ಸೈನ್ಸ್ ಆನ್ಸರ್ ಭೂಮಿಗೆ ಪ್ರಳಯ ಬರೋದೆ ಇಲ್ಲ !

Monday, December 10th, 2012
Doomsday

ಮಂಗಳೂರು :ಬಹಳಷ್ಟು ಮಂದಿ ಕಾಲಜ್ಞಾನಿಗಳು, ಕಣಿ ಜ್ಯೋತಿಷಿಗಳು ಹಾಗೂ ಪೊಳ್ಳು ವಿಜ್ಞಾನಿಗಳು ಈ ವರ್ಷದ ಡಿಸೆಂಬರ್ 21ರಂದು ಭೂಮಿ ಪ್ರಳಯಕ್ಕೆ ಆಹುತಿಯಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಮೆಸೊ ಅಮೆರಿಕನ್ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ನ 5125 ವರ್ಷ ಚಕ್ರವು ಡಿಸೆಂಬರ್ 21 ರಂದು ಕೊನೆಯಾಗಲಿರುವುದೇ ಈ ವದಂತಿಗೆ ಕಾರಣ. ಪ್ರಳಯದ ಕುರಿತಾಗಿ ಭವಿಷ್ಯ ನುಡಿಯುವವರು ಕಪ್ಪುರಂಧ್ರ, ಕ್ಷುದ್ರಗ್ರಹ, ಧೂಮಕೇತು ಅಥವಾ ಅರಿವಿಗೆ ಬರದ ವಿಶ್ವದ ಸಾಧ್ಯತೆಗಳೊಂದಿಗೆ ಭೂಮಿಯು ಘರ್ಷಣೆಗೊಳಪಡುವುದರಿಂದಾಗಿ ಈ ವಿನಾಶ ಸಂಭವಿಸಲಿದೆ ಎಂದು ವಾದಿಸುತ್ತಾರೆ. ಬೃಹತ್ […]

ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಮೂರ್ಖತನದ ನಿರ್ಧಾರ

Saturday, November 24th, 2012
Plastic Bag

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಎನ್ನುವ ಬೋರ್ಡ್ ತಗಲಿಸಿ ಬಹಳ ದಿನಗಳೇ ಸರಿದು ಹೋದವು.. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಕರ್ನಾಟಕದ ಮಟ್ಟಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತಯಾರಿಸುವ ಅತಿ ಹೆಚ್ಚು ಕಂಪೆನಿಗಳು ಇರುವುದು ಮಂಗಳೂರಿನಲ್ಲಿ. ಇದಕ್ಕಾಗಿ ಉದ್ಯಮಿಗಳು ಕೋಟಿಗಳ ರೂಪದಲ್ಲಿ ಬ್ಯಾಂಕ್ ಸಾಲ ಮಾಡಿ ಬಂಡವಾಳ ಹೂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಅಂದಾಜು 50ರಷ್ಟು ಪ್ಲಾಸ್ಟಿಕ್ ತಯಾರಿಕೆ ಘಟಕಗಳು ಮತ್ತು ವರ್ತಕರು ಇದ್ದಾರೆ. ಸುಮಾರು ಐದು ಸಾವಿರ ಮಂದಿ ನೇರವಾಗಿ […]

ದೀಪಗಳ ಹಬ್ಬ ದೀಪಾವಳಿಯಲ್ಲಿ ಕತ್ತಲು ಬದುಕಿಗೆ ಬೆಳಕು ಮೂಡಲಿ

Tuesday, November 13th, 2012
Mahabaaratha

ಮಂಗಳೂರು :ಹಬ್ಬ ಎಂದಾಕ್ಷಣ ಮುಖ್ಯವಾಗಿ ನೆನಪಿಗೆ ಬರುವುದೇ ದೀಪಾವಳಿ. ಬಹುಶಃ ಪಟಾಕಿ ಸಿಡಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಾಲ್ಯದಿಂದಲೂ ಮಕ್ಕಳಿಗೆ ಅತ್ಯಂತ ಪ್ರಿಯವಾಗಿ ಬಿಟ್ಟಿರುವುದೇ ಮನದಂಗಳದಲ್ಲಿ ಈ ಮನಸ್ಥಿತಿ ಚಿರಸ್ಥಾಯಿಯಾಗಲು ಕಾರಣವೂ ಇರಬಹುದು. ಸಮಾಜದ ಎಲ್ಲ ವರ್ಗದವರೂ, ಜಾತಿ-ಸಮುದಾಯದವರೂ ಭೇದ-ಭಾವ ಮರೆತು ಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕೂಡ ದೀಪಾವಳಿಯೇ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ಅದೇ ರೀತಿ ದೀಪಾವಳಿ ಕೂಡ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕೆಂಬ ಸಂದೇಶ […]

ಕರಾವಳಿಯಲ್ಲಿ ತಣ್ಣಗೆ ಅಲುಗಾಡಿಸಿದ ಭೂಕಂಪ ಪ್ರಳಯದ ಸೂಚನೆಯಾ?

Friday, October 26th, 2012
Apocalypse in Karavali

ಮಂಗಳೂರು : 2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ರಾಜ್ಯದಲ್ಲಿ ಅದರಲ್ಲೂ ಪರಶುರಾಮನ ಸೃಷ್ಟಿ ಎಂದೇ ಕರೆಯಲಾಗುವ ಕರಾವಳಿಯ ನಾನಾ ಭಾಗಗಳಲ್ಲಿ ಈ ಭೂಕಂಪನದ ಅನುಭವ ಶ್ರೀಸಾಮಾನ್ಯನಿಗೂ ಆಗಿದೆ. ಈ ಮೂಲಕ 2012ರಲ್ಲಿ ಜಗತ್ತಿನ ವಿನಾಶ ಅರ್ಥಾತ್ ಪ್ರಳಯದ ಮೂನ್ಸೂಚನೆಯೇ ಈ ಭೂಕಂಪನದ ಮೂಲಕ ಬಂದಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಅಂದಹಾಗೆ ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾತೀವ್ರವಾಗಿಯೇ ಆಗುತ್ತಿದೆ. ಅಸಲಿಗೆ ಇಂತಹದ್ದೊಂದು ಪ್ರಶ್ನೆ […]

ಪೆಟ್ರೋಲ್ ದರ ಎತ್ತ ಸಾಗುತ್ತಿದೆ?

Monday, September 26th, 2011
Petrol prize

ಕಳೆದ 2009ರ ಜುಲೈ ತಿಂಗಳಲ್ಲಿ ಪೆಟ್ರೋಲ್ ದರ ನಿಯಂತ್ರಣವನ್ನು ಸರಕಾರವು ತೈಲ ಕಂಪನಿಗಳ ಸುಪರ್ದಿಗೆ ಒಪ್ಪಿಸಿದ ಬಳಿಕ ಎರಡು ವರ್ಷಗಳಲ್ಲಿ 12ನೇ ಬಾರಿ ಪೆಟ್ರೋಲ್ ದರ ಏರಿಸಲಾಗಿದೆ. ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿಕೆಯಾಗುತ್ತಿದೆ, ಅದಕ್ಕೆ ಅನುಸಾರವಾಗಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಬೆಲೆ ಪರಿಷ್ಕರಿಸಲಾಗುತ್ತದೆ ಎಂದು ಅಂದು ಘೋಷಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆಗಳು ಹಲವಾರು ಬಾರಿ ಏರಿವೆ, ಇಳಿಕೆಯೂ ಆಗಿವೆ. ಆದರೆ ಭಾರತದಲ್ಲಿ ಮಾತ್ರ ಏರುತ್ತಲೇ ಇದೆ! ಜನರನ್ನು ಹೇಗೆ ಮೋಸಪಡಿಸುವುದು ಅಂತ ಇವರನ್ನು ನೋಡಿ […]

ತುಳು ಚಿತ್ರ ನಿರ್ಮಾಪಕ ವಿಜಯುಕಮಾರ್‌ ಕೊಡಿಯಾಲ್‌ಬೈಲ್‌ ಜೊತೆ ಪತ್ರಿಕಾ ಸಂವಾದ

Friday, September 16th, 2011
Asal Film

ಮಂಗಳೂರು: ದ.ಕ. ಜಿಲ್ಲಾ ಪತ್ರಕರ್ತರ ಸಂಘ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ, ರಂಗ ನಿರ್ದೇಶಕ ವಿಜಯುಕಮಾರ್‌ ಕೊಡಿಯಾಲ್‌ಬೈಲ್‌ ಮಾತನಾಡಿ ತುಳು ಚಿತ್ರರಂಗದ ಅಳಿವು ಉಳಿವಿನ ಬಗ್ಗೆ ವಿವರಿಸಿದರು. ತುಳು ನಿರ್ಮಾಪಕರು ಸಂಘಟನೆಯೊಂದನ್ನು ರೂಪಿಸುವ ಅಗತ್ಯವಿದ್ದು, ಕಡಿಮೆ ವೆಚ್ಚದಲ್ಲಿ ತುಳು ಚಿತ್ರ ನಿರ್ಮಾಣ ಮಾಡಲು ಸಂಘಟನೆಯ ಮುಲಕ್ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ಫಿಲ್ಮ್ ಚೇಂಬರ್‌ಗೆ ನೊಂದಾಯಿತವಾಗುವಂತೆ ತುಳು ಚಿತ್ರರಂಗದ ಸಂಘಟನೆಯೊಂದನ್ನು ರಚಿಸಬೇಕು. ಆ ಮೂಲಕ ಹಲವಾರು ಸವಲತ್ತುಗಳನ್ನು ನಾವು ಪಡೆಯಲು ಸಾಧ್ಯ. […]

ಗಿಳಿ ಮಾರಾಟ ಆರೋಪಿ ಕಾವೂರಿನ ದೀಪಕ್‌ ಬಂಧನ

Thursday, September 15th, 2011
parrot-sale

ಮಂಗಳೂರು: ಕಾವೂರಿನ ದೀಪಕ್‌ (25) ಎಂಬಾತ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಳ ಬಳಿಯ ಅಂಗಡಿಯೊಂದರ ಬಳಿ ಕಾಡು ಗಿಳಿಗಳನ್ನು ಅಕ್ರಮವಾಗಿ ಮಾರಾಟ ಮಾಡುತಿದ್ದ ವೇಳೆ ಬುಧವಾರ ಮಂಗಳೂರು ಅರಣ್ಯ ಸಂಚಾರಿ ದಳದ ವಿಶೇಷ ಪೊಲೀಸರು ಪತ್ತೆ ಹಚ್ಚಿ ಆತನ ಬಳಿ ಇದ್ದ ಹಸಿರು ಬಣ್ಣದ 13 ಕಾಡು ಗಿಳಿಗಳನ್ನು ವಶ ಪಡಿಸಿಕೊಂಡಿದ್ದಾರೆ. ಆರೋಪಿ ದೀಪಕ್‌ ವಿರುದ್ಧ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ. ಈ ಗಿಳಿಗಳನ್ನು ಕಾಸರಗೋಡಿನ ವ್ಯಕ್ತಿಯೊಬ್ಬರು ಪೂರೈಕೆ ಮಾಡಿರುವುದಾಗಿ ಆತ ವಿಚಾರಣೆಯ ವೇಳೆ […]

comming soon

Thursday, September 15th, 2011

comming soon