ಹಿಂದೂ ಸಮಾಜೋತ್ಸವದ ಕಾರ್ಯಲಯ ಉದ್ಘಾಟನೆ

Tuesday, December 14th, 2010
ಹಿಂದೂ ಸಮಾಜೋತ್ಸವದ ಕಾರ್ಯಲಯ

ಮಂಗಳೂರು: ಜನವರಿ 2 ರಂದು ಹನುಮತ್ ಶಕ್ತಿ ಜಾಗರಣಾ ಸಮಿತಿ ಮಂಗಳೂರು ಇದರ ವತಿಯಿಂದ ಮಂಗಳೂರಿನ ನೆಹರೂ ಮೈದಾನಿನಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದ ಕಾರ್ಯಾಲಯವನ್ನು ಇಂದು ಬೆಳಿಗ್ಗೆ ನಗರದ ಬಂಟ್ಸ್ ಹಾಸ್ಟೆಲ್ ಸಮೀಪ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಉದ್ಘಾಟಿಸಿದರು. ಹಿಂದೂಗಳು ಎಚ್ಚೆತ್ತುಕೊಂಡಲ್ಲಿ ಸಮಾಜದ ಅಭಿವೃದ್ಧಿಸಾಧ್ಯ, ಭಾರತದ ಪ್ರತಿಯೊಬ್ಬ ಪ್ರಜೆಯೂ ಹಿಂದುತ್ವವನ್ನು ಗೌರವಿಸಬೇಕು ಹಿಂದೂ ಸಮಾಜೋತ್ಸವಗಳು ಪರರಿಗೆ ಮಾರ್ಗದರ್ಶನವಾಗುವಂತೆ ಕಾರ್ಯಕರ್ತರು ಶ್ರಮವಹಿಸಬೇಕಿದೆ ಎಂದು ಡಾ. ಪ್ರಭಾಕರ ಭಟ್ ಕಲ್ಲಡ್ಕ ತನ್ನ ಉದ್ಘಾಟನಾ ಭಾಷಣದಲ್ಲಿ ಹೇಳಿದರು. ಕೊಲ್ಯ […]

ಬಿಎಸ್ಎನ್ಎಲ್ ಪ್ರಧಾನ ಕಛೇರಿ ಎದುರು ಸಿಐಟಿಯು ವತಿಯಿಂದ ದರಣಿ

Tuesday, December 14th, 2010
ಬಿಎಸ್ಎನ್ಎಲ್ ಪ್ರಧಾನ ಕಛೇರಿ ಎದುರು ಸಿಐಟಿಯು ವತಿಯಿಂದ ದರಣಿ

ಮಂಗಳೂರು; ಬಿಎಸ್ಎನ್ಎಲ್ ದಿನಕೂಲಿ ಕಾರ್ಮಿಕರ ಕೆಲಸದ ಭದ್ರತೆಗಾಗಿ ಸಿಐಟಿಯು ವತಿಯಿಂದ ಒಂದು ದಿನದ ಧರಣಿ ಸತ್ಯಾಗ್ರಹವು ಇಂದು ಬೆಳಿಗ್ಗೆ ನಗರದ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಮುಂದುಗಡೆ ನಡೆಯಿತು. ಕೇಂದ್ರ ಸರಕಾರದ ಅಧೀನತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಸ್ಎನ್ಎಲ್ ಪ್ರಧಾನ ಕಛೇರಿ ಹಾಗೂ ಎಲ್ಲಾ ಎಕ್ಸ್ಚೇಂಚ್ ಕೇಂದ್ರಗಳಲ್ಲಿ ದಿನಕೂಲಿ ಕಾರ್ಮಿಕರಿಗಾಗಿ ಗುತ್ತಿಗೆದಾರರ ಅಡಿಯಲ್ಲಿ ಕಳೆದ 12 ವರ್ಷಗಳಿಂದ ವೇತನ ಹೊರತು ಪಡಿಸಿ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿದ್ದಾರೆ. ಕೆಲಸದ ಒತ್ತಡಗಳ ಮಧ್ಯೆ ಗ್ರಾಹಕರಿಗೆ ಅನುಕೂಲವಾಗುವಂತೆ ಸದಾ ದುಡಿಯುತ್ತಿರುವ ಈ ಕಾರ್ಮಿಕರಿಗೆ ಕೆಲಸದ ಭದ್ರತೆಯಿಲ್ಲ […]

ಶ್ರೀವಿಶ್ವೇಶತೀರ್ಥ ಶ್ರೀಪಾದರ ಅಭಿವಂದನಾ ಸಮಾವೇಶದಲ್ಲಿ ವಿಶ್ವ ಶಾಂತಿಯ ಸಂದೇಶ

Saturday, December 11th, 2010
ಸಂತ ಸಮಾವೇಶ

ಉಡುಪಿ : ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ 80 ವರ್ಷದ ಅಭಿವಂದನಾ ಸಂತ ಸಮಾವೇಶ ವನ್ನು ಶುಕ್ರವಾರ ಸಂಜೆ  ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು  ಅವರು ಕಾಂಚಿ ಶಂಕರಾಚಾರ್ಯರ ಮೇಲೆ ಕೊಲೆ ಆರೋಪ, ಆರೆಸ್ಸೆಸ್‌-ವಿ.ಹಿಂ.ಪಂ., ನಾಯಕರಿಗೆ ಹಿಂದು ಉಗ್ರಗಾಮಿ ಗಳೆಂಬ ಹಣೆಪಟ್ಟಿ ಕಟ್ಟಿರುವುದು, ಉಗ್ರಗಾಮಿಗಳನ್ನು ರಕ್ಷಿಸಲು, ನ್ಪೋಟ ನಡೆದಾಗ ಹಿಂದು ಉಗ್ರ ಗಾಮಿಗಳಿಂದ ನಡೆಯಿತೆಂಬ ಪುಕಾರು ಹುಟ್ಟಿಸುವುದೇ ಮೊದಲಾದ ಯತ್ನಗಳು ವ್ಯವಸ್ಥಿತ ವಾಗಿ ನಡೆಯುತ್ತಿದೆ. ಅಯೋಧ್ಯೆ, ತಿರುಪತಿಯಂತಹ […]

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಇಲ್ಲ: ದೇವೇಗೌಡ

Friday, December 10th, 2010
ದೇವೇಗೌಡ

ಬೆಂಗಳೂರು  : ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ  ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ತಿಳಿಸಿದ್ದಾರೆ. ಕಾಂಗ್ರೆಸ್ ಜತೆಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದ್ದು ಎಲ್ಲಾ ಜಿಲ್ಲೆಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ ಎಂದು ದೇವೇಗೌಡ ತಿಳಿಸಿದ್ದಾರೆ. ರಾಜಕೀಯ ಪಕ್ಷವಾಗಿ ನೇರವಾಗಿ ಜನರ ಮುಂದೆ ಹೋಗುತ್ತೇವೆ. ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಜಾತ್ಯತೀತ ಮತ ವಿಭಜನೆಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವಿದೆ ಎಂದು ಪತ್ರಕರ್ತರಿಗೆ ತಿಳಿಸಿದರು. ಅಭಿವೃದ್ಧಿಯೇ ಮೂಲಮಂತ್ರ ಎಂದ ಬಿಜೆಪಿ […]

ವಿಶ್ವೇಶ್ವರ ಭಟ್ ವಿಜಯ ಕರ್ನಾಟಕಕ್ಕೆ ರಾಜೀನಾಮೆ

Wednesday, December 8th, 2010
ವಿಶ್ವೇಶ್ವರ ಭಟ್

ಬೆಂಗಳೂರು  : ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಬುಧವಾರ ಮಧ್ಯಾಹ್ನ ಅವರು ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಆಡಳಿತ ವರ್ಗಕ್ಕೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದು, ರಾಜೀನಾಮೆ ಅಂಗೀಕೃತವಾಗಿದೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ. ಕಳೆದ ಹತ್ತು ವರ್ಷಗಳಿಂದ ಸಂಪಾದಕರಾಗಿ ಪತ್ರಿಕೆಯ ಚುಕ್ಕಾಣಿ ಹಿಡಿದು ವಿಜಯ ಕರ್ನಾಟಕವನ್ನು ಮುನ್ನಡೆಸಿದ್ದ ಭಟ್ಟರ ರಾಜೀನಾಮೆ ನಿರ್ಧಾರ ಪತ್ರಿಕೆಯ ಅಸಂಖ್ಯಾತ ಓದುಗರನ್ನು ಮತ್ತು ಅವರ ಅಭಿಮಾನಿ ವರ್ಗವನ್ನು ಬೆಚ್ಚಿಬೀಳಿಸಿದೆ. ಅಲ್ಲದೆ, ಸಮರ್ಥವಾದ […]

ಡಿ.9 ಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಂಗಳೂರಿಗೆ, ಬಿಗು ಬಂದೋಬಸ್ತ್, ನಗರದಲ್ಲಿ ವಾಹನ ಸಂಚಾರ ನಿಷೇಧ

Tuesday, December 7th, 2010
ಡಿ.9 ಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮಂಗಳೂರಿಗೆ

ಮಂಗಳೂರು : ನೆಹರೂ ಮೈದಾನದಲ್ಲಿ ಡಿಸೆಂಬರ್ 9 ರಂದು ನಡೆಯುವ ವಿಶ್ವಕೊಂಕಣಿ ಏಕತಾ ದಿವಸ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾಗವಹಿಸಲಿದ್ದಾರೆ. ಅಂದು ಅವರು 11.30 ಗಂಟೆಗೆ ಬಜಪೆ ವಿಮಾಣ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 8 ರಂದು ಉಡುಪಿಯ ಮಣಿಪಾಲ್ ಯುನಿವರ್ಸಿಟಿಯ ಪದವಿ ಪ್ರಧಾನ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದು ಅಂದು ಸಂಜೆ 3.50ಕ್ಕೆ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬಜ್ಪೆಗೆ ತೆರಳಲಿದ್ದಾರೆಂದು ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಘ್ ಇಂದು ಅವರ ಕಛೇರಿಯಲ್ಲಿ […]

ಜಿಲ್ಲೆಯ ಎಲ್ಲ ಕಲ್ಲುಕೋರೆಯ ಕಾರ್ಮಿಕರ ಬಗ್ಗೆ ವರದಿ ನೀಡಲು ಏಳು ದಿನಗಳ ಕಾಲಮಿತಿ

Sunday, December 5th, 2010
ಜಿಲ್ಲಾಧಿಕಾರಿ ಸುಬೋಧ್ ಯಾದವ್

ಮಂಗಳೂರು :  ಕಾರ್ಮಿಕ ಇಲಾಖೆ ಕಂದಾಯ ಮತ್ತು ಗಣಿವಿಜ್ಞಾನ ಇಲಾಖೆಯ ಸಹಕಾರದಿಂದ ಜಿಲ್ಲೆಯ ಎಲ್ಲ ಕಲ್ಲುಕೋರೆಯಲ್ಲಿರುವ ಕಾರ್ಮಿಕ ವ್ಯವಸ್ಥೆಯ ಬಗ್ಗೆ ಏಳುದಿನಗಳೊಳಗೆ ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀ ಅಪ್ಪಯ್ಯ ಶಿಂಧಿಹಟ್ಟಿ ಅವರಿಗೆ ಸೂಚನೆ ನೀಡಿದರು. ಅಧಿಕಾರಿಗಳು ಮಾನವಹಕ್ಕು ಆಯೋಗದ ನಿರ್ದೇಶನದಂತೆ ಜೀತಪದ್ಧತಿ ಹಾಗೂ ಬಾಲಕಾರ್ಮಿಕ ವ್ಯವಸ್ಥೆಯ ನಿರ್ಮೂಲನಕ್ಕೆ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದರೆ ವಿಟ್ಲದಲ್ಲಿ ವರದಿಯಾದ ಜೀತಪದ್ಧತಿಗೆ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಇಳಿಕೆ-ಸುಭೋದ್ ಯಾದವ್

Saturday, December 4th, 2010
ಶಿಶು ಮರಣ ಪ್ರಕರಣ ಪರಿಶೀಲನಾ ಪದ್ಧತಿ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮರ್ಪಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನದಿಂದಾಗಿ ಒಂದು ಸಾವಿರ ಶಿಶುಗಳ ಜನನದಲ್ಲಿ ಶಿಶು ಮರಣ ಪ್ರಮಾಣ 10-11 ಕ್ಕೆ ಇಳಿದಿದೆಯೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ತಿಳಿಸಿದ್ದಾರೆ. ಅವರು ಇಂದು ನಗರದ ವೆನ್ ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುನಿಸೆಫ್ ವತಿಯಿಂದ ಆಯೋಜಿಸಿದ್ದ ಶಿಶು ಮರಣ ಪ್ರಕರಣ ಪರಿಶೀಲನಾ ಪದ್ಧತಿ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ದಕ್ಷಿಣಕನ್ನಡ ಜಿಲ್ಲೆ […]

ಸಶಕ್ತ ಕಾರ್ಯನಿರ್ವಹಣೆಗೆ ಸಂಪನ್ಮೂಲ ಕ್ರೋಢೀಕರಣ ಅಗತ್ಯ: ಎ ಜೆ ಕೂಡ್ಗಿ

Friday, December 3rd, 2010
ಎ ಜೆ ಕೂಡ್ಗಿ

ಮಂಗಳೂರು  : ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳು ಸ್ವತಂತ್ರವಾಗಿ ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಬೇಕೆಂದು 3ನೇ ರಾಜ್ಯ ಹಣಕಾಸು ಆಯೋಗ ಶಿಫಾರಸ್ಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷರಾದ ಶ್ರೀ ಎ.ಜೆ. ಕೂಡ್ಗಿ ಅವರು ತಿಳಿಸಿದ್ದಾರೆ. ಅವರಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಾ, 3ನೇ ಹಣಕಾಸು ಆಯೋಗ ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಶಿಫಾರಸ್ಸು ಮಾಡಿರುವುದಾಗಿ ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಥೇಚ್ಛವಾಗಿ ಹಣದ ನೆರವು […]

ಅಂಗವಿಕಲರಲ್ಲೂ ವಿಶೇಷ ಪ್ರತಿಭೆ ಇದೆ: ಪಾಲೆಮಾರ್

Friday, December 3rd, 2010
ಜೆ. ಕೃಷ್ಣ ಪಾಲೆಮಾರ್

ಮಂಗಳೂರು: ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯತ್ ಮಂಡಳಿ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು, ಅಂಗವಿಕಲರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ, ಅಂಗವಿಕಲರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ದ.ಕ ಹಾಗೂ ಲಯನ್ಸ್ ಕ್ಲಬ್ ಮಂಗಳೂರು, ಗಾಂಧಿನಗರ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ 2010′ ಕಾರ್ಯಕ್ರಮವನ್ನು ಇಂದು, ಬೆಳಿಗ್ಗೆ ನಗರದ ಪುರಭವನದಲ್ಲಿ ಆಚರಿಸಲಾಯಿತು. ಸಮಾರಂಭದ ಉದ್ಘಾಟನೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. […]