ಗಲ್ಫ್ ರಾಷ್ಟ್ರಗಳ ಕನ್ನಡಿಗರೊಂದಿಗೆ ’ಓಂ’ ಚಿತ್ರದ 25 ನೆಯ ವರ್ಷದ ಸಂಭ್ರಮ ಆಚರಿಸಿದ ರಿಯಲ್ ಸ್ಟಾರ್ ಉಪೇಂದ್ರ
Tuesday, May 26th, 2020ದುಬೈ: ವಿಶ್ವದಾದ್ಯಂತ ಕೋರೊನಾ ಮಹಾಮಾರಿ, ಕೋವಿಡ್ – 19 ನಿಂದಾಗಿ, ಗಲ್ಫ್ ರಾಷ್ಟ್ರಗಳಲ್ಲಿ ಆದಂತಹ ಲಾಕ್ಡೌನ್, ಸೀಲ್ಡೌನ್, ಕರ್ಪ್ಯೂವಿನ ದೆಸೆಯಿಂದ ಮನೆಯಲ್ಲೆ ಕುಳಿತು ಬೇಸರದಿಂದಿದ್ದ ಗಲ್ಫ್ ರಾಷ್ಟ್ರಗಳ ಕನ್ನಡಿಗರಿಗೆ, ಓವರ್‌ಸೀಸ್ ಕನ್ನಡ ಮೂವೀಸ್ ನ ವತಿಯಿಂದ ಆಯೋಜಿಸಲ್ಪಟ್ಟ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಜೂಮ್ ವೀಡಿಯೊ ಸಂವಹನ ಹಾಗೂ ’ಓಂ’ ಚಿತ್ರದ 25 ನೆಯ ವರ್ಷದ ಸಂಭ್ರಮದ ಆಚರಣೆಯ ಬಗ್ಗೆ ತಾ| 17-05-2020 ರಂದು ಯು.ಎ.ಇ ಮತ್ತು ಒಮಾನ್ ರಾಷ್ಟ್ರಗಳ ಕನ್ನಡಿಗರಿಗೆ ಮತ್ತು ತಾ| 18-05-2020 ರಂದು ಕುವೈತ್, ಕತಾರ್, ಬಹರೈನ್ ರಾಷ್ಟ್ರಗಳ ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದು ಗಲ್ಫ್ ರಾಷ್ಟ್ರಗಳ ಕನ್ನಡಿಗರು ರಿಯಲ್ ಸ್ಟಾರ್ ಉಪೇಂದ್ರರವರ ಜೊತೆ ವೀಡಿಯೊ ಮೂಲಕ ಸಂವಹನ ನೆಡೆಸಿ ಬಹಳ ಸಂತಸಪಟ್ಟರು.
ಕಾರ್ಯಕ್ರಮವನ್ನು ಸುಬ್ರಹ್ಮಣ್ಯ ಹೆಬ್ಬಾಗಿಲು ಕತಾರ್ ಇವರು ಆಯೋಜಿಸಿದ್ದು, ದುಬೈಯಿಂದ ದೀಪಕ್ ಸೋಮಶೇಖರ್ ಮತ್ತು ಸಜನ್ ದಾಸ್ ರವರು ತಾಂತ್ರಿಕ ನೆರವು ನೀಡಿ, ಕಾರ್ಯಕ್ರಮ ನಿರ್ವಹಿಸಿದ್ದು, ಕುವೈಟ್ ನಿಂದ ಸುರೇಶ್ ರಾವ್ ನೇರಂಬಳ್ಳಿಯವರು ಸ್ವಾಗತಿಸಿ, ಬಹರೈನ್ ನಿಂದ ರಾಜಕುಮಾರ್ ರವರು ಬೆಂಗಳೂರಿನಿಂದ ದರ್ಶನ್ ಸೋಮಶೇಖರ್ ರವರು ಸಹಕರಿಸಿದ್ದು ಕಾರ್ಯಕ್ರಮದ ಯಶಸ್ವಿಗೆ ಭಾಜನರಾದರು. ಗಲ್ಫ್ ರಾಷ್ಟ್ರಗಳ ಕನ್ನಡಿಗರೆಲ್ಲರ ಪರವಾಗಿ ರಿಯಲ್ ಸ್ಟಾರ್ ಉಪೇಂದ್ರರವರಿಗೆ ಧನ್ಯವಾದ ಸಮರ್ಪಿಸಲಾಯಿತು.