ನಿಫಾ ಬಳಿಕ ವರುಣನ ಭೀತಿಯಲ್ಲಿ ಕೇರಳ , ಒಂದೇ ದಿನ ಮಳೆಗೆ 9 ಮಂದಿ ಬಲಿ..!

Friday, June 15th, 2018
thiruvanthapuram

ತಿರುವನಂತಪುರಂ: ಉತ್ತರ ಭಾರತದಲ್ಲಿ ಅಬ್ಬರಿಸಿದ್ದ ಮಳೆ-ಗಾಳಿ, ಗುಡುಗು-ಸಿಡಿಲು, ಧೂಳು ದಕ್ಷಿಣ ಭಾರತದತ್ತಲೂ ಆರ್ಭಟಿಸಿದೆ. ನಿಫಾ ಭಯದಿಂದ ಹೊರ ಬಂದು ಮುಂಗಾರಿನ ಖುಷಿಯಲ್ಲಿದ್ದ ಕೇರಳದ ಜನರಲ್ಲಿ ಸೂತಕ ಮನೆ ಮಾಡಿದೆ. ನಿನ್ನೆ ಒಂದೇ ದಿನ ಮಳೆಯ ರೌದ್ರನರ್ತನಕ್ಕೆ 9 ಮಂದಿ ಅಸುನೀಗಿದ್ದಾರೆ. ಕಳೆದೊಂದು ತಿಂಗಳಿನಿಂದ ಮಳೆಗೆ ಬಲಿಯಾದವರ ಸಂಖ್ಯೆ 43 ಮುಟ್ಟಿದೆ. ಭಾರೀ ಮಳೆಗೆ ತತ್ತರಿಸಿರುವ ಉತ್ತರ ಕೇರಳದ ಜಿಲ್ಲೆಗಳಾದ ಕಾಜಿಕೋಡ, ಕನ್ನೂರು, ಪಾಲ್ಕಾಡ್‌, ಕಾಸರಗೂಡು ಹಾಗೂ ಮಲ್ಲಾಪುರಂನಲ್ಲಿ ಹೈ ಅಲರ್ಟ್‌‌ ಘೋಷಿಸಲಾಗಿದೆ. ನಿನ್ನೆ ಮಳೆಯಿಂದ ಸಂಭವಿಸಿ ಭೂಕುಸಿತಕ್ಕೆ […]

ವಾರದೊಳಗೆ 30 ಶಾಸಕರಿಗೆ ನಿಗಮ-ಮಂಡಳಿ‌ ಸ್ಥಾನ‌: ಸಿದ್ದರಾಮಯ್ಯ

Friday, June 15th, 2018
siddaramaih

ಮೈಸೂರು: ಸಮ್ಮಿಶ್ರ ಸರ್ಕಾರದಲ್ಲಿ ಅಸಮಾಧಾನಗೊಂಡಿರುವ ಶಾಸಕರಿಗೆ ನಿಗಮ-ಮಂಡಳಿ ಸ್ಥಾನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ಮುಂದಿನ ಒಂದು ವಾರದೊಳಗೆ ಸಿಎಂ ಹಾಗೂ ಉಪ ಮುಖ್ಯಮಂತ್ರಿಗಳು ಚರ್ಚಿಸಿ 30 ಶಾಸಕರನ್ನು ನೇಮಕ ಮಾಡಲಿದ್ದಾರೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ ಕೆಲ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವುದರಿಂದ ಅವರ ಓಲೈಕೆಗೂ ತೆರೆಯಲ್ಲಿ ಕಸರತ್ತು ನಡೆಯುತ್ತಿದೆ. ಈ ನಡುವೆ ನಿಗಮ-ಮಂಡಳಿ‌ ಸ್ಥಾನಕ್ಕೆ ತೃಪ್ತರಾಗುತ್ತಾರಾ ಎಂಬುವುದು ಕುತೂಹಲ ಮೂಡಿಸಿದೆ.

ಹಾಸನ ಜಿಲ್ಲೆಯನ್ನು ನಂ.1 ಮಾಡಿದವರಿಗೆ ಅವಾರ್ಡ್‌ : ಸಚಿವ ಹೆಚ್.ಡಿ.ರೇವಣ್ಣ

Thursday, June 14th, 2018
h-d-revanna

ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಜಿಲ್ಲೆಯೂ ಎಲ್ಲಾ ಕ್ಷೇತ್ರದಲ್ಲಿಯೂ ನಂ.1 ಮಾಡಬೇಕು. ಉತ್ತಮ ಕಾರ್ಯ ಮಾಡುವ ಪಿಡಿಓ ಮತ್ತು ಕಾರ್ಯದರ್ಶಿಗಳಿಗೆ ಅವಾರ್ಡ್ ನೀಡುವುದಾಗಿ ಸಚಿವರು ಘೋಷಿದರು. 25 ರಿಂದ 50 ಸಾವಿರ ರೂ. ವರೆಗೂ ಬಹುಮಾನದೊಂದಿಗೆ ಪ್ರಮಾಣಪತ್ರ ನೀಡುವುದಾಗಿ ತಿಳಿಸಿದರು. 600ಕ್ಕೂ ಹೆಚ್ಚು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರಿಂದ ಹೇಮಾವತಿ ಸಂಭಾಗಣ ತುಂಬಿ ತುಳುಕುತ್ತಿತ್ತು. ಸಂಭಾಗಣದಲ್ಲಿ ಕೂರಲು ಸ್ಥಳವಿಲ್ಲದೇ ಹೊರಾಂಗಣದಲ್ಲಿ, ಮೀಟಿಂಗ್ […]

ಜಯನಗರ ಶಾಸಕಿ ಸೌಮ್ಯ ರೆಡ್ಡಿಯನ್ನು ಅಭಿನಂದಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!

Thursday, June 14th, 2018
siddaramaih

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ಜಯಗಳಿಸಿರುವ ಸೌಮ್ಯ ರೆಡ್ಡಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದರು. ತಮ್ಮ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದ ಸೌಮ್ಯ ರೆಡ್ಡಿ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರು ನಗರದ 28 ಕ್ಷೇತ್ರದ ಪೈಕಿ 16 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಶೇ.38 ರಷ್ಟು ಮತ ಲಭಿಸಿದೆ‌. ಈಗ ಇನ್ನೆರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ರಾಜ್ಯದ ಜನತೆಯ ಒಲವು ನಮ್ಮೊಂದಿಗೆ ಇದೆ ಎಂದು ವಿಶ್ವಾಸ […]

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಲ್ಲಿ ಬಿಜೆಪಿ ಪಾತ್ರವಿಲ್ಲ: ಜಗದೀಶ್ ಶೆಟ್ಟರ್

Thursday, June 14th, 2018
jagadish-shetter

ಹುಬ್ಬಳ್ಳಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಲ್ಲಿ ಬಿಜೆಪಿ ಪಾತ್ರವಿಲ್ಲ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ಯ ಎಸ್‌ಐಟಿ ಅಧಿಕಾರಿಗಳು ಕೆಲವರನ್ನು ಬಂಧಿಸಿದ್ದಾರೆ. ಇನ್ನು ಅವರ ಮೇಲೆ ತನಿಖೆಯಾಗಬೇಕು. ತನಿಖೆ ನಂತರ ತಪ್ಪಿತಸ್ಥರು ಯಾರೆಂದು ಗೊತ್ತಾಗಲಿದೆ. ತಪ್ಪು ಯಾರೇ ಮಾಡಿದ್ರು ಅವರಿಗೆ ಶಿಕ್ಷೆಯಾಗಲಿ ಎಂದರು. ಇದೇ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾವು […]

ನಲಪಾಡ್‌ಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಮಂಜೂರು

Thursday, June 14th, 2018
nalapad

ಬೆಂಗಳೂರು: ವಿದ್ವತ್‌ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ನಲಪಾಡ್‌ ಹ್ಯಾರಿಸ್‌ಗೆ ಕೊನೆಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ನಲಪಾಡ್ ಹ್ಯಾರಿಸ್‌‌ಗೆ ಜಾಮೀನು ಮಂಜೂರಾಗಿದೆ. ನ್ಯಾಯಮೂರ್ತಿ ಮೈಕಲ್ ಡಿ. ಕುನ್ಹಾ ಈ ಆದೇಶ ನೀಡಿದ್ದಾರೆ. 2 ಲಕ್ಷ ಬಾಂಡ್‌ ಮತ್ತು ಇಬ್ಬರ ಶೂರಿಟಿ ಜೊತೆಗೆ ಸಾಕ್ಷ್ಯ ನಾಶ ಮಾಡದಂತೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ನಲಪಾಡ್ 116 ದಿನಗಳ ಜೈಲು ವಾಸ ಅಂತ್ಯಗೊಂಡಂತಾಗಿದೆ. ನಲಪಾಡ್ ಪರ ಹಿರಿಯ […]

ಉನ್ನತ ಶಿಕ್ಷಣ ಖಾತೆ ತಾವೇ ನಿಭಾಯಿಸಲು ಸಿಎಂ ನಿರ್ಧಾರ?

Thursday, June 14th, 2018
kumarswamy

ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಪಡೆಯಲು ಸಚಿವ ಜಿ.ಟಿ.ದೇವೇಗೌಡರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಆ ಖಾತೆಯನ್ನು ತಾವೇ ನಿಭಾಯಿಸಲು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಎಂ ಕುಮಾರಸ್ವಾಮಿ ಅವರು ನಿನ್ನೆ ವಿಧಾನಸೌಧದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದ್ದರು. ಆದರೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಸಭೆಗೆ ಗೈರಾಗಿದ್ದರು. ಆರಂಭದಿಂದಲೂ ಉನ್ನತ ಶಿಕ್ಷಣ ಖಾತೆಯನ್ನು ಒಪ್ಪಲು ಹಿಂದೇಟು ಹಾಕುತ್ತಿರುವ ಸಚಿವ ಜಿ.ಟಿ.ದೇವೇಗೌಡ ಸಭೆಗೆ ಗೈರು ಹಾಜರಾಗಿದ್ದರು. ಉನ್ನತ ಶಿಕ್ಷಣ […]

ಮೂರು ಹುದ್ದೆ ನಿಭಾಯಿಸುತ್ತಿರುವ ಪರಮೇಶ್ವರ್‌ಗೆ ನಿರಾಳತೆ ಯಾವಾಗ!?

Thursday, June 14th, 2018
g-parameshwara

ಬೆಂಗಳೂರು: ಕಳೆದ 8 ವರ್ಷಗಳಿಂದ ನಿರಂತರವಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿಭಾಯಿಸುತ್ತಿರುವ ಡಾ. ಜಿ.ಪರಮೇಶ್ವರ್‍ ಇದೀಗ ಇದರ ಜತೆ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡ. ಮೂರು ಜವಾಬ್ದಾರಿಯುತ ಹುದ್ದೆಯನ್ನು ಸದ್ಯ ನಿಭಾಯಿಸುತ್ತಿದ್ದರೂ ಆದಷ್ಟು ಬೇಗ ಪಕ್ಷದ ಹುದ್ದೆಯಿಂದ ನಿರಾಳರಾಗುವ ಆಶಯ ಹೊಂದಿದ್ದಾರೆ ಒಂದೆಡೆ ಪಕ್ಷದ ಚಟುವಟಿಕೆ ನಿಭಾಯಿಸುವ ಕೆಪಿಸಿಸಿ ಅಧ್ಯಕ್ಷ ಗಾದಿ, ಇನ್ನೊಂದೆಡೆ ರಾಜ್ಯ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪರಮೇಶ್ವರ್‍ ಸರ್ಕಾರದ ಭಾಗವಾಗುತ್ತಿದ್ದಂತೆ ಕೆಪಿಸಿಸಿಗೆ ಹೊಸ ಸಾರಥಿಯ ಹುಡುಕಾಟ […]

ಆದಿಚುಂಚನಗಿರಿ ಮಠಕ್ಕೆ ಹೆಚ್‌ಡಿಕೆ ದಂಪತಿ ಭೇಟಿ…ಶ್ರೀಗಳಿಂದ ಸಿಎಂ, ಸಚಿವರಿಗೆ ಆಶೀರ್ವಾದ

Wednesday, June 13th, 2018
chanchanaguru

ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಕುಮಾರಸ್ವಾಮಿ ಅವರು ಪತ್ನಿ ಅನಿತಾ ಅವರೊಂದಿಗೆ ಆಗಮಿಸಿದ್ದರು. ಇಂದು ವಿಶೇಷ ಅಮವಾಸೆ ಪೂಜೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಸಿಎಂ ಅವರಿಗೆ ಶ್ರೀಮಠದಿಂದ ಮಂಗಳವಾದ್ಯ, ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಸಚಿವ ಸಿ.ಎಸ್. ಪುಟ್ಟರಾಜು, ಶಾಸಕ ಸುರೇಶ್ ಗೌಡ, ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ ಹೆಚ್‌ಡಿಕೆಗೆ ಸಾಥ್‌ ನೀಡಿದರು. ಹೆಚ್‌ಡಿಕೆ ದಂಪತಿ ಮಠದಲ್ಲಿ ಶ್ರೀಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಅವರಿಗೆ ಸಚಿವ ಪುಟ್ಟರಾಜು ಕುಟುಂಬ, ಶಾಸಕ ಸುರೇಶ್ ಗೌಡ […]

ಜಯನಗರ, ಪರಿಷತ್‌‌ ಚುನಾವಣೆ: ಗೆದ್ದ ಅಭ್ಯರ್ಥಿಗಳಿಗೆ ಪರಮೇಶ್ವರ್ ಶುಭಾಶಯ

Wednesday, June 13th, 2018
parameshwar

ಬೆಂಗಳೂರು: ರಾಜ್ಯ ವಿಧಾನಸಭೆಯ ಜಯನಗರ ಕ್ಷೇತ್ರದಲ್ಲಿ ಹಾಗೂ ವಿಧಾನ ಪರಿಷತ್‌ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಸಾಧಿಸಿದ ಗೆಲುವಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ಸಂತಸ ಹಂಚಿಕೊಂಡಿರುವ ಅವರು ಗೆದ್ದ ಅಭ್ಯರ್ಥಿಗಳಿಗೆ ಈ ಮೂಲಕ ಅಭಿನಂದನೆ ಕೂಡ ಸಲ್ಲಿಸಿದ್ದಾರೆ. ಜಯನಗರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅನುಕಂಪದ ಅಲೆಯನ್ನೂ ಮೀರಿ ಉತ್ತಮ ಗೆಲುವು ಸಾಧಿಸಿರುವ ಸೌಮ್ಯ ರೆಡ್ಡಿಗೆ ಪರಮೇಶ್ವರ್ ಶುಭಾಶಯ ತಿಳಿಸಿದ್ದಾರೆ. ಈ ಗೆಲುವಿಗೆ ಕಾರಣರಾದ ಮತದಾರರನ್ನು ಅಭಿನಂದಿಸಿರುವ […]