂಭ್ರಮದ ನಾಗರ ಪಂಚಮಿ ಆಚರಣೆ

Monday, August 8th, 2016
Manjeshwara-Nagarapanchamy

ಕಾಸರಗೋಡು/ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಹಲವೆಡೆ ಭಾನುವಾರ ನಾಗರಪಂಚಮಿ ಆಚರಣೆಯ ಸಂಭ್ರಮ ಸಾವಿರಾರು ಜನರ ಪಾಲ್ಗೊಳ್ಳುವಿಕೆಯಲ್ಲಿ ನಡೆಯಿತು. ಬೆಳಗ್ಗಿನಿಂದಲೇ ವಿವಿಧ ನಾಗ ದೇವಾಲಯಗಳಲ್ಲಿ ಭಕ್ತರು ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದರು. ಹದಿನೆಂಟು ಪೇಟೆಗೊಳಪಟ್ಟ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನ, ಬಂಗ್ರ ಮಂಜೆಶ್ವರದ ಶ್ರೀ ಕಾಳಿಕಾ ಪರಮೆಶ್ವರಿ ದೇವಸ್ಥಾನ, ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನ, ಉಪ್ಪಳದ ಕೋಡಿಬೈಲು ತರವಾಡು ಮನೆ, ಕುಂಬಳೆಯ ಕಳತ್ತೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕಾಸರಗೋಡು ನಗರದ ಮಲ್ಲಿಕಾರ್ಜುನ ಕ್ಷೇತ್ರ ಮುಂಬಾಗವಿರುವ ನಾಗನ ಕಟ್ಟೆ, ರಾಜ್ಯ ಸಾರಿಗೆ […]

ಕುಂಬಳೆ ಬ್ಲಾಕ್ ಮಟ್ಟದ ಕಾಲ್ನಡೆ ಜಾಥಾ

Monday, August 8th, 2016
Kalnade-jaatha

ಪೆರ್ಲ: ಡಿವೈಎಫ್‌ಐ ವತಿಯಿಂದ ಕಾಸರಗೋಡಿನಲ್ಲಿ ಆ.15 ನಡೆಯುವ ಯುವ ಸಾಗರ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಕುಂಬಳೆ ಬ್ಲಾಕ್ ಮಟ್ಟದ ಕಾಲ್ನಡೆ ಜಾಥಾವನ್ನು ಪೆರ್ಲದಿಂದ ಪ್ರಾರಂಭಿಸಲಾಯಿತು. ಡಿವೈಎಫ್‌ಐ ಎಣ್ಮಕಜೆ ವಿಲೇಜ್ ಕಾರ್ಯದರ್ಶಿ ಮಣಿಕಂಠನ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷ ಶಿವ್‌ಜಿ ವೆಳ್ಳಿಕೋತ್ ಜಾಥಾ ನಾಯಕ ಕೆ.ಸಬೀರ್ ಅವರಿಗೆ ಪತಾಕೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಿವೈಎಫ್‌ಐ ಬ್ಲಾಕ್ ಕಾರ್ಯದರ್ಶಿ ನಾಸಿರುದ್ದೀನ್, ಸಿ.ಎ.ಸುಬೈರ್, ವಿಠಲ ರೈ, ಅವಿನಾಶ್ ಸಿ.ಎಚ್, ಮಂಜುನಾಥ ಪಿ.ಕೆ, ಸಚಿತಾ ರೈ, ವಿನೋದ್ ಪೆರ್ಲ ಮೊದಲಾದವರು ಉಪಸ್ಥಿತರಿದ್ದರು.

ಕುಳಮರ್ವರ ಕವನಕ್ಕೆ ರಾಜ್ಯ ಪ್ರಶಸ್ತಿ

Monday, August 8th, 2016
V-B-Kulamarva

ಕುಂಬಳೆ: ಹಿರಿಯ ಜಾನಪದ ವಿದ್ವಾಂಸ ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ ಮತ್ತು ಕನ್ನಂಬಾಡಿ ದಿನಪತ್ರಿಕೆ ಮಂಡ್ಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ ಏರ್ಪಡಿಸಿದ ರಾಜ್ಯಮಟ್ಟದ ಕವಿಕಾವ್ಯ ಮೇಳದಲ್ಲಿ ಕಾಸರಗೋಡಿನ ಖ್ಯಾತ ಕವಿ ಹಾಗೂ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವ ಅವರ “ಸೇವೆಯ ಹಿರಿಮೆ” ಎಂಬ ದೇಶಭಕ್ತಿ ಗೀತೆಗೆ ರಾಜ್ಯಮಟ್ಟದ ’ಕಾವ್ಯಶ್ರೀ’ ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಯಿತು. ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಲಕ್ಷ ಸಂಖ್ಯೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ಸಂಪೂರ್ಣ […]

ಸೈಂಟ್ ಲಾರೆನ್ಸ್ ಚಾಪೆಲ್ ವಾರ್ಷಿಕೋತ್ಸವ

Monday, August 8th, 2016
Saint-Larence-Chapel

ಕುಂಬಳೆ:ಚೇವಾರು ಸಮೀಪದ ಪೆರ್ಮುದೆ ಸೈಂಟ್‌ಲಾರೆನ್ಸ್ ಚಾಪೆಲ್‌ನ ವಾರ್ಷಿಕೋತ್ಸವ ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಖಾರ್ ಜನರಲ್ ಪೊನ್ಸಿಗ್ನೋರ್ ಫಾ.ಡೆನ್ನಿಸ್ ಮೊರಸ್ ಪ್ರಭು ದಿವ್ಯ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಕಯ್ಯಾರು ಕ್ರಿಸ್ತರಾದ ದೇವಾಲಯದ ಧರ್ಮಗುರು ಫಾ.ವಿಕ್ಟರ್ ಡಿ’ಸೋಜ ಉಪಸ್ಥಿತರಿದ್ದರು. ಮಂಗಳೂರು ಧರ್ಮವಲಯದಲ್ಲಿ ಸೈಂಟ್ ಜೋನ್ ಮರಿಯ ವಿಯಾನ್ನಿಯವರ ಹಬ್ಬವನ್ನು ಯಾಜಕರ ದಿನವನ್ನಾಗಿ ಆಚರಿಸುತ್ತಿದ್ದು, ದಿವ್ಯ ಬಲಿ ಪೂಜೆಯಲ್ಲಿ ಯಾಜಕರಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು. ದಿವ್ಯ ಬಲಿ ಪೂಜೆಯ ಬಳಿಕ ಸೈಂಟ್ ಲಾರೆನ್ಸ್ ಚಾಪೆಲ್‌ನ […]

ಕೆಲಸ ಮಾಡಲು ಹುದ್ದೆ ಮುಖ್ಯವಲ್ಲ, ಕೆಲಸದಲ್ಲಿ ಯಶಸ್ಸು ಗಳಿಸುವುದು ಮುಖ್ಯ: ಡಿ.ವೈ.ಎಸ್.ಪಿ. ರವೀಶ್

Monday, August 8th, 2016
DySP-Raveesh

ಬಂಟ್ವಾಳ: ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಪೋಲೀಸರು ತಮ್ಮ ಮನಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಕುಟುಂಬದವರೊಂದಿಗೂ ಬೆರೆಯುವ ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ಬಂಟ್ವಾಳ ಡಿ.ವೈ.ಎಸ್.ಪಿ. ರವೀಶ್ ಹೇಳಿದರು. ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ಮಾಡಿ ವಿವಿಧ ಠಾಣೆಗಳಿಗೆ ಮುಂಬಡ್ತಿಗೊಂಡು ವರ್ಗಾವಣೆಯಾದ ಸಿಬ್ಬಂದಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಲಾಖೆಯಲ್ಲಿ ಸಮಯ ಮತ್ತು ಅವಕಾಶಗಳು ಎಂದು ಕೇಳಿಕೊಂಡು ಬರುವುದಿಲ್ಲ, ಅವಕಾಶಗಳು ಸಿಕ್ಕಾಗ ಅದನ್ನು ಜಾಣ್ಮೆಯಿಂದ ಉಪಯೋಗಿಕೊಳ್ಳುವುದೇ ನಮ್ಮ ಕರ್ತವ್ಯ ಎಂದು ಹೇಳಿದರು. ಕೆಲಸ ಮಾಡಲು […]

ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರ ಬಂಧನ

Monday, August 8th, 2016
Tamil-Womans arrest

ಮಂಗಳೂರು: ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಹಿಳೆಯರಿಬ್ಬರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿ, 2.64 ಲಕ್ಷ ಮೌಲ್ಯದ 80 ಗ್ರಾಂ ತೂಕದ ಚಿನ್ನಾಭರಣ ಮತ್ತು 1,45,000 ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಮಹಿಳೆಯರನ್ನು ತಮಿಳನಾಡಿನ ಮೆಟ್ಟು ಪಾಳಯಮ್‌ನ ಸಿಲ್ವಿ (24), ಅರೈ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಸುಲಿಗೆ ಮಾಡಿದ ಚಿನ್ನಾಭರಗಳನ್ನು ಮಾರಲು ಬಂದಿರುವ ಬಗ್ಗೆ ಖಚಿತಿ ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸ್ ನಿರೀಕ್ಷಕ ಬೆಳ್ಳಿಯಪ್ಪ ಕೆ.ಯು. ಮತ್ತು ಸಿಬ್ಬಂದಿ ನಗರದ ರೂಪವಾಣಿ ಚಿತ್ರಮಂದಿರದ ಬಳಿ ಬಂಧಿಸಿದ್ದಾರೆ. ಬಸ್‌ನಲ್ಲಿ […]

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ನಿಧನ

Monday, August 8th, 2016
Bola-Chittaranjan-Das-Shetty

ಮಂಗಳೂರು: ಖ್ಯಾತ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ (72) ಹೃದಯಾಘಾತದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ. ಅವರ ಹಠಾತ್ ನಿಧನ ಆತ್ಮೀಯ ಬಳಗಕ್ಕೆ ಆಘಾತವುಂಟು ಮಾಡಿದೆ. ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ಜನಿಸಿದ ಚಿತ್ತರಂಜನ್ ದಾಸ್ ಶೆಟ್ಟಿ 1973ರಲ್ಲಿ ‘ಪೊಣ್ಣು ಮಣ್ಣು ಬೊಂಬೆ’ ಎಂಬ ತುಳು ನಾಟಕ ರಚಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆ ಮುಡಿಸಿದ್ದರು. 1983ರಲ್ಲಿ ತುಳುನಾಡಿನ ವಿಶಿಷ್ಟ ಕ್ರೀಡೆ ‘ಕಂಬುಲ’ದ ಕುರಿತು ಪ್ರಬಂಧವನ್ನು ರಚಿಸುವ ಮೂಲಕ […]

ಕರಾವಳಿ ಜಿಲ್ಲೆಯ ವಿವಿದೆಡೆಯಲ್ಲಿ ನಾಗರ ಪಂಚಮಿ ಹಬ್ಬ

Monday, August 8th, 2016
Kudupu temple

ಮಂಗಳೂರು: ತುಳುವರ ಆಟಿ ಅಮಾವಾಸ್ಯೆ ಕಳೆದು ಬರುವುದೇ ನಾಗರ ಪಂಚಮಿ ಹಬ್ಬ. ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಬರುವ ಈ ಹಬ್ಬ, ಕೆಲವೊಮ್ಮೆ ಸೋನೆ ತಿಂಗಳಿನಲ್ಲಿ ಬರುವುದೂ ಇದೆ. ಅದೆನೇ ಆದರೂ ಆ ಬಳಿಕ ಬರುವ ಹಬ್ಬಗಳು ಸಾಲು ಸಾಲಾಗಿ ನಾಡಿಗೆ ಸಂಭ್ರಮ ತರಲಿವೆ. ಕರಾವಳಿ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶಿಷ್ಟವಾದ ಸ್ಥಾನವಿದೆ. ನಾಗ ಪಂಚಮಿ ನಾಗಾರಾಧನೆಗೆ ಸಂಬಂಧಿಸಿದ ವಿಶಿಷ್ಟ ದಿನದಂದು ತುಳು ನಾಡಿನ ಉದ್ದಗಲಕ್ಕೂ ಎಲ್ಲಾ ಜಾತಿ-ಜನಾಂಗದವರೂ ನಾಗನಿಗೆ ಹಾಲೆರೆಯುತ್ತಾರೆ. ತುಳುನಾಡಿನ ಅಲ್ಲಲ್ಲಿ ನಾಗಂಡಗಳಿವೆ. ಅಂದರೆ ಇದರ ಅರ್ಥ […]