ಉಪಚುನಾವಣಾ: ಐದರ ಪೈಕಿ ನಾಲ್ಕರಲ್ಲಿ ಮೈತ್ರಿ ಸರ್ಕಾರ ಅಭ್ಯರ್ಥಿಗಳಿಗೆ ಗೆಲುವು..!

Tuesday, November 6th, 2018
by-polls

ಮಂಡ್ಯ: ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಉಪಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಈ ನಡುವೆ ಐದರಲ್ಲಿ ನಾಲ್ಕು ಕಡೆ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಗೆಲುವಿನ ಬಗ್ಗೆ ಅಧಿಕೃತ ಘೋಷಣೆಯೊಂದು ಬಾಕಿ ಇದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಗೆ ಭರ್ಜರಿಯಾಗಿ ಗೆಲುವು ಸಾಧಿಸಿದರೇ ಇತ್ತ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ 1ಲಕ್ಷದ 82 ಸಾವಿರ ಮತಗಳ ಅಂತರದಿಂದ ಗೆದ್ದು ಅಂಬರೀಶ್ ದಾಖಲೆ ಮುರಿದಿದ್ದಾರೆ. ಇನ್ನೊಂದೆಡೆ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ […]

ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ ಭರ್ಜರಿ ಗೆಲುವು…!

Tuesday, November 6th, 2018
kumarswamy

ರಾಮನಗರ: ವಿಧಾನಸಭೆ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಗೆಲುವು ಕಾಯ್ದುಕೊಂಡಿದ್ದು, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಗ್ಗೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಅನಿತಾ ಗೆಲುವು , ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಅನಿತಾ ಕುಮಾರಸ್ವಾಮಿ ಅವರ ಭಾವಚಿತ್ರವಿರುವ ಫ್ಲೆಕ್ಸ್ ಹಿಡಿದು, ಜಯಘೋಷ ಕೂಗುತ್ತಿದ್ದಾರೆ.

ಜಮಖಂಡಿ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಆನಂದ್​ ನ್ಯಾಮಗೌಡ ಗೆಲುವು

Tuesday, November 6th, 2018
anand

ಬಾಗಲಕೋಟೆ: ಜಮಖಂಡಿ ವಿಧಾನಸಭೆ ಉಪ ಚುನಾವಣೆ ಮತ ಎಣಿಕೆ ನೆಡೆದಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಾಯ್ದುಕೊಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ. ಇನ್ನೂ ಹನ್ನೆರಡು ಸುತ್ತು ಮತ ಎಣಿಕೆ ಬಾಕಿ ಇರುವಾಗಲೇ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಶುರುವಾಗಿದೆ. ಪಟಾಕಿ ಸಿಡಿಸಿ, ಬಣ್ಣ ಎರಚಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಿಸುತ್ತಿದ್ದಾರೆ. ಮತ ಎಣಿಕೆ ಕೇಂದ್ರದತ್ತ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇನ್ನೂ ಸುಳಿದಿಲ್ಲ.

ಎಂಆರ್​ಪಿಎಲ್​ನ ವಿಸ್ತರಣಾ ಯೋಜನೆ ತಡೆಗೆ ಆಗ್ರಹಿಸಿ ಪ್ರತಿಭಟನೆ..!

Tuesday, November 6th, 2018
protest

ಮಂಗಳೂರು: ನಗರದ ಹೊರವಲಯದಲ್ಲಿರುವ ಎಂಆರ್ಪಿಎಲ್ನ ವಿಸ್ತರಣಾ ಯೋಜನೆಯನ್ನು ತಡೆಹಿಡಿಯಲು ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ವಿವಿಧ ಸಂಘಟನೆಗಳಿಂದ ಹಾಗೂ ಭೂಮಾಲೀಕರಿಂದ ಪ್ರತಿಭಟನೆ‌ ನಡೆಯಿತು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಹೋರಾಟ ಸಮಿತಿಯ ಸದಸ್ಯ ವಿಲಿಯಮ್ ಮಾತನಾಡಿ, ಎಂಆರ್ ಪಿಲ್ ಕಂಪನಿಯ ವಿಸ್ತರಣಾ ಯೋಜನೆಯ ವಿರುದ್ಧ ಹೋರಾಟವನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ಹಾಗೂ ಅಧಿಕಾರಿಗಳಿಗೆ ಮುಟ್ಟುವ ಹಾಗೆ ಕೈಗೊಂಡಿದ್ದೇವೆ. ಈ ಹೋರಾಟ ಇವತ್ತು ಮಾತ್ರವಲ್ಲ, ಮುಂದೆ ಕೂಡಾ ಮುಂದುವರಿಯುತ್ತದೆ. ಹಿಂದೆ ನಮ್ಮ ಹೋರಾಟ ಏನಿದ್ದರೂ ನಮ್ಮ ಗದ್ದೆಗಳಲ್ಲಿ […]

ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ: ಅನಿತಾ ಕುಮಾರಸ್ವಾಮಿ

Monday, November 5th, 2018
anitha-kumarswamy

ಹಾಸನ: ರಾಮನಗರದಲ್ಲಿ ನಮಗೆ ಯಾವುದೇ ಭಯವಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧವಿದ್ದೇವೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮನಗರ ಅಷ್ಟೇ ಅಲ್ಲ, ಉಳಿದ ನಾಲ್ಕು ಕಡೆಗಳಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯ ಸಿಗಲಿದೆ. ಚುನಾವಣಾ ಕಣಕ್ಕೆ ಬರುವ ಬಗ್ಗೆ ಮಾತುಕತೆ ಆಗಿಲ್ಲ. ಮುಂದೆ ಏನು ಆಗುತ್ತೋ ನನಗೆ ಗೊತ್ತಿಲ್ಲ. ನಾನು ಕೂಡ ರಾಜಕೀಯ ಪ್ರವೇಶ ಮಾಡುತ್ತೇನೆಂದು ಅಂದುಕೊಂಡಿರಲಿಲ್ಲ. ನನ್ನ ಮಗ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕ್ರಿಯಾಶೀಲವಾಗಿ ಕೆಲಸ […]

ಬುದ್ಧಿ ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಮಕ್ಕಳು..ಪೋಷಕರಿಂದ ಹುಡುಕಾಟ!

Monday, November 5th, 2018
childrens

ಮೈಸೂರು: ಮನೆಯಲ್ಲಿದ್ದ 100 ರೂಪಾಯಿಯನ್ನು ಖರ್ಚು ಮಾಡಿದ್ದಕ್ಕೆ ತಂದೆ ತಾಯಿ ಬುದ್ಧಿ ಹೇಳಿದ ಕಾರಣ, ಇಬ್ಬರು ಮಕ್ಕಳು ಮನೆ ಬಿಟ್ಟು ಹೋದ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಎನ್.ಆರ್.ಮೊಹಲ್ಲಾದಲ್ಲಿ ವಾಸವಾಗಿರುವ ನಾಗರಾಜು ಮತ್ತು ಸೌಮ್ಯ ದಂಪತಿಯ ಮಕ್ಕಳಾದ ಐಶ್ವರ್ಯ(14) ಹಾಗೂ ನಕುಲ್(12) ಬುದ್ದಿ ಹೇಳಿದ್ದಕ್ಕೆ ಬೇಸರಗೊಂಡು ಮನೆಬಿಟ್ಟು ಹೋದ ಮಕ್ಕಳು. ಅಕ್ಟೋಬರ್ 28ರಂದು ಮಕ್ಕಳು ಮನೆಯಲ್ಲಿದ್ದ 100 ರೂಪಾಯಿಯನ್ನು ಖರ್ಚು ಮಾಡಿದ್ದಾರೆ. ಇದಕ್ಕೆ ಮನೆಯಲ್ಲಿ ಹೀಗೇ ಮಾಡಬೇಡಿ ಎಂದು ತಂದೆತಾಯಿ ಬುದ್ಧಿ ಹೇಳಿದ್ದಾರೆ. ತಂದೆ ತಾಯಿಯ ಈ […]

ಸಮಾರಂಭದಲ್ಲಿ ರೇವಣ್ಣನ ಹಾಡಿ ಹೊಗಳಿದ ಜಯಮಾಲ

Monday, November 5th, 2018
jayamala

ಹಾಸನ: ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಜೈನಕಾಶಿಯ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರಿಗೆ ಪ್ರದಾನ ಮಾಡಲಾಯ್ತು. ಕರ್ನಾಟಕ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಜಯಮಾಲಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರೇವಣ್ಣ ಸೇರಿ ಹಲವು ಗಣ್ಯರು ಪ್ರಶಸ್ತಿಯನ್ನ ಪ್ರಧಾನ ಮಾಡಿದರು. ಈ ವೇಳೆ ಸಚಿವೆ ಜಯಮಾಲಾ ರೇವಣ್ಣನನ್ನ ಹಾಡಿ ಹೊಗಳಿದ ಘಟನೆ ಕೂಡಾ ನಡೆಯಿತು. ಹೆಚ್.ಡಿ.ರೇವಣ್ಣನವರು ಹಿಡಿದ ಕೆಲಸವನ್ನ ಎಂದು ಬಿಡುವವರಲ್ಲ. ಅದು ಯಾವುದೇ ಸರ್ಕಾರವಿದ್ರು ಕೂಡಾ […]

ಮತ್ತೆ ಮತದಾನ ಮರೆತ ರಮ್ಯಾ… ಸತತ ಮೂರನೇ ಬಾರಿ ಗೈರು!

Saturday, November 3rd, 2018
Ramya

ಮಂಡ್ಯ: ಮಾಜಿ ಸಂಸದೆ, ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಮತದಾನಕ್ಕೆ ಬಾರದಿರುವುದನ್ನ ರಮ್ಯಾ ಆಪ್ತ ವಲಯ ಖಚಿತ ಪಡಿಸಿದೆ. ಕಳೆದ ವಿಧಾನಸಭೆ, ನಗರಸಭೆ ಚುನಾವಣೆಯಲ್ಲೂ ಮತದಾನ ಮಾಡದ ರಮ್ಯಾ, ಈಗ ಸತತ ಮೂರನೇ ಬಾರಿ ಗೈರಾಗುತ್ತಿದ್ದಾರೆ. ಸದ್ಯ ದೆಹಲಿಯಲ್ಲಿರುವ ರಮ್ಯಾ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರು ಮತದಾನ ಮಾಡದಿರುವ ಬಗ್ಗೆ ಆಪ್ತ ವಲಯದಿಂದ ಮಾಹಿತಿ ದೊರೆತಿದೆ.

ಮತ ಚಲಾಯಿಸಿದ ಶಾಸಕ ಸೋಮಶೇಖರ್​​ ರೆಡ್ಡಿ ದಂಪತಿ

Saturday, November 3rd, 2018
somshekar

ಬಳ್ಳಾರಿ: ನಗರ ಶಾಸಕ ಸೋಮಶೇಖರ್ ರೆಡ್ಡಿ ದಂಪತಿ‌ ಬೂತ್ ನಂ.170 ರಲ್ಲಿ ಮತದಾನ ಮಾಡಿದರು. ರಾಜ್ಯದ 3 ಲೋಕಸಭೆ ಹಾಗೂ 2 ವಿಧಾನಸಭೆ ಸ್ಥಾನಗಳಿಗೆ ಉಪ ಚುನಾವಣೆ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ರಸ್ತೆಯ ಅಹಂಬಾವಿ ಪ್ರದೇಶದಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮಶೇಖರ್ ರೆಡ್ಡಿ ದಂಪತಿ ತಮ್ಮ ತಮ್ಮ ಮತ ಹಕ್ಕು ಚಲಾಯಿಸಿದರು.

ಹರಪನಹಳ್ಳಿ ಶಾಸಕ, ಹಡಗಲಿಯ ನಿವಾಸಿ ಎಂ. ಪಿ.ರವೀಂದ್ರ ಇನ್ನಿಲ್ಲ..!

Saturday, November 3rd, 2018
m-p-raveendra

ಬೆಂಗಳೂರು: ಜನತಾ ಪರಿವಾರದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಎಂ.ಪಿ. ಪ್ರಕಾಶ್ ಪುತ್ರ, ಹರಪನಹಳ್ಳಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಇಂದು ಮುಂಜಾನೆ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 2013 ರಲ್ಲಿ ಹರಪನಹಳ್ಳಿ ಕ್ಷೇತ್ರದಿಂದ ಶಾಸಕರಾಗಿದ್ದ ಎಂ.ಪಿ.ರವೀಂದ್ರ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಬೆಂಗಳೂರಿನ ಗಾಂಧಿಭವನ ಹತ್ತಿರದ ವಲ್ಲಭ ನಿಕೇತನದಲ್ಲಿ ಶನಿವಾರ ಬೆಳಗ್ಗೆ 9.00 ಗಂಟೆಯಿಂದ ಬೆಳಗ್ಗೆ 10.30ರವರೆಗೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ […]