ಸಾಂಸ್ಖೃತಿಕ ಕಾರ್ಯಕ್ರಮಗಳಿಂದ ಉತ್ಸಾಹ ಮೂಡಿಬರುತ್ತದೆ : ಸೊರಕೆ

Thursday, March 12th, 2015
astabandha

ಧರ್ಮಸ್ಥಳ : ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಏರ್ಪಡಿಸಲಾದ ಸಾಂಸ್ಖೃತಿಕ ಕಾರ್ಯಕ್ರಮಗಳಿಂದ ಉತ್ಸಾಹ ಮೂಡಿಬರಲಿ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹಾರೈಸಿದರು. ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಗುರುವಾರ ಆಯೋಜಿಸಲಾದ ಸಾಂಸ್ಖೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳದಲ್ಲಿ ದಾನ-ಧರ್ಮದ ವಿಶ್ವರೂಪ ದರ್ಶನವಾಗುತ್ತದೆ. ದೇವರಲ್ಲಿ ದೃಢ ಭಕ್ತಿ, ಶ್ರದ್ಧೆ-ನಂಬಿಕೆಯಿಂದ ಪವಾಡ ಸದೃಶ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಬಹುದು ಎಂಬುದಕ್ಕೆ ಧರ್ಮಸ್ಥಳವೇ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಸುಗಂಧವನ್ನು ಪಸರಿಸಿ ಆರೋಗ್ಯಪೂರ್ಣ […]

18 ಸಾವಿರ ಹಿಡಿದುಕೊಂಡು ಬಂಟ್ವಾಳದಿಂದ ಬಾಲಕ ಪರಾರಿ

Tuesday, March 10th, 2015
Anil

ಬಂಟ್ವಾಳ: ಬಾಲಕನೋರ್ವ ನಗದು ಸಹಿತ ಕಾಣೆಯಾದ ಪ್ರಕರಣ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಣೆಯಾದ ಬಾಲಕನನ್ನು 12 ವರ್ಷ ಪ್ರಾಯದ ಅನಿಲ್ ಎನ್ನಲಾಗಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಕೊಳಕೆ ನಿವಾಸಿ ಸೋಮಪ್ಪ ಅವರ ಮಗ ಅನಿಲ್ ಎಂಬ ಹುಡುಗ ಶಾಲೆಗೆ ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದ. ತಂದೆ ಮತ್ತು ತಾಯಿ ಕೆಲಸಕ್ಕೆ ಹೋದ ಸಂದರ್ಭ ಅನಿಲ್ ಮನೆಯ ಕಪಾಟಿನಲ್ಲಿ ಇಟ್ಟಿದ್ದ ರೂ 18 ಸಾವಿರ ಹಿಡಿದುಕೊಂಡು ಮನೆಯಿಂದ ಹೋದವನು ವಾಪಾಸು ಬರದೆ ಕಾಣೆಯಾಗಿದ್ದಾನೆ ಎಂದು ಬಾಲಕನ […]

ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳಾ ದಿನಾಚರಣೆ

Tuesday, March 10th, 2015
ladies day

ಮಂಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು, ಮಂಗಳೂರು ವಕೀಲರ ಸಂಘ ಮತ್ತು ರಾಮ ಕ್ಷತ್ರಿಯಾ ಮಹಿಳಾ ವೃಂದ, ಜೆಪ್ಪು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಜಪ್ಪು ರಾಮ ಕ್ಷತ್ರಿಯಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ6 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಹೆಚ್. ಪುಷ್ಪಾಂಜಲಿ ದೇವಿ ಮಾತನಾಡುತ್ತಾ, ಮಹಿಳೆಯರಿಗೆ ಪ್ರಾಚೀನ ಕಾಲದಿಂದಲೂ ಪ್ರಾಧಾನ್ಯತೆ ನೀಡುತ್ತಿದ್ದರೂ ಸಹಾ ಸಮಾಜದಲ್ಲಿರುವ ಬಡತನ ಮತ್ತು ಪುರುಷ ಪ್ರಾಧೀನ್ಯತೆಯಿಂದ […]

ನಗರೋತ್ಥಾನ ಕಾಮಗಾರಿ: ತ್ವರಿತಗೊಳಿಸಲು ಸಚಿವರ ಸೂಚನೆ

Tuesday, March 10th, 2015
dc meeting

ಮಂಗಳೂರು : ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ ನಗರೋತ್ಥಾನ ಯೋಜನೆ-2ರಡಿ ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ ಮತತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರೋತ್ಥಾನ ಯೋಜನೆಯ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಯೋಜನೆಯಡಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಜಿಲ್ಲೆಯಲ್ಲಿ ಕಾಮಗಾರಿಯ ನಿಗದಿತ ಕಾಲಾವಧಿ ಮುಗಿದಿದ್ದರೂ, ಹಲವು ಕಾಮಗಾರಿಗಳು ಇನ್ನೂ ಪ್ರಾರಂಭಗೊಂಡಿಲ್ಲ ಎಂದು ಅವರು […]

ರೈಲೇ ಹೋರಾಟಗಾರ-ಸಮಾಜ ಸೇವಕ ಶಶಿಕುಮಾರ್ ಸಿ.ಕುಂದರ್ ಮೂಲ್ಕಿ ನಿಧನ

Tuesday, March 10th, 2015
kundar

ಮುಂಬಯಿ : ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸಿ. ಕುಂದರ್ (68.) ಅವರು ಸೋಮವಾರ ರಾತ್ರಿ ತಮ್ಮ ಗೋರೆಗಾಂವ್ ಪೂರ್ವದ ಸ್ವನಿವಾಸದಲ್ಲಿ ನಿಧನ ಹೊಂದಿದರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ನಿವಾಸಿಯಾಗಿದ್ದ ಅವರು ಕಳೆದ ಹಲವು ವರ್ಷಗಳಿಂದ ರೈಲ್ವೇ ಯಾತ್ರಿ ಸಂಘದಲ್ಲಿ ಸಕ್ರೀಯರಾಗಿ ಸೇವಾ ನಿರತರಾಗಿದ್ದು, ಕೇಂದ್ರಿಯ ಅಂದಿನ ರೈಲ್ವೇ ಮಂತ್ರಿ ಮಮತಾ ಬಾನರ್ಜಿ ಅವರಿಂದ ಒಳಗೊಂಡು ಪ್ರಸಕ್ತ ರೈಲ್ವೇ ಮಂತ್ರಿ ಸುರೇಶ್ ಪ್ರಭು […]

ಟೀಚರ್ ನಗ್ನ ಸ್ನಾನ ಮಾಡುವುದನ್ನು ಚಿತ್ರೀಕರಣ ಮಾಡಿದ ಯುವಕನ ಬಂಧನ

Saturday, March 7th, 2015
Mohammed Shafi

ವಿಟ್ಲ : ಬಾಡಿಗೆ ಮನೆಯಲ್ಲಿ ವಾಸವಿರುವ ಶಿಕ್ಷಕಿಯೊಬ್ಬರು ಸ್ನಾನ ಮಾಡುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು ಓರ್ವನನ್ನು ಬಂಧಿಸಲಾಗಿದೆ. ಬೋಳಂತೂರು ಗ್ರಾಮದ ಬಂಗಾರ ಕೋಡಿಯಲ್ಲಿ ಆರೋಪಿಗಳು ಈ ಕೃತ್ಯ ನಡೇಸಿದ್ದಾರೆ. ಹೊರ ಜಿಲ್ಲೆ ನಿವಾಸಿ, ಸ್ಥಳೀಯ ಪ್ರೌಢ ಶಾಲೆಯ ಶಿಕ್ಷಕಿ ಗುರುವಾರ ರಾತ್ರಿ ಸ್ನಾನ ಮಾಡುತ್ತಿದ್ದಾಗ ವೆಂಟಿಲೇಟರ್‌ ಮೂಲಕ ಮೊಬೈಲ್‌ನಲ್ಲಿ ಬೋಳಂತೂರು ಗ್ರಾಮದ ಗೂಳಿ ಶಾಫಿ, ಅದ್ದು ಯಾನೆ ಅಬ್ದುಲ್‌ ನೌಶಾದ್‌(24) ಉನೈಸ್‌ ಮದಕ (25) ಚಿತ್ರೀಕರಣ ಮಾಡುತ್ತಿದ್ದರು. ಏನೋ ಶಬ್ದ ಕೇಳಿ […]

ಹೆಸರಾಂತ ಗಾಯಕ ದೇವದಾಸ್ ಬಿ.ಬಿಲ್ಲವ ನಿಧನ

Saturday, March 7th, 2015
Devadas

ಮುಂಬಯಿ : ಬಿಲ್ಲವ ಸೇವಾ ಸಂಘ ಕುಂದಾಪುರ (ರಿ.) ಮುಂಬಯಿ ಇದರ ಸಕ್ರಿಯ ಸದಸ್ಯ, ಮುಂಬಯಿ ಉಪನಗರದ ಭಾಂಡೂಪ್ ನಿವಾಸಿ ಆಗಿದ್ದು ಮೂಲತಃ ಕುಂದಾಪುರ ತಾಲೂಕು ಹಳೆ ಅಳಿವೆಯ ಟಿ.ಎಸ್ ಹೌಸ್ ನಿವಾಸಿ, ಹೆಸರಾಂತ ಗಾಯಕ ದೇವದಾಸ್ ಬಿ.ಬಿಲ್ಲವ (44) ಅವರು ಇತ್ತೀಚೆಗೆ ಹೃದಯಾಘಾತ ವಿಧಿವಶರಾದರು. ಮೃತರು ಡಾ| ರಾಜ್‌ಕುಮಾರ್ ಅವರ ಬಹುತೇಕ ಗಾನ-ಗೀತೆಗಳನ್ನು ಹಾಡುತ್ತಾ ಸಂಗೀತಾಭಿಮಾ ನಿಗಳ ಪ್ರೀತಿ ಪಾತ್ರರಾಗಿದ್ದು, ಅಪ್ಪಟ ಕಲಾಪ್ರೇಮಿ ಆಗಿದ್ದ ಇವರು ಉದಯೋನ್ಮುಖ ಗಾಯಕರಾಗಿ ಹಲವಾರು ಸಭೆ-ಸಮಾರಂಭಗಳಲ್ಲಿ ತಮ್ಮ ಸೊಗಸಾದ ಕಂಠದಿಂದ […]

ಉಡುಪಿ ಹಿಂದೂ ಸಮಾಜೋತ್ಸವಕ್ಕೆ ವ್ಯಾಪಕ ಬಂದೋಬಸ್ತ್

Friday, March 6th, 2015
udupi Samavesha

ಉಡುಪಿ: ಕುಂಜಿಬೆಟ್ಟು ಎಂ.ಜಿ.ಎಂ ಮೈದಾನದಲ್ಲಿ ಮಾ.9 ಸೋಮವಾರದಂದು ನಡೆಯಲಿರುವ `ವಿರಾಟ್ ಹಿಂದೂ ಸಮಾಜೋತ್ಸವ’ ಕಾರ್ಯಕ್ರಮಕ್ಕೆ ಸಿದ್ದತೆ ನಡೆಯುತ್ತಿದ್ದು ಈ ವೇಳೆ ಯಾವುದೇ ಅಹಿತಕರ ಘಟನೆಗಳಾಗದಂತೆ ಉಡುಪಿ ಜಿಲ್ಲಾ ಪೊಲೀಸರು ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ. ಒಂದು ಲಕ್ಷಕ್ಕೂ ವಿಕ್ಕಿ ಜನರು ಭಾಗವಹಿಸುವ ನೀರಿಕ್ಷೆ ಇದೆ. ಶೋಭಯಾತ್ರೆಯು ಅಂದು ಮಧ್ಯಾಹ್ನ 2 ಗಂಟೆಗೆ ಉಡುಪಿ ಜೋಡುಕಟ್ಟೆಯಿಂದ ಲಯನ್ಸ್ ಸರ್ಕಲ್, ಡಯಾನ ಸರ್ಕಲ್, ಕೆ.ಎಂ ಮಾರ್ಗ, ಹನುಮಾನ್ ವೃತ್ತ, ಸರ್ವಿಸ್ ಬಸ್ಸು ನಿಲ್ದಾಣ, ಶೀರಿಬೀಡು ಜಂಕ್ಷನ್, ಸಿಟಿ ಬಸ್ಸು ನಿಲ್ದಾಣ, ಕಲ್ಸಂಕ, […]

ವಿಟ್ಲದಲ್ಲಿ ಹದಿನೇಳರ ಬಾಲಕಿ ನಿಗೂಢ ನಾಪತ್ತೆ

Friday, March 6th, 2015
BiBi Sumaya

ವಿಟ್ಲ: ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ಆಕೆಯ ತಂದೆ ಗುರುವಾರ ರಾತ್ರಿ ದೂರು ನೀಡಿದ್ದಾರೆ. ಈಕೆ ಕನ್ಯಾನದ ಕಾಲೇಜ್‍ ವೊಂದರಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿಯುತ್ತಿದ್ದಳು ಆಕೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವುದು ಪರಿಸರದಲ್ಲಿ ಕುತೂಹಲ ಮೂಡಿದೆ. ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ ಇಸ್ಮಾಯಿಲ್ ಅವರ ಪುತ್ರಿ ಕಲಂದರ್ ಬೀಬಿ ಸುಮಯ್ಯ(17) ಎಂಬಾಕೆ ಅಪಹರಣಕ್ಕೊಳಗಾದವಳು. ಈಕೆ ಕನ್ಯಾನದಲ್ಲಿ ದ್ವಿತೀಯ ಪಿಯುಸಿಯಲ್ಲಿ ಕಲಿ ಯುತ್ತಿದ್ದು, ಸದ್ಯ ಪರೀಕ್ಷೆಗಾಗಿ ಓದಲೆಂದು ರಜೆ ನೀಡಲಾಗಿತ್ತು. ಗುರುವಾರ ಬೆಳಿಗ್ಗೆ […]

ತಲಪಾಡಿ : ದುರ್ಗಾಪರಮೇಶ್ವರೀ ಮತ್ತು ಪರಿವಾರ ದೈವಗಳಿಗೆ ಬ್ರಹ್ಮಕಲಶಾಭಿಷೇಕ

Friday, March 6th, 2015
Talapady Devipura

ತಲಪಾಡಿ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ತಲಪಾಡಿ ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಹಾಗೂ ಪರಿವಾರ ದೇವರ ಪುನರ್ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಪ್ರಯುಕ್ತ ಬುಧವಾರ ಬ್ರಹ್ಮಕಲಶಾಭಿಷೇಕ ನಡೆಯಿತು. ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ವೇದಮೂರ್ತಿ ತಲಪಾಡಿ ಬಾಲಕೃಷ್ಣ ಭಟ್ಟರ ಉಪಸ್ಥಿತಿ ಯಲ್ಲಿ ಬ್ರಹ್ಮಶ್ರೀ ಎಡಪದವು ವೆಂಕಟೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರದಲ್ಲಿ ಗಣಯಾಗ, ಶ್ರೀ ದೇವಿಗೆ ಪಂಚಗವ್ಯ, ಪಂಚಾಮೃತಭಿಷೇಕ ಪೂರ್ವಕ ಪರಿಕಲಶಾಭಿಷೇಕ, ಬಳಿಕ ವೃಷಭ ಸುಮೂಹೂರ್ತದಲ್ಲಿ ಬ್ರಹ್ಮಕಲ ಶಾಭಿಷೇಕ ನ್ಯಾಸಪೂಜೆ, ಮಹಾಪೂಜೆ ಅವಸ್ರುತ […]