ಉದ್ಯೋಗ ಮೇಳ 88 ಮಂದಿ ಉದ್ದಿಮೆದಾರರು, 1,737 ಮಂದಿ ಉದ್ಯೋಗಾಂಕ್ಷಿಗಳು

Sunday, September 25th, 2011
Job fire

ಮಂಗಳೂರು: ಕೌಶಲ ಆಯೋಗ, ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ನಗರದ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಶನಿವಾರ ಆರಂಭಗೊಂಡ 32ನೇ ಬೃಹತ್‌ ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಮೇಳದ ಮೊದಲ ದಿನ 1,737 ಮಂದಿ ಉದ್ಯೋಗಾಂಕ್ಷಿ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಉದ್ಯೋಗ ಮೇಳದಲ್ಲಿ 88 ಮಂದಿ ಉದ್ದಿಮೆದಾರರು ಭಾಗವಹಿಸಿದ್ದರು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಜೆಒಸಿ, ಐಟಿಐ, ಡಿಪ್ಲೊಮಾ, ಪದವಿ, ಅಂಗವಿಕಲ ಅಭ್ಯರ್ಥಿಗಳಲ್ಲಿ ಒಟ್ಟು […]

ಪುರಭವನದಲ್ಲಿ ದರ್ಜಿಗಳ ಜಿಲ್ಲಾ ಮಟ್ಟದ ಬೃಹತ್‌ ಸಮಾವೇಶ ಹಾಗೂ ಪಿಂಚಣಿ ಕಾರ್ಡು ವಿತರಣೆ

Wednesday, September 21st, 2011
Tailors Convention

ಮಂಗಳೂರು: ಕರ್ನಾಟಕ ಸ್ಟೇಟ್‌ ಟೈಲರ್ಸ್‌ ಅಸೋಸಿಯೇಶನ್‌ ವತಿಯಿಂದ ನಗರದ ಪುರಭವನದಲ್ಲಿ ಮಂಗಳವಾರ ದರ್ಜಿಗಳ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಬೃಹತ್‌ ಸಮಾವೇಶ ಹಾಗೂ ಟೈಲರ್ಗಳ ಪಿಂಚಣಿ ಕಾರ್ಡು ವಿತರಣೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಸಮಾವೇಶವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೊಸ ಪಿಂಚಣಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರವು ಈಗ ನೀಡುತ್ತಿರುವ ಸಹಾಯಧನವನ್ನು ಮುಂದಿನ 10 ವರ್ಷಗಳಿಗೆ ವಿಸ್ತರಿಸಬೇಕು ಎನ್ನುವ ಸಂಘಟನೆ ಬೇಡಿಕೆಗೆ […]

ದೋಣಿ ದುರಂತ: ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ 1 ಲ.ರೂ ಪರಿಹಾರ

Sunday, September 18th, 2011
Palemar

ಮಂಗಳೂರು: ಪಣಂಬೂರು ಸಮೀಪ ಸಂಭವಿಸಿದ ದೋಣಿ ದುರಂತದಲ್ಲಿ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ಸರಕಾರದ ವತಿಯಿಂದ ಪರಿಹಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ತಿಳಿಸಿದ್ದಾರೆ. ಶನಿವಾರ ಹಳೆ ಬಂದರು ವಿನುಗಾರಿಕಾ ದಕ್ಕೆಯಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಸರಕಾರ ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ತಲಾ 1 ಲ.ರೂ. ಹಾಗೂ ಗಾಯಾಳುಗಳಿಗೆ ತಲಾ 25,000 ರೂ. ಪರಿಹಾರ ನೀಡಲಿದೆ. ಈಗಾಗಲೇ ದೋಣಿ ದುರಂತದ ವಿವರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಪರಿಹಾರ ನೀಡಲು ಅವರು ಒಪ್ಪಿಗೆ […]

ಗಿಳಿ ಮಾರಾಟ ಆರೋಪಿ ಕಾವೂರಿನ ದೀಪಕ್‌ ಬಂಧನ

Thursday, September 15th, 2011
parrot-sale

ಮಂಗಳೂರು: ಕಾವೂರಿನ ದೀಪಕ್‌ (25) ಎಂಬಾತ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳ ಬಳಿಯ ಅಂಗಡಿಯೊಂದರ ಬಳಿ ಕಾಡು ಗಿಳಿಗಳನ್ನು ಅಕ್ರಮವಾಗಿ ಮಾರಾಟ ಮಾಡುತಿದ್ದ ವೇಳೆ ಬುಧವಾರ ಮಂಗಳೂರು ಅರಣ್ಯ ಸಂಚಾರಿ ದಳದ ವಿಶೇಷ ಪೊಲೀಸರು ಪತ್ತೆ ಹಚ್ಚಿ ಆತನ ಬಳಿ ಇದ್ದ ಹಸಿರು ಬಣ್ಣದ 13 ಕಾಡು ಗಿಳಿಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿ ದೀಪಕ್‌ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ. ಈ ಗಿಳಿಗಳನ್ನು ಕಾಸರಗೋಡಿನ ವ್ಯಕ್ತಿಯೊಬ್ಬರು ಪೂರೈಕೆ ಮಾಡಿರುವುದಾಗಿ ಆತ ವಿಚಾರಣೆಯ ವೇಳೆ […]

comming soon

Thursday, September 15th, 2011

comming soon