ಗೋಪಾಲ್ ಬಂದ್ಯೋಡ್ ಸಮಾಜದ ಸೊತ್ತು-ಕೊಂಡೆವೂರು ಶ್ರೀಗಳು

Monday, June 8th, 2015
kondevooru

ಉಪ್ಪಳ : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀಮತಿ ಲಲಿತ ಮತ್ತು ಶ್ರೀ ಗೋಪಾಲ್ ಬಂದ್ಯೋಡ್ ದಂಪತಿಗಳ ವೈವಾಹಿಕ ಜೀವನದ ಸುವರ್ಣ ಸಂಭ್ರಮದ ಸರಳ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಗೋಪಾಲ ಬಂದ್ಯೋಡ್ ರವರು ಜವಾಬ್ದಾರಿಯುತ ಜೀವನ ನಡೆಸಿದ ಕಾರಣ ಇಂದು ಸಮಾಜದ ಸೊತ್ತಾಗಿದ್ದಾರೆ. ಅವರ ಒಂದೊಂದು ಹೆಜ್ಜೆ ಗುರುತೂ ಅನುಕರಣೀಯ, ಅವರಿಗೆ ಮುಂದೆಯೂ ಒಳ್ಳೆಯ ಆರೋಗ್ಯ, ಆಯುಷ್ಯ, ನೆಮ್ಮದಿ ಸಿಗಲಿ ಎಂದು […]

ಬೆಸೆಂಟ್ ಕಾಲೇಜು ಉದ್ಯೋಗವಕಾಶಗಳ ವೇದಿಕೆಯ ಉದ್ಘಾಟನೆ

Monday, June 8th, 2015
besent college

ಮಂಗಳೂರು : ಬೆಸೆಂಟ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಉದ್ಯೋಗವಕಾಶಗಳ ವೇದಿಕೆಯ ಉದ್ಘಾಟನೆ ಇಂದು ಕಾಲೇಜಿನ ಎಂ.ಕಾಂ. ಸಭಾಂಗಣದಲ್ಲಿ ನಡೆಯಿತು. ವೇದಿಕೆಯನ್ನು ಉದ್ಘಾಟಿಸಿದ ವುಮೆನ್ಸ್ ನ್ಯಾಷನಲ್ ಎಜುಕೇಶನ್ ಸೊಸೈಟಿಯ ಉಪಾಧ್ಯಕರಾದ ಶ್ರೀ ಮಣೇಲ್ ಅಣ್ಣಪ್ಪ ನಾಯಕ್ ಮಾತನಾಡಿ ಎಂ.ಕಾಂ. ಪದವಿ ಕೇಂದ್ರ ತೆರೆಯುವುದರಲ್ಲಿ ಬೆಸೆಂಟ್ ಕಾಲೇಜು ನಗರದ ಕಾಲೇಜುಗಳ ಪೈಕಿ ಮೊದಲನೆಯದಾಗಿದೆ. ಕೇವಲ ಪದವಿ ಪಡೆದರೆ ಸಾಕಾಗದು. ಸೂಕ್ತ ಉದ್ಯೋಗವಕಾಶಗಳನ್ನು ವಿದ್ಯಾರ್ಥಿಗಳಿಗೆ ನಿರ್ದೇಶಿಸಬೇಕಾಗಿದೆ. ಈ ವಿಷಯವನ್ನು ಮನಗಂಡು ಕಾಲೇಜು ಉದ್ಯೋಗವಕಾಶದ ವೇದಿಕೆಯನ್ನು ತೆರೆದಿದೆ. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರ […]

ಸಿಇಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರ

Saturday, June 6th, 2015
cet counciling

ಮಂಗಳೂರು: ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ‍್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್ ಪೂರ್ವ ಉಚಿತ ಮಾರ್ಗದರ್ಶನ ಶಿಬಿರವು ನಿನ್ನೆ ನಗರದ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರಹೀಮ್ ಟೀಕೆ ಶಿಬಿರ ಉದ್ಘಾಟಿಸಿದರು. ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ಬದ್ರಿಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಇಸ್ಮಾಯಿಲ್ ಎನ್. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ‍್ಮೇಶನ್ […]

ಗ್ರಾಮ ಪಂಚಾಯತ್ ಚುನಾವಣೆ ಮೊದಲ ಸುತ್ತಿನಲ್ಲಿ ವಿಜೇತರಾದವರ ವಿವರ

Saturday, June 6th, 2015
Gram panchayat election

ಮಂಗಳೂರು : ಮೇ 29 ರಂದು ನಡೆದ ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ‍್ಯವು ಜೂನ್5 ರಂದು ನಡೆದು 1ನೇ ಸುತ್ತಿನಲ್ಲಿ ಈ ಕೆಳಕಂಡವರು ಆಯ್ಕೆಯಾಗಿರುತ್ತಾರೆ. 1)ಅಡ್ಯಾರು ಗ್ರಾಮ ಪಂಚಾಯತ್-ಕತೀಜಾ, ಅಬ್ದುಲ್ ಸಮದ್, ಸುರೇಂದ್ರ ಕಂಬಳಿ, 2)ಅಂಬ್ಲಮೊಗರು ಗ್ರಾಮ ಪಂಚಾಯತ್- ಕಮಲ,ದಿವ್ಯ,ರಾಜೇಶ್, ಧನಲಕ್ಷ್ಮಿ ಭಟ್,ಮಹಮ್ಮದ್ ರಫೀಕ್, ಮನೋಹರ,ಸುನೀತ 3)ಬೆಳುವಾಯಿ ಗ್ರಾಮ ಪಂಚಾಯತ್-ಜಯಕುಮಾರ್, ಶಾಲಿನಿ ಆಚಾರ್, ವಂದನಾ ಪ್ರಭು, ಸದಾನಂದ ಶೆಟ್ಟಿ , 4)ಬಜ್ಪೆ ಗ್ರಾಮ ಪಂಚಾಯತ್- 5)ಬಾಳ ಗ್ರಾಮ ಪಂಚಾಯತ್-ವನಜ,ಶಶಿಕಲಾ,ಸುಧಾಕರ ಶೆಟ್ಟಿ, 6)ಧರೆಗುಡ್ಡೆ […]

ತೀರ್ಥಹಳ್ಳಿ ಗಲಭೆ : ಶಾಸಕ ಅರಗ ಜ್ಞಾನೇಂದ್ರ ಸೇರಿ 47 ಮಂದಿ ವಿರುದ್ಧ ಚಾರ್ಜ್ ಶೀಟ್

Saturday, June 6th, 2015
Araga Janendra

ಬೆಂಗಳೂರು: ತೀರ್ಥಹಳ್ಳಿ ವಿದ್ಯಾರ್ಥಿನಿ ನಂದಿತಾ ಸಾವಿನ ಪ್ರಕರಣದ ಸಂಬಂಧ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ 47 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 2014ರಲ್ಲಿ ನಡೆದ ಈ ಪ್ರಕರಣದಲ್ಲಿ ಕೋಮು ಬಣ್ಣ ಪಡೆದು ಗಲಭೆ ನಡೆದಿತ್ತು. ಇದು ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಬಾಲಕಿ ನಂದಿತಾಳನ್ನು ಮೂವರು ಕಾರಿನಲ್ಲಿ ಹೊತ್ತೊಯ್ದು ಅತ್ಯಾಚಾರ ಎಸಗಿ ವಿಷ ಕುಡಿಸಿ, ಅಸ್ವಸ್ಥಳಾದ ಬಾಲಕಿಯನ್ನು ರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಅಕ್ಟೋಬರ್ 31ರಂದು ನಂದಿತಾ […]

ನೂಡಲ್ಸ್ ಮಾರಾಟವನ್ನು ವಾಪಸ್ ಪಡೆದ ನೆಸ್ಲೆ ಕಂಪನಿ

Friday, June 5th, 2015
Magi Ban

ಬೆಂಗಳೂರು : ಮ್ಯಾಗಿ ಬಗ್ಗೆ ವಿವಾದವೆದ್ದಿರುವ ಹಿನ್ನಲೆಯಲ್ಲಿ ನೆಸ್ಲೆ ಕಂಪನಿ ಭಾರತದಲ್ಲಿ ಮ್ಯಾಗಿ ನೂಡಲ್ಸ್ ಮಾರಾಟವನ್ನು ವಾಪಸ್ ಪಡೆದಿದೆ. ದುಡ್ಡು ಕೊಟ್ಟು ಖರೀದಿಸಿ ಬೆಯಿಸಿದ ಕೇವಲ ಎರಡು ನಿಮಿಷದಲ್ಲಿ ಆರೋಗ್ಯವನ್ನು ಹಾಳು ಮಾಡುತಿದ್ದ ಮ್ಯಾಗಿ ಈಗ ನಿಷೇಧದ ಭೀತಿ ಎದುರಿಸುತ್ತಿದೆ. ಶುಕ್ರವಾರ ಮುಂಜಾನೆ ಈ ಕುರಿತು ನೆಸ್ಲೆ ಕಂಪನಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ತಾತ್ಕಾಲಿಕವಾಗಿ ಭಾರತದಲ್ಲಿ ಮ್ಯಾಗಿ ಮಾರಾಟವನ್ನು ವಾಪಸ್ ಪಡೆಯಲಾಗುತ್ತಿದೆ. ಸದ್ಯಕ್ಕೆ ಕಂಪನಿ ಮ್ಯಾಗಿ ಮತ್ತು ಇದೇ ತರಹದ ಯಾವುದೇ ಆಹಾರ ಪದಾರ್ಥಗಳನ್ನು ಮಾರುಕಟ್ಟೆಗೆ […]

ಹೋಟೇಲ್ ಮ್ಯಾನೇಜರ್ ಟಿಪ್ಪರ್ ಅಪಘಾತದಲ್ಲಿ ಮೃತ್ಯು

Friday, June 5th, 2015
Aithal

ಕುಂದಾಪುರ: ಇಲ್ಲಿನ ಹರ್ಷ ರಿಫ್ರೆಶ್‌ಮೆಂಟ್ ಹೋಟೇಲಿನ ಮ್ಯಾನೇಜರ್ ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರ ನಗರದ ಶಾಸ್ತ್ರೀ ವೃತ್ತದ ಸಮೀಪ ನಡೆದಿದೆ. ಮೃತ ಪಟ್ಟವರನ್ನು ಕುಂದಾಪುರದ ಯುನಿಟ್ ಹಾಲ್ ಸಮೀಪದ ನಿವಾಸಿ ನರಸಿಂಹ ಐತಾಳ್ (48) ಎಂದು ಗುರುತಿಸಲಾಗಿದೆ. ಮೂಲತಃ ಬಂಟ್ವಾಳದ ದಾಸಬೈಲಿನವರಾದ ನರಸಿಂಹ ಐತಾಳ್ ಅವರು ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಕುಂದಾಪುರದಲ್ಲಿ ವಾಸಿಸುತಿದ್ದರು, ಅಲ್ಲದೇ ಕುಂದಾಪುರದ ಹರ್ಷ ರಿಫ್ರೆಶ್‌ಮೆಂಟ್ ಹೋಟೇಲಿನಲ್ಲಿ ಮ್ಯಾನೇಜರ್ ವೃತ್ತಿಯನ್ನು […]

ಕೋಮುಗಲಭೆ ಪ್ರಕರಣ ಆರೋಪಿಗಳ ಕೇಸು ಹಿಂತೆಗೆತ, ಹಿಂದೂ ಸಂಘಟನೆಗಳ ಕಿಡಿ

Thursday, June 4th, 2015
Bantwal Tahsildar

ಬಂಟ್ವಾಳ : ಕರ್ನಾಟಕ ರಾಜ್ಯ ಸರ್ವ ಜನಾಂಗದ ನೆಲೆವೀಡು, ಇಲ್ಲಿ ಶಾಂತಿಪ್ರಿಯರು ಸ್ವಚ್ಚಂದದ ಬದುಕು ಸವೆಸಲು ಯೋಚಿಸುವುದು ಇನ್ನು ದುಸ್ತರವೇ ಸರಿ. ಅಶಾಂತಿ, ಅನಾಚಾರ, ಅನೈತಿಕತೆ, ಭಯೋತ್ಪಾಧನಾ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಕಾರ್ಯ ಪ್ರಸ್ತುತ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರ ಸರಕಾರ ಮಾಡುತ್ತಿದೆ. ಒಂದು ಕೋಮಿನ ಜನರ ಓಲೈಕೆಗಾಗಿ ವ್ಯಾಪ್ತಿ ಮೀರಿ ವರ್ತಿಸುತ್ತಿರುವುದು ಈ ರಾಜ್ಯಕ್ಕೆ ಶಾಪವಲ್ಲವೇ? ಅಪರಾಧಿಗೆ ಶಿಕ್ಷೆಯಾಗದೆ ಕಾನೂನಿಗೆ ತಿದ್ದುಪಡಿ ತಂದು ಆತನ ಪರ ಸರಕಾರ ನಿಂತರೆ ಮುಂದೆ ಏನಾಗಬಹುದು ಊಹಿಸಲು ಸಾಧ್ಯವೇ? 2009ರಲ್ಲು […]

ಮಂಗಳೂರು ತಾ: ಗ್ರಾ.ಪಂ. ಮತ ಎಣಿಕೆಗೆ ಸಿದ್ಧತೆ

Wednesday, June 3rd, 2015
Gp election Counting

ಮಂಗಳೂರು : ಮಂಗಳೂರು ತಾಲೂಕಿನ 55 ಗ್ರಾಮ ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಜೂನ್ 5ರಂದು ನಗರದ ಪಾದುವಾ ಹೈಸ್ಕೂಲ್, ನಂತೂರು ಇಲ್ಲಿ ನಡೆಯಲಿದ್ದು, ಎಲ್ಲಾ ವ್ಯವಸ್ಥೆಗಳನ್ನು ಸಿದ್ಧಗೊಳಿಸಲಾಗಿದೆ ಮಂಗಳೂರು ತಾಲೂಕು ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ. ಬೆಳಿಗ್ಗೆ 8ಗಂಟೆಗೆ ಪ್ರಥಮ ಸುತ್ತಿನ ಮತ ಎಣಿಕೆಯಲ್ಲಿ 113 ಕ್ಷೇತ್ರಗಳು(838 ಅಭ್ಯರ್ಥಿಗಳು), 10ಗಂಟೆಗೆ 2ನೇ ಸುತ್ತಿನ ಮತ ಎಣಿಕೆಯಲ್ಲಿ 112 ಕ್ಷೇತ್ರಗಳು(781 ಅಭ್ಯರ್ಥಿಗಳು), 12ಗಂಟೆಗೆ 3ನೇ ಸುತ್ತಿನ ಮತ ಎಣಿಕೆಯಲ್ಲಿ 80 ಕ್ಷೇತ್ರಗಳು(568 ಅಭ್ಯರ್ಥಿಗಳು)ಹಾಗೂ 2ಗಂಟೆಗೆ […]

ನಿವೃತ್ತ ಡಿವೈಎಸ್ಪಿ ಬಿ.ಜೆ. ಭಂಡಾರಿ ನಿಧನ

Wednesday, June 3rd, 2015
BJ Bhandary

ಮಂಗಳೂರು : ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿವೃತ್ತ ಡಿವೈಎಸ್ಪಿ ಬಿ.ಜೆ. ಭಂಡಾರಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ ನಿವಾಸಿಯಾದ ಭಂಡಾರಿ ಉತ್ತಮ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಪದಕ ಹಾಗೂ 2 ಬಾರಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದಿದ್ದರು. ಸೋಮವಾರ ಮಧ್ಯಾಹ್ನ ಅವರು ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಬಳಿ ರಸ್ತೆ ದಾಟುವಾಗ ಉಡುಪಿ ಕಡೆಯಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರು ಸಂಬಂಧಿಕರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಹೋಗಿದ್ದರು. ಸೋಮವಾರ ಮಧ್ಯಾಹ್ನ […]