ಕೋಮುಗಲಭೆ ಪ್ರಕರಣ ಆರೋಪಿಗಳ ಕೇಸು ಹಿಂತೆಗೆತ, ಹಿಂದೂ ಸಂಘಟನೆಗಳ ಕಿಡಿ

Thursday, June 4th, 2015
Bantwal Tahsildar

ಬಂಟ್ವಾಳ : ಕರ್ನಾಟಕ ರಾಜ್ಯ ಸರ್ವ ಜನಾಂಗದ ನೆಲೆವೀಡು, ಇಲ್ಲಿ ಶಾಂತಿಪ್ರಿಯರು ಸ್ವಚ್ಚಂದದ ಬದುಕು ಸವೆಸಲು ಯೋಚಿಸುವುದು ಇನ್ನು ದುಸ್ತರವೇ ಸರಿ. ಅಶಾಂತಿ, ಅನಾಚಾರ, ಅನೈತಿಕತೆ, ಭಯೋತ್ಪಾಧನಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರಸ್ತುತ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ಸರಕಾರ ಮಾಡುತ್ತಿದೆ. ಒಂದು ಕೋಮಿನ ಜನರ ಓಲೈಕೆಗಾಗಿ ವ್ಯಾಪ್ತಿ ಮೀರಿ ವರ್ತಿಸುತ್ತಿರುವುದು ಈ ರಾಜ್ಯಕ್ಕೆ ಶಾಪವಲ್ಲವೇ? ಅಪರಾಧಿಗೆ ಶಿಕ್ಷೆಯಾಗದೆ ಕಾನೂನಿಗೆ ತಿದ್ದುಪಡಿ ತಂದು ಆತನ ಪರ ಸರಕಾರ ನಿಂತರೆ ಮುಂದೆ ಏನಾಗಬಹುದು ಊಹಿಸಲು ಸಾಧ್ಯವೇ? 2009ರಲ್ಲು […]

ಮಂಗಳೂರು ತಾ: ಗ್ರಾ.ಪಂ. ಮತ ಎಣಿಕೆಗೆ ಸಿದ್ಧತೆ

Wednesday, June 3rd, 2015
Gp election Counting

ಮಂಗಳೂರು : ಮಂಗಳೂರು ತಾಲೂಕಿನ 55 ಗ್ರಾಮ ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಜೂನ್ 5ರಂದು ನಗರದ ಪಾದುವಾ ಹೈಸ್ಕೂಲ್, ನಂತೂರು ಇಲ್ಲಿ ನಡೆಯಲಿದ್ದು, ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗಿದೆ ಮಂಗಳೂರು ತಾಲೂಕು ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ. ಬೆಳಿಗ್ಗೆ 8ಗಂಟೆಗೆ ಪ್ರಥಮ ಸುತ್ತಿನ ಮತ ಎಣಿಕೆಯಲ್ಲಿ 113 ಕ್ಷೇತ್ರಗಳು(838 ಅಭ್ಯರ್ಥಿಗಳು), 10ಗಂಟೆಗೆ 2ನೇ ಸುತ್ತಿನ ಮತ ಎಣಿಕೆಯಲ್ಲಿ 112 ಕ್ಷೇತ್ರಗಳು(781 ಅಭ್ಯರ್ಥಿಗಳು), 12ಗಂಟೆಗೆ 3ನೇ ಸುತ್ತಿನ ಮತ ಎಣಿಕೆಯಲ್ಲಿ 80 ಕ್ಷೇತ್ರಗಳು(568 ಅಭ್ಯರ್ಥಿಗಳು)ಹಾಗೂ 2ಗಂಟೆಗೆ […]

ನಿವೃತ್ತ ಡಿವೈಎಸ್ಪಿ ಬಿ.ಜೆ. ಭಂಡಾರಿ ನಿಧನ

Wednesday, June 3rd, 2015
BJ Bhandary

ಮಂಗಳೂರು : ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಡಿವೈಎಸ್ಪಿ ಬಿ.ಜೆ. ಭಂಡಾರಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ ನಿವಾಸಿಯಾದ ಭಂಡಾರಿ ಉತ್ತಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಪದಕ ಹಾಗೂ 2 ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿದ್ದರು. ಸೋಮವಾರ ಮಧ್ಯಾಹ್ನ ಅವರು ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಬಳಿ ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರು ಸಂಬಂಧಿಕರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿದ್ದರು. ಸೋಮವಾರ ಮಧ್ಯಾಹ್ನ […]

ಭಾಗ್ಯಶ್ರೀ ಸಾವು : ಮನನೊಂದ ತಂದೆ ಆತ್ಮಹತ್ಯೆಗೆ ಶರಣು

Tuesday, June 2nd, 2015
Ramanna Naik Bhagyashree

ವೇಣೂರು : ಮಗಳ ಸಾವಿನಿಂದ ಮನನೊಂದ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಹೊಸಮನೆ ರಾಮಣ್ಣ ಸಾಲ್ಯಾನ್‌ (48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರು ಮರಣೋತ್ತರ ವರದಿ ಬರುವ ಮೊದಲೇ ಭಾಗ್ಯಶ್ರೀ ಸಾವು ಆತ್ಮಹತ್ಯೆಯಿಂದ ಎಂದು ಬರೆದು ಪ್ರಕರಣ ಮುಗಿಸಲು ರುಜು ಹಾಕಿದ ಹಿನ್ನೆಲೆಯಲ್ಲಿ ಮನನೊಂದು ರಾಮಣ್ಣ ಸಾಲ್ಯಾನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ನಾಗರಿಕರು ದೂರುತ್ತಿದ್ದಾರೆ. ರಾಮಣ್ಣ ಸಾಲ್ಯಾನ್‌ ಪತ್ನಿ ಶಶಿಕಲಾ ಅವರು ರವಿವಾರ ಸಂಜೆ ಕುಟುಂಬದ ದೆ„ವದ ಕಾರ್ಯ ಹಾಗೂ ಮಗಳ ಸಾವಿನ ಸದ್ಗತಿಗೋಸ್ಕರ 16 ಅಗೆಲು ಬಡಿಸುವ […]

ಜೀ ಕನ್ನಡದ ಹೊಸ ಧಾರಾವಾಹಿ ‘ಗೃಹಲಕ್ಷ್ಮಿ’

Tuesday, June 2nd, 2015
Gruhalaxmi serial

ಮಂಗಳೂರು : ಜೀ ಕನ್ನಡ ವಾಹಿನಿಯನ್ನು ಕನ್ನಡ ಕಿರುತೆರೆಯಲ್ಲಿ ವಿಭಿನ್ನವಾಗಿಸುವ ಪ್ರಯತ್ನ ನಮ್ಮದಾಗಿದ್ದು ಈ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದೇವೆ. ಈ ಹೊಸ ಅಲೆಯಲ್ಲಿ ಪ್ರಾರಂಭವಾದ ‘ಶ್ರೀರಸ್ತು ಶುಭಮಸ್ತು’, ‘ಜೊತೆಜೊತೆಯಲಿ’, ಶುಭವಿವಾಹ, ‘ಲವ್‌ಲವಿಕೆ’, Mr. & Mrs ರಂಗೇಗೌಡ’ ಮತ್ತು ‘ಒಂದೂರ್‍ನಲ್ಲಿ ರಾಜರಾಣಿ’ ಧಾರಾವಾಹಿಗಳಿಗೆ ನಮ್ಮ ನಿರೀಕ್ಷೆಯನ್ನೂ ಮೀರಿದ ಮೆಚ್ಚುಗೆ ವ್ಯಕ್ತವಾಗಿದೆ. ಈಗ ಇದೇ ಜೂನ್ 8 ರಿಂದ ಸಂಜೆ 6:30 ಕ್ಕೆ ‘ಗೃಹಲಕ್ಷ್ಮಿ’ ಹೆಸರಿನ ಮತ್ತೊಂದು ಧಾರಾವಾಹಿಯನ್ನು ಪ್ರಿಯ ವೀಕ್ಷಕರ ಮುಂದಿಡುತ್ತಿದ್ದೇವೆ. ‘ಗೃಹಲಕ್ಷ್ಮಿ’-ಇದು ತುಂಬ […]

ರುಡ್‌ಸೆಟ್ ನೇಷನಲ್ ಎಕಾಡಮಿಯ ತರಬೇತುದಾರರ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ

Thursday, May 28th, 2015
Rudshed

ಧರ್ಮಸ್ಥಳ : ಬೆಂಗಳೂರಿನಲ್ಲಿರುವ ರುಡ್‌ಸೆಟ್ ನೇಷನಲ್ ಎಕಾಡಮಿ ಅಯೋಜಿಸಿದ್ದ ೬೮ನೇ ತಂಡದ ತರಬೇತುದಾರರ ತರಬೇತಿ ಕಾರ‍್ಯಕ್ರಮದ ಸಮಾರೋಪ ಸಮಾರಂಭವು ಧಮಸ್ಥಳದಲ್ಲಿ ನೆರವೇರಿತು. ಈ ಕಾರ‍್ಯಕ್ರಮದಲ್ಲಿ ರುಡ್‌ಸೆಟ್ ನೇಷನಲ್ ಎಕಾಡಮಿ ಯ ಅಧ್ಯಕ್ಷರು ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರೂ ಆದ ಪದ್ಮವಿಭೂಣ ಡಾ. ಡಿ, ವೀರೇಂದ್ರ ಹೆಗ್ಗಡೆಯವರು ಪ್ರಮಾಣ ಪತ್ರಗಳನ್ನು ವಿತರಿಸಿ ಆರ್ಶೀವಚನ ನೀಡುತ್ತಾ ರುಡ್‌ಸೆಟ್ ಸಂಸ್ಥೆಯ ಹುಟ್ಟು ಮತ್ತು ಅದರ ಬೆಳವಣಿಗೆಯ ಜೊತೆಗೆ ಕೇಂದ್ರ ಸರಕಾರ ರುಡ್‌ಸೆಟ್ ಸಂಸ್ಥೆಯನ್ನು ಅನುಕರಣೀಯ ಮಾದರಿ ಎಂದು ಗುರುತಿಸಿ ಇಂದು ಬ್ಯಾಂಕುಗಳ […]

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಸ್ಮರಣೆ

Wednesday, May 27th, 2015
Nehru-Death-Anniversary

ಮಂಗಳೂರು : ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯತಿಥಿಯನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಆಚರಿಸಲಾಯಿತು. ನೆಹರೂರವರ ಭಾವಚಿತ್ರಕ್ಕೆ ಪುಷ್ಪಾಂಜನೆಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಶ್ರೀ ಇಬ್ರಾಹಿಂ ಕೊಡಿಜಾಲ್‌ರವರು, ದಿ| ನೆಹರೂರವರು ವಿಶ್ವದ ಶಾಂತಿದೂತರಾಗಿದ್ದರು. ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನಿಯಾಗಿ ದೇಶದಲ್ಲಿ ಆರ್ಥಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಅಡಿಪಾಯ ಹಾಕಿಕೊಟ್ಟಿದ್ದರು. ಅವರ ಅಧಿಕಾರ ಅವಧಿಯಲ್ಲಿ ಪಂಚವಾರ್ಷಿಕ ಯೋಜನೆಗಳು ಜಾರಿಗೆಗೊಂಡು ದೇಶದಲ್ಲಿ ಅನೇಕ ಅಣೆಕಟ್ಟುಗಳನ್ನು […]

ಜಿಲ್ಲೆಯಲ್ಲಿ ಒಟ್ಟು 1212 ಮತಗಟ್ಟೆಗಳು-183 ಅತೀ ಸೂಕ್ಷ್ಮ -ಎ.ಬಿ.ಇಬ್ರಾಹಿಂ

Saturday, May 23rd, 2015
GP election

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 29ರಂದು ಒಟ್ಟು 1212 ಮತಗಟ್ಟೆಗಳಲ್ಲಿ 227ಗ್ರಾಮ ಪಂಚಾತ್ ಗಳ ಒಟ್ಟು 3399 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, 378 ಸೂಕ್ಷ್ಮ, 183 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗು 54 ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳು ಇವೆ. ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮುಕ್ತ ಹಾಗೂ ನಿಷ್ಪಕ್ಷಪಾತ ಮತದಾನಕ್ಕೆ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ. ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ಚುನಾವಣಾಧಿಕಾರಿಗಳು, ತಹಶೀಲ್ದಾರರು, ಕಾರ್ಯನಿರ್ವಹಣಾಧಿಕಾರಿಗಳು […]

ಮಕ್ಕಳ ಸಹಾಯವಾಣಿ, ಚೈಲ್ಡ್‌ಲೈನ್‌ನಿಂದ ತೆರೆದ ಮನೆ ಮಾಹಿತಿ ಕಾರ್ಯಕ್ರಮ

Saturday, May 23rd, 2015
ಮಕ್ಕಳ ಸಹಾಯವಾಣಿ, ಚೈಲ್ಡ್‌ಲೈನ್‌ನಿಂದ  ತೆರೆದ ಮನೆ  ಮಾಹಿತಿ ಕಾರ್ಯಕ್ರಮ

ಮಂಗಳೂರು : ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತೆರೆದ ಮನೆ ಎಂಬ ಕಾರ್ಯಕ್ರಮವನ್ನು ಕುಳಾಯಿ ಶ್ರೀ.ಗೋಪಾಲಕೃಷ್ಣ ಭಜನಾ ಮಂಡಳಿ(ರಿ),ವಿದ್ಯಾನಗರದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಮಕ್ಕಳಿಂದ ಚೈಲ್ಡ್‌ಲೈನ್‌ನ ಭಿತ್ತಿ ಪತ್ರವನ್ನು ಪ್ರದರ್ಶಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಮಕ್ಕಳ ಮೇಲಿನ ಲೈಂಗಿಕ ದುರುಪಯೋಗ ಹಾಗೂ ಬಾಲ್ಯವಿವಾಹ ಕುರಿತು ಕನ್ನಡ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಮಕ್ಕಳ ಸಹಾಯವಾಣಿ, ಚೈಲ್ಡ್‌ಲೈನ್ ಕೇಂದ್ರ ಸಂಯೋಜನಾಧಿಕಾರಿಯಾದ ಶ್ರೀ ಸಂಪತ್ ಕಟ್ಟಿರವರು ಪ್ರಸ್ತಾವಿಕವಾಗಿ ಮಾತುಗಳನ್ನಾಡುತ್ತಾ, […]

ಜೀವ ಇದ್ದಾಗಲೇ ಜೀವಿಗಳನ್ನು ಜೀವ ಇರುವ ಹಾಗೆ ಮಾಡುವುದು ಸ್ವರೂಪ

Friday, May 22nd, 2015
suchendra

ಮಂಗಳೂರು : ಜೀವ ಇದ್ದಾಗಲೇ ಜೀವಿಗಳನ್ನು ಜೀವ ಇರುವ ಹಾಗೆ ಮಾಡುವುದು ಸ್ವರೂಪ ಎಂದು ಖ್ಯಾತ ಚಲನಚಿತ್ರ ನಟ ಹಾಗೂ ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರು ಹೇಳಿದರು. ಅವರು 25 ದಿನಗಳ ಕಾಲ ನಡೆದ ಸ್ವರೂಪ ಅಧ್ಯಯನ ಕೇಂದ್ರದ ರಜಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇಲ್ಲಿ ಶಿಬಿರಾರ್ಥಿಗಳು ಹೃದಯಪೂರ್ವಕವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವುದು ವಿಶೇಷವಾಗಿದೆ ಎಂದು ಅಭಿಪ್ರಾಯಪಟ್ಟರು. ಇನ್ನೋರ್ವ ಅತಿಥಿ ಖ್ಯಾತ ಸಾಹಿತಿ ಗುರುರಾಜಮಾರ್ಪಳ್ಳಿ ಮಾತನಾಡಿ ಒಬ್ಬ ವ್ಯಕ್ತಿಯ ಮನಸ್ಸಿನ ವಿಕಾಸದ ಸಾಧ್ಯತೆಯನ್ನು […]