ಎರಡು ತಿಂಗಳಿಗೊಮ್ಮೆ ಪಡಿತರ ವಿತರಣೆಯ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ: ಯು.ಟಿ.ಖಾದರ್

Thursday, January 26th, 2017
U-T-Khadar

ಮಂಗಳೂರು: ಎರಡು ತಿಂಗಳಿಗೊಮ್ಮೆ ಪಡಿತರ ವಿತರಣೆಯ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ರಮದ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದು. ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ. ಎರಡು ತಿಂಗಳು ಅಥವಾ ಮೂರು ತಿಂಗಳ ಪಡಿತರವನ್ನು ಒಮ್ಮೆಲೆ ವಿತರಿಸಿದರೆ ಗ್ರಾಹಕರು ಪದೇ ಪದೆ ಪಡಿತರ ಅಂಗಡಿಗೆ ಬರುವುದು ತಪ್ಪುತ್ತದೆ. ಈ ಬಗ್ಗೆ ಜನತೆಯ ಅಭಿಪ್ರಾಯವನ್ನೂ ಸಂಗ್ರಹಿಸಲಾಗುತ್ತಿದೆ. […]

ಡಿಜಿಟಲ್ ಪಾವತಿಗಾಗಿರುವ ಡಿಜಿಧನ್ ಮೇಳದ 32ನೇ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಚಾಲನೆ

Thursday, January 26th, 2017
Dijidhan-Mela

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಡಿಜಿಟಲ್ ಪಾವತಿಗಾಗಿರುವ ಡಿಜಿಧನ್ ಮೇಳದ 32ನೇ ಕಾರ್ಯಕ್ರಮಕ್ಕೆ ಮಂಗಳೂರಿನಲ್ಲಿ ಚಾಲನೆ ದೊರೆತಿದೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮೇಳವನ್ನು ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಅವರು, ಭಾರತವನ್ನು ವಿಶ್ವದಲ್ಲೇ ಪರಿಣಾಮಕಾರಿ, ಪ್ರಾಮಾಣಿಕ ಹಾಗೂ ಉತ್ತರದಾಯಿ ದೇಶವನ್ನಾಗಿ ಮಾಡುವ ಸಲುವಾಗಿ ಡಿಜಿಟಲ್ ಇಂಡಿಯಾ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಇಡೀ ದೇಶವನ್ನು ಬದಲಾವಣೆಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು. ದೊಡ್ಡ ನೋಟ ರದ್ಧತಿಯಿಂದ ಕಪ್ಪುಹಣ ಹಾಗೂ ಭ್ರಷ್ಟಾಚಾರಕ್ಕೆ ಮಾತ್ರ […]

ಚರ್ಚ್‌ಗಳಲ್ಲಿ ರಾಷ್ಟ್ರೀಯ ಚಿಂತನೆಗಳ ಬೋಧನೆಗೂ ಅವಕಾಶ ಕಲ್ಪಿಸಬೇಕು: ಫ್ರಾಂಕ್ಲಿನ್ ಮೊಂತೆರೋ

Thursday, January 26th, 2017
Frankin Monthero

ಮಂಗಳೂರು: ಚರ್ಚ್‌ಗಳಲ್ಲಿ ಧಾರ್ಮಿಕ ಬೋಧನೆಯೊಂದಿಗೆ ರಾಷ್ಟ್ರೀಯ ಚಿಂತನೆಗಳ ಬೋಧನೆಗೂ ಒತ್ತು ನೀಡುವಂತೆ ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ಧಾರ್ಮಿಕ ನಾಯಕರನ್ನು ಆಗ್ರಹಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ವೇದಿಕೆಯ ಸ್ಥಾಪಕ ಸಂಚಾಲಕ ಫ್ರಾಂಕ್ಲಿನ್ ಮೊಂತೆರೋ, ಭಾರತೀಯ ಕ್ರೈಸ್ತರು ರಾಷ್ಟ್ರದ ಬಗ್ಗೆ ಸದಾ ಚಿಂತನೆ ಹೊಂದಿದ್ದು, ದೇಶ ಹಿತಕ್ಕೆ ಸದಾ ಸ್ಪಂದಿಸುವ ಮನಸ್ಸುಳ್ಳವರಾಗಿದ್ದಾರೆ. ಆದರೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಜಾಗತಿಕ ಅಥವಾ ಆಂತರಿಕವಾಗಿ ಘಟನೆಗಳು ನಡೆದಾಗ ಕ್ರೈಸ್ತ ಸಮಾಜ ಸಂಘಟಿತವಾಗಿ ಒಕ್ಕೊರಲಿನಿಂದ ಖಂಡಿಸುವ ಮತ್ತು ವಿರೋಧಿಸುವ ಮನೋಭಾವನೆಯನ್ನು ಮತ್ತಷ್ಟು ಬೆಳೆಸಿಕೊಳ್ಳುವ ಮೂಲಕ ರಾಷ್ಟ್ರ […]

ಗ್ರಾಮೀಣ ಜನರ ಬಾಳಿಗೆ ಬೆಳಕಾದ ಗಿರೀಶ್ ಭಾರದ್ವಾಜ್ ಗೆ ಪದ್ಮಶ್ರೀ ಪ್ರಶಸ್ತಿ

Thursday, January 26th, 2017
Bharadwaj

ಮಂಗಳೂರು: ಗ್ರಾಮೀಣ ಜನರ ಬಾಳಿಗೆ ಬೆಳಕಾದವರು ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್. ಮಳೆಗಾಲ ಹತ್ತಿರ ಬರುತ್ತಿದ್ದಂತೆ ನದಿಗಳನ್ನು ಹಾದುಹೋಗಲು ಹರಸಾಹಸ ಪಡುವವರಿಗೆ ಸೇತುವೆಗಳ ಮೂಲಕ ಅವರ ಮಾರ್ಗಗಳನ್ನು ಸುಗಮಗೊಳಿಸಿದವರು. ಇವರ ಈ ವಿಶಿಷ್ಟ ಸೇವೆಗೆ ಪದ್ಮಶ್ರೀ ಅರಸಿಬಂದಿದೆ. ಕಳೆದ ಮೂರು ದಶಕಗಳಿಂದ ದೇಶದ ವಿವಿಧೆಡೆ ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ವಿಶ್ವವಿಖ್ಯಾತಿ ಪಡೆದ ಗಿರೀಶ್ ಭಾರದ್ವಾಜ್ ಮೂಲತ: ಸುಳ್ಯದ ಅರಂಬೂರಿನವರು. ಬಿ.ಇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಗಿರೀಶ್ ಅವರು ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ಕಾವೇರಿ […]

ಖೋಟಾನೋಟು ಹೊಂದಿದ್ದ ವ್ಯಕ್ತಿಯೋರ್ವನಿಗೆ ಮಂಗಳೂರಿನ ಸತ್ರ ನ್ಯಾಯಾಲಯದಿಂದ ಐದು ವರ್ಷ ಜೈಲು ಶಿಕ್ಷೆ

Wednesday, January 25th, 2017
Abdul-Khadar

ಮಂಗಳೂರು: ಖೋಟಾನೋಟು ಹೊಂದಿದ್ದ ವ್ಯಕ್ತಿಯೋರ್ವನಿಗೆ ಮಂಗಳೂರಿನ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ಸಹಿತ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ವಿಧಿಸಲು ತಪ್ಪಿದಲ್ಲಿ ಅಪರಾಧಿ ಆರು ತಿಂಗಳ ಹೆಚ್ಚುವರಿ ಕಾರಾಗೃಹ ಸಜೆ ಅನುಭವಿಸುವಂತೆ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ಬಿಳಗಿ ತೀರ್ಪಿನಲ್ಲಿ ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕುಳ ಗ್ರಾಮದ ಅರಿಪ್ಪುಕಟ್ಟ ನಿವಾಸಿ ಅಬ್ದುಲ್‌ಖಾದರ್(62) ಶಿಕ್ಷೆಗೊಳಗಾದ ಅಪರಾಧಿ. ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಕೆ. ವಾದಿಸಿದ್ದರು. 2002ರ […]

ಬೀಡಿ ಕಾರ್ಮಿಕರಿಗೆ ನಗದು ವೇತನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಬೀಡಿ ಕಾರ್ಮಿಕರ ಪ್ರತಿಭಟನೆ

Wednesday, January 25th, 2017
Beedi workers

ಮಂಗಳೂರು: ಕೇಂದ್ರ ಸರ್ಕಾರವು ರೂ.500 ಮತ್ತು ರೂ.1000 ನೋಟಿನ ಮಾನ್ಯತೆ ರದ್ದು ಮಾಡಿರುವುದು ಮಾತ್ರವಲ್ಲದೆ ನಗದು ರಹಿತ ವೇತನ ವ್ಯವಸ್ಥೆಗೆ ಆದೇಶ ಹೊರಡಿಸಿದೆ. ಆದರೆ ಕರಾವಳಿ ಜಿಲ್ಲೆಯ ಬೀಡಿ ಕಾರ್ಮಿಕರಿಗೆ ಚಾಲ್ತಿಯಲ್ಲಿರುವಂತೆ ನಗದು ವೇತನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಬೀಡಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಾಂಟ್ರಾಕ್ಟರ್‌ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫಿ ಮಾತನಾಡಿ, ನಗದು ರಹಿತ ವೇತನ ಪದ್ಧತಿ ಕರಾವಳಿ ಜಿಲ್ಲೆಯ ಬೀಡಿ ಕಾರ್ಮಿಕರು ಮತ್ತು ಕಾಂಟ್ರಾಕ್ಟರ್‌ರನ್ನು ಬೀದಿಗೆ […]

ಕಂಬಳದ ಬಗ್ಗೆ ತಡೆಯಾಜ್ಞೆ ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು: ರವಿಶಂಕರ ಪ್ರಸಾದ್

Wednesday, January 25th, 2017
BJP

ಮಂಗಳೂರು: ಕಂಬಳದ ಬಗ್ಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ ಈ ತಡೆಯಾಜ್ಞೆ ತೆರವುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಲು ಮುಂದಾಗಲಿ ಆಗ ಕೇಂದ್ರ ಸರ್ಕಾರ ಮುಕ್ತವಾಗಿ ಸ್ಪಂದಿಸಲಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಕೈಗೊಂಡ ಸುಗ್ರೀವಾಜ್ಞೆ ರೀತಿಯಲ್ಲೆ ಕರ್ನಾಟಕ ಸರ್ಕಾರ ಕಂಬಳ ಬಗ್ಗೆ ನಿರ್ಣಯ ಕೈಗೊಳ್ಳಲಿ ಕಂಬಳದ ಬಗ್ಗೆ ಮೋದಿ ಸರ್ಕಾರ ಗೌರವ ಇರಿಸಿದ್ದು ಸ್ಥಳೀಯ ಕಲೆ ಸಂಸ್ಕೃತಿ ಆಚರಣೆ ಕ್ರೀಡೆಗಳ ಬಗ್ಗೆ ಕೇಂದ್ರ ಸರ್ಕಾರ ಗೌರವ ಹೊಂದಿದೆ […]

ಕಂಬಳವನ್ನು ಉಳಿಸುವ ಸಲುವಾಗಿ ಜ. 28ರಂದು ನಡೆಯುವ ಹೋರಾಟಕ್ಕೆ ಜ್ಯಾತ್ಯಾತೀತವಾಗಿ ಬೆಂಬಲ

Wednesday, January 25th, 2017
District-Kambala-Committee1

ಮಂಗಳೂರು: ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಕಂಬಳವನ್ನು ಉಳಿಸುವ ಸಲುವಾಗಿ ಜ. 28ರಂದು ಮೂಡಬಿದ್ರೆಯಲ್ಲಿ ನಡೆಯುವ ಹೋರಾಟವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಸಭೆ ನಡೆಯಿತು. ಪಕ್ಷಾತೀತ, ಜ್ಯಾತ್ಯಾತೀತವಾಗಿ ನಡೆಯುವ ಹೋರಾಟಕ್ಕೆ ಎಲ್ಲರೂ ಬೆಂಬಲ ಘೋಷಿಸಿದ್ದಾರೆ. ಕಂಬಳ ಹಿಂಸೆಯನ್ನು ಪ್ರಚೋದಿಸುವಂತಹ ಕ್ರೀಡೆ ಅಲ್ಲ. ಕಾಲ ಕಾಲಕ್ಕೆ ಪೌಷ್ಟಿಕ ಆಹಾರವನ್ನುಂಡು, ದೇಹಕ್ಕೆ ಸೂಕ್ತ ಮಸಾಜು ಮಾಡಿಸಿಕೊಂಡು, ಕೆಸರು ಗದ್ದೆಯಲ್ಲಿ ಓಡುವ ಕೋಣಗಳು ಅತ್ಯಂತ ಆರೋಗ್ಯದಾಯಕವಾಗಿರುತ್ತದೆ. ಕೃಷಿಗೆ ಬಳಸುವ ಎತ್ತುಗಳನ್ನಾದರೂ ನಿರ್ವಿರ್ಯಗೊಳಿಸುತ್ತಾರೆ. ಆದರೆ, ಕಂಬಳದ […]

ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ 11 ಸಾವಿರ ಕಿ.ಮೀ. ಕ್ರಮಿಸಿದ ಮಂಗಲ ಗೋಯಾತ್ರೆ

Wednesday, January 25th, 2017
Mangala Go Yatre

ಮಂಗಳೂರು:  ದೇಶೀಯ ಗೋತಳಿಗಳ ಸಂರಕ್ಷಣೆಯ ಉದ್ದೇಶದಿಂದ ಶ್ರೀ ರಾಮಚಂದ್ರಾಪುರ ಮಠದ ನೇತೃತ್ವದಲ್ಲಿ ಕೈಗೊಂಡ ಮಂಗಲ ಗೋಯಾತ್ರೆ 11 ಸಾವಿರ ಕಿ.ಮೀ. ಕ್ರಮಿಸಿದ್ದು, ಈ ಯಾತ್ರೆಯುದ್ದಕ್ಕೂ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ರಾಜಕೀಯವಾಗಿ ಪಕ್ಷಭೇದ ಮರೆತು ಬೆಂಬಲ ವ್ಯಕ್ತವಾಗಿದೆ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕು. ಗೋವಂಶವನ್ನು ಉಳಿಸಬೇಕು. ಈ ಮಂಗಲ ಯಾತ್ರೆಯ ಮೂಲಕ ಸರ್ಕಾರ, ಸಮಾಜಕ್ಕೆ ಗೋವನ್ನು ಕಾಪಾಡುವ ಸಂದೇಶ ಹೋಗಬೇಕು. ಗೋಮಾಂಸ […]

‘ತೊಟ್ಟಿಲ್’ ತುಳು ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ

Wednesday, January 25th, 2017
Thottilu

ಮಂಗಳೂರು  : ರಂಬಾರೂಟಿ ಚಿತ್ರ ಯಶಸ್ವಿಯಾದ ಬಳಿಕ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ದೇಶನದ ‘ತೊಟ್ಟಿಲ್’ ತುಳು ಚಲನ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಜನವರಿ 22 ರಂದು ಪುರಭವನದಲ್ಲಿ ನಡೆಯಿತು. ಜಿವೈಎಸ್‌ಪಿ ಫೇಸ್ ಬುಕ್ ಗ್ರೂಪ್ ಇವರು ಪುರಭವನದಲ್ಲಿ ಆಯೋಜಿಸಿದ ಗಾಣಿಗ ಸಂಗಮ 2017 ಕಾರ್ಯಕ್ರಮದಲ್ಲಿ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ಪುಟಾಣಿಗಳಿಂದಲೇ ಧ್ವನಿಸುರುಳಿಯನ್ನು ಬಿಡುಗಡೆಗೊಳಿಸಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಸಿನಿಮಾವನ್ನು ತಾಯಿ ಸೆಂಟಿಮೆಂಟ್ ಆಧಾರ ಇಟ್ಟುಕೊಂಡು ನಿರ್ಮಿಸಲಾಗಿದೆ. ಚಿತ್ರದಲ್ಲಿ ಒಟ್ಟು ಐದು […]